ಯೂಟ್ಯೂಬ್ (Youtube) ಎಂಬುದು ಒಂದು ಉದ್ಯೋಗ ಸೃಷ್ಟಿಸುವ ವೇದಿಕೆ ಅಂತಾನೂ ಹೇಳ್ಬಹುದು. ಓಟಿಟಿ ಪ್ಲಾಟ್ಫಾರ್ಮ್ಗಳು (OTT Platforms) ಬರುವ ಮೊದಲು ಬಹಳಷ್ಟು ಮುಂಚೂಣಿಯಲ್ಲಿದ್ದ ಒಂದು ವೇದಿಕೆಯೆಂದರೆ ಅದು ಯೂಟ್ಯೂಬ್. ಯೂಟ್ಯೂಬ್ ವಿಡಿಯೋ (Youtube Video) ಶೇರ್ ಮಾಡುವ ಮತ್ತು ನೋಡುವ ಅವಕಾಶವನ್ನು ನೀಡಲಾಗಿದ್ದು, ಬಳಕೆದಾರರು ತಮಗೆ ಬೇಕಾದ ವಿಷಯಗಳನ್ನು ಅದರಲ್ಲಿ ನೋಡಬಹುದಾಗಿದೆ. ಇದುವರೆಗೆ ಯೂಟ್ಯೂಬ್ ತನ್ನ ಫೀಚರ್ಸ್ ಮೂಲಕ ಹಲವಾರು ಬಳಕೆದಾರರನ್ನು ಹೊಂದಿದೆ. ಇದೀಗ ಯೂಟ್ಯೂಬ್ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್ ಅನ್ನು ಬಿಡುಗಡೆ ಮಾಡಿದೆ. ಇನ್ಮುಂದೆ ಬಳಕೆದಾರರು ಈ ಫೀಚರ್ಸ್ ಮೂಲಕ ತಮಗೆ ಬೇಕಾ ವಿಡಿಯೋವನ್ನು ತಮಗೆ ಬೇಕಾಗುವಂತೆ ಇಟ್ಟುಕೊಳ್ಳಬಹುದಾಗಿದೆ.
ಕಾಲಕಾಲಕ್ಕೆ ತಕ್ಕಂತೆ ಸುಧಾರಿತ ಫೀಚರ್ಸ್ಗಳು ಯೂಟ್ಯೂಬ್ ನಲ್ಲಿ ಕಂಡುಬರುತ್ತಿದ್ದು, ಇದೀಗ ಮತ್ತೆ ಯೂಟ್ಯೂಬ್ ಬಳಕೆದಾರರಿಗೆ ಕ್ಯೂ ಎಂಬ ಫೀಚರ್ಸ್ ಅನ್ನು ಪರಿಚಯಿಸಿದೆ. ಈ ಫೀಚರ್ಸ್ ಮೂಲಕ ವಿಡಿಯೋ ವೀಕ್ಷಣೆ ಅನುಭವವನ್ನು ಇನ್ನಷ್ಟು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.
ಭಾರತದ ಯೂಟ್ಯೂಬ್ ಬಳಕೆದಾರರಿಗೆ ಕ್ಯೂ ಫೀಚರ್ಸ್
ಯೂಟ್ಯೂಬ್ನ ಈ ಕ್ಯೂ ಫೀಚರ್ಸ್ ಮೂಲಕ ಮುಂದಿನ ದಿನಗಳಲ್ಲಿ ವೀಕ್ಷಕರಿಗೆ ವಿಡಿಯೋ ನೋಡಲು ಇನ್ನಷ್ಟು ಸಹಕಾರಿಯಾಗಲಿದೆ. ಯಾಕೆಂದರೆ ಇದು ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಲಭ್ಯವಾಗುತ್ತದೆ. ಇನ್ನು ಯೂಟ್ಯೂಬ್ನಲ್ಲಿ ಯಾವುದೇ ವಿಡಿಯೋವನ್ನು ನೋಡಲು, ವಿಡಿಯೋ ಪ್ಲೇ ಆಗುವ ಕ್ರಮವನ್ನು ಎಡಿಟ್ ಮಾಡಲು ಅಥವಾ ಪ್ಲೇ ಆಗುವ ಲೀಸ್ಟ್ನಿಂದ ವಿಡಿಯೋವನ್ನು ತೆಗೆದು ಹಾಕಲು ಈ ಫೀಚರ್ ಬಹಳ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಗೂಗಲ್ಗೆ ಕೋಟಿ ಕೋಟಿ ದಂಡ ವಿಧಿಸಿದ ಸರ್ಕಾರ! ಕೊನೆಗೂ ನ್ಯಾಯಮಂಡಳಿಯ ಮೊರೆ ಹೋಗ್ಬೇಕಾಯ್ತು
ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಫೀಚರ್ ಅನ್ನು ಅಧಿಕೃತವಾಗಿ ಲಾಂಚ್ ಮಾಡುವ ಮೊದಲು ಕೆಲವು ದಿನಗಳಿಂದ ಪ್ರೀಮಿಯಂ ಚಂದಾದಾರಿಕೆ ಮಾಡಿಕೊಂಡವರಿಗೆ ನೀಡುವ ಮೂಲಕ ಕಂಪನಿ ಪರೀಕ್ಷೆ ನಡೆಸುತ್ತಿತ್ತು. ಈ ಎಲ್ಲಾ ಬಳಕೆಯ ನಂತರ ಇದೀಗ ಎಲ್ಲಾ ಬಳಕೆದಾರರಿಗೂ ಲಭ್ಯವಾಗಿದೆ. ಇನ್ನು ಕ್ಯೂ ಫೀಚರ್ಸ್ ಈಗಾಗಲೇ ವೆಬ್ನಲ್ಲಿ ಅಸ್ತಿತ್ವದಲ್ಲಿದ್ದು, ಇದು ಯೂಟ್ಯೂಬ್ ಮ್ಯೂಸಿಕ್ನಲ್ಲಿ ಕಸ್ಟಮ್ ಪ್ಲೇ ಪಟ್ಟಿ ಮಾಡುವಂತೆ ಕೆಲಸ ಮಾಡಲಿದೆ.
ಇದಿಷ್ಟೇ ಅಲ್ಲದೆ ಈ ಫೀಚರ್ಸ್ 'ನಂತರ ವೀಕ್ಷಿಸಲು ಉಳಿಸಿ' ಅಥವಾ 'ಪ್ಲೇಪಟ್ಟಿಗೆ ಉಳಿಸಿ' ಈ ರೀತಿಯಲ್ಲಿ ಎಡಿಟ್ ಮಾಡಬಹುದಾದರೂ ಇನ್ನು ವಿಶೇಷತೆಗಳನ್ನು ಇದು ಹೊಂದಿದೆ. ಯಾಕೆಂದರೆ ಇದು ಬಳಕೆದಾರರಿಗೆ ವಿಡಿಯೋಗಳನ್ನು ಶಾಶ್ವತವಾಗಿ ಉಳಿಸಲು ಅನುವು ಮಾಡಿಕೊಡುತ್ತದೆ. ಈ ಮೂಲಕ ಬೇಕಾದಾಗ ವಿಡಿಯೋ ವೀಕ್ಷಣೆ ಮಾಡಬಹುದು ಅಥವಾ ಆ ಲೀಸ್ಟ್ನಿಂದ ಡಿಲೀಟ್ ಮಾಡಬಹುದು.
ಯೂಟ್ಯೂಬ್ ಕ್ಯೂ ಫೀಚರ್ ಅನ್ನು ಬಳಕೆ ಮಾಡುವುದು ಹೇಗೆ?
ಹಂತ 1
ಮೊದಲು ನಿಮ್ಮ ಯೂಟ್ಯೂಬ್ ಅನ್ನು ಓಪನ್ ಮಾಡುವಾಗ ಯಾವ ವಿಡಿಯೋ ಬೇಕೋ ಆ ವಿಡಿಯೋ ಮೇಲೆ ಕರ್ಸರ್ ಚಲಾಯಿಸಿ, ನಂತರ ಅಲ್ಲಿ ಮೂರು ಡಾಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ. ಇದನ್ನು ಕ್ಲಿಕ್ ಮಾಡಿದಾಗ ಅಲ್ಲಿ ಕ್ಯೂ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
ಹಂತ 2
ಕ್ಯೂ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಒಂದು ಲೀಸ್ಟ್ ರಚನೆಯಾಗುತ್ತದೆ. ಅದಾದ ಮೇಲೆ ನಿಮಗೆ ಯಾವ ವಿಡಿಯೋವನ್ನು ಆ ಲೀಸ್ಟ್ನಲ್ಲಿ ಸೇರಿಸಬೇಕು ಎಂದುಕೊಳ್ಳುತ್ತೀರೋ ಆ ವಿಡಿಯೋ ಮೇಲೆ ಕಾಣಿಸಿಕೊಳ್ಳುವ ಕ್ಯೂ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಸಾಕು.
ಹಂತ 3
ಲೀಸ್ಟ್ನಲ್ಲಿ ರಚನೆಯಾದ ನಂತರ ಯಾವ ವಿಡಿಯೋ ಎಷ್ಟನೇ ಸರದಿಯಲ್ಲಿ ಇರಬೇಕು ಎಂಬುದನ್ನೂ ಸಹ ನಿಮಗೆ ಎಡಿಟ್ ಮಾಡುವಂತಹ ಅವಕಾಶವಿದೆ. ಅಂದರೆ ನೀವು ಯಾವಾಗ ನೋಡಬೇಕು ಎಂದು ಕ್ರಮಬದ್ಧತೆಯಲ್ಲಿ ವಿಡಿಯೋ ಲೀಸ್ಟ್ ಕ್ರಿಯೇಟ್ ಮಾಡಬಹುದಾಗಿದೆ. ಹಾಗೆಯೇ ಬೇಕಾದ ಸಮಯದಲ್ಲಿ ಆ ಲೀಸ್ಟ್ನಿಂದ ವಿಡಿಯೋವನ್ನು ಡಿಲೀಟ್ ಕೂಡ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ