Facebook, LinkedIn ಡೇಟಾ ಸೋರಿಕೆಯಾಗುತ್ತಿದೆಯಾ? ತಿಳಿದುಕೊಳ್ಳೋದು ಹೇಗೆ? ಫುಲ್ ಡೀಟೆಲ್ಸ್ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಲಿಂಕ್ಡ್‌ಇನ್‌ ಅನ್ನು ಮಿಲಿಯನ್‍ಗಟ್ಟಲೇ ಮಂದಿ ಪ್ರತಿನಿತ್ಯ ಬಳಸುತ್ತಲೇ ಇರುತ್ತಾರೆ. ಕೆಲಸದ ಕಾರಣಕ್ಕೋ, ಮನರಂಜನೆ, ಮಾಹಿತಿ ಹಂಚಿಕೆ, ಹೀಗೆ ನಾನಾ ಕಾರಣಗಳಿಂದ ನಾವು ಆನ್‍ಲೈನ್ ತಡಕಾಡುತ್ತಲೇ ಇರಬೇಕಾಗುತ್ತದೆ. ಆಗ ನಮ್ಮ ಎಲ್ಲಾ ಮಾಹಿತಿ ಸೋರಿಕೆಯಾದರೆ ಹೇಗಾಗಬೇಡ..?

ಮುಂದೆ ಓದಿ ...
  • Share this:

Data Leak: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿನ ದತ್ತಾಂಶ ಸೋರಿಕೆ ಬಳಕೆದಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಲಿಂಕ್ಡ್‌ಇನ್‌ ಅನ್ನು ಮಿಲಿಯನ್‍ಗಟ್ಟಲೇ ಮಂದಿ ಪ್ರತಿನಿತ್ಯ ಬಳಸುತ್ತಲೇ ಇರುತ್ತಾರೆ. ಕೆಲಸದ ಕಾರಣಕ್ಕೋ, ಮನರಂಜನೆ, ಮಾಹಿತಿ ಹಂಚಿಕೆ, ಹೀಗೆ ನಾನಾ ಕಾರಣಗಳಿಂದ ನಾವು ಆನ್‍ಲೈನ್ ತಡಕಾಡುತ್ತಲೇ ಇರಬೇಕಾಗುತ್ತದೆ. ಆಗ ನಮ್ಮ ಎಲ್ಲಾ ಮಾಹಿತಿ ಸೋರಿಕೆಯಾದರೆ ಹೇಗಾಗಬೇಡ..? ಒಮ್ಮೊಮ್ಮೆ ಬಳಕೆದಾರರು ಯಾವಾಗ ದತ್ತಾಂಶ ಸೋರಿಕೆಯಾಗುತ್ತದೋ ಎಂಬ ಆತಂಕದಲ್ಲಿಯೇ ಬಳಕೆ ಮಾಡುತ್ತಿರುತ್ತಾರೆ.ಹಾಗಾಗಿ ಈ ಆತಂಕ ದೂರವಾಗಲು ಇರುವ ಒಂದೇ ಒಂದು ಮಾರ್ಗವೆಂದರೆ, ದತ್ತಾಂಶ ಸೋರಿಕೆ ಹೇಗೆ ಆಗುತ್ತದೆ, ಸೋರಿಕೆಯಾಗದಂತೆ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು. ಈ ಮಾಹಿತಿ ಗೊತ್ತಿದ್ದರೆ, ದತ್ತಾಂಶ ಸೋರಿಕೆಯನ್ನು ಸುಲಭವಾಗಿ ಕಂಡುಕೊಳ್ಳಬಹುದು. ನಾವು ಬಳಸುವ ಸಾಮಾಜಿಕ ಜಾಲತಾಣಗಳನ್ನು ಹ್ಯಾಕರ್ಸ್‍ಗಳಿಂದ ರಕ್ಷಿಸಿಕೊಳ್ಳಬಹುದು.


ಈ ವೆಬ್‍ಸೈಟ್‍ ಸಹಾಯ ಪಡೆಯಿರಿ
'ಹ್ಯಾವ್ ಐ ಪಿನ್ಡ್' ಎಂಬ ವೆಬ್‍ಸೈಟ್ ಇದೆ. ಇದರಲ್ಲಿ, ನಿಮ್ಮ ಇಮೇಲ್ ನಮೂದಿಸುವ ಮೂಲಕ, ನಿಮ್ಮ ಡೇಟಾ ಕಳವು ಮಾಡಲಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು. ಆದರೆ ಬಳಕೆದಾರರು ಈ ಪ್ಲಾಟ್‍ಫಾರ್ಮ್‍ನಲ್ಲಿಇಮೇಲ್ ವಿಳಾಸದ ಮೂಲಕ ಮಾತ್ರ ಹುಡುಕಬಹುದಾಗಿದೆ.


ಹುಡುಕಾಟ ಸರಳವಾಗಿರಲಿ
ವೆಬ್‍ಸೈಟ್‍ನಲ್ಲಿ ಹುಡುಕುವ ವೇಳೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬಹುದು ಮತ್ತು ಸೋರಿಕೆಯಾದ ಈ ಡೇಟಾಬೇಸ್‍ನಲ್ಲಿ ನಿಮ್ಮ ಮಾಹಿತಿಯು ಇದೆಯೇ ಅಥವಾ ಇಲ್ಲವೇ ಎಂಬುದನ್ನು ವೆಬ್‍ಸೈಟ್ ಪರಿಶೀಲಿಸುತ್ತದೆ.


ಇದನ್ನೂ ಓದಿ: Twitter: ಟ್ವೀಟ್ ಮಾಡೋಕೆ ಟೈಪ್ ಮಾಡಬೇಕಿಲ್ಲ, ಧ್ವನಿ ಬಳಸಿ ಟ್ವೀಟ್ ಮಾಡುವ ಹೊಸಾ ಆಪ್ಶನ್ ಬಂದಿದೆ..ಆಡಿಯೋ ಟ್ವೀಟ್ ಮಾಡೋದು ಹೀಗೆ...

ಫೇಸ್‍ಬುಕ್ ಡೇಟಾ ಸೋರಿಕೆ
ಕೆಲವು ದಿನಗಳ ಹಿಂದೆ, ಒಂದು ಸುದ್ದಿ ಬಳಕೆದಾರರನ್ನು ತಲ್ಲಣಗೊಳಿಸಿತು. ವರದಿಗಳ ಪ್ರಕಾರ, 533 ಮಿಲಿಯನ್ ಫೇಸ್‍ಬುಕ್ ಖಾತೆಗಳ ವೈಯಕ್ತಿಕ ಡೇಟಾ ಆನ್‍ಲೈನ್‍ನಲ್ಲಿ ಸೋರಿಕೆಯಾಗಿದೆ ಎಂಬ ಸುದ್ದಿ ವೈರಲ್ ಆಗಿತ್ತು. ಬಹಿರಂಗವಾದ ದತ್ತಾಂಶವು 106 ದೇಶಗಳ 533 ಮಿಲಿಯನ್ ಫೇಸ್‍ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿದೆ, ಇದರಲ್ಲಿ ಯುಎಸ್‍ನಲ್ಲಿ 32 ಮಿಲಿಯನ್ ಬಳಕೆದಾರರ ದಾಖಲೆಗಳು, ಯುಕೆಯ 11 ಮಿಲಿಯನ್ ಬಳಕೆದಾರರು ಮತ್ತು ಭಾರತದಲ್ಲಿ 6 ಮಿಲಿಯನ್ ಬಳಕೆದಾರರು ಸೇರಿದ್ದಾರೆ" ಎಂದು ಇನ್ಸೈಡರ್ ವರದಿ ಮಾಡಿತ್ತು.


9.9 ಕೋಟಿ ಭಾರತೀಯ ಬಳಕೆದಾರರ ಡೇಟಾ ಸೋರಿಕೆ
ಕೆಲವು ದಿನಗಳ ಹಿಂದೆ ಭಾರತದಲ್ಲಿ ಡೇಟಾ ಸೋರಿಕೆಯ ಬಗ್ಗೆ ಸುದ್ದಿಯಾಗಿತ್ತು. ಇದರಲ್ಲಿ ಸುಮಾರು 9.9 ಕೋಟಿ ಭಾರತೀಯರ ಡೇಟಾ ಸೋರಿಕೆಯಾಗಿದೆ. 9.9 ಕೋಟಿ ಭಾರತೀಯ ಮೊಬಿಕ್ವಿಕ್ ಬಳಕೆದಾರರ ಮೊಬೈಲ್ ಸಂಖ್ಯೆಗಳು, ಬ್ಯಾಂಕ್ ಖಾತೆ ವಿವರಗಳು, ಇ-ಮೇಲ್ ಮತ್ತು ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಸೇರಿದಂತೆ ದತ್ತಾಂಶವನ್ನು ಪಡೆದಿರುವುದಾಗಿ ಹ್ಯಾಕರ್ಸ್ ಹೇಳಿದ್ದಾರೆ.


ನಿಮ್ಮ ದತ್ತಾಂಶ ರಕ್ಷಿಸಲು ಈ ಹಂತಗಳನ್ನು ಅನುಸರಿಸಿ:


1. ನೀವು 'ಸ್ಟ್ರಾಂಗ್ ಪಾಸ್‌ವರ್ಡ್‌' ಅಥವಾ ಪಾಸ್ವರ್ಡ್ ಮ್ಯಾನೇಜರ್ ಅನ್ನು ಬಳಸಬೇಕು.


2. ಹೆಚ್ಚುವರಿ ಸುರಕ್ಷತೆಗಾಗಿ ನೀವು ಎರಡು ಅಂಶಗಳ ಪರಿಶೀಲನೆ ಸಕ್ರಿಯಗೊಳಿಸಬಹುದು


3. ನೀವು ಬಯೋಮೆಟ್ರಿಕ್ ಪಾಸ್‍ವರ್ಡ್ ಬಳಸಬಹುದು.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

Published by:Soumya KN
First published: