ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಫೇಸ್​ಬುಕ್​, ಯುವ ಸಮೂಹ ಸೆಳೆವ ಯೂಟ್ಯೂಬ್​


Updated:June 4, 2018, 4:44 PM IST
ಜನಪ್ರಿಯತೆ ಕಳೆದುಕೊಳ್ಳುತ್ತಿರುವ ಫೇಸ್​ಬುಕ್​, ಯುವ ಸಮೂಹ ಸೆಳೆವ ಯೂಟ್ಯೂಬ್​
YouTube unveils their new paid subscription service at the YouTube Space LA in Playa Del Rey, Los Angeles, California, United States October 21, 2015. Alphabet Inc's YouTube will launch a $10-a-month subscription option in the United States on October 28 that will allow viewers to watch videos from across the site without interruption from advertisements, the company said on Wednesday. REUTERS/Lucy Nicholson

Updated: June 4, 2018, 4:44 PM IST
ನ್ಯೂಯಾರ್ಕ್​: ಸಾಮಾಜಿಕ ಜಾಲತಾಣ ಫೇಸ್​ಬುಕ್​ ಬಳಕೆ ದಿನದಿಂದ ದಿನಕ್ಕೆ ಏರುತ್ತಿದೆ ಎಂದು ಎಲ್ಲರೂ ಹೇಳಿಕೊಳ್ಳುತ್ತಿದ್ದರು, ಆದರೆ ಇದಕ್ಕೆ ಸೆಡ್ಡು ಹೊಡೆದಿರುವ ಗೂಗಲ್​ ಒಡೆತನದ ಯೂಟ್ಯೂಬ್​ ಹೆಚ್ಚಿನ ಯುವ ಸಮೂಹವನ್ನು ಸೆಳೆಯುವಲ್ಲಿ ಸಫಲವಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಪೀವ್​ ರಿಸರ್ಚ್​ ಸೆಂಟರ್​ ಸಮೀಕ್ಷೆ ಪ್ರಕಾರ ಅಮೆರಿಕದ ಶೇ.85 ಯುವ ಸಮೂಹ ಫೇಸ್​ಬುಕ್​ಗಿಂತಲೂ ಅಧಿಕ ಕಾಲ ಯೂಟ್ಯೂಬ್​ನಲ್ಲಿ ವ್ಯಯಿಸುತ್ತಿದೆ ಎಂದು ವರದಿ ಮಾಡಿದೆ. ಇದಕ್ಕೆ ಹೋಲಿಸಿದರೆ ಫೇಸುಬುಕ್​ ಒಡೆತನದ ಇನ್ಸ್ಟಾಗ್ರಾಂನ್ನು ಶೇ.72ರಷ್ಟು ಮತ್ತು ಕೇವಲ ಶೇ.51 ಯುವ ಸಮೂಹ ಸ್ನ್ಯಾಪ್​ಚಾಟ್​ನ್ನು ಬಳಕೆ ಮಾಡುತ್ತಿದೆ ಎಂದು ವರದಿ ಮಾಡಿದೆ.

ಪೀವ್​ ವರದಿ ಪ್ರಕಾರ ಶೇ.95ರಷ್ಟು ಹದಿಹರೆಯವದ ಯುವ ಜನತೆಯ ಕೈಯಲ್ಲಿ ಮೊಬೈಲ್​ ಬಳಕೆ ಹೆಚ್ಚು ಕಂಡು ಬರುತ್ತದೆ ಎನ್ನಲಾಗಿದೆ, ಇದರಲ್ಲಿ ಶೇ.45ರಷ್ಟು ಮಂದಿ ನಿರಂತರವಾಗಿ ಇಂಟರ್​ನೆಟ್​ ಬಳಕೆ ಮಾಡುತ್ತಾರೆ ಎಂದು ಸಮೀಕ್ಷೆ ವೇಳೆ ಹೇಳಿಕೊಂಡಿದ್ದಾರೆ.

ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಯಾವೊಬ್ಬರೂ ಸಾಮಾಜಿಕ ಜಾಲತಾಣದ ದುಷ್ಪರಿಣಾಮದ ಕುರಿತು ಮಾತನಾಡಿಲ್ಲ, ಬದಲಾಗಿ ಸಾಮಾಜಿಕ ಜಾಲತಾಣವು ತಟಸ್ಥ ಪ್ರಭಾವ ಬೀರುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ತಜ್ಞರ ಪ್ರಕಾರ ಅಮೆರಿಕದಂತಹ ದೇಶಗಳಲ್ಲಿ 13-17ರ ವಯಸ್ಸಿನ ಮಕ್ಕಳಲ್ಲಿ ಮೊಬೈಲ್​ ಬಳಕೆ ಎರುತ್ತಲೇ ಸಾಗುತ್ತಿದ್ದು ಇದು ಮುಂದೊಂದು ದಿನ ಅಪಾಯವನ್ನು ಒಡ್ಡಬಹುದು ಎನ್ನಲಾಗುತ್ತದೆ. ಇದರ ನಡುವೆ ಪೀವ್​ನ ಈ ವರದಿ ಅಮೆರಿಕದ ಯುವ ಸಮೂಹ ಸ್ಮಾರ್ಟ್​ಫೋನ್​ ಮತ್ತು ಸಾಮಾಜಿಕ ಜಾಲತಾಣಕ್ಕೆ ಬಲಿಯಾಗಿರುವುದನ್ನು ಖಾತ್ರಿ ಪಡಿಸುತ್ತಲೇ ಸಾಗುತ್ತಿದೆ.

 
First published:June 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ