YouTube tips: ಸ್ಮಾರ್ಟ್​ಫೋನ್ ಮೂಲಕ ನಿಮಿಷಾರ್ಧದಲ್ಲೇ ಯ್ಯೂಟೂಬ್ ವಿಡಿಯೋ ಡೌನ್ಲೋಡ್ ಮಾಡುವುದು ಹೇಗೆ?

ಬೇರೆ ಆ್ಯಪ್​ ಮೂಲಕ ಯೂಟ್ಯೂಬ್​ ವಿಡಿಯೋ ನಿಮಿಷಾರ್ಧದಲ್ಲಿ ಡೌನ್​ಲೋಡ್​ ಮಾಡಬಹುದಾಗಿದೆ. ಹಾಗಾಗಿ ವೇಗವಾಗಿ ಯೂಟ್ಯೂಬ್ ವಿಡಿಯೋ ಡೌನ್​ಲೋಡ್​ ಮಾಡುವ ಆ್ಯಪ್​ಗಳ ಬಗ್ಗೆ ಇಲ್ಲಿ ಮಾಹಿತಿ  ನೀಡಲಾಗಿದೆ.

YouTube

YouTube

  • Share this:
    ಯೂಟ್ಯೂಬ್​ ಅತ್ಯಂತ ವ್ಯಾಪಕವಾಗಿ ಬಳಸುವ ಸ್ಟ್ರೀಮಿಂಗ್​ ಸೇವೆಗಳಲ್ಲಿ ಒಂದು. ಶತಕೋಟಿ ಜನರು ಈ ಸೇವೆಯನ್ನು ಬಳಸುತ್ತಾರೆ. ಮಾತ್ರವಲ್ಲದೆ, ವಿಶ್ವದಲ್ಲಿ ಅತಿ ಹೆಚ್ಚು ಭೇಟಿ ನೀಡಿದ ವೆಬ್​ಸೈಟ್​ಗಳಲ್ಲಿ ಎರಡನೆಯದಾಗಿ ಯೂಟ್ಯೂಬ್​ ಗುರುತಿಸಿಕೊಂಡಿದೆ.

    ಯೂಟ್ಯೂಬ್​ ದಿನಕ್ಕೆ ಅನೇಕ ವಿಡಿಯೋಗಳನ್ನು ಸ್ಟ್ರೀಮ್​ ಮಾಡುತ್ತದೆ. ಇತ್ತೀಚಿನ ಅಂಕಿ ಅಂಶಗಳ ಆಧಾರದ ಮೇಲೆ ಶೇ.40 ರಷ್ಟು ಯೂಟ್ಯೂಬ್​ ವೀಕ್ಷಣೆಯು ಮೊಬೈಲ್​ನಲ್ಲಿ ನಡೆಯುತ್ತದೆ. ಅಷ್ಟು ಮಾತ್ರವಲ್ಲದೆ, ಕಡಿಮೆ ಗುಣಮಟ್ಟದ ವಿಡಿಯೋವನ್ನು ಯೂಟ್ಯೂಬ್​ ಒದಗಿಸುತ್ತದೆ. ಬಳಕೆದಾರರು ಯೂಟ್ಯೂಬ್​ ಪ್ರಿಮಿಯಂ ಹೊಂದಿಲ್ಲದಿದ್ದರೆ ಯಾವುದೇ ವಿಡಿಯೋವನ್ನು ಡೌನ್​ಲೋಡ್​ ಮಾಡಲು ಸಾಧ್ಯವಿಲ್ಲ. ಆದರೆ ಬೇರೆ ಆ್ಯಪ್​ ಮೂಲಕ ಯೂಟ್ಯೂಬ್​ ವಿಡಿಯೋ ನಿಮಿಷಾರ್ಧದಲ್ಲಿ ಡೌನ್​ಲೋಡ್​ ಮಾಡಬಹುದಾಗಿದೆ. ಹಾಗಾಗಿ ವೇಗವಾಗಿ ಯೂಟ್ಯೂಬ್ ವಿಡಿಯೋ ಡೌನ್​ಲೋಡ್​ ಮಾಡುವ ಆ್ಯಪ್​ಗಳ ಬಗ್ಗೆ ಇಲ್ಲಿ ಮಾಹಿತಿ  ನೀಡಲಾಗಿದೆ.

    ನ್ಯೂಪೈಪ್​ ಬಳಸಿ ವಿಡಿಯೋ ಡೌನ್​​ಲೋಡ್​ ಮಾಡಿ!

    ನ್ಯೂಪೈಪ್​ ಇಂಟರ್​ನೆಟ್​ನಲ್ಲಿ ಸಿಗುವ ಯೂಟ್ಯೂಬ್​ ವಿಡಿಯೋ ಡೌನ್​ಲೋಡ್​ ಆ್ಯಪ್​ ಇದಾಗಿದೆ. ಯಾವುದೇ ಜಾಹೀರಾತುಗಳಿಲ್ಲದೆ ವೀಕ್ಷಿಸಲು ಯೋಗ್ಯವಾಗಿದೆ. ಜೊತೆಗೆ ಯೂಟ್ಯೂಬ್​​ ಪ್ರಿಮಿಯಂ ಆಯ್ಕೆಯಿಲ್ಲದೆ ಡೌನ್​​​ಲೋಡ್​ ಮಾಡಬಹುದಾಗಿದೆ.

    1080ಪಿ, 2ಕೆ ಮತ್ತು 4ಕೆಯಲ್ಲಿ ವಿಡಿಯೋ ಡೌನ್​ಲೋಡ್​​ ಮಾಡಬಹುದಾಗಿದೆ. ಸಬ್​ಟೈಟಲ್​​, ಪ್ಲೇಲೀಸ್ಟ್​ ಮುಂತಾದ ಆಯ್ಕೆಗಳು ಈ ಆ್ಯಪ್​ನಲ್ಲಿ ಸಿಗುತ್ತದೆ. ಅಂದಹಾಗೆಯೇ ಗೂಗಲ್​​ ಪ್ಲೇ ಸ್ಟೋರ್​ನಲ್ಲಿ ನ್ಯೂಪೈಪ್​ ಆ್ಯಪ್​ ಡೌನ್​ಲೋಡ್​ಗೆ ಸಿಗುವುದಿಲ್ಲ. ಇದು ಪ್ಲೇ ಸ್ಟೋರ್​ ನಿಯಮಗಳಿಗೆ ವಿರುದ್ಧವಾಗಿರುವುದರಿಂದ ಎಫ್​​-ಡ್ರಾಯಿಡ್​​ ಸ್ಟೋರ್​​ ಮೂಲಕ ಇನ್​ಸ್ಟಾಲ್ ಮಾಡಬಹುದು.

    ಒಟ್ಟಿನಲ್ಲಿ ಯೂಟ್ಯೂಬ್​ ವಿಡಿಯೋ ಡೌನ್​ಲೋಡ್​ ಮಾಡಬೇಕು ಅಂದಕೊಳ್ಳುವವರಿಗೆ ಈ ಆ್ಯಪ್​ ಸೂಕ್ತವಾಗಿದೆ.

    Y2Mate ಡೌನ್​ಲೋಡರ್

    ಯಾವುದೇ ಆ್ಯಪ್​ ಇನ್​​ಸ್ಟಾಲ್​ ಮಾಡದೆ ವಿಡಿಯೋ ಡೌನ್ಲೋಡ್​ ಮಾಡಬೇಕೆಂದು ಬಯಸಿದರೆ ವೈ2ಮೇಟ್​ ಆ್ಯಪ್​ ಸೂಕ್ತವಾಗಿದೆ. ಇದರ ಮೂಲಕ ಬೇಕೆನಿದ ವಿಡಿಯೋವನ್ನಯ ಅತ್ಯಂತ ಸರಳ ರೂಪದಲ್ಲಿ ಡೌನ್​ಲೋಡ್​ ಮಾಡಬಹುದಾಗಿದೆ. ಯೂಟ್ಯೂಬ್​ ವಿಡಿಯೋ ಲಿಂಕ್​ ಅನ್ನು ನಕಲಿಸಿ ನಂತರ ವೈ2ಮೇಟ್​ಗೆ ತೆರಳಿ ಸರ್ಚ್​ ಬಾರ್​ನಲ್ಲಿ ಪೇಸ್ಟ್​ ಮಾಡಿದರೆ ಸಾಕು ವಿಡಿಯೋ ಡೌನ್​ಲೋಡ್ ಮಾಡಬಹುದಾಗಿದೆ.

    ಗುಣಮಟ್ಟದ ಆಧಾರದ ಮೇಲೆ ವಿಡಿಯೋ ಡೌನ್​ಲೋಡ್​ ಮಾಡಬಹುದಾಗಿದೆ. ಡೆಸ್ಕ್​​​ಟಾಪ್, ಲಾಪ್​ಟಾಪ್​ ಬಳಕೆದಾರರು ಕೂಡ ಮ್ಯಾನುಯೆಲ್​ ಆಗಿ ವಿಡಿಯೋಗಳನ್ನು ಇದರ ಮೂಲಕ ಟ್ರಾನ್ಸ್ಫರ್​ ಮಾಡಬಹುದಾಗಿದೆ.
    Published by:Harshith AS
    First published: