ಅಗ್ಗದ ಬೆಲೆಗೆ ನಿಮ್ಮ ಕೈಸೇರಲಿದೆ ‘ರೆಡ್ ಮಿ ಗೊ’ಮೊಬೈಲ್

ಕ್ಸಿಯಾಮಿ ‘ರೆಡ್​ ಮಿ ಗೊ‘ 1280 x 720 ಫಿಕ್ಸೆಲ್​ ಸಾಮರ್ಥ್ಯದ ಜೊತೆಗೆ 5 ಇಂಚಿನ LCD ಡಿಸ್​ಪ್ಲೇ ಹೊಂದಿದೆ, ಗ್ರಾಹಕರಿಗೆ ಕಡಿಮೆ ಬೆಲೆಯ ದೊರಕುವುದಲ್ಲದೆ ಇನ್ನೂ ಹಲವಾರು ಫೀಚರ್​ಗಳನ್ನು ಇದರಲ್ಲಿ ನೀಡಿದೆ.

Harshith AS | news18
Updated:January 31, 2019, 3:46 PM IST
ಅಗ್ಗದ ಬೆಲೆಗೆ ನಿಮ್ಮ ಕೈಸೇರಲಿದೆ ‘ರೆಡ್ ಮಿ ಗೊ’ಮೊಬೈಲ್
ಕ್ಸಿಯಾಮಿ ‘ರೆಡ್​ ಮಿ ಗೊ‘ 1280 x 720 ಫಿಕ್ಸೆಲ್​ ಸಾಮರ್ಥ್ಯದ ಜೊತೆಗೆ 5 ಇಂಚಿನ LCD ಡಿಸ್​ಪ್ಲೇ ಹೊಂದಿದೆ, ಗ್ರಾಹಕರಿಗೆ ಕಡಿಮೆ ಬೆಲೆಯ ದೊರಕುವುದಲ್ಲದೆ ಇನ್ನೂ ಹಲವಾರು ಫೀಚರ್​ಗಳನ್ನು ಇದರಲ್ಲಿ ನೀಡಿದೆ.
Harshith AS | news18
Updated: January 31, 2019, 3:46 PM IST
ಕ್ಸಿಯಾಮಿ ಕಂಪೆನಿಯು ಫೋನ್​ ಪ್ರೀಯರಿಗೆ ಹೊಸದಾದ ‘ರೆಡ್​ ಮಿ ಗೊ‘ ಮೊಬೈಲ್​ ಅನ್ನು ಪರಿಚಯಿಸಲು ಮುಂದಾಗಿದೆ. ಈ ಬಾರಿ ಕ್ಸಿಯಾಮಿ ಕಂಪೆನಿಯು ಗ್ರಾಹಕರಿರು ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್​ ಹೊಂದಿದ ಮೊಬೈಲ್​ ಖರೀದಿಸಲು ಕಂಪೆನಿ ಹೊಸದಾದ ಯೋಜನೆಯನ್ನು ಹಾಕಿದೆ.  ಕ್ಸಿಯಾಮಿ ಈ ಬಾರಿ ಬೆಲೆಯಲ್ಲಿ ತೀರ ಕಡಿತಗೊಳಿಸಿದ್ದು ‘ರೆಡ್​ ಮಿ ಗೊ‘ ಮೊಬೈಲ್​​ 4,999 ರೂ ಬೆಲೆಗೆ ದೊರಕಲಿದೆ ಎಂದು ಅಂದಾಜಿಸಲಾಗಿದೆ.

ಡಿಸ್​ಪ್ಲೇ

ಕ್ಸಿಯಾಮಿ ‘ರೆಡ್​ ಮಿ ಗೊ‘ 1280 x 720 ಫಿಕ್ಸೆಲ್​ ಸಾಮರ್ಥ್ಯದ ಜೊತೆಗೆ 5 ಇಂಚಿನ LCD ಡಿಸ್​ಪ್ಲೇ ಹೊಂದಿದೆ, ಗ್ರಾಹಕರಿಗೆ ಕಡಿಮೆ ಬೆಲೆಯ ದೊರಕುವುದಲ್ಲದೆ ಇನ್ನೂ ಹಲವಾರು ಫೀಚರ್​ಗಳನ್ನು ಇದರಲ್ಲಿ ನೀಡಿದೆ.

ಇದನ್ನೂ ಓದಿ: ಸೈಬರ್​​ ಕ್ರೈಂ: ಸಿಮ್ ಸ್ವಾಪ್‌ ಬಗ್ಗೆ ಎಚ್ಚರವಿರಲಿ; ಬ್ಯಾಂಕ್​​ ಖಾತೆಗೆ ಕನ್ನ ಹಾಕುತ್ತಾರೆ ಖದೀಮರು!

ಪ್ರೊಸೆಸರ್​

‘ರೆಡ್​ ಮಿ ಗೊ‘ ಮೊಬೈಲ್ ​425 ಸ್ನಾಪ್​ಡ್ರಾಗನ್​​ ಚಿಪ್​ಸೆಟ್​ನೊಂದಿಗೆ ಕಾಲ್​ ಕ್ಯಾಂ ಪ್ರೊಸೆಸರ್​ ಅಳವಡಿಸಲಾಗಿದೆ. 308 CPU ಹಾಗೂ ವೇಗವಾಗಿ ಕಾರ್ಯ ನಿರ್ವಹಿಸುವ 1.4 Hz ಪ್ರೊಸೆಸರ್​ ಇದರಲ್ಲಿದೆ.

ಕ್ಯಾಮೆರಾ
Loading...

ಕಡಿಮೆ ಬೆಲೆಗೆ ದೊರಕುವ ‘ರೆಡ್​ ಮಿ ಗೊ‘ ಮೊಬೈಲ್​ ಬೆಲೆಗೆ ಅನುಗುಣವಾದ ಎರಡು ಕ್ಯಾಮೆರಾವನ್ನು  ಹೊಂದಿದೆ. ಎರಡು ಕ್ಯಾಮೆರಾಗಳು ಸ್ಟೋರ್ಟ್​ ಸಿಂಗಲ್​ ಕ್ಯಾಮೆರಾವಾಗಿದ್ದು, ಮುಂದಿನ ಕ್ಯಾಮೆರಾ 5 ಮೆಗಾಫಿಕ್ಸೆಲ್​ ಹಾಗೂ ಹಿಂದಿನ ಕ್ಯಾಮೆರಾವು 8 ಮೆಗಾಫಿಕ್ಸೆಲ್​ ಒಳಗೊಂಡಿದೆ. ಹಿಂದಿನ ಕ್ಯಾಮೆರದಲ್ಲಿ ಪ್ಲಾಶ್​ ಆಯ್ಕೆ ಇದೆ.

ಮೆರಿಮೊ

‘ರೆಡ್​ ಮಿ ಗೊ‘ ಮೊಬೈಲ್​ 1 GB RAM ಜೊತೆಗೆ 8GB ROM ಹೊಂದಿದೆ. ಮೊಬೈಲ್​​ SD ಕಾರ್ಡ್​ ಆಯ್ಕೆಯನ್ನು 128 GB ವಿಸ್ತರಿಸಬಹುದಾಗಿದೆ.

ಬ್ಯಾಟರಿ

ಮೊಬೈಲ್​ನಲ್ಲಿ  30000 mAh ಬ್ಯಾಟರಿ ಇದರಲ್ಲಿದ್ದು, ಒಂದು ದಿನದ ಬಾಳಿಕೆಗೆ ಸೂಕ್ತವಾಗಿದೆ. ರೆಡ್​ ಮಿ ಗೋ ಮೊಬೈಲ್​ ಜೊತೆಗೆ 5V1A ಚಾರ್ಜರ್​ ನೀಡಲಾಗುತ್ತಿದೆ.

ಬೆಲೆ

ಕ್ಸಿಯಾಮಿ ‘ರೆಡ್​ ಮಿ ಗೋ‘ ಮೊಬೈಲ್​ ನಿಖರವಾದ ಬೆಲೆಯನ್ನು ಕಂಪೆನಿ ಖಚಿತ ಪಡಿಸಿಲ್ಲವಾದರು. ಅಂದಾಜು ಬೆಲೆಯನ್ನು 4,999 ರೂ ಎಂದು ಹೇಳಲಾಗಿದೆ. ಸದ್ಯದಲ್ಲೆ ಭಾರತೀಯ ಮಾರುಕಟ್ಟೆಗೆ ಧಾವಿಸಲಿರುವ ಈ ಮೊಬೈಲ್​ ಕಡಿಮೆ ಬೆಲೆಗೆ ಗ್ರಾಹಕರಿಗೆ ದೊರಕಲಿದೆ.

First published:January 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ