ಮೊಬೈಲ್ ಮಾರುಕಟ್ಟೆ ಇತ್ತೀಚೆಗೆ ಬಹಳಷ್ಟು ಅಭಿವೃದ್ಧಿಯಾಗಿದೆ. ಸ್ಮಾರ್ಟ್ಫೋನ್ಗಳಿಗೆ ಬೇಡಿಕೆ ಹೆಚ್ಚಾದಂತೆ ಕಂಪೆನಿಗಳು ಸಹ ಹೊಸ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಜನಪ್ರಿಯ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಯೂಟ್ಯೂಬ್ (Youtube) ಸಹ ಒಂದು. ಈ ಅಪ್ಲಿಕೇಶನ್ ಇತ್ತೀಚೆಗೆ ಎಷ್ಟೋ ಜನರ ಉದ್ಯಮದ ವೇದಿಕೆಯಾಗಿ ಬದಲಾವಣೆಯಾಗಿದೆ. ಎಷ್ಟೋ ಜನರು ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ಅಪ್‌ಲೋಡ್ (Video Upload) ಮಾಡುವ ಮೂಲಕ ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದಾರೆ. ಇದರ ಜೊತೆಗೆ ಸಾಕಷ್ಟು ಫೀಚರ್ಸ್‌ಗಳು ಬಳಕೆದಾರರಿಗೆ ವಿಭಿನ್ನವಾದ ಅನುಭವ ನೀಡುತ್ತಿದ್ದು, ಹಲವು ಮಂದಿ ಈ ಪ್ಲಾಟ್‌ಫಾರ್ಮ್ ಮೂಲಕ ಜೀವನವನ್ನೂ ರೂಪಿಸಿಕೊಂಡಿದ್ದಾರೆ. ಇದೆಲ್ಲದರ ನಡುವೆ ಈಗ ಯುಟ್ಯೂಬ್ ಪಾಡ್‌ಕಾಸ್ಟ್‌ಗಾಗಿ (Youtube Podcast) ಹೊಸ ಟೂಲ್ಸ್ ಪರಿಚಯಿಸುವ ಬಗ್ಗೆ ಘೋಷಣೆ ಮಾಡಿದೆ.
ಯೂಟ್ಯೂಬ್‌ನಲ್ಲಿನ ಸಾಕಷ್ಟು ಫೀಚರ್ಸ್‌ಗಳು ಬಳಕೆದಾರರಿಗೆ ವಿವಿಧ ಸೌಲಭ್ಯವನ್ನು ನೀಡುತ್ತಿದ್ದು, ಈ ಮೂಲಕ ಬಳಕೆದಾರರು ಪಾಡ್‌ಕಾಸ್ಟ್‌ಗಳನ್ನು ಅತ್ಯಂತ ಸುಲಭವಾಗಿ ಅಪ್‌ಲೋಡ್ ಮಾಡಬಹುದಾಗಿದೆ. ಹಾಗಿದ್ರೆ ಈ ಫೀಚರ್ ಅನ್ನು ಹೇಗೆ ಬಳಸ್ಬೋದು? ಯಾರಿಗೆಲ್ಲಾ ಲಭ್ಯವಾಗಲಿದೆ ಎಂದು ಈ ಲೇಖನದ ಮೂಲಕ ತಿಳಿಯಿರಿ.
ಪಾಡ್‌ಕಾಸ್ಟ್ ಅಪ್‌ಲೋಡ್ ಮಾಡ್ಬಹುದು
ಯೂಟ್ಯೂಬ್ ಇನ್ಮುಂದೆ ಪಾಡ್‌ಕಾಸ್ಟ್‌ಗಳನ್ನು ಅಪ್‌ಲೋಡ್ ಮಾಡುವ ಹೊಸ ಟೂಲ್ಸ್ ನಲ್ಲಿ ಯೂಟ್ಯೂಬ್ ಕೆಲಸ ಮಾಡಲು ಮುಂದಾಗಿದೆ. ಈ ಮೂಲಕ ಪಾಡ್‌ಕಾಸ್ಟ್ ಅನ್ನು ಯೂಟ್ಯೂಬ್ ಅಪಲಿಕೇಶನ್ ಮೂಲಕ ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: ಟೆಲಿಕಾಂ ಗ್ರಾಹಕರೇ ಗುಡ್ನ್ಯೂಸ್! ಈ ರೀಚಾರ್ಜ್ ಪ್ಲ್ಯಾನ್ನಲ್ಲಿ ಓಟಿಟಿ ಜೊತೆಗೆ 48ಜಿಬಿ ಡೇಟಾ ಉಚಿತ
ಹಾಗೆಯೇ ಇದು ಡೆಸ್ಕ್‌ಟಾಪ್ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದ್ದು, ಅನಾಲಿಟಿಕ್ಸ್ ಅನ್ನು ತಿಳಿದುಕೊಳ್ಳಬಹುದು. ಇದಿಷ್ಟೇ ಅಲ್ಲದೆ ನೀವು ಅಪ್‌ಲೋಡ್ ಮಾಡುವ ಪಾಡ್ಕಾಸ್ಟ್ನ ಪರ್ಫಾಮೆನ್ಸ್, ಪ್ರೇಕ್ಷಕರ ಸಂಖ್ಯೆ, ಇದರಿಂದ ಬರುವ ಆದಾಯದ ವಿವರಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.
ಬಳಕೆ ಮಾಡುವುದು ಹೇಗೆ?
ಇನ್ನು ಈ ಹೊಸ ಟೂಲ್ಸ್ ಹಲವಾರು ಪ್ರಯೋಗಿಕ ಪರೀಕ್ಷೆಗಳನ್ನು ಮಾಡಲಾಗಿದ್ದು, ಯೂಟ್ಯೂಬ್ ಪ್ರಕಾರ ಬೀಟಾ ಪರೀಕ್ಷೆಗೆ ದಾಖಲಾದ ಬಳಕೆದಾರರು 'ಕ್ರಿಯೇಟ್' ಬಟನ್ ಮೂಲಕ ಪಾಡ್‌ಕಾಸ್ಟ್‌ಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗಲಿದೆ. ಪ್ರಸ್ತುತ, ಕ್ರಿಯೇಟ್ ಬಟನ್ ಅನ್ನು ಬಳಕೆದಾರರು ವಿಡಿಯೋವನ್ನು ಅಪ್‌ಲೋಡ್ ಮಾಡಲು, ಟೆಕ್ಸ್ಟ್ ಪೋಸ್ಟ್ ಅನ್ನು ರಚಿಸಲು ಮತ್ತು ಲೈವ್ ಸ್ಟ್ರೀಮ್ ಅನ್ನು ಪ್ರಾರಂಭಿಸಲು ಅನುಮತಿಸುತ್ತದೆ. ಇದೇ ಬಟನ್ ಮೂಲಕ ಇನ್ಮುಂದೆ ಪಾಡ್‌ಕಾಸ್ಟ್ ಅಪ್‌ಲೋಡ್ ಮಾಡಲು ಸಹ ಆಯ್ಕೆ ಸಿಗಲಿದೆ ಎಂದು ಕಂಪೆನಿ ಹೇಳಿದೆ.
ಪಾಡ್‌ಕಾಸ್ಟ್ ಪ್ಲೇಪಟ್ಟಿ ಎಲ್ಲಿರಲಿದೆ?
ಯೂಟ್ಯೂಬ್‌ನಲ್ಲಿ ಈಗಾಗಲೇ ಹಲವಾರು ವಿಭಾಗಗಳಿದ್ದು, ಹೊಸ ವಿಭಾಗವಾದ ಪಾಡ್‌ಕಾಸ್ಟ್ ಅನ್ನು ವೀಕ್ಷಣೆ ಮಾಡಬೇಕು ಎಂದರೆ ಬಳಕೆದಾರರು ಕಂಟೆಂಟ್ ಮೆನುವಿನಲ್ಲಿ ಪಾಡ್‌ಕಾಸ್ಟ್ ಟ್ಯಾಬ್ ಆಯ್ಕೆ ಕಾಣಿಸಿಕೊಳ್ಳಲಿದ್ದು, ಈ ಮೂಲಕ ಪಾಡ್‌ಕಾಸ್ಟ್‌ಗೆ ಎಂಟ್ರಿಯಾಗಬಹುದು. ಅಂತೆಯೇ ಮೂರು ಚುಕ್ಕೆಗಳ ಮೆನುವಿನಲ್ಲಿ ಹೊಸ ಆಯ್ಕೆಯನ್ನು ಬಳಕೆ ಮಾಡಿಕೊಂಡು ಅಸ್ತಿತ್ವದಲ್ಲಿರುವ ಪ್ಲೇ ಪಟ್ಟಿಗಳನ್ನು ಪಾಡ್‌ಕಾಸ್ಟ್‌ಗಳಾಗಿ ಹೊಂದಿಸಲು ಅನುವು ಮಾಡಿಕೊಡಲಾಗುತ್ತದೆ.
ಪಾಡ್‌ಕಾಸ್ಟ್ ಅಪ್‌ಲೋಡ್ ಮತ್ತು ಪೋಸ್ಟ್ ಮಾಡುವುದು ಹೇಗೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ