• Home
  • »
  • News
  • »
  • tech
  • »
  • Outer Space: ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ಸಾಧನೆಯ ಹಾದಿ ಬಗ್ಗೆ ನೀವು ತಿಳಿಯಲೇ ಬೇಕು

Outer Space: ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ಸಾಧನೆಯ ಹಾದಿ ಬಗ್ಗೆ ನೀವು ತಿಳಿಯಲೇ ಬೇಕು

ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್

ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್

ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಜ್ಞಾನ ಭಂಡಾರ. ಬೆಂಗಳೂರಿನಲ್ಲಿ ನೆಲಸಿರುವ ಇವರು ಬಾಹ್ಯಾಕಾಶ ವಿಜ್ಞಾನಿಯಾಗಿದ್ದು ನಿಮಗೆ ಗೊತ್ತಿರಬಹುದು. ಅದರೆ ಅವರ ಸಾಧನೆಯ ಹಾದಿ ಬಗ್ಗೆ ನೀವು ತಿಳಿಯಲೇ ಬೇಕು.

  • Share this:

    ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಜ್ಞಾನ ಭಂಡಾರ. ಬೆಂಗಳೂರಿನಲ್ಲಿ ನೆಲಸಿರುವ ಇವರು ಬಾಹ್ಯಾಕಾಶ (Outer Space) ವಿಜ್ಞಾನಿಯಾಗಿದ್ದು (Scientist) 9 (1994 ರಿಂದ 2003) ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ Isro) ನೇತೃತ್ವ ವಹಿಸಿದ್ದರು. ಇವರು ಭಾರತೀಯ ಸಂಸತ್ತಿನ ಮೇಲ್ಮನೆ, ಭಾರತ ಸರ್ಕಾರದ (Indian Government)  ಯೋಜನಾ ಆಯೋಗದ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹಾಗೆಯೇ ಕೇಂದ್ರದ ಬಹುನೀರೀಕ್ಷಿತ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National Educational Policy) (ಎನ್‌ಇಪಿ) ರೂಪಿಸುವ ಜವಾಬ್ದಾರಿಯನ್ನು ಹೊತ್ತಿದ್ದರು.


    ಜ್ಞಾನ ಭಂಡಾರ ಕಸ್ತೂರಿರಂಗನ್


    ಎನ್‌ಇಪಿ ಜಾರಿಗೊಳಿಸಿ ಎರಡು ವರ್ಷ ಆದಾಗ್ಲೇ ಕಳೆದು ಹೋಗಿದೆ. ದೇಶಾದ್ಯಂತ ಶೈಕ್ಷಣಿಕ ಸುಧಾರಣೆಗಳ ಮಾರ್ಗಸೂಚಿಯನ್ನು ರಚಿಸುವ ಬೃಹತ್ ಕಾರ್ಯವನ್ನು ಕಸ್ತೂರಿ ರಂಗನ್ ಹೊತ್ತಿದ್ದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಅಧ್ಯಕ್ಷರಾಗಿ, ರಾಜ್ಯಸಭಾ ಸಂಸದರಾಗಿ ಮತ್ತು ಹಿಂದಿನ ಯೋಜನಾ ಆಯೋಗದ ಸದಸ್ಯರಾಗಿ ಈ ಎಲ್ಲಾ ಕ್ಷೇತ್ರಗಳಲ್ಲಿ ರಂಗನ್‌ ಅಸಾಮಾನ್ಯ ಜ್ಞಾನ ಹೊಂದಿದ್ದರು.


    ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ನಿರ್ಮಾತೃ


    ಶಿಕ್ಷಕರು, ಉದ್ಯಮ ಸಂಸ್ಥೆಗಳು, ವಿಜ್ಞಾನಿಗಳು ಮತ್ತು ಗ್ರಾಮಗಳಿಂದ ಜಿಲ್ಲಾ ಮಟ್ಟದ ಪ್ರತಿನಿಧಿಗಳು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ಮೂರು ವರ್ಷಗಳ ಚರ್ಚೆಯ ನಂತರ ನೀತಿಯನ್ನು ಅಂತಿಮವಾಗಿ ಜುಲೈ 2020 ರಲ್ಲಿ ಸಾರ್ವಜನಿಕಗೊಳಿಸಲಾಯಿತು.


    NEP 2020 ಶಿಕ್ಷಣ ವ್ಯವಸ್ಥೆಯನ್ನು ಹಲವು ವಿಧಗಳಲ್ಲಿ ಕ್ರಾಂತಿಗೊಳಿಸುವ ಗುರಿಯನ್ನು ಹೊಂದಿದೆ, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನಾಲ್ಕು ವರ್ಷದ ಪದವಿಪೂರ್ವ ಕಾರ್ಯಕ್ರಮ (FYUP) ಗಳಲ್ಲಿ ಬದಲಾವಣೆ, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಕೌಶಲ್ಯ ಆಧಾರಿತ ಕಲಿಕೆಗೆ ಹೆಚ್ಚಿನ ಗಮನವನ್ನು ಇದು ನೀಡುತ್ತದೆ.


    You must know about the path to Kasthurirangan achievement.
    ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್


    2017 ರಲ್ಲಿ ಸಮಿತಿಯು ಕೆಲಸವನ್ನು ಪ್ರಾರಂಭಿಸಿದಾಗ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದೊಂದಿಗೆ (ಈಗ ಶಿಕ್ಷಣ ಸಚಿವಾಲಯ ಎಂದು ಕರೆಯಲಾಗುತ್ತದೆ) ಕೆಲಸ ಮಾಡಿದ ಸರ್ಕಾರಿ ಅಧಿಕಾರಿಗಳು, ಕಸ್ತೂರಿರಂಗನ್ ಅವರ ಶೈಕ್ಷಣಿಕ ಸ್ಥಾನಮಾನ ಮತ್ತು ವಿವಿಧ ಜ್ಞಾನ ಆಯೋಗಗಳ ಜೊತೆಗಿನ ಒಡನಾಟದ ಕಾರಣದಿಂದ ಆಯ್ಕೆಯಾಗಿದ್ದಾರೆ ಎಂದು ಹೇಳುತ್ತಾರೆ. ಸಮಿತಿಯೊಂದಿಗೆ ಕಸ್ತೂರಿರಂಗನ್ ಅವರ ಕೆಲಸವು ನಿರೀಕ್ಷೆಗಳನ್ನು ಮೀರಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.


    ಇಸ್ರೋ ಅಧ್ಯಕ್ಷರಿಂದ ಶಿಕ್ಷಣ ತಜ್ಞ


    ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವ ಮೂಲಕ 82 ವರ್ಷದ ಮಾಜಿ ಬಾಹ್ಯಾಕಾಶ ವಿಜ್ಞಾನಿ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಈಗ ನರೇಂದ್ರ ಮೋದಿ ಸರ್ಕಾರದ ಪ್ರಮುಖ ಶಿಕ್ಷಣತಜ್ಞರಾಗಿದ್ದಾರೆ. ಅವರು ಪ್ರಸ್ತುತ ಹೊಸ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ (NCF) ಕೆಲಸ ಮಾಡುವ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಒಬ್ಬ ಇಸ್ರೋ ಅಧ್ಯಕ್ಷ ಹೇಗೆ ಶಿಕ್ಷಣ ತಜ್ಞರಾದರು ಎಂಬ ಅವರ ಹಾದಿಯನ್ನು ನಾವಿಲ್ಲಿ ಮೆಲುಕು ಹಾಕೋಣ.


    ರಾಜಕೀಯೇತರ, ಶೈಕ್ಷಣಿಕ ವಿಷಯಗಳ ಮೇಲೆ ಕೇಂದ್ರೀಕೃತ


    2017ರಲ್ಲಿ ಹೊಸ ಶಿಕ್ಷಣ ನೀತಿಯ ಕರಡು ರಚನೆಗೆ ಒಂಬತ್ತು ಸದಸ್ಯರ ಸಮಿತಿಯ ಉಸ್ತುವಾರಿಯನ್ನು ಕಸ್ತೂರಿರಂಗನ್ ಅವರಿಗೆ ಕೇಂದ್ರ ಸರಕಾರ ನೀಡಿತ್ತು. “ಅವರು ಶಿಕ್ಷಣ ಸಮಿತಿಯ ಮುಖ್ಯಸ್ಥರಾಗಲು ಸೂಕ್ತರು. ತಟಸ್ಥ, ವಿವಾದಾತ್ಮಕವಲ್ಲದ, ರಾಜಕೀಯೇತರ ಮತ್ತು ಶೈಕ್ಷಣಿಕ ವಿಷಯಗಳ ಮೇಲೆ ಕೇಂದ್ರೀಕರಿಸುವ ವ್ಯಕ್ತಿಯನ್ನು ನಾವು ಬಯಸಿದ್ದೆವು, ನಮ್ಮ ನೀರೀಕ್ಷೆಯಂತೆ ಕಸ್ತೂರಿರಂಗನ್ ಆ ಯಾವುದೇ ರಂಗಗಳಲ್ಲಿ ನಿರಾಶೆಗೊಳಿಸಲಿಲ್ಲ" ಎಂದು ಅಧಿಕಾರಿಗಳು ಹೇಳುತ್ತಾರೆ.


    ಅಧಿಕಾರಿಗಳ ಮೆಚ್ಚುಗೆ ಮಾತುಗಳು


    ಹೀಗೆ ಶಿಕ್ಷಣ ನೀತಿಯನ್ನು ರೂಪಿಸಿರುವ ಇವರ ಬಗ್ಗೆ ಹೆಸರು ಹೇಳದ ಹಲವಾರು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಹೆಚ್ಚು ವಿವಾದಾತ್ಮಕವಲ್ಲದ ಶಿಕ್ಷಣ ನೀತಿಯನ್ನು ಅವರು ವಿತರಿಸಿದರು. ಶಿಕ್ಷಣಕ್ಕಾಗಿ ಮಾತೃಭಾಷೆಯ ಬಳಕೆಯ ಬಗ್ಗೆ ಕೆಲವು ಟೀಕೆಗಳನ್ನು ಹೊರತುಪಡಿಸಿ, ಈ ನೀತಿ ಹೆಚ್ಚಾಗಿ ಎಲ್ಲಾ ವರ್ಗಗಳ ಮೆಚ್ಚುಗೆ ಪಡೆದುಕೊಂಡಿತು” ಎಂದು ಅವರೊಂದಿಗೆ ಕೆಲಸ ಮಾಡಿದ ಇನ್ನೊಬ್ಬ ಸಚಿವಾಲಯದ ಅಧಿಕಾರಿ ಹೇಳಿದರು.


    "ಶಿಕ್ಷಣ ಸಂಬಂಧಿತ ವಿಷಯಗಳಳಿಗೆ ಇವರೇ ಎನ್ಸೈಕ್ಲೋಪೀಡಿಯಾ"


    ಶಿಕ್ಷಣ ಸಚಿವಾಲಯದಲ್ಲಿ, ನೀತಿಯ ಬಗ್ಗೆ ಇನ್ನು ಮುಂದೆ ಯಾವುದೇ ಸಂದೇಹವಿದ್ದರೂ ದೊಡ್ಡ ದೊಡ್ಡ ದಾಖಲೆಗಳನ್ನು ಪರಿಶೀಲಿಸುವ ಅಗತ್ಯವಿಲ್ಲ ಕಸ್ತೂರಿರಂಗನ್ ಶಿಕ್ಷಣದ "ಎನ್ಸೈಕ್ಲೋಪೀಡಿಯಾ" ಮತ್ತು ನೀತಿಯಲ್ಲಿನ ಯಾವುದೇ ಷರತ್ತಿನ ಬಗ್ಗೆ ಪ್ರಶ್ನೆ ಉದ್ಭವಿಸಿದಾಗಲೆಲ್ಲಾ ಅವರ ಬಳಿ ಹೋಗುವುದಾಗಿ ಅಧಿಕಾರಿಗಳು ಹೇಳುತ್ತಾರೆ.


    "ಶಿಕ್ಷಣ ಸಂಬಂಧಿತ ವಿಷಯಗಳ ಬಗ್ಗೆ ಅವರು ಹೊಂದಿರುವ ಜ್ಞಾನವು ಅಪಾರವಾಗಿದೆ. ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಅಥವಾ ತಾಂತ್ರಿಕ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಸಹ ನಾವು ಅವರನ್ನು ಸಂಪರ್ಕಿಸುತ್ತೇವೆ ”ಎಂದು ಮೂರನೇ ಹಿರಿಯ ಸಚಿವಾಲಯದ ಅಧಿಕಾರಿ ಹೇಳಿದರು.


    “ಈ ದೇಶಕ್ಕೆ ಶೈಕ್ಷಣಿಕ ನೀತಿಯನ್ನು ರೂಪಿಸುವ ಕೆಲಸವು ನನ್ನ ಜೀವನದಲ್ಲಿ ನಾನು ಅನುಭವಿಸಿದ ಎಲ್ಲಾ ಸಂಕೀರ್ಣತೆಗಳ ತಾಯಿ" ಎಂದು ಕಸ್ತೂರಿರಂಗನ್ ThePrint ಮಾಧ್ಯಮಕ್ಕೆ ಹೇಳಿದ್ದಾರೆ.


    ಬಾಹ್ಯಾಕಾಶ ವಿಜ್ಞಾನಿಯಿಂದ ಉನ್ನತ ಶಿಕ್ಷಣ ತಜ್ಞರವರೆಗೆ


    ಬಾಹ್ಯಾಕಾಶ ವಿಜ್ಞಾನಿಯಾಗಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ಮುನ್ನಡೆಸಿದ್ದರಿಂದ ಹಿಡಿದು ಸರ್ಕಾರದ ಉನ್ನತ ಶಿಕ್ಷಣತಜ್ಞರಾಗುವವರೆಗೆ ಅವರ ಪರಿಶ್ರಮ ನಿಜಕ್ಕೂ ಶ್ಲಾಘನೀಯ.


    ಇಸ್ರೋದ ಮಾಜಿ ವಿಜ್ಞಾನಿ ಮುಕುಂದ್ ರಾವ್ ಅವರು ಕಸ್ತೂರಿರಂಗನ್ ಅವರ ವೈಜ್ಞಾನಿಕ ಮನೋಭಾವ ಮತ್ತು ಜ್ಞಾನದ ಹೊರತಾಗಿ, ತತ್ವಜ್ಞಾನಿ, ಮಗು, ರಾಜಕಾರಣಿ ಅಥವಾ ಸಹ ವಿಜ್ಞಾನಿಗಳವರೆಗೆ ಯಾರೊಂದಿಗಾದರೂ ಸಂವಹನ ನಡೆಸುವ ಸಾಮರ್ಥ್ಯವೇ ಅವರ ಶಿಕ್ಷಣದ ಹಾದಿಯನ್ನು ತೋರುವಂತೆ ಮಾಡಿದೆ ಎಂದು ಹೇಳಿದರು.


    "ಅವರು ಬಹಳಷ್ಟು ಯಶಸ್ಸನ್ನು ನಿಭಾಯಿಸುವುದನ್ನು ನಾನು ನೋಡಿದ್ದೇನೆ, ಆದರೆ ಅವರು ವೈಫಲ್ಯಗಳನ್ನು ಸಹ ನಿಭಾಯಿಸಿದ್ದಾರೆ ಮತ್ತು ಆ ಕೋರ್ಸ್‌ನಲ್ಲಿ ಅಡೆತಡೆಗಳನ್ನು ಜಯಿಸಲು ಸಮರ್ಥರಾಗಿದ್ದಾರೆ." ಎಂದು ಹೇಳಿದರು.


    ರಾವ್‌ ನೆನಪಿಸಿಕೊಂಡ ಆ ಘಟನೆ ಯಾವುದು?


    ಕಸ್ತೂರಿರಂಗನ್ ನಾಯಕತ್ವವನ್ನು ತಾವು ಹೇಗೆ ನೋಡಿದ್ದೇವೆ ಎಂಬುದರ ಬಗ್ಗೆ ರಾವ್‌ ಒಂದು ಘಟನೆಯನ್ನು ಸಹ ನೆನಪಿಸಿಕೊಂಡರು."ಒಮ್ಮೆ ಜಿಎಸ್‌ಎಲ್‌ವಿ ಉಪಗ್ರಹ ಉಡಾವಣೆಯ ಸಮಯದಲ್ಲಿ ಒಂದು ನಿರ್ದಿಷ್ಟ ಘಟನೆ ನನಗೆ ನೆನಪಿದೆ.


    ಉಡಾವಣೆಗೆ ಎಲ್ಲವೂ ಸಿದ್ಧವಾಗಿತ್ತು, ಅದಕ್ಕೂ ಕೆಲವೇ ಮಿಲಿಸೆಕೆಂಡ್‌ಗಳ ಮೊದಲು ಉಡಾವಣಾ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿತು ಮತ್ತು ಉಡಾವಣೆಯನ್ನು ನಿಲ್ಲಿಸಬೇಕಾಯಿತು.


    You must know about the path to Kasthurirangan achievement.
    ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್


    ಕಸ್ತೂರಿರಂಗನ್ ಅವರು ಈ ಬಿಕ್ಕಟ್ಟನ್ನು ಚಿಂತಿಸದೇ, ಗಾಬರಿಯಾಗದೆ ಸುಲಲಿತವಾಗಿ ನಿಭಾಯಿಸಿದರು. ಶಾಂತತೆಯನ್ನು ತಂಡದ ಜೊತೆಗೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿದರು. ಮತ್ತು ಒಂದೆರಡು ದಿನಗಳಲ್ಲಿ, ತಂಡವು ಮತ್ತೆ ಉಡಾವಣೆಗೆ ಸಿದ್ಧವಾಯಿತು ಮತ್ತು ಅದು ಯಶಸ್ವಿಯಾಯಿತು" ಎಂದು ರಂಗನ್‌ ಅವರ ತಾಳ್ಮೆ, ಬುದ್ಧಿವಂತಿಕೆಯನ್ನು ರಾವ್‌ ಹೊಗಳಿದರು.


    ಇದನ್ನೂ ಓದಿ: Twitter: ಸರ್ಚ್‌ ಆಪ್ಶನ್‌ ಸರಿಪಡಿಸಲು ಎಲಾನ್​ ಮಸ್ಕ್ ನೇಮಿಸಿಕೊಂ‌ಡದ್ದು ಯಾರನ್ನು ಗೊತ್ತಾ?


    ಕಸ್ತೂರಿರಂಗನ್ ಮತ್ತು ಇಸ್ರೋ


    ISRO ನೊಂದಿಗೆ, ಕಸ್ತೂರಿರಂಗನ್ ಹಲವಾರು ಮೈಲಿಗಲ್ಲುಗಳೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಡಾ. ವಿಕ್ರಮ್ ಸಾರಾಭಾಯ್ ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆದಿರುವವರಲ್ಲಿ ಇವರು ಒಬ್ಬರು.


    ISRO ಜೊತೆಗಿನ ಅವರ ಒಡನಾಟದ ಸಮಯದಲ್ಲಿ, ಅವರು ಹೊಸ ತಲೆಮಾರಿನ ಬಾಹ್ಯಾಕಾಶ ನೌಕೆ, ಇಂಡಿಯನ್ ನ್ಯಾಷನಲ್ ಸ್ಯಾಟಲೈಟ್ (INSAT-2), ಇಂಡಿಯನ್ ರಿಮೋಟ್ ಸೆನ್ಸಿಂಗ್ ಉಪಗ್ರಹಗಳು (IRS-1A & 1B), ಮತ್ತು ವೈಜ್ಞಾನಿಕ ಉಪಗ್ರಹಗಳ ಅಭಿವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಿದರು.


    ಅವರು ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣಾ ಉಪಗ್ರಹಗಳಾದ ಭಾಸ್ಕರ-I ಮತ್ತು II ಗಾಗಿ ಯೋಜನಾ ನಿರ್ದೇಶಕರಾಗಿದ್ದರು ಮತ್ತು ನಂತರ ಮೊದಲ ಕಾರ್ಯಾಚರಣಾ ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹ IRS-1A ನ ಒಟ್ಟಾರೆ ನಿರ್ದೇಶನದ ಜವಾಬ್ದಾರಿಯನ್ನು ಹೊಂದಿದ್ದರು.


    “ ಬಹುಮುಖಿ ವ್ಯಕ್ತಿತ್ವ” ಅಂದ್ರು ವಿಜ್ಞಾನಿ ಶ್ರೀಧರ ಮೂರ್ತಿ


    ಕಸ್ತೂರಿರಂಗನ್ ಅಧ್ಯಕ್ಷರಾಗಿದ್ದ ಸಮಯದಲ್ಲಿ ವೈಜ್ಞಾನಿಕ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಇನ್ನೊಬ್ಬ ಮಾಜಿ ಇಸ್ರೋ ವಿಜ್ಞಾನಿ ಶ್ರೀಧರ ಮೂರ್ತಿ ಮಾತನಾಡಿ ಕಸ್ತೂರಿ ರಂಗನ್ ಅವರು ಚಂದ್ರಯಾನ ಚಂದ್ರನ ಪರಿಶೋಧನಾ ಕಾರ್ಯಕ್ರಮವನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತು ಮಾತುಕತೆಗಳನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ “ಬಹುಮುಖಿ ವ್ಯಕ್ತಿತ್ವ” ಎಂದು ಹೇಳಿದರು. ‌ನಾಯಕರಾಗಿ ಅವರು ಅಸಾಧಾರಣ ವ್ಯಕ್ತಿಯಾಗಿದ್ದಾರೆ ಎಂದು ಮೂರ್ತಿ ಹೇಳಿದರು.


    ಇದನ್ನೂ ಓದಿ: Amit Pandey: ನಾಸಾ ಹಿರಿಯ ವಿಜ್ಞಾನಿಯಾಗಿ ಭಾರತದ ಅಮಿತ್ ಪಾಂಡೆ ನೇಮಕ!


    ಕಸ್ತೂರಿರಂಗನ್‌ ಇತರೆ ಕೆಲಸಗಳು


    ಸುಮಾರು 35 ವರ್ಷಗಳ ಕಾಲ ಇಸ್ರೋ ಜೊತೆ ಸಂಬಂಧ, ರಾಜ್ಯಸಭಾ ಸಂಸದ ಹೀಗೆ ಹಲವು ಜವಾಬ್ದಾರಿಗಳನ್ನು ಇವರು ನಿಭಾಯಿಸಿದ್ದಾರೆ. ಮತ್ತು ಅದೇ ಸಮಯದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.


    ಹಿಂದಿನ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದ ಅಡಿಯಲ್ಲಿ, ಅವರು 2009-2014 ವರೆಗೆ ಯೋಜನಾ ಆಯೋಗದ ಸದಸ್ಯ ಕೂಡ ಆಗಿದ್ದರು. 2008 ರಲ್ಲಿ ಕರ್ನಾಟಕ ಜ್ಞಾನ ಆಯೋಗದ ಮುಖ್ಯಸ್ಥರಾಗಿದ್ದರು.


    ಹಾಗೆಯೇ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IIT ಗಳು) ರೂರ್ಕಿ ಮತ್ತು ಮದ್ರಾಸ್ ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ನಂತಹ ವಿವಿಧ ಸಂಸ್ಥೆಗಳೊಂದಿಗೆ ಆಡಳಿತ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 2012 ರಲ್ಲಿ, ವಿಶೇಷವಾಗಿ ಕಸ್ತೂರಿ ರಂಗನ್ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಕುಲಪತಿಯಾಗಿ ನೇಮಕಗೊಂಡರು.

    Published by:Gowtham K
    First published: