Youtube: ಯೂಟ್ಯೂಬ್​ ಮೂಲಕ ಎಷ್ಟು ಜನರು ಹಣ ಸಂಪಾದಿಸುತ್ತಿದ್ದಾರೆ ಗೊತ್ತಾ? ಲೆಕ್ಕಾಚಾರ ಇಲ್ಲಿದೆ

ಯೂಟ್ಯೂಬ್​ ಕಳೆದ ಮೂರು ವರ್ಷಗಳಲ್ಲಿ ಜಾಹೀರಾತು, ಮಾರಾಟ ಮತ್ತು ಇನ್ನಿತರ ವಿಡಿಯೋ ಸೃಷ್ಟೀಕರ್ತರಿಗೆ 30 ಬಿಲಿಯನ್​ನಷ್ಟು ಹಣವನ್ನು ಪಾವತಿಸಿದೆ ಎಂದು ಹೇಳಿದೆ. ಆ ಮೂಲಕ ಕಂಪನಿ ತನ್ನ ಅಡಿಪಾಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

YouTube

YouTube

  • Share this:
    ಯೂಟ್ಯೂಬ್​ ಬಳಸದೇ ಇರುವವರು ಯಾರಿದ್ದಾರೆ ಹೇಳಿ? ಸ್ಮಾರ್ಟ್​ಫೋನ್​ ಬಳಸುವವರು ಒಂದು ಬಾರಿಯಾದರು ಯ್ಯೂಟೂಬ್​ ಬಳಸಿಯೇ ಬಳಸುತ್ತಾರೆ. ಅದರ ಮೂಲಕ ಟ್ರೆಂಡಿಂಗ್​ ವಿಡಿಯೋ, ಸಿನಿಮಾ ಟ್ರೈಲರ್, ವ್ಲೋಗ್​ ಇನ್ನಿತರ ಕಾರ್ಯಕ್ರಮವನ್ನ ವೀಕ್ಷಿಸುತ್ತಾರೆ. ಅಷ್ಟೇ ಏಕೆ ಸಾಕಷ್ಟು  ಜನರು ಯೂಟ್ಯೂಬ್​ನಲ್ಲಿ ಖಾತೆ ತೆರೆದು ಅದರಲ್ಲಿ ವಿಡಿಯೋ ಹಾಕಿ ಹಣ ಸಂಪಾದಿಸುತ್ತಾರೆ. ಹೀಗೆ ಹಣ ಸಂಪಾದಿಸುವ ಸುಲಭ ಮಾರ್ಗವನ್ನು ಯೂಟ್ಯೂಬ್​ ಮೂಲಕ ಮಾಡಿಕೊಂಡವರು ಅನೇಕರಿದ್ದಾರೆ. ಆದರೀಗ ಎಷ್ಟು ಜನರು ಯೂಟ್ಯೂಬ್​ ಬಳಸಿ ಹಣ ಗಳಿಸುತ್ತಿದ್ದಾರೆ ಎಂಬ ಲೆಕ್ಕ ತಿಳಿದರೆ ಅಚ್ಚರಿ ಆಗೋದರಲ್ಲಿ ಅನುಮಾನವೇ ಇಲ್ಲ!.

    ಯೂಟ್ಯೂಬ್​ ಹೇಳುತ್ತಿದೆ ವಿಶ್ವದಾದ್ಯಂತ ಸುಮಾರು 20 ಲಕ್ಷ ಜನರು ವಿಡಿಯೋ ಮೇಕಿಂಗ್​ ಮಾಡುವ ಮೂಲಕ ಯೂಟ್ಯೂಬ್​ನಲ್ಲಿ ಹಣ ಸಂಪಾದಿಸುತ್ತಾರೆ. ಅದರ ಜೊತೆಗೆ 2 ಮಿಲಿಯನ್​ ಕ್ರಿಯೇಟರ್​ಗಳು ಜಾಹೀರಾತು ಒಳಗೊಂಡ​ ಕಾರ್ಯಕ್ರಮವನ್ನು ನೀಡುತ್ತಾ ಬಂದಿದ್ದಾರೆ. ಅಂದಹಾಗೆಯೇ ಈ ಜಾಹೀರಾತುಗಳನ್ನು ಒಳಗೊಂಡ ವಿಡಿಯೋವು 2007ರಲ್ಲಿ ಪ್ರಾರಂಭವಾಯಿತು.

    ಯೂಟ್ಯೂಬ್​ ಕಳೆದ ಮೂರು ವರ್ಷಗಳಲ್ಲಿ ಜಾಹೀರಾತು, ಮಾರಾಟ ಮತ್ತು ಇನ್ನಿತರ ವಿಡಿಯೋ ಸೃಷ್ಟೀಕರ್ತರಿಗೆ 30 ಬಿಲಿಯನ್​ನಷ್ಟು ಹಣವನ್ನು ಪಾವತಿಸಿದೆ ಎಂದು ಹೇಳಿದೆ. ಆ ಮೂಲಕ ಕಂಪನಿ ತನ್ನ ಅಡಿಪಾಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

    ಯೂಟ್ಯೂಬ್ 2007ರಲ್ಲಿ ವಿಡಿಯೋದೊಂದಿಗೆ ಜಾಹೀರಾತನ್ನು ವಿಭಜಿಸಲು ಆರಂಭಿಸಿತು. ಜತೆಗೆ ಆಡಳಿತದೊಂದಿಗೆ ಕೆಲವು ನಿಯಮವನ್ನು ವಿಸ್ತಾರಗೊಳಿಸುವ ವ್ಯವಸ್ಥೆಯನ್ನು ರೂಪಿಸಿತು.

    ಸದ್ಯ ಯೂಟ್ಯೂಬ್​ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. 2018ರಿಂದ ಗಮನಿಸುದಾದದರೆ ಹೆಚ್ಚಿನ ಜನರು ಯೂಟ್ಯೂಬ್​ ಬಳಸುತ್ತಿದ್ದಾರೆ. 2020ರಲ್ಲಿ ಬಳಕೆದಾರರ ಸಂಖ್ಯೆ ದ್ವಿಗುಣಗೊಂಡಿದೆ. ಜೊತೆಗೆ ವಿಡಿಯೋ ಕ್ರಿಯೇಟರ್​ಗಳು ಕೂಡ ಹೆಚ್ಚಾಗಿದ್ದಾರೆ.

    ಪ್ರಮುಖ ಪೈಪೋಟಿಗಳನ್ನು ನೀಡುತ್ತಿರುವ  ಫೇಸ್‌ಬುಕ್ ಇಂಕ್, ಟಿಕ್‌ಟಾಕ್ ಮತ್ತು ಸ್ಪಾಟಿಫೈ ಟೆಕ್ನಾಲಜಿ ಎಸ್‌ಎ ನಂತೆಯೇ ಯೂಟ್ಯೂಬ್‌ ಸೃಷ್ಟಿಕರ್ತರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಫೇಸ್​ಬುಕ್​ 2023 ರವರೆಗೆ ವಿಡಿಯೋ ಕಂಟೆಂಟ್​ ಕ್ರಿಯೇಟರ್​ಗಳಿಂದ ಕಮೀಷನ್ ತೆಗೆದುಕೊಳ್ಳುವುದಿಲ್ಲ ಎಂದು ಫೇಸ್‌ಬುಕ್ ತಿಳಿಸಿದೆ.

    ಯುಟ್ಯೂಬ್​ ವೀಡಿಯೊ ಜಾಹೀರಾತು ಮಾರಾಟದಲ್ಲಿ ಶೇ.45 ಪಾಲು ತೆಗೆದುಕೊಳ್ಳುತ್ತದೆ. ಯಾವುದೇ ವಿಡಿಯೋ ಆಗಿರಲಿ ಅದರ ನಡುವೆ ಸೆಕುಂಡು​ಗಳ ಆಧಾರದಲ್ಲಿ ಜಾಹೀರಾತುಗಳು ಕಾಣಿಸುತ್ತದೆ. ಯೂಟ್ಯೂಬ್​ ಬಳಕೆದಾರ ವಿಡಿಯೋ ವೀಕ್ಷಿಸಿದಂತೆ ಕ್ರಿಯೇಟರ್​ಗೆ ಅಥವಾ ಚಾನೆಲ್​ ಮಾಲೀಕನಿಗೆ ಹಣ ಬರುತ್ತದೆ.

    ಯೂಟ್ಯೂಬ್​ ಖಾತೆ ತೆರೆಯುವುದು ಹೇಗೆ?

    ಯಾರಿಗೂ ಬೇಕಾದರು ಯೂಟ್ಯೂಬ್​ ಖಾತೆ ತೆರೆಯಬಹುದಾಗಿದೆ. ಗೂಗಲ್​ ಅಕೌಂಟ್​ಗೆ ಲಾಗಿನ್​ ಆಗುವ ಮೂಲಕ ಚಾನೆಲ್​ ಸೃಷ್ಟಿ ಮಾಡಬಹುದಾಗಿದೆ. ಜೊತೆಗೆ ಯೂಟ್ಯೂಬ್​ ನಿಯಮಕ್ಕೆ ಸರಿಹೊಂದುವ ವಿಡಿಯೋಗಳನ್ನು ಹಂಚಿಕೊಳ್ಳಬಹುದಾಗಿದೆ.
    Published by:Harshith AS
    First published: