ನೆಟ್​ಫ್ಲಿಕ್ಸ್​ಗೆ ಸ್ಪರ್ಧೆ ನೀಡಲು ಬರುತ್ತಿದೆ ಯೂಟ್ಯೂಬ್​ ರೆಡ್​


Updated:July 29, 2018, 7:14 PM IST
ನೆಟ್​ಫ್ಲಿಕ್ಸ್​ಗೆ ಸ್ಪರ್ಧೆ ನೀಡಲು ಬರುತ್ತಿದೆ ಯೂಟ್ಯೂಬ್​ ರೆಡ್​

Updated: July 29, 2018, 7:14 PM IST
ನವದೆಹಲಿ: ಆಲ್ಫಬೆಟ್​ ಐಎನ್​ಸಿ ಯೂಟ್ಯೂಬ್​ ಸಂಸ್ಥೆಗೆ ಅಮೆಜಾನ್​ ಪ್ರೈಮ್, ನೆಟ್​ಫ್ಲಿಕ್ಸ್​ ಸಂಸ್ಥೆಗಳಿಗೆ ಸೆಡ್ಡೆ ಹೊಡೆಯಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಭಾರತ, ಜಪಾನ್​ ಸೇರಿದಂತೆ ತನ್ನದೇ ನೂತನ ವೆಬ್​ ಸೀರೀಸ್​ಗಳನ್ನು ಪರಿಚಯಿಸುವುದಾಗಿ ಘೊಷಿಸಿದೆ.

ಇ-ಕಾಮರ್ಸ್​ ದೈತ್ಯ ಅಮೆಜಾನ್​ ವರ್ಷದ ಹಿಂದೆಯಷ್ಟೇ ತನ್ನ ಪ್ರೈಮ್​ ವಿಡಿಯೋವನ್ನು ಆರಂಭಿಸಿವಿತ್ತು, ಕೆಲ ವೆಬ್​ ಸೀರಿಸಿಗಳು ಸಾಕಷ್ಟು ಜನಪ್ರಿಯತೆಯನ್ನೂ ತಂದುಕೊಟ್ಟಿತ್ತು. ಇದರ ಮತ್ತೊಂದು ಭಾಗವಾಗಿ ಯುಟ್ಯೂಬ್​ ತನ್ನ ಬಳಕೇದಾರರನ್ನು ಕಳೆದುಕೊಳ್ಳುತ್ತಾ ಬರತೊಡಗಿತು. ಹೀಗಾಗಿ ತನ್ನದೂ ವೆಬ್​ ಸೀರಿಸಿ, ರಿಯಾಲಿಟಿ ಶೋ, ಟಾಲ್ಕ್​ ಶೋದಂತಹ ಕಾರ್ಯಕ್ರಮಗಳನ್ನು ಮುಂದಾಗಿದೆ.

ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹಿರೀಯ ಕಾರ್ಯಕಾರಿ ಅಧಿಕಾರಿ ಡೇನಿಯಲ್​, ಯೂಟ್ಯೂಬ್​ ಪ್ರೀಮಿಯಂನಲ್ಲಿ ನಾವು ಹಲವಾರು ನೂತನ ಯೋಜನೆಗಳನ್ನು ಆರಂಭಿಸಲು ತೀರ್ಮಾನಿಸಿದ್ದು, ಈ ಚಾನೆಯಲ್​ನ್ನು ಯುಟ್ಯೂಬ್​ ರೆಡ್​ ಎಂದೂ ಕರೆಯಬಹುದು. ಇಲ್ಲಿ ತಿಂಗಳ/ ವಾರ್ಷಿಕ ಚಂದಾ ನೀಡಿ ವೀಕ್ಷಿಸಬಹುದು.

ಫ್ರಾನ್ಸ್, ಜರ್ಮನಿ, ಜಪಾನ್, ಮೆಕ್ಸಿಕೋ ಮತ್ತು ಭಾರತದಂತಹ ಮಾರುಕಟ್ಟೆಯಲ್ಲಿ ವೆಬ್​ ಸೀರಿಸ್​ನಂತಹ ವಿಷಯಗಳು ಹೆಚ್ಚು ಮಾರಾಟವಾಗುತ್ತದೆ, ದಕ್ಷಿಣ ಕೋರಿಯಾದಲ್ಲಿ ಈಗಾಗಲೇ ರಿಯಾಲಿಟೋ ಶೋಗಳು ಹೆಚ್ಚು ಜನಪ್ರಿಯವಾಗಿದೆ, ಶೇ,50ಕ್ಕೂ ಅಧಿಕ ಸಬ್​ಸ್ಕ್ರೈಬರ್ಸ್​ ಏರಿಕೆ ಕಂಡಿದೆ ಎಂದು ಡೇನಿಯಲ್​ ಹೇಳಿದ್ದಾರೆ.

ನೆಟ್​ಫ್ಲಿಕ್ಸ್​ ಹಾಗೂ ಅಮೆಜಾನ್​ ಪ್ರೈಮ್​ ವಿಡಿಯೋಗಳು ಈಗಾಗಲೇ ಸ್ಥಳೀಯ ಭಾಷೆಗೆ ಹೆಚ್ಚು ಒತ್ತು ನೀಡಿ ಪ್ರಾದೇಶಿಕ ಭಾಷೆಗನುಗುಣವಾಗಿ ವಿಡಿಯೋಗಳನ್ನು ನಿರ್ಮಿಸುತ್ತಿವೆ. ಕೆಲ ತಿಂಗಳ ಹಿಂದೆ ಯೂಟ್ಯೂಬ್​ ಕೂಡಾ ತನ್ನದೇ ಹಿಂದಿ ಅನ್​ಕ್ರಿಕೆಟ್​ ಅನ್ನುವ ಕಾರ್ಯಕ್ರಮವನ್ನೂ ಕೂಡಾ ಮಾಡಿ ಫೇಮಸ್​ ಆಗಿತ್ತು.
First published:July 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...