YouTube: ಸ್ಪ್ಯಾಮ್ ಸಂದೇಶಗಳ ವಿರುದ್ಧ ಹೋರಾಡಲು ಹೊಸ ವೈಶಿಷ್ಟ್ಯ ಲಾಂಚ್ ಮಾಡಿದ ಯೂಟ್ಯೂಬ್!

ಯೂಟ್ಯೂಬ್ ಅಸಮರ್ಪಕವಾದ ಅಥವಾ ಹೆಚ್ಚು ಅವಹೇಳನಕಾರಿಯಾದ ಕಾಮೆಂಟ್ ಗಳನ್ನು ತಡೆಹಿಡಿಯಲು ತನ್ನದೆ ಆದ ಸೆಟಿಂಗ್ ಹೊಂದಿದೆ. ಆದರೆ, ಈಗ ವರದಿಯಾಗಿರುವಂತೆ ಇದನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿ ಮಾಡುವ ಉದ್ದೇಶದಿಂದ ಯೂಟ್ಯೂಬ್ ಮತ್ತೊಂದು ಕ್ರಮವನ್ನು ತೆಗೆದುಕೊಂಡಿದೆ ಎನ್ನಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂದಿನ ಡಿಜಿಟಲ್ ಜಗತ್ತು ಸಾಕಷ್ಟು ಪ್ರಭಾವಶಾಲಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೇವಲ ಸಾಮಾಜಿಕ ಮಾಧ್ಯಮಗಳಷ್ಟೇ (Social Media) ಪ್ರಭಾವಶಾಲಿಯಾಗಿಲ್ಲ. ಜನರು ತಮ್ಮದೆ ಆದ ಚಾನೆಲ್ ಗಳನ್ನು (Channel) ಈಗ ಹೊಂದಬಹುದಾಗಿದೆ. ಅದಕ್ಕೆ ಒಂದು ಅದ್ಭುತ ಉದಾಹರಣೆ ಎಂದರೆ ಯೂಟ್ಯೂಬ್ (YouTube). ಹೌದು, ಯೂಟ್ಯೂಬ್, ಜನರಿಗೆ ತಮ್ಮದೆ ಆದ ಯೂಟ್ಯೂಬ್ ಚಾನಲ್ ಹೊಂದುವಂತೆ ಅವಕಾಶ ಕಲ್ಪಿಸುತ್ತದೆ. ಬಹಳಷ್ಟು ಪ್ರತಿಭಾವಂತ ಜನರು ತಮ್ಮಲ್ಲಿ ಅಡಗಿರುವ ವಿಶೇಷ ಪ್ರತಿಭೆಯನ್ನು ಅನಾವರಣಗೊಳಿಸಲು ಈ ವೇದಿಕೆ ಬಲು ಸೂಕ್ತವಾಗಿದೆ. ಹಾಗಾಗಿ ಈಗ ನಾವು ಸಾಕಷ್ಟು ಜನರು ಯೂಟ್ಯೂಬ್ ಚಾನಲ್ ಪ್ರಾರಂಭಿಸಿ ತರಾವರಿ ವಿಡಿಯೋಗಳನ್ನು (Video) ಮಾಡಿ ಅಪ್ಲೋಡ್ ಮಾಡುತ್ತಿರುವುದನ್ನು ನೋಡಬಹುದು.

ವಿಡಿಯೋ ಅಪ್ಲೋಡ್ ಮಾಡುವಾಗ ಕಾಮೆಂಟ್ ಸೆಕ್ಷನ್ ನಲ್ಲಿ ಹೊಸ ಸೆಟ್ಟಿಂಗ್ ಲಭ್ಯ
ಅಲ್ಲದೆ, ಇದೀಗ ನಮ್ಮೆಲ್ಲರಿಗೂ ಗೊತ್ತಿರುವಂತೆ ಸಾಕಷ್ಟು ಜನರು ಯೂಟ್ಯೂಬ್ ಚಾನೆಲ್ ಪ್ರಾರಂಭಿಸುತ್ತಿದ್ದಾರೆ. ಹೀಗೆ ಚಾನೆಲ್ ಆರಂಭಿಸುವವರು ತಮ್ಮದೆ ಆದ ವಿಡಿಯೋ ಪೋಸ್ಟ್ ಅನ್ನು ಅದರಲ್ಲಿ ಅಪ್ಲೋಡ್ ಮಾಡುತ್ತಾರೆ. ಇವರನ್ನು ಸಾಮಾನ್ಯವಾಗಿ ಕ್ರಿಯೇಟರ್ ಎಂದು ಕರೆಯಲಾಗುತ್ತದೆ. ಈ ಸದ್ಯ, ಕ್ರಿಯೇಟರ್ ಗಳು ತಮ್ಮ ವಿಡಿಯೋ ಅಪ್ಲೋಡ್ ಮಾಡಿದಾಗ ಹಲವಾರು ಜನರಿಂದ ಸ್ಪ್ಯಾಮ್ ಕಾಮೆಂಟ್, ಸೋಗು ಹಾಕುವಿಕೆಯಂತಹವುಗಳನ್ನು ಎದುರಿಸುತ್ತಿದ್ದರು. ಆದರೆ, ಈಗ ಕ್ರಿಯೇಟರ್ ಗಳಿಗೆ ಯೂಟ್ಯೂಬ್ ಸ್ಟುಡಿಯೋದಲ್ಲಿ ವಿಡಿಯೋ ಅಪ್ಲೋಡ್ ಮಾಡುವಾಗ ಕಾಮೆಂಟ್ ಸೆಕ್ಷನ್ ನಲ್ಲಿ ಹೊಸ ಸೆಟ್ಟಿಂಗ್ ಲಭ್ಯವಾಗಲಿದೆ.

ಹೊಸ ಸೆಟ್ಟಿಂಗ್ ನಲ್ಲಿ ಏನಿದೆ
ಸಾಮಾನ್ಯವಾಗಿ ಕ್ರಿಯೇಟರ್ ಒಬ್ಬರು ತಮ್ಮ ವಿಡಿಯೋ ಒಂದನ್ನು ಮಾಡಿ ಅದನ್ನು ಅಪ್ಲೋಡ್ ಮಾಡಿದಾಗ ಆ ವಿಡಿಯೋ ಯೂಟ್ಯೂಬ್ ಅನ್ನು ನೋಡುವ ಪ್ರತಿಯೊಬ್ಬರು ವೀಕ್ಷಿಸಬಹುದಾಗಿದೆ. ಹೀಗೆ ವಿಡಿಯೋ ಒಂದನ್ನು ನೋಡಿದ ಸಾಕಷ್ಟು ಜನರು ಆ ವಿಡಿಯೋಗೆ ಸಂಬಂಧಿಸಿದಂತೆ ತಮ್ಮದೆ ಆದ ಅಭಿಪ್ರಾಯಗಳನ್ನು ಆ ವಿಡಿಯೋದ ಕೆಳಗಿರುವ ಕಾಮೆಂಟ್ ಸೆಕ್ಷನ್ ನಲ್ಲಿ ನಮೂದಿಸುತ್ತಿರುತ್ತಾರೆ.

ಇದನ್ನೂ ಓದಿ: WhatsApp: ನಿಮ್ಮ ವಾಟ್ಸ್​ಆ್ಯಪ್ ಅಕೌಂಟ್ ಬ್ಯಾನ್ ಆಗಿದ್ಯಾ? ಚಿಂತಿಸದಿರಿ ಅದನ್ನು ಮತ್ತೆ ಓಪನ್ ಮಾಡಲು ಈ ರೀತಿ ಮಾಡಿ

ಆದರೆ, ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಪ್ರತಿಯೊಬ್ಬರೂ ತಮ್ಮ ನೈಜವಾದ ಹಾಗೂ ಗುಣಾತ್ಮಕ ಪ್ರತಿಕ್ರಿಯೆ ನೀಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಹಲವರು ಸಾಕಷ್ಟು ಅವಹೇಳನಕಾರಿಯಾದ ಪ್ರತಿಕ್ರಿಯೆಗಳನ್ನು ಸಹ ನೀಡುತ್ತಿರುತ್ತಾರೆ. ಇನ್ನೂ ಹಲವರು ಏನೇನೋ ಕಾಮೆಂಟ್ ಹಾಕುವ ಮೂಲಕ ಕಾಮೆಂಟ್ ಓದುವ ಜನರು ತಮ್ಮ ನಕಲಿ ಪುಟಕ್ಕೆ ಬರುವಂತೆಯೂ ವಂಚಿಸುತ್ತಿರುತ್ತಾರೆ.

ಅಸಮರ್ಪಕವಾದ ಅಥವಾ ಹೆಚ್ಚು ಅವಹೇಳನಕಾರಿಯಾದ ಕಾಮೆಂಟ್ ಗಳನ್ನು ತಡೆಹಿಡಿಯಲು ಉತ್ತಮ ಮಾರ್ಗ
ಇದಕ್ಕೆಂದೇ ಯೂಟ್ಯೂಬ್ ಅಸಮರ್ಪಕವಾದ ಅಥವಾ ಹೆಚ್ಚು ಅವಹೇಳನಕಾರಿಯಾದ ಕಾಮೆಂಟ್ ಗಳನ್ನು ತಡೆಹಿಡಿಯಲು ತನ್ನದೆ ಆದ ಸೆಟ್ಟಿಂಗ್ ಹೊಂದಿದೆ. ಆದರೆ, ಈಗ ವರದಿಯಾಗಿರುವಂತೆ ಇದನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿ ಮಾಡುವ ಉದ್ದೇಶದಿಂದ ಯುಟ್ಯೂಬ್ ಮತ್ತೊಂದು ಕ್ರಮವನ್ನು ತೆಗೆದುಕೊಂಡಿದೆ ಎನ್ನಲಾಗಿದೆ. ಆ ಪ್ರಕಾರ, ಕ್ರಿಯೇಟರ್ಸ್ ಗಳು ಈಗ ಸೆಟ್ಟಿಂಗ್ಸ್ ನಲ್ಲಿ "ಇನ್ಕ್ರೀಸ್ ಸ್ಟ್ರಿಕ್ಟ್‍ನೆಸ್" ಎಂಬ ಹೊಸ ಆಯ್ಕೆಯೊಂದನ್ನು ನೋಡಬಹುದು. ಈ ಮೂಲಕ ಕ್ರಿಯೇಟರ್ಸ್ ಇನ್ನು ಮುಂದೆ ಅವರಿಗೆ ಹಾನಿ ಮಾಡುವಂತಹ ಸಂದೇಶಗಳನ್ನು ಸುಲಲಿತವಾಗಿ ನಿಯಂತ್ರಿಸಬಹುದಾಗಿದೆ ಎಂದು ಎಂಗ್ಯಾಡ್ಜೆಟ್ ತಿಳಿಸಿದೆ.

ಮತ್ತೊಂದು ಹೊಸ ಫೀಚರ್ ಜಾರಿ
ಮಾನವಚಾಲಿತವಾಗಿ ಪ್ರತಿಕ್ರಿಯೆಗಳನ್ನು ಮೇಲ್ವಿಚಾರಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇದು ಕಡಿಮೆ ಕಠಿಣ ಶಿಸ್ತು ಕ್ರಮವಾಗಿದ್ದು ಈ ಮೂಲಕ ಕ್ರಿಯೇಟರ್ಸ್ ತಮಗೆ ಬೇಡವಾದ ಐಡೆಂಟಿಟಿಗಳು ಪ್ರತಿಕ್ರಿಯೆ ನೀಡುವುದನ್ನು ಪೂರ್ಣವಾಗಿ ನಿಷ್ಕ್ರೀಯಗೊಳಿಸಲು ಸಮರ್ಥರಾಗುತ್ತಾರೆ ಎಂದು ವರದಿಯಿಂದ ತಿಳಿದುಬಂದಿದೆ. ಇನ್ನೊಂದು ವಿಚಾರವೆಂದರೆ ಯೂಟ್ಯೂಬ್ ಕ್ರಿಯೇಟರ್ಸ್ ಗಳು ತಮ್ಮ ಚಂದಾದಾರರ ಸಂಖ್ಯೆಯು ಇನ್ನೊಬ್ಬರಿಗೆ ಗೋಚರಿಸದಂತೆ ಮುಚ್ಚಿಡಬಹುದಾಗಿತ್ತು. ಆ ವೈಶಿಷ್ಟ್ಯ ಇನ್ನೀಗ ಜುಲೈ 29 ರಿಂದ ಲಭ್ಯವಿರುವುದಿಲ್ಲ, ಅಂದರೆ ಪ್ರತಿಯೊಂದು ಚಾನೆಲ್ಲಿನ ಸಬ್ಸ್ಕ್ರೈಬರ್ಸ್ ಸಂಖ್ಯೆ ಎಲ್ಲರಿಗೂ ಗೋಚರವಾಗಲಿದೆ.

ಇದನ್ನೂ ಓದಿ:  Instagram: ಇನ್ಮುಂದೆ ವಿಡಿಯೋ ಪೋಸ್ಟನ್ನು ರೀಲ್ಸ್ ಆಗಿ ಮಾಡಬಹುದಂತೆ! ಹೀಗೊಂದು ಪ್ರಯತ್ನಕ್ಕಿಳಿದಿದೆ ಇನ್ಸ್ಟಾಗ್ರಾಮ್

ಇನ್ನೊಂದು ವಿಚಾರವೆಂದರೆ, ವಂಚಕರು ಯವುದಾದರೂ ವಿಡಿಯೋದಲ್ಲಿ ಕಾಮೆಂಟ್ ಹಾಕುವ ಮೂಲಕ ಜನರನ್ನು ತಮ್ಮ ನಕಲಿ ಪುಟಕ್ಕೆ ಸುಲಭವಾಗಿ ಆಕರ್ಷಿಸುವಂತೆ ಮಾಡುತ್ತಿದ್ದರು. ಈಗ ಈ ವೈಶಿಷ್ಟ್ಯದ ಮೂಲಕ ಯೂಟ್ಯೂಬ್ ಕ್ರಿಯೇಟ್ರಸ್ ಗಳಿಗೆ ಅಂತಹ ವಂಚಕರಿಂದ ದೂರವಿರಲು ಸಮರ್ಥರಾಗುವಂತೆ ಮಾಡಲು ಈ ವೈಶಿಷ್ಟ್ಯ ಸಹಾಯ ಮಾಡಲಿದೆ ಎಂದು ತಿಳಿದುಬಂದಿದೆ. ನೀವು ಯುಟ್ಯೂಬರ್ ಆಗಿದ್ದು ನಿಮ್ಮದೆ ಆದ ಚಾನಲ್ ಹೊಂದಿದ್ದರೆ ಖಂಡಿತವಾಗಿಯೂ ಈ ಫೀಚರ್ ಬಗ್ಗೆ ಒಮ್ಮೆ ಕೂಲಂಕುಷವಾಗಿ ಪರಿಶೀಲಿಸಿ ನೋಡಿ. ನಿಮಗೂ ಸಹ ಇದರ ಲಾಭ ದೊರೆಯಬಹುದು.
Published by:Ashwini Prabhu
First published: