• Home
 • »
 • News
 • »
 • tech
 • »
 • Truecaller: ಟ್ರೂ ಕಾಲರ್​ನ ಈ ಫೀಚರ್​​ಗಳನ್ನು ನೀವೊಮ್ಮೆ ನೋಡಲೇ ಬೇಕು

Truecaller: ಟ್ರೂ ಕಾಲರ್​ನ ಈ ಫೀಚರ್​​ಗಳನ್ನು ನೀವೊಮ್ಮೆ ನೋಡಲೇ ಬೇಕು

ಟ್ರೂ ಕಾಲರ್

ಟ್ರೂ ಕಾಲರ್

ಟ್ರೂ ಕಾಲರ್ ಬಳಸುವವರಿಗೆ ಈ ಮಾಹಿತಿ  ಉಪಯುಕ್ತವಾಗಿದೆ. ಕಾರಣ ಬಳಕೆದಾರರು  ಕೆಲವೊಮ್ಮೆ ತನ್ನ ಹೆಸರನ್ನು ಬದಲಾಯಿಸಲು ಕಷ್ಷಪಡುತ್ತಾರೆ. ಮತ್ತು ತನ್ನ ನಂಬರ್ ನ ಹೆಸರು ಬದಲಾಯಿಸಲು ಎಷ್ಷೊ ಜನರ ಬಳಿ ಕೇಳಿಕೊಂಡರು ಸರಿಯಾದ ಮಾಹಿತಿಯನ್ನು ನೀಡುವುದಿಲ್ಲ. ಮತ್ತು ಟ್ರೂ ಕಾಲರ್ ನ ಫೀಚರ್ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು.

ಮುಂದೆ ಓದಿ ...
 • Share this:

  ಟ್ರೂ ಕಾಲರ್ ( true caller) ಬಳಸುವವರಿಗೆ ಈ ಮಾಹಿತಿ (information)  ಉಪಯುಕ್ತವಾಗಿದೆ. ಕಾರಣ (reason) ಬಳಕೆದಾರರು  ಕೆಲವೊಮ್ಮೆ ತನ್ನ ಹೆಸರನ್ನು (Name) ಬದಲಾಯಿಸಲು (Change) ಕಷ್ಟಪಡುತ್ತಾರೆ. ಮತ್ತು ತನ್ನ ನಂಬರ್​ನ ಹೆಸರು ಬದಲಾಯಿಸಲು ಎಷ್ಟೋ ಜನರ ಬಳಿ ಕೇಳಿಕೊಂಡರು ಸರಿಯಾದ ಮಾಹಿತಿಯನ್ನು ನೀಡುವುದಿಲ್ಲ. ಈ ಕಾರಣಕ್ಕೆ ಸುಲಭ ದಾರಿಯಲ್ಲಿ (Easy way) ಯಾವ ರೀತಿ ತನ್ನ ಹೆಸರನ್ನು ಬದಲಾಯಿಸಬೇಕು ಎಂಬುದನ್ನುತಿಳಿಯೋಣ . ಅದಲ್ಲದೆ  ಟ್ರೂ ಕಾಲರ್​ನಿಂದ ಎನೆಲ್ಲ ಮಾಡಬಹುದು ಎಂಬುವುದನ್ನು ಇದರ ಜೊತೆಗೆ ತಿಳಿಯೋಣ . 


  ಈಗಂತು ಅನೇಕ ಸ್ಮಾರ್ಟ್‌ಫೊನ್  ಬಳಕೆದಾರರು ಫೇಮಸ್ ಟ್ರೂ ಕಾಲರ್ ಆ್ಯಪ್ ಅನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ಬೇಡವಾದ ಕರೆಗಳನ್ನು ಬ್ಲಾಕ್ ಮಾಡಬಹುದು. ಅಲ್ಲದೆ ಅಪರಿಚಿತ ನಂಬರ್​ಗಳನ್ನು ಹುಡುಕಲು ಸೇರಿದಂತೆ ವಿವಿಧ ಕಾರ್ಯಗಳಿಗೆ ಟ್ರೂಕಾಲರ್ ಆ್ಯಪ್ ಸಹಾಯ ಮಾಡುತ್ತೆ.


  you-must-see-the-features-of-true-caller
  ಸಾಂದರ್ಭಿಕ ಚಿತ್ರ


  ಟ್ರೂ ಕಾಲರ್ ಮುಖ್ಯವಾಗಿ ಈ ಕೆಲಸ ಮಾಡುತ್ತೆ


  ಮುಖ್ಯವಾಗಿ ಅಪರಿಚಿತ ಕರೆಯನ್ನು ಪತ್ತೆ ಹಚ್ಚುವುದಕ್ಕೆಂದೇ ಟ್ರೂಕಾಲರ್ ಆ್ಯಪ್ ಹೆಚ್ಚು ಫೇಮಸ್ ಆಗಿದೆ. ಹೀಗೆ ಟ್ರೂ ಕಾಲರ್ ಅನೇಕ ಫೀಚರ್​ಗಳನ್ನು ಪರಿಚಯಿಸಿ ವಿಶ್ವದ ಅತ್ಯಂತ ಜನಪ್ರಿಯ ಕ್ರೌಡ್‌ಸೋರ್ಸ್ಡ್ ಕಾಲರ್ ID ಅಪ್ಲಿಕೇಶನ್ ಆಗಿ ಗುರುತಿಸಿಕೊಂಡಿದೆ. ಹೆಚ್ಚಿನ ಸಂದರ್ಭಗಳಲ್ಲಿ ನಿಮಗೆ ಕರೆ ಮಾಡುವ ಸಂಖ್ಯೆಯನ್ನು ಬಳಸುವವರ ಹೆಸರನ್ನು ತಿಳಿಸುತ್ತದೆ. ಆದರೆ ಕೆಲವೊಮ್ಮೆ ಹೆಸರು ಸರಿಯಾಗಿಲ್ಲದಿದ್ದರೆ ಜನರಿಗೆ ಗೊಂದಲ ಮುಡಿಸುತ್ತದೆ. ಈ ಕಾರಣದಿಂದಾಗಿ ಜನರು ಟ್ರೂ ಕಾಲರ್ ನ ಹೆಸರನ್ನು ಸರಿಪಡಿಸಲು ಕಷ್ಟಪಡುತ್ತಾರೆ.


  ಟ್ರೂ ಕಾಲರ್​ನಲ್ಲಿ ಹೊಸ ನಂಬರ್‌ನಿಂದ ಕರೆ ಬಂದರೇ ಅದು ಯಾರದ್ದು ಅಂತಾ ತಿಳಿಸುತ್ತದೆ. ಹಾಗೆಯೇ ಫೋನ್ ರಿಂಗ್ ಆಗುವ ಮೊದಲೇ ಯಾರು ಕರೆ ಮಾಡುತ್ತಿದ್ದಾರೆ  ಎಂಬುವುದನ್ನು ತಿಳಿಸುವ  ಆಯ್ಕೆಯನ್ನು ಈ ಆ್ಯಪ್‌ ಹೊಂದಿರುವುದು  ವಿಶೇಷ. ಟ್ರೂಕಾಲರ್‌ನಲ್ಲಿ ಕಾಣಿಸುವ ಹೆಸರುಗಳು ಕೆಲವೊಮ್ಮೆ ತಪ್ಪಾಗಿರುತ್ತವೆ. ಆದರೆ ಬಳಕೆದಾರರೇ ಅವರ ಹೆಸರನ್ನು ಸರಿಯಾಗಿ ನಮೂದಿಸಲು ಅವಕಾಶ ಇದೆ.


  ಇದನ್ನೂ ಓದಿ: Mobile Contact Recover: ನಿಮ್ಮ ಮೊಬೈಲ್​ನಲ್ಲಿದ್ದ ಕಾಂಟಾಕ್ಟ್​​ ಡೀಲಿಟ್ ಆಗಿದ್ಯಾ? ಹೀಗ್ ರಿಕವರಿ ಮಾಡಿಕೊಳ್ಳಿ!


  ಹೆಸರನ್ನು ಮರೆಮಾಚಬಹುದು


  ಹೌದು, ನಿಮ್ಮ ಟ್ರೂ ಕಾಲರ್ ಹೆಸರನ್ನು ನೀವು ಸುಲಭವಾಗಿ ಬದಲಾಯಿಸಬಹುದು. ಒಂದು ವೇಳೆ, ನಿಮ್ಮ ಉಪಸ್ಥಿತಿಯನ್ನು ತೋರಿಸಲು ನೀವು ಬಯಸುವುದಿಲ್ಲ ಅಂದಾಗ ಜನರ ದೃಷ್ಟಿಯಿಂದ ನಿಮ್ಮ ಹೆಸರನ್ನು ನೀವು ಮರೆ ಮಾಡಲು ಒಂದು ಆಯ್ಕೆ ಇದೆ. ನಿಮ್ಮ ಫೋನ್ ಸಂಖ್ಯೆಯನ್ನು ಅಪ್ಲಿಕೇಶನ್‌ನಿಂದ ಅನ್ಲಿಸ್ಟ್ ಮಾಡಬಹುದು. ಅದು ಹೇಗೆ ಎಂಬುದನ್ನು ನೀವೆ ನೋಡಿ.


  ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಟ್ರೂಕಾಲರ್ ಅಪ್ಲಿಕೇಶನ್‌ಗೆ ಹೋಗಿ ಮೇಲಿನ ಬಲ          ಬದಿಯಲ್ಲಿರುವ  ಮೆನು ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿ ಎಡಿಟ್‌ ಆಯ್ಕೆಯೊಂದಿಗೆ ನಿಮ್ಮ ಪ್ರೊಫೈಲ್ ಅನ್ನು ನೀವು ಕಾಣಬಹುದು. ನಿಮ್ಮ ಪ್ರೊಫೈಲ್ ಎಡಿಟ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ವಿವರಗಳನ್ನು ನೀವು ಅಲ್ಲಿ ಕಾಣಬಹುದು.


  ಈಗ, ಟ್ರೂಕಾಲರ್‌ನಲ್ಲಿ ನೀವು ತೋರಿಸಲು ಬಯಸುವ ಯಾವುದೇ ಹೆಸರಿನಿಂದ ಮೊದಲ ಮತ್ತು ಕೊನೆಯ ಹೆಸರುಗಳ ವಿಭಾಗವನ್ನು ಎಡಿಟ್‌ ಮಾಡಿ. ಇದನ್ನು ಮಾಡಿದ ನಂತರ, ಮೇಲಿನ ಬಲ ಬದಿಯಲ್ಲಿರುವ ಸೇವ್ ಆಯ್ಕೆಯನ್ನು ಟ್ಯಾಪ್ ಮಾಡಿ ಆಗ ನಿಮ್ಮ ವಿವರಗಳು ಸೇವ್‌ ಆಗುತ್ತದೆ.


  ಇದನ್ನೂ ಓದಿ:  CCI Penalty On Google: ಗೂಗಲ್​​ಗೆ ಮತ್ತೊಮ್ಮೆ ಬಿತ್ತು 936 ಕೋಟಿ ದಂಡ! ಕಾರಣ ಇಲ್ಲಿದೆ


  ನಿಮ್ಮ ಸ್ಮಾರ್ಟ್ ಫೋನ್ನಲ್ಲಿ ಆಗದಿದ್ದರೆ ನೀವು  ಹೀಗೂ ಮಾಡಬಹುದು


  ಇವುಗಳು  ಆಗದಿದ್ದಲ್ಲಿ ನೀವು ಪರ್ಯಾಯವಾಗಿ ನಿಮ್ಮ ಡೆಸ್ಕ್ಟಾಪ್ ಮೂಲಕವು ಸರಿ ಮಾಡಿಕೊಳ್ಳಬಹುದು.  ಎನು ಮಾಡಬೇಕು ಅಂದ್ರೆ ಟ್ರೂ ಕಾಲರ್ ವೆಬ್ ಸೈಟ್ ಗೆ ಹೋಗಿ ನಿಮ್ಮ ವಿವರಗಳನ್ನು ನೀಡಿ ಲಾಗ್ ಇನ್ ಆಗಬೇಕು ಬಳಿಕ ಫೋನ್ ನಂಬರ್ ಅನ್ನು ನೀಡಬೇಕು.


  ನಂತರ  ನಾವು ಬೇಕಾದರೀತಿಯಲ್ಲಿ ನಮ್ಮ ಹೆಸರನ್ನು ಬದಲಾಯಿಸಬಹುದು. ಹಾಗೆ ಸೇವ್ ಬಟನ್ ಕ್ಲಿಕ್ ಮಾಡುವುದರ ಮೂಲಕ ಹೆಸರನ್ನು ಬದಲಾಯಿಸಬಹುದು. ಇದಾದ ಬಳಿಕ ಟ್ರೂಕಾಲರ್‌ನಲ್ಲಿರುವ ಜನರಿಗೆ ಒಂದು ಅಥವಾ ಎರಡು ದಿನಗಳಲ್ಲಿ  ನಿಮ್ಮ  ಹೆಸರು ಕಾಣಿಸಲು ಪ್ರಾರಂಭವಾಗುತ್ತದೆ.

  Published by:Harshith AS
  First published: