ಐಪೋನ್ ಮೋಹಕ್ಕೆ ಕಿಡ್ನಿ ಮಾರಿಬಿಟ್ಟ ಯುವಕ : ಚಿಕಿತ್ಸೆ ವಾಸಿಯಾಗದೆ ಹಾಸಿಗೆ ಹಿಡಿದ

ಅಂದು ಒಂದು ಕಿಡ್ನಿಗಾಗಿ ಮಾಡಿಸಿಕೊಂಡ ಸರ್ಜರಿಯಿಂದ ಇಂದು ವಾಂಗ್ ತನ್ನ ಎರಡು ಕಿಡ್ನಿಗಳಿಗೆ ಪರಿಣಾಮ ಬೀರಿದ್ದು, ಇದರಿಂದ ಪೋಷಕರು ಆತನ ಚಿಕಿತ್ಸೆಗಾಗಿ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. 

news18
Updated:January 1, 2019, 4:53 PM IST
ಐಪೋನ್ ಮೋಹಕ್ಕೆ ಕಿಡ್ನಿ ಮಾರಿಬಿಟ್ಟ ಯುವಕ : ಚಿಕಿತ್ಸೆ ವಾಸಿಯಾಗದೆ ಹಾಸಿಗೆ ಹಿಡಿದ
ಹಾಸಿಗೆ ಹಿಡಿದಿರುವ ವಾಂಗ್
news18
Updated: January 1, 2019, 4:53 PM IST
ಐಫೋನ್ ಕೊಂಡುಕೊಳ್ಳಲು ಯುವಕನೊಬ್ಬ ತನ್ನ ಕಿಡ್ನಿಯನ್ನು ಮಾರಿದ ಪ್ರಸಂಗ 2011ರಲ್ಲಿ ಚೀನಾದಲ್ಲಿ ನಡೆದಿತ್ತು. ಕಿಡ್ನಿ ಮಾರಿದ ಯುವಕನನ್ನು ವಾಂಗ್ ಎಂದು ಗುರುತಿಸಲಾಗಿದೆ. ಇತ ಐಫೋನ್ 4 ಮೊಬೈಲ್ ಮೋಹಕ್ಕಾಗಿ ಕಿಡ್ನಿ ಮಾರಿದನೆಂದು ತಿಳಿದು ಬಂದಿದೆ. ಆದರೆ ವಾಂಗ್​ನ ಈ ಪ್ರಸಂಗವು ಆತನನ್ನು ಹಾಸಿಗೆ ಹಿಡಿಯುವಂತೆ ಮಾಡಿದೆ

ಇದನ್ನೂ ಓದಿ :  ಕಳೆದ ವರ್ಷ ಬಿಡುಗಡೆಯಾದ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್​ಫೋನ್​ಗಳು

17 ವರ್ಷದ ವಾಂಗ್ ಐ ಪೋನ್​ಗಾಗಿ 2011 ರಲ್ಲಿ ಕಿಡ್ನಿ ಮಾರಲು ಮುಂದಾಗಿದ್ದ, ಕಿಡ್ನಿಯನ್ನು ಮಾರಿ ಬಂದ 2,23,168 ಹಣದಿಂದ ಮೊಬೈಲ್ ಖರೀದಿಸಿದ್ದನು. ಆದರೆ ವಾಂಗ್ ಮಾಡಿಸಿಕೊಂಡ ಸರ್ಜರಿಯು ಯಶಸ್ವಿಗೊಂಡಿರಲಿಲ್ಲ. ಅಂದು ಒಂದು ಕಿಡ್ನಿಗಾಗಿ ಮಾಡಿಸಿಕೊಂಡ ಸರ್ಜರಿಯಿಂದ ಇಂದು ವಾಂಗ್ ತನ್ನ ಎರಡು ಕಿಡ್ನಿಗಳಿಗೆ ಪರಿಣಾಮ ಬೀರಿದ್ದು, ಇದರಿಂದ ಪೋಷಕರು ಆತನ ಚಿಕಿತ್ಸೆಗಾಗಿ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. 

ಯುವಕನಿಗೆ  ಚೀನಾದ ಅಂಡರ್ ​ಗ್ರೌಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಾಂಗ್ ಸುರಕ್ಷಿತವಾಗಿದ್ದಾನೆ. ಒಂದು ವಾರದಲ್ಲಿ ವಾಂಗ್ ಸಹಜ ಸ್ಥಿತಿಗೆ ಮರಳುವನು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಇಂದು ಆ್ಯಪಲ್ ಮೊಬೈಲ್​ಗಳು ಹೊಸ ಪೀಳಿಗೆಗೆ ದುಬಾರಿಯಾಗಿದ್ದು, ಹದಿಹರೆಯದ ಅನೇಕರು ಕೊಂಡುಕೊಳ್ಳಲು ಮುಂದಾಗುತ್ತಿದ್ದಾರೆ.

ಇದನ್ನೂ ಓದಿ :  ಶಿಯೋಮಿ ಕಂಪೆನಿಯ ಹೊಸ 'ಮಿ ನೋಟ್​ಬುಕ್​ ಏರ್' ಬಿಡುಗಡೆ: ಏನಿದರ ವಿಶೇಷತೆ?

First published:January 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ