• Home
  • »
  • News
  • »
  • tech
  • »
  • Instagram Issue: ಇದ್ದಕ್ಕಿದ್ದ ಹಾಗೇ ನಿಮ್ಮ ಇನ್​ಸ್ಟಾಗ್ರಾಂ ಅಕೌಂಟ್​ ಕಾಣಿಸ್ತಿಲ್ವಾ? ಎಲ್ರಿಗೂ ಹಿಂಗೇ ಆಗ್ತಿದೆ, ಕಾರಣ ಇದು!

Instagram Issue: ಇದ್ದಕ್ಕಿದ್ದ ಹಾಗೇ ನಿಮ್ಮ ಇನ್​ಸ್ಟಾಗ್ರಾಂ ಅಕೌಂಟ್​ ಕಾಣಿಸ್ತಿಲ್ವಾ? ಎಲ್ರಿಗೂ ಹಿಂಗೇ ಆಗ್ತಿದೆ, ಕಾರಣ ಇದು!

ಇನ್ಸ್ಟಾಗ್ರಾಮ್‌

ಇನ್ಸ್ಟಾಗ್ರಾಮ್‌

ಇನ್ಸ್ಟಾಗ್ರಾಮ್‌ ಬಳಕೆದಾರರು ಎದುರಿಸುತ್ತಿರುವ ಸಮಸ್ಯೆ ಏನೆಂದರ ಬಳಕೆದಾರರ ಪರ್ಸನಲ್‌ ಅಕೌಂಟ್‌ ಅನ್ನು ನಿರ್ಬಂಧಿಸುತ್ತಿದ್ದಾರೆ.  ಇದರಿಂದ ಸ್ವಲ್ಪ ದಿನಗಳವರೆಗೆ ಬಳಕೆದಾರರಿಗೆ ತಮ್ಮ ಖಾತೆಯನ್ನು ಓಪನ್‌ ಮಾಡಲು ಸಾಧ್ಯವಾಗುವುದಿಲ್ಲ.

  • Share this:

    ಇದೀಗ ತಂತ್ರಜ್ಞಾನ (Technology) ಯುಗದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿವೆ. ಆದರೆ ಕೆಲವೊಂದು ಬದಲಾವಣೆಗಳು ಬಳಕೆದಾರರನ್ನು ಸಂಕಷ್ಟಕ್ಕೂ ಸಿಲುಕಿಸುತ್ತಿದೆ.  ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹಲವಾರು ಅಪ್‌ಡೇಟ್‌ (Update) ಆಗುತ್ತಿರುವುದನ್ನು ನಾವು ಗಮನಿಸಬಹುದು. ಇಲ್ಲಿ ನಾವು ಮುಖ್ಯವಾಗಿ ಟ್ವಿಟರ್‌ (Twitter) ಮತ್ತು ಜೊತೆಗೆ ಮೆಟಾದ (Meta) ಒಡೆತನದದಲ್ಲಿರುವ ಇನ್ಸ್ಟಾಗ್ರಾಮ್‌ (Instagram), ಫೇಸ್‌ಬುಕ್‌ (Facebook) ಕೂಡ ದಿನದಿಂದ ದಿನಕ್ಕೆ ಅಪ್‌ಡೇಟ್‌ಗಳನ್ನು ಮಾಡುತ್ತಲೇ ಇರುತ್ತದೆ. ಇತ್ತೀಚಿನ ಕೆಲವು ದಿನಗಳಿಂದ ಇನ್ಸ್ಟಾಗ್ರಾಮ್‌ ಬಳಕೆದಾರರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿ ಇನ್ಸ್ಟಾಗ್ರಾಮ್‌ ಕೆಲವು ದಿನದಿಂದ ಗ್ಲಿಚ್‌ (Glitch) ಆಗುತ್ತಿದೆ. ಇನ್ಸ್ಟಾಗ್ರಾಮ್‌ ಕೆಲವು ಬಳಕೆದಾರರ ಅಕೌಂಟ್‌ (Account) ಅನ್ನು ಅಮಾನತು ಗೊಳಿಸುತ್ತಿದೆ, ಇನ್ನೂ ಕೆಲವರು ಸರ್ವರ್‌ ಸಮಸ್ಯೆಯನ್ನು ಕೂಡ ಎದುರಿಸುತ್ತಿದ್ದಾರೆ. 


    ಇತ್ತೀಚಿಗೆ ಇನ್ಸ್ಟಾಗ್ರಾಮ್‌ ಬಳಕೆದಾರರು ಎದುರಿಸುತ್ತಿರುವ ಸಮಸ್ಯೆ ಏನೆಂದರೆ ಇಲ್ಲಿ ಬಳಕೆದಾರರ ಪರ್ಸನಲ್‌ ಅಕೌಂಟ್‌ ಅನ್ನು ನಿರ್ಬಂಧಿಸುತ್ತಿದ್ದಾರೆ.  ಇದರಿಂದ ಸ್ವಲ್ಪ ದಿನಗಳವರೆಗೆ ಬಳಕೆದಾರರಿಗೆ ತಮ್ಮ ಖಾತೆಯನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಏನಾಗಿದೆ ಇನ್ಸ್ಟಾಗ್ರಾಮ್‌ ಖಾತೆಗಳಿಗೆ ಏಂಬುದಕ್ಕೆ ಕಾರಣ ಇಲ್ಲಿದೆ.


    ಏನಾಯ್ತು ಮೆಟಾ ಕಂಪನಿಗೆ:


    ಈ ಸಮಸ್ಯೆಗಳು ಸರ್ವರ್‌ ಸಮಸ್ಯೆಯಿಂದಾಗಿದೆ. ಬೇರೇನು ಸಮಸ್ಯೆಗಳಿಂದಲ್ಲಾ. ಎಲ್ಲವನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ ಎಂದು ಮೆಟಾ ಕಂಪನಿ ತಿಳಿಸಿದೆ. ಈ ರೀತಿಯ ಸಮಸ್ಯೆಗಳು ಕೆಲವೊಮ್ಮೆ ಕಂಪನಿಗಳ ಕಾರ್ಯವೈಖರಿಯಿಂದ ಆಗುತ್ತದೆ. ಇದು ಇನ್ನು ಸ್ವಲ್ಪ ದಿನಗಳಲ್ಲೇ ಸರಿಹೊಂದಬಹುದೆಂದು ತಂತ್ರಜ್ಞರು ತಿಳಿಸಿದ್ದಾರೆ.


    ಇದನ್ನೂ ಓದಿ: Redmi Note 12 Pro+ ಫೋನಿನಲ್ಲಿ 200-MP ಸ್ಯಾಮ್‌ಸಂಗ್ HPX ಕ್ಯಾಮೆರಾ! ನೀವು ನೋಡಲೇಬೇಕು


    ಟ್ವಿಟರ್‌ ಪೋಸ್ಟ್‌ನಲ್ಲಿ ಪರಿಹಾರದ ಮಾಹಿತಿ:


    ಟ್ವಿಟರ್‌ನಲ್ಲೆ ಮೆಟಾ ಕಂಪನಿ ಪೋಸ್ಟ್ ಮೂಲಕ "ನಿಮ್ಮಲ್ಲಿ ಕೆಲವರು ನಿಮ್ಮಇನ್ಸ್ಟಾಗ್ರಾಮ್ ಅಕೌಂಟ್‌ ಅನ್ನು ಓಪನ್‌ ಮಾಡಲು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ." ಎಂದು ಟ್ವೀಟ್‌ ಅನ್ನು ಹಂಚಿಕೊಂಡಿದೆ.‌


    what-s-up-with-the-instagram-account-your-account-is-suspended-without-asking
    ಇನ್ಸ್ಟಾಗ್ರಾಮ್


    ಮೆಟಾದ ಯಾವೆಲ್ಲಾ ಅಪ್ಲಿಕೇಶನ್‌ಗಳು ಸಮಸ್ಯೆ ಎದುರಿಸುತ್ತಿದೆ:


    ಇಲ್ಲಿ ಎಲ್ಲಾ ಇನ್ಸ್ಟಾಗ್ರಾಮ್‌ ಬಳಕೆದಾರರು ಸಮಸ್ಯೆಯನ್ನು ಎದುರಿಸುತ್ತಿಲ್ಲ. ಕೆಲವೊಬ್ಬರಿಗೆ ಮಾತ್ರ ಈ ಸರ್ವರ್‌ ಸಮಸ್ಯೆಗಳಾಗುತ್ತಿದೆ. ಇಲ್ಲಿ ಮೆಟಾ ಕಂಪನಿಯ ಫೇಸ್‌ಬುಕ್‌, ವಾಟ್ಸಪ್‌, ಇನ್ಸ್ಟಾಗ್ರಾಮ್‌ ಅಪ್ಲಿಕೇಶನ್‌ಗಳಲ್ಲಿ ಫೇಸ್‌ಬುಕ್‌ ಮತ್ತು ವಾಟ್ಸಪ್‌ ಬಳಕೆದಾರರಿಗೆ ಯಾವುದೇ ಈ ರೀತಿಯ ತೊಂದರೆಗಳಾಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.


    ಕಳೆದ ವಾರ ವಾಟ್ಸಪ್‌ನಲ್ಲೂ ಇದೇ ಸಮಸ್ಯೆ ಇತ್ತು:


    ಗಮನಾರ್ಹವಾಗಿ, ಮೆಟಾದ ವೇಗದ ಸಂದೇಶ ರವಾನೆ ವೇದಿಕೆ ವಾಟ್ಸಪ್‌ ಕೂಡ ಕಳೆದ ವಾರ ಭಾರತ ಮತ್ತು ಇತರ ದೇಶಗಳಲ್ಲಿ ಒಮ್ಮೆಗೆ ಸ್ಥಗಿತಗೊಂಡಿತ್ತು. ಈ ಸ್ಥಗಿತದ ಕಾರಣ ಅಪ್ಲಿಕೇಶನ್ ಮತ್ತು ವೆಬ್ ಕ್ಲೈಂಟ್ ಸುಮಾರು ಎರಡು ಗಂಟೆಗಳ ಕಾಲ ಲಭ್ಯವಿರಲಿಲ್ಲ. ನಂತರ, "ರೂಟರ್‌ಗಳಲ್ಲಿನ ಕಾನ್ಫಿಗರೇಶನ್ ಬದಲಾವಣೆಗಳಿಂದ" ಎಂದು ವಾಟ್ಸಪ್‌ ಸ್ಥಗಿತಗೊಂಡಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಈ ಸಮಸ್ಯೆಗಳು ಹಿಂದಿನ ವರ್ಷವೂ ಆಗಿತ್ತು. ಇದು ಅಪ್ಲಿಕೇಶನ್‌ ಅನ್ನು ಏನಾದರು ಅಪ್ಡೇಟ್‌ ಮಾಡುವ ಸಂದರ್ಭದಲ್ಲಿ ಎದುರಾಗುತ್ತದೆ ಮತ್ತು ತಕ್ಷಣ ಈ ಸಮಸ್ಯೆಯನ್ನು ಕಂಪನಿ ಪರಿಹರಿಸುತ್ತದೆ.


    ಇದನ್ನೂ ಓದಿ: ಟ್ವಿಟರ್​ ಬಳಕೆದಾರರಿಗೆ ಶಾಕ್ ಕೊಟ್ಟ ಮಸ್ಕ್, ಪ್ರತಿ ತಿಂಗಳು ಹಣ ಪಾವತಿಸಿದರೆ ಮಾತ್ರ ಬ್ಲೂ ಟಿಕ್!


    ಈ ರೀತಿಯ ತೊಂದರೆಗಳು ಕೆಲವೊಮ್ಮೆ ಕಂಪನಿಯ ಕಾರ್ಯವೈಖರಿಯ ಪ್ರಭಾವದಿಂದ ಆಗುತ್ತದೆ. ಇದು ಯಾವುದೇ ರೀತಿಯಲ್ಲೂ ಬಳಕೆದಾರರ ಖಾತೆಗಳನ್ನು ಪರ್ಮನೆಂಟ್‌ ಆಗಿ ಹಿಂಪಡೆಯಲು ಆಗದಂತೆ ಮಾಡುವುದಿಲ್ಲ. ಒಂದು ವೇಳೆ ಈ ರೀತಿಯ ಸಮಸ್ಯೆ ಆಗಿದ್ದರೆ ಇನ್ನು ಸ್ವಲ್ಪ ದಿನಗಳಲ್ಲಿ ಸರಿಹೊಂದಬಹುದೆಂದು ತಂತ್ರಜ್ಞರು ತಿಳಿಸಿದ್ದಾರೆ.

    Published by:ವಾಸುದೇವ್ ಎಂ
    First published: