ಫೇಸ್​ಬುಕ್​ನ್ನು ಹಿಂದಿಕ್ಕಿದ ಯೂಟ್ಯೂಬ್​ಗೆ 2ನೇ ಸ್ಥಾನ, ದಿಗ್ಗಜನಿಗೆ ಮತ್ತೆ ಮುಖಭಂಗ!


Updated:August 9, 2018, 4:19 PM IST
ಫೇಸ್​ಬುಕ್​ನ್ನು ಹಿಂದಿಕ್ಕಿದ ಯೂಟ್ಯೂಬ್​ಗೆ 2ನೇ ಸ್ಥಾನ, ದಿಗ್ಗಜನಿಗೆ ಮತ್ತೆ ಮುಖಭಂಗ!

Updated: August 9, 2018, 4:19 PM IST
ಅಮೆರಿಕದಲ್ಲೇ ಅತ್ಯಂತ ಹೆಚ್ಚು ಬಳಕೇದಾರರನ್ನು ಹೊಂದಿರುವ ವೆಬ್​ಸೈಟ್​ಗಳ ಪೈಕಿ ಗೂಗಲ್​ ಹಿಂದೆ ಬಿದ್ದಿದ್ದ ಮಾರ್ಕ್​ ಜುಕರ್​ಬರ್ಗ್​ ಒಡೆತನದ ಫೇಸ್​ಬುಕ್​ ಸುಮಾರು ಎರಡು ವರ್ಷದ ಬಳಿಕ ಇದೀಗ ಮೂರನೇ ಸ್ಥಾನಕ್ಕೆ ಇಳಿದಿದ್ದು, ಗೂಗಲ್​ ಒಡೆತನದ ಯೂಟ್ಯೂಬ್​ ಎರಡನೇ ಸ್ಥಾನ ಪಡೆದಿದೆ.

ಕೋಟಿಗಟ್ಟಲೆ ಬಳಕೇದಾರರನ್ನು ಹೊಂದಿರುವ ಫೇಸ್​ಬುಕ್​ ಸುಮಾರು 8.5 ಬಿಲಿಯನ್​ ಪೇಜ್​ ವಿಸಿಟರ್​ಗಳನ್ನು ಹೊಂದಿತ್ತು, ಇದೀಗ ಈ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದ್ದು, ಕಳೆದ ಎರಡು ವರ್ಷಗಳಲ್ಲಿ ಈ ಸಂಖ್ಯೆ 4.7 ಬಿಲಿಯನ್​ಗೆ ಇಳಿದಿದೆ ಎಂದು ಸಿಎನ್​ಬಿಸಿ ವರದಿ ಮಾಡಿದೆ.

ಅಮೆರಿಕದ ಸಿಮಿಲರ್​ವೆಬ್​ ಎಂಬ ಅಧ್ಯಯನ ಸಂಸ್ಥೆ ನಡೆಸಿದ ಸಮೀಕ್ಷಾ ವರದಿಯನ್ನು ಪ್ರಕಟಿಸಿದ ಸಿಎನ್​ಬಿಸಿ, ಫೇಸ್​ಬುಕ್​ ತನ್ನ ಆಪ್ಲಿಕೇಶ್​ನಲ್ಲಿ ಹಿಡಿತವನ್ನು ಹೊಂದಿದ್ದರೂ ವೆಬ್​ಸೈಟ್​ಗಳಿಗೆ ಭೇಟಿ ನೀಡುವ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಅಲ್ಲದೇ ಎರಡನೇ ತ್ರೈಮಾಸಿಕ ಅವದಿಯಲ್ಲಿ ಫೇಸ್​ಬುಕ್​ ಯುರೋಪ್​ ದೇಶಗಳಲ್ಲಿ ದೊಡ್ಡ ಮಟ್ಟದ ಬಳಕೇದಾರರನ್ನು ಕಳೆದುಕೊಂಡಿದೆ.

ಗೂಗಲ್​ನ ಆಲ್ಫಬೆಟ್​ ಸಂಸ್ಥೆಯ ಯೂಟ್ಯೂಬ್​ ದಿನದಿಂದ ದಿನಕ್ಕೆ ತನ್ನ ಬಳಕೇದಾರರ ಸಂಖ್ಯೆಯಲ್ಲಿ ಏರಿಕೆಯನ್ನು ಕಂಡಿದೆ, ಕಳೆದ ಎರಡು ವರ್ಷದಿಂದ ತನ್ನ ವೀಕ್ಷಕರ ಸಂಖ್ಯೆಯಲ್ಲೂ ಏರಿಕೆ ಕಂಡಿದೆ ಎಂದು ಸಿಮಿಲರ್​ವೆಬ್​ ವರದಿ ಮಾಡಿದೆ. ಇನ್ನುಳಿದಂತೆ ಅಮೆಜಾನ್​ ಮತ್ತು ಯಾಹೂ ಫೇಸ್​ಬುಕ್​ನ ಹಿಂದೆ ಬಿದ್ದಿದೆ.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ