ಯೂಟ್ಯೂಬ್ನಲ್ಲಿ (Youtube) ಮಕ್ಕಳ ವಿಡಿಯೋವೊಂದು (Children's Video) ಎಲ್ಲಾ ದಾಖಲೆಗಳನ್ನು ಮುರಿದಿದೆ. ಸಾವಿರಾರು ಮಿಲಿಯನ್ ವೀಕ್ಷಣೆಗಳ ದಾಖಲೆಯನ್ನು ಬರೆದಿದೆ. ಅಂದಹಾಗೆಯೇ, ಬಹುತೇಕರು ಯೂಟ್ಯೂಬ್ ಬಳಸುತ್ತಾರೆ. ಅದರ ಮೂಲಕ ವಿಡಿಯೋ ವೀಕ್ಷಿಸುತ್ತಾರೆ. ಪ್ರತಿದಿನ ಹಲವಾರು ವಿಡಿಯೋಗಳನ್ನು ಇದರಲ್ಲಿ ಕ್ಲಿಕ್ ಮಾಡುತ್ತಾರೆ. ಅದರಂತೆ ಇದೀಗ ಅದರಲ್ಲಿ ಮಕ್ಕಳ ವಿಡಿಯೋವೊಂದು ಅತಿ ಹೆಚ್ಚು ವೀಕ್ಷಣೆಕಂಡು ದಾಖಲೆ ಬರೆದಿದೆ. ಬೇಬಿ ಶಾರ್ಕ್ ಡ್ಯಾನ್ಸ್ (Baby Shark Dance) ವಿಡಿಯೋ (Video) ಈ ದಾಖಲೆಯನ್ನು (Records) ಬರೆಯುವ ಮೂಲಕ ಇದೀಗ ಸುದ್ದಿಯಾಗಿದೆ.
ಅಂದಹಾಗೆಯೇ ಬೇಬಿ ಶಾರ್ಕ್ ಡ್ಯಾನ್ಸ್ ಪುಟಾಣಿ ಮಕ್ಕಳು ವೀಕ್ಷಿಸುವ ವಿಡಿಯೋ ಇದಾಗಿದೆ. ಮಕ್ಕಳು ಇದನ್ನು ತುಂಬಾ ಇಷ್ಟ ಪಡುತ್ತಾರೆ. ಇಂತಹ ಹಲವು ವೀಡಿಯೋಗಳು ಮುನ್ನೆಲೆಗೆ ಬಂದಿದ್ದು, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಹ ಅದರಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.
1 ಸಾವಿರ ಕೋಟಿ ಬಾರಿ ವೀಕ್ಷಿಸಲಾಗಿದೆ
ಈ ವೀಡಿಯೊವನ್ನು ವಿಶ್ವದಲ್ಲಿ ಅತಿ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 1000 ಕೋಟಿ ವೀಕ್ಷಣೆ ಪಡೆದಿದೆ. ಈ ಹಿಂದೆ ಯಾವುದೇ ಯೂಟ್ಯೂಬ್ ವಿಡಿಯೋ ಇಷ್ಟೊಂದು ವೀಕ್ಷಣೆ ಪಡೆದಿಲ್ಲ. ನವೆಂಬರ್ 2021 ರಲ್ಲಿ, ಈ ಹಾಡು 7.04 ಶತಕೋಟಿ ವೀಕ್ಷಣೆಗಳನ್ನು ಗಳಿಸಿತು, ಆ ಸಮಯದಲ್ಲಿ ಇದು YouTube ನಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ವೀಡಿಯೊವಾಗಿ ಹೊರಹೊಮ್ಮಿತ್ತು..
ಇದನ್ನು ಓದಿ: WhatsApp: ವಾಟ್ಸ್ಆ್ಯಪ್ನ ಹೊಚ್ಚ ಹೊಸ ಫೀಚರ್ಗಳು ಯಾವುವು ಗೊತ್ತೇ? ಯೂಸರ್ಸ್ ತಿಳಿದುಕೊಳ್ಳಬೇಕು ಈ ಮಾಹಿತಿ
ಪುಟಾಣಿ ಮಕ್ಕಳ ಇಷ್ಟದ ವಿಡಿಯೋ
ಕಿಡ್ಸ್ ಸಾಂಗ್, ದಕ್ಷಿಣ ಕೊರಿಯಾದ ಶೈಕ್ಷಣಿಕ ಕಂಪನಿಯಾದ ಪಿಂಕ್ಫಾಂಗ್ನ ಮಾಸ್ಟರ್ಮೈಂಡ್ ಮತ್ತು ಕೊರಿಯನ್-ಅಮೇರಿಕನ್ ಗಾಯಕ ಹೋಪ್ ಸೆಗೊಯಿನ್ ಪ್ರಸ್ತುತಪಡಿಸಿದರು, ಇದು 2016 ರಲ್ಲಿ ಪ್ರಾರಂಭವಾಯಿತು ಮತ್ತು ಏಷ್ಯಾದಲ್ಲಿ ವೈರಲ್ ಹಿಟ್ ಆಗಿತ್ತು, ಆದರೆ 2019 ರ ಹೊತ್ತಿಗೆ ಇದು ಯುಎಸ್ನಲ್ಲಿ ಖ್ಯಾತಿಯನ್ನು ಗಳಿಸಿತು. ಒಂದು ಹಂತದಲ್ಲಿ ಬಿಲ್ಬೋರ್ಡ್ ಟಾಪ್ 40 ರಲ್ಲಿ ಸ್ಥಾನ ಗಳಿಸಿತು ಮತ್ತು Apple TV+ ನ "Ted Lasso" ನಲ್ಲಿ ಜೇಮೀ ಟಾರ್ಟ್ ಪಠಣವನ್ನು ಪ್ರೇರೇಪಿಸಿತು.
ಇದನ್ನು ಓದಿ: OnePlus 9RT: ತ್ರಿವಳಿ ಕ್ಯಾಮೆರಾ, 4,500 mAh ಬ್ಯಾಟರಿ.. ಭಾರತೀಯರ ಮನಗೆದ್ದ OnePlus 9RT 5G ಸ್ಮಾರ್ಟ್ಫೋನ್
ವಿಡಿಯೋದಲ್ಲಿ ಏನಿದೆ?
ಯೂಟ್ಯೂಬ್ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಈ ವಿಡಿಯೊದಲ್ಲಿ ಎರಡು ಪುಣಾಣಿ ಮಕ್ಕಳು ಬೇಬಿ ಶಾರ್ಕ್ ಹಾಡಿಗೆ ಡ್ಯಾನ್ಸ್ ಮಾಡುತ್ತಾರೆ. ಅವರ ಹಿಂಭಾಗದಲ್ಲಿ ಅನಿಮೇಟೆಡ್ ಶಾರ್ಕ್ಗಳು ಮತ್ತು ಅದರ ಮರಿಗಳನ್ನು ತೋರಿಸಲಾಗಿದೆ. ನಂತರ ಹಾಡಿನ ಕೊನೆಯ ಭಾಗದಲ್ಲಿ ಶಾರ್ಕ್ಗಳು ಮಕ್ಕಳನನ್ನು ಹಿಂಭಾಲಿಸಿಕೊಂಡು ಬರುತ್ತವೆ. ಈ ವೇಳೆ ಮಕ್ಕಳು ಅದರಿಂದ ತಪ್ಪಿಸಿಕೊಳ್ಳುತ್ತಾರೆ. ಶಾರ್ಕ್ಗಳು ಬೇಟೆಯಿಂದ ವಿಫಲವಾಗುತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ