WhatsApp: ಈ ಆ್ಯಪ್​ಗಳನ್ನು ಬಳಸಿದರೆ ನಿಮ್ಮ ವಾಟ್ಸ್​ಆ್ಯಪ್​ ಖಾತೆ ಬ್ಯಾನ್​ ಆಗಲಿದೆ!

WhatsApp: ವಾಟ್ಸ್​ಆ್ಯಪ್​ ಬಳಕೆದಾರರಿಗೆ ಹೆಚ್ಚು ವೈಶಿಷ್ಟ್ಯದ ಅಗತ್ಯವಿದ್ದು, ಅದಕ್ಕಾಗಿ ಥರ್ಡ್​ ಪಾರ್ಟಿ ಅಪ್ಲಿಕೇಶನ್​ ಮೊರೆ ಹೋಗುತ್ತಿದ್ದಾರೆ. ಮಾತ್ರವಲ್ಲದೆ ವಾಟ್ಸ್​ಆ್ಯಪ್​ ಚಾಟ್​​ಗಳನ್ನು ಥರ್ಡ್​ ಆ್ಯಪ್​ಗೆ ವರ್ಗಾಯಿಸುತ್ತಿದ್ದಾರೆ.

ವಾಟ್ಸ್​ಆ್ಯಪ್

ವಾಟ್ಸ್​ಆ್ಯಪ್

  • News18
  • Last Updated :
  • Share this:
    ವಾಟ್ಸ್​ಆ್ಯಪ್ ಜನಪ್ರಿಯ ಆ್ಯಪ್​ಗಳಲ್ಲಿ ಒಂದು. ಅನೇಕರು ಈ ಆ್ಯಪ್​ ಬಳಸುವ ​ ಮೂಲಕ ದೈನಂದಿನ  ಕೆಲಸವನ್ನು ಮಾಡುತ್ತಿದ್ದಾರೆ. ಒಂದೇ ಒಂದು ಸಂದೇಶದ ಮೂಲಕ ಸಂವಹನ ನಡೆಸುತ್ತಿದ್ದಾರೆ. ಹಾಗಾಗಿ ವಿಶ್ವದಾದ್ಯಂತ ಬಹುಪಾಲು ಜನರು ವಾಟ್ಸ್​​ಆ್ಯಪ್​ ಬಳಸುತ್ತಿದ್ದು, ಅದರ ಪ್ರಯೋಜನ ಪಡೆಯುತ್ತಿದ್ದಾರೆ.

    ವಾಟ್ಸ್​ಆ್ಯಪ್​ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಕೆಲವರು ಡೆವಲರ್​ ವಾಟ್ಸ್​​ಆ್ಯಪ್​ಗೆ ಪೈಪೋಟಿ ನೀಡುವವಂತೆ ಕೆಲವು ದಾರಿ ಕಂಡುಕೊಂಡಿದ್ದಾರೆ. ಈ ವಿಚಾರ ತಿಳಿದ ವಾಟ್ಸ್​ಆ್ಯಪ್ ತನ್ನ​ ಬಳಕೆದಾರಿರಿಗೆ ಒಂದು ಎಚ್ಚರಿಕೆಯ ಸಂದೇಶ ರವಾನಿಸಿದೆ. ವಾಟ್ಸ್​ಆ್ಯಪ್​ ಬಳಕೆದಾರರು ಥರ್ಡ್​​ಪಾರ್ಟಿ ಆ್ಯಪ್​ಗಳ ಲಿಂಕ್ ಬಳಸಿ ವಾಟ್ಸ್​ಆ್ಯಪ್​ ಬಳಸಿದರೆ ಖಾತೆ ನಿಷೇಧ ಮಾಡುವುದಾಗಿ ತಿಳಿಸಿದೆ.

    ವಾಟ್ಸ್​ಆ್ಯಪ್​ ತನ್ನ ಇತ್ತೀಚಿನ ಆವೃತ್ತಿಯಲ್ಲಿ ಹೊಸ ವೈಶಿಷ್ಟ್ಯತೆಗಳನ್ನು ಪರಿಚಯಿಸಲು ಮುಂದಾಗಿದೆ. ಹೀಗಿರುವಾಗ ಕೆಲವೊಂದು ಫೀಚರ್ಸ್​ಗಳು ಆ್ಯಪ್​ನಲ್ಲಿ ಮರೆಮಾಚಲಾಗಿದೆ. ಆದರೆ ಮರೆಮಾಚಲಾದ ಫೀಚರ್​ಗಳು ವಾಟ್ಸ್​ಆ್ಯಪ್​ ಪ್ರತಿಸ್ಪರ್ಧಿ ಅಂದರೆ ಥರ್ಡ್​​ಪಾರ್ಟಿ ಆ್ಯಪ್​ನಲ್ಲಿದೆ. ಅಲ್ಲದೆ, ಸ್ವಯಂ-ಪ್ರತ್ಯುತ್ತರ, ಚಾಟ್​​​ ಶೆಡ್ಯೂಲಿಂಗ್​, ಇವೆಲ್ಲವು ಆ್ಯಪ್​ನಲ್ಲಿದೆ.

    ಆದರೆ ಕೆಲವು ಡೆವಲಪರ್​ಗಳು ಬಳಕೆದಾರರು ಇಷ್ಟಪಡುವ ಕೆಲವು ವೈಶಿಷ್ಟ್ಯಗಳನ್ನು ಸೇರಿಸುವ ಮೂಲಕ ಅನಧಿಕೃತ ಆವೃತ್ತಿ ರಚಿಸುವುದರ ಜೊತೆಗೆ ಬಳಕೆದಾರರಿಗೆ ಚಾಟ್​​ಗಳನ್ನು ಬೇರೆ ಆ್ಯಪ್​ಗಳಿಗೆ ವರ್ಗಾಯಿಸಲು ಪ್ರೋತ್ಸಾಹಿಸುತ್ತಿದ್ದಾರೆ.

    ಅದರಲ್ಲೂ ವಾಟ್ಸ್​ಆ್ಯಪ್​ ಪ್ಲಸ್​ ಅಪ್ಲಿಕೇಶನ್​ ಈ ರೀತಿ ಚಾಟ್​ ವರ್ಗಾವಣೆಗೆ ಪ್ರೋತ್ಸಾಹ ನೀಡುತ್ತಿದೆ. ಆ ಮೂಲಕ ವಾಟ್ಸ್​​ಆ್ಯಪ್​ಗೆ ನಿಯಮವನ್ನು ಉಲ್ಲಂಘಿಸುತ್ತಿದೆ.

    ಇನ್ನು ವಾಟ್ಸ್​ಆ್ಯಪ್​ ಬಳಕೆದಾರರಿಗೆ ಹೆಚ್ಚು ವೈಶಿಷ್ಟ್ಯದ ಅಗತ್ಯವಿದ್ದು, ಅದಕ್ಕಾಗಿ ಥರ್ಡ್​ ಪಾರ್ಟಿ ಅಪ್ಲಿಕೇಶನ್​ ಮೊರೆ ಹೋಗುತ್ತಿದ್ದಾರೆ. ಮಾತ್ರವಲ್ಲದೆ ವಾಟ್ಸ್​ಆ್ಯಪ್​ ಚಾಟ್​​ಗಳನ್ನು ಥರ್ಡ್​ ಆ್ಯಪ್​ಗೆ ವರ್ಗಾಯಿಸುತ್ತಿದ್ದಾರೆ. ಹಾಗಾಗಿ ಅಂತಹ ಖಾತೆಗಳ ವಿರುದ್ಧ ವಾಟ್ಸ್​ಆ್ಯಪ್​ ಕ್ರಮ ಕೈಗೊಳ್ಳು ಮುಂದಾಗಿದೆ. ಮಾತ್ರವಲ್ಲದೆ ಬಳಕೆದಾರರ ಖಾತೆಯನ್ನು ಶಾಶ್ವತವಾಗಿ ನಿಷೇಧಗೊಳಿಸುವುದಾಗಿ ತಿಳಿಸಿದೆ.

    ಅನೇಕ ಥರ್ಡ್​​ಪಾರ್ಟಿ ಆ್ಯಪ್​ಗಳು ಇಂದು ತೊಂದರೆ ನೀಡುತ್ತಿದೆ. ವಾಟ್ಸ್​ಆ್ಯಪ್ ಪ್ಲಸ್​, ವಾಟ್ಸ್​ಆ್ಯಪ್​ ಜಿಬಿ ಸೇರಿದಂತೆ ಹಲವು ಥರ್ಡ್​​ಪಾರ್ಟಿ ಆ್ಯಪ್​ಗಳು ಬಳಕೆದಾರರನ್ನು ಸೆಳೆದುಕೊಳ್ಳಲು ನಾನಾ ತರಹದ ಸರ್ಕಸ್​ ಮಾಡುತ್ತಿದೆ. ಮಾತ್ರವಲ್ಲದೆ ಬಳಕೆದಾರರನ್ನು ಸಂಖ್ಯೆ ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ.

    ವಾಟ್ಸ್​ಆ್ಯಪ್​ ವಾಸ್ತವವಾಗಿ ಥರ್ಡ್​​ ಪಾರ್ಟಿ ಅಪ್ಲಿಕೇಶನ್​ಗಳು ನಿಮ್ಮ ಭದ್ರತೆಗೆ ಧಕ್ಕೆ ತರುತ್ತದೆ. ಗೂಗಲ್ ಪ್ಲೇ ಸ್ಟೋರ್​ನಲ್ಲಿ ಈ ಆ್ಯಪ್​ಗಳು ಡೌನ್​ಲೋಡ್​ ಮಾಡಲು ಸಿಗುವುದಿಲ್ಲ. ಅವುಗಳನ್ನು ಇತರೆ ವೆಬ್​ಸೈಟ್​​ನಿಂದ ಡೌನ್​ಲೋಡ್​ ಮಾಡುತ್ತಾರೆ. ಹಾಗಾಗಿ ಥರ್ಡ್​ ಪಾರ್ಟಿ ಅಪ್ಲಿಕೇಶನ್​ ಬಳಸುವುದರಿಂದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದೆ.

    ವಾಟ್ಸ್​ಆ್ಯಪ್​ ಎಂಡ್​-ಟು-ಎಂಡ್​ ಎನ್​​ಕ್ರಿಪ್ಶನ್​ ಸೌಲಭ್ಯವನ್ನು ಒದಗಿಸುವ ಸಾಮರಥವನ್ನು ನೀಡಿದೆ. ಹಾಗಾಗಿ ಭದ್ರತೆ ಮತ್ತು ಗೌಪ್ಯತೆಯನ್ನು ನಿರ್ವಹಿಸುತ್ತದೆ.
    Published by:Harshith AS
    First published: