ಯೂಟ್ಯೂಬ್ (Youtube) ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ವ್ಯಾಪಕವಾಗಿ ಬೆಳೆಯುತ್ತಿರುವ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಈಗಂತೂ ಸ್ಮಾರ್ಟ್ಫೋನ್ (Smartphone) ಬಳಕೆದಾರರಲ್ಲಿ ಬಹಳಷ್ಟು ಮಂದಿ ಯೂಟ್ಯೂಬ್ನಲ್ಲೇ ಸೆಲಬ್ರಿಟಿಗಳಾಗಿದ್ದಾರೆ. ಇನ್ನೂ ಕೆಲವರು ಯೂಟ್ಯೂಬ್ನಲ್ಲೊಂದು ಚಾನೆಲ್ (Youtube Channel) ಮಾಡುವ ಮೂಲಕ ಅದನ್ನೇ ಉದ್ಯೋಗವನ್ನಾಗಿ ಸೃಷ್ಟಿಸಿಕೊಂಡಿದ್ದಾರೆ. ಯೂಟ್ಯೂಬ್ ಒಂದು ಮನೋರಂಜನಾ ಮಾಧ್ಯಮವಾಗಿ ಇತ್ತೀಚೆಗೆ ಎಲ್ಲರ ಗಮನಸೆಳೆದಿದೆ. ಆದರೆ ಯೂಟ್ಯೂಬ್ ತನ್ನ ಬಳಕೆದಾರರಿಗೆ ಹತ್ತು ಹಲವು ನಿಯಮಗಳನ್ನು ರೂಪಿಸಿದೆ. ಆದರೆ ಕೆಲವರು ಇದರ ನಿಯಮಗಳನ್ನು ಉಲ್ಲಂಘಿಸಿ ವಿಡಿಯೋಗಳನ್ನು (Video) ಅಪ್ಲೋಡ್ ಮಾಡುತ್ತಿರುವುದು ಕಂಡುಬಂದಿದ್ದು, ಕಂಪನಿ ಇದೀಗ ಅಂತಹ ಚಾನೆಲ್ಗಳನ್ನು ಡಿಲೀಟ್ ಮಾಡುವುದಾಗಿ ನಿರ್ಧರಿಸಿದೆ. ಇದೀಗ ಆ ಸಾಲಿಗೆ ನೀಲಿಚಿತ್ರವನ್ನು ಅಪ್ಲೋಡ್ ಮಾಡುತ್ತಿದ್ದ ಚಾನೆಲ್ ಅನ್ನು ಯೂಟ್ಯೂಬ್ನಿಂದ ತೆಗೆದುಹಾಕಿದೆ.
ಯೂಟ್ಯೂಬ್ನ ನೀತಿನಿಯಮಗಳನ್ನು ವಿರೋಧಿಸಿ ಹಲವಾರು ವಿಡಿಯೋಗಳನ್ನು ಅಪ್ಲೋಡ್ ಮಾಡುವಂತಹ ಚಾನೆಲ್ಗಳಿವೆ. ಇದೀಗ ವಯಸ್ಕರ ಮನಸ್ಸು ಹಾಳುಮಾಡುವಂತಹ ಚಾನೆಲ್ ಒಂದು ಯೂಟ್ಯೂಬ್ನಲ್ಲಿ ಇತ್ತು. ಆದರೆ ಇದು ಹಲವು ಬಾರಿ ಕಂಪನಿಯ ನಿಯಮಗಳನ್ನು ಉಲ್ಲಂಘಿಸಿ ವಿಡಿಯೋಗಳನ್ನು ಹಾಕುತ್ತಿತ್ತು. ಇದೀಗ ಯೂಟ್ಯೂಬ್ ಮುಲಾಜಿಲ್ಲದೆ ಆ ಚಾನೆಲ್ ಅನ್ನು ಡಿಲೀಟ್ ಮಾಡಿದೆ.
ಯಾವುದು ಆ ಯೂಟ್ಯೂಬ್ ಚಾನೆಲ್?
ಯೂಟ್ಯೂಬ್ ಇದೀಗ ಬ್ಲಾಕ್ ಮಾಡಿರುವಂತಹ ಚಾನೆಲ್ ನೀಲಿಚಿತ್ರವನ್ನು ಅಪ್ಲೋಡ್ ಮಾಡುತ್ತಿರುವಂತಹ ಚಾನೆಲ್ ಆಗಿದೆ. ಇದು 2014ರಿಂದಲೂ ಅಸ್ತಿತ್ವದಲ್ಲಿದೆ. ಯೂಟ್ಯೂಬ್ ಚಾನೆಲ್ 9 ಲಕ್ಷ ಸಬ್ಸ್ಕ್ರೈಬರ್ಸ್ ಅನ್ನು ಹೊಂದಿದೆ.
ಇದನ್ನೂ ಓದಿ: ಡಾಕ್ಟರ್ ಕೈ ಬರಹ ದೇವರಿಗೇ ಪ್ರೀತಿ ಅಂತೀರಾ? ಹಾಗಿದ್ರೆ ಅದನ್ನೂ ಓದೋಕೆ ಬಂದಿದ್ಯಂತೆ ಗೂಗಲ್ ಆ್ಯಪ್!
ಇದು ಇತ್ತೀಚಿನ ವಯಸ್ಕರಿಗೆ ಮನೋರಂಜನೆಗಳನ್ನು ನೀಡುವ ಮೂಲಕ ಪ್ರದರ್ಶಕರನ್ನು ಉತ್ತೇಜಿಸುವ ಕಾರಣದಿಂದ ಈ ಚಾನೆಲ್ನಲ್ಲಿ ಪೋಸ್ಟ್ ಮಾಡುವ ಮೂಲಕ ಅವರನ್ನು ಉತ್ತೇಜಿಸುತ್ತಿತ್ತು. ಈ ಚಾನೆಲ್ ಮಾಡೆಲ್ಸ್, ಅಶ್ಲೀಲ ಚಿತ್ರಗಳನ್ನು ತೋರಿಸುವ ಚಾನೆಲ್ ಆಗಿದ್ದು ಜೊತೆಗೆ ಕೆಲವೊಂದು ವೆಬ್ಸೈಟ್ಗಳ ಲಿಂಕ್ಗಳನ್ನು ಇದು ತನ್ನ ಚಾನೆಲ್ ಮೂಲಕ ವೀಕ್ಷಕರು ನೋಡುವಂತೆ ಮಾಡುತ್ತಿತ್ತು.
ಈ ಚಾನೆಲ್ನ ನಿಯಮ
ಈ ಚಾನೆಲ್ ವಯಸ್ಕರಿಗೆ ಮಾತ್ರ ಸೀಮಿತವಾಗಿತ್ತು. ಅಂದರೆ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ಮಾತ್ರ ಈ ಚಾನೆಲ್ ಅನ್ನು ಓಪನ್ ಮಾಡುವಂತಹ ಅವಕಾಶವನ್ನು ನೀಡಿತ್ತು. ಆದರೆ ಇನ್ಮುಂದೆ ಈ ಚಾನೆಲ್ಯೂಟ್ಯೂಬ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಮತ್ತು ಇನ್ನು ಈ ಚಾನೆಲ್ ಕಂಡರೂ ಓಪನ್ ಮಾಡುವಾಗ ಯುಆರ್ಎಲ್ 404 ದೋಷವಿದೆ ಎಂದು ತೋರಿಸುತ್ತದೆ.
ಯೂಟ್ಯೂಬ್ ವಕ್ತಾರರ ಮಾತು
ಯೂಟ್ಯೂಬ್ ಸಂಸ್ಥೆ ಹಲವು ರೀತಿಯ ಪರಿಶೀಲನೆಯನ್ನು ಮಾಡಿ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ ಮತ್ತು ಯೂಟ್ಯೂಬ್ನ ಕೆಲವು ನೀತಿ ನಿಯಮಗಳನ್ನು ಈ ಚಾನೆಲ್ ಉಲ್ಲಂಘಿಸಿರುವುದು ಕಂಡುಬಂದ ನಂತರ ಈ ಚಾನೆಲ್ ಅನ್ನು ಪ್ಲಾಟ್ಫಾರ್ಮ್ನಿಂದ ತೆಗೆದುಹಾಕುವುದು ಎಮದು ಅಧಿಕೃತ ಘೋಷಣೆಯನ್ನು ಮಾಡಿದೆ ಎಮದು ಯೂಟ್ಯೂಬ್ ವಕ್ತಾರ ಜ್ಯಾಕ್ ಮ್ಯಾಲೋನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಮ್ನಿಂದಲೂ ಈ ವೆಬ್ಸೈಟ್ ಡಿಲೀಟ್
ಇದೀಗ ಯೂಟ್ಯೂಬ್ನಲ್ಲಿ ಡಿಲೀಟ್ ಮಾಡಲಾದ ಚಾನೆಲ್ ಇನ್ಸ್ಟಾಗ್ರಾಮ್ನಲ್ಲೂ ತನ್ನ ಪೇಜ್ ಅನ್ನು ಹೊಂದಿತ್ತು. ಆದರೆ ಈ ವೆಬ್ಸೈಟ್ ಅನ್ನು ಕೆಲತಿಂಗಳ ಹಿಂದೆ ಇನ್ಸ್ಟಾಗ್ರಾಮ್ ಕೂಡ ಡಿಲೀಟ್ ಮಾಡಿದೆ ಎಂದು ಹೇಳಲಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಈ ವೆಬ್ಸೈಟ್ ವಯಸ್ಕರ ಮನೋಸ್ಥಿತಿಯನ್ನು ಹಾಳು ಮಾಡುವ, ಲೈಂಗಿಕತೆಗೆ ಸಂಬಂಧಿಸಿದ ವಿಚಾರವಾಗಿ ಅಕೌಂಟ್ ಅನ್ನು ಡಿಲೀಟ್ ಮಾಡಲಾಗಿದೆ ಎಂದು ಮೆಟಾ ಸಂಸ್ಥೆ ತಿಳಿಸಿದೆ. ಹಲವಾರು ಎಚ್ಚರಿಕೆಯ ನಂತರವೂ ಈ ವೆಬ್ಸೈಟ್ ಇನ್ಸ್ಟಾಗ್ರಾಮ್ನ ನೀತಿನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿತ್ತು. ಈ ಕಾರಣಕ್ಕಾಗಿ ಈ ಪೇಜ್ ಅನ್ನು ತೆಗೆದುಹಾಕಲಾಗಿದೆ ಎಂದು ಮೆಟಾ ಸಂಸ್ಥೆ ಈ ಕುರಿ ಪ್ರತಿಕ್ರಿಯೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ