HOME » NEWS » Tech » YOUTUBE 4K VIDEO PLAYBACK SUPPORT GOES OFFICIAL FOR ALL ANDROID DEVICES USERS STG HG

YouTube: ಯೂಟ್ಯೂಬ್ ಹೊಸ ಫೀಚರ್: ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ 4K ವಿಡಿಯೋ ಬೆಂಬಲ!

YouTube 4K Video: ಯೂಟ್ಯೂಬ್ ಇದೀಗ ತನ್ನ ಬಳಕೆದಾರರಿಗೆ ಯಾವುದೇ ಆಂಡ್ರಾಯ್ಡ್ ಸಾಧನದಲ್ಲಿ 4K/60 P ವಿಡಿಯೋಗಳನ್ನು ಸ್ಟ್ರೀಮ್ ಮಾಡುವ ಆಯ್ಕೆಯನ್ನು ನೀಡಿದೆ. ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಅಲ್ಟ್ರಾ ಎಚ್‌ಡಿ ಅಲ್ಲದಿದ್ದರೂ ಕೂಡ ಬಳಕೆದಾರರು 4K ವಿಡಿಯೋಗಳನ್ನು ಆನಂದಿಸಬಹುದಾಗಿದೆ.

news18-kannada
Updated:February 23, 2021, 11:49 AM IST
YouTube: ಯೂಟ್ಯೂಬ್ ಹೊಸ ಫೀಚರ್: ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ 4K ವಿಡಿಯೋ ಬೆಂಬಲ!
youtube
  • Share this:
ಸರ್ಚ್‌ ಇಂಜಿನ್‌ ದೈತ್ಯ ಗೂಗಲ್ ಒಡೆತನದ ಯೂಟ್ಯೂಬ್ ಈಗಾಗಲೇ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿರುವ ಆನ್‌ಲೈನ್ ವಿಡಿಯೋ ಶೇರಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಕಳೆದ ಕೆಲವು ವರ್ಷಗಳಿಂದ ಯೂಟ್ಯೂಬ್ ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಂಡಿದ್ದು, ಕೋಟ್ಯಂತರ ಬಳಕೆದಾರರನ್ನು ಹೊಂದಿದೆ. ಮ್ಯೂಸಿಕ್ ಮತ್ತು ವಿಡಿಯೋ ಎರಡನ್ನು ಒಳಗೊಂಡಿರುವ ಯೂಟ್ಯೂಬ್ ಬಳಕೆದಾರರಿಗೆ ನೆಚ್ಚಿನ ಮನರಂಜನೆಯ ತಾಣವಾಗಿ ಹೊರಹೊಮ್ಮಿದೆ. ಇದೀಗ ತನ್ನ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ಬಳಕೆದಾರರ ಯಾವುದೇ ರೆಸಲ್ಯೂಶನ್‌ ಸಾಮರ್ಥ್ಯದ ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ನಲ್ಲಿಯೂ ಕೂಡ 4K ವಿಡಿಯೋ ಬೆಂಬಲ ಅಧಿಕೃತವಾಗಿ ಲಭ್ಯವಾಗಿದೆ.

YouTube ಇದೀಗ ತನ್ನ ಬಳಕೆದಾರರಿಗೆ ಯಾವುದೇ ಆಂಡ್ರಾಯ್ಡ್ ಸಾಧನದಲ್ಲಿ 4K/60 P ವಿಡಿಯೋಗಳನ್ನು ಸ್ಟ್ರೀಮ್ ಮಾಡುವ ಆಯ್ಕೆಯನ್ನು ನೀಡಿದೆ. ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಅಲ್ಟ್ರಾ ಎಚ್‌ಡಿ ಅಲ್ಲದಿದ್ದರೂ ಕೂಡ ಬಳಕೆದಾರರು 4K ವಿಡಿಯೋಗಳನ್ನು ಆನಂದಿಸಬಹುದಾಗಿದೆ. ಅಮೆರಿಕದ ಡಿಜಿಟಲ್ ಮೀಡಿಯಾ ಪ್ಲಾಟ್‌ಫಾರ್ಮ್ ಮ್ಯಾಷಬಲ್‌ ಪ್ರಕಾರ, ಈ ಹೊಸ ಬದಲಾವಣೆಯನ್ನು ಕಳೆದ ವಾರ ತಡವಾಗಿ ಯೂಟ್ಯೂಬ್ ಸಬ್‌ರೆಡಿಟ್‌ನಲ್ಲಿ ಚರ್ಚಿಸಲಾಗಿದೆ. ಅಲ್ಲಿ ಬಳಕೆದಾರರು ತಮ್ಮ ಸಾಧನಗಳಿಗೆ 4K ಡಿಸ್‌ಪ್ಲೇ ಇಲ್ಲದಿದ್ದರೂ ಕೂಡ 4K ವಿಡಿಯೋ ಪ್ಲೇಬ್ಯಾಕ್ ಆಯ್ಕೆ ಮಾಡಬಹುದಾಗಿದೆ.

ಹೆಚ್ಚಿನ ರೆಸಲ್ಯೂಶನ್ ಪರದೆಯೊಂದಿಗೆ ಬಳಕೆದಾರರು ಪಡೆಯುವ ಅದೇ ದೃಶ್ಯ ಗುಣಮಟ್ಟವನ್ನು ಪಡೆಯದಿದ್ದರೂ ಕಡಿಮೆ ಡಿಸ್‌ಪ್ಲೇ ರೆಸಲ್ಯೂಶನ್‌ ಹೊಂದಿರುವವರು 4K ವಿಡಿಯೋ ಆಯ್ಕೆಯನ್ನು ಆನ್ ಮಾಡುವುದರಿಂದ ಇದರ ಪ್ರಯೋಜನ ಪಡೆಯಬಹುದಾಗಿದೆ. ಫುಲ್ HD + ಫೋನ್, ವಿಡಿಯೋ ರೆಸಲ್ಯೂಶನ್ ಅನ್ನು ಅದರ ಗರಿಷ್ಠ ಔಟ್‌ಪುಟ್‌ಗೆ ಹೆಚ್ಚಿಸುತ್ತದೆ. 1080p ವಿಡಿಯೋ ನೋಡುವುದಕ್ಕೆ ಹೋಲಿಸಿದರೆ ಇನ್ನೂ ಉತ್ತಮ ದೃಶ್ಯ ಅನುಭವವನ್ನು ಒದಗಿಸಬೇಕು. ಆದರೂ ಕೂಡ 4K ಸಾಧನವನ್ನು ಹೊಂದಿರುವ ಅತ್ಯುತ್ತಮ ಅನುಭವವು ಬಳಕೆದಾರರಿಗೆ ಸ್ಪಷ್ಟವಾಗಿ ಬರುತ್ತದೆ.
Youtube Video

ಈ ಹೊಸ ವೈಶಿಷ್ಟ್ಯವು ನಿರ್ದಿಷ್ಟವಾಗಿ ಆ್ಯಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ ಎಂದು ತೋರುತ್ತದೆ. ಆದರೂ ಎಲ್ಲಾ ಕಡಿಮೆ-ರೆಸಲ್ಯೂಶನ್ ಸಾಧನಗಳು 4K ವಿಡಿಯೋ ಪ್ಲೇಬ್ಯಾಕ್‌ಗೆ ಪ್ರವೇಶವನ್ನು ಹೊಂದಿದೆಯೇ ಅಥವಾ ಇನ್ನೂ ಫುಲ್ HD ಅಥವಾ ಫುಲ್ HD+ ಪರದೆಗಳಿಗೆ ಸೀಮಿತವಾಗಿದೆಯೇ ಎಂಬುದು ತಿಳಿದಿಲ್ಲ.
ಮ್ಯಾಷಬಲ್‌ ಪ್ರಕಾರ, ಪ್ರಸ್ತುತ ಅಲ್ಟ್ರಾ HD ಡಿಸ್‌ಪ್ಲೇ ಹೊಂದಿರದ ಸಾಧನಗಳಲ್ಲಿ 4K ವಿಡಿಯೋಗಳನ್ನು ಪ್ಲೇ ಮಾಡುವ ಸಾಮರ್ಥ್ಯವು ಉದ್ದೇಶಪೂರ್ವಕ ಬದಲಾವಣೆಯೋ ಅಥವಾ ಮುಂದಿನ ದಿನಗಳಲ್ಲಿ ಇದು ಮತ್ತೆ ಬಳಕೆದಾರರಿಗೆ ಲಭ್ಯವಾಗುವುದಿಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಸದ್ಯ ಗೂಗಲ್ ಈ ಬದಲಾವಣೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ ಅನೇಕ ಬಳಕೆದಾರರು 4K ವಿಡಿಯೋ ವೀಕ್ಷಿಸುತ್ತಾ ಖುಷಿ ಪಡುತ್ತಿದ್ದಾರೆ. ಅಲ್ಲದೇ ಯೂಟ್ಯೂಬ್ ಇದೀಗ ನೀಡಿರುವ ಈ ವೈಶಿಷ್ಟ್ಯವನ್ನು ಇದ್ದಕ್ಕಿದ್ದಂತೆ ಮತ್ತೆ ಹಿಂತೆಗೆದುಕೊಂಡರೆ ಬಳಕೆದಾರರಿಗೆ ಭಾರಿ ನಿರಾಸೆಯುಂಟಾಗುತ್ತದೆ.
Published by: Harshith AS
First published: February 23, 2021, 11:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories