‘ಇನ್​​​ಸ್ಟಾಗ್ರಾಂ‘ನಲ್ಲಿ ನಿಮ್ಮ ಪೋಸ್ಟ್​ಗೆ ಹೆಚ್ಚು ಲೈಕ್ಸ್​​ ಬೇಕಾ?; ಹಾಗಿದ್ದರೆ ಈ ಸೂತ್ರ ಅನುಸರಿಸಿ

ಬಳಕೆದಾರರು ಪೇಜ್​ನಲ್ಲಿ ಫೋಟೋ ಅಪ್​ಲೋಡ್​ ಮಾಡುವ ಮುನ್ನ ಸರಿಯಾದ ಹ್ಯಾಶ್​ ಟ್ಯಾಗ್​ಗಳನ್ನು ತುಂಬಬೇಕು. ನಿಮ್ಮ ಫೋಟೋ ಕುರಿತಾಗಿ ಗೂಗಲ್​​ ಟ್ರೆಂಡಿಂಗ್​​ನಲ್ಲಿರುವ ಹ್ಯಾಶ್​ ಟ್ಯಾಗ್​ಗಳನ್ನು ನಮೂದಿಸಿದರೆ ಅದು ಹೆಚ್ಚು ರೀಚ್ ಆಗುತ್ತದೆ.

news18-kannada
Updated:March 20, 2020, 12:35 PM IST
‘ಇನ್​​​ಸ್ಟಾಗ್ರಾಂ‘ನಲ್ಲಿ ನಿಮ್ಮ ಪೋಸ್ಟ್​ಗೆ ಹೆಚ್ಚು ಲೈಕ್ಸ್​​ ಬೇಕಾ?; ಹಾಗಿದ್ದರೆ ಈ ಸೂತ್ರ ಅನುಸರಿಸಿ
ಇನ್​​​ಸ್ಟಾಗ್ರಾಂ
  • Share this:
ಸಾಕಷ್ಟು ಜನರು ನಾನು ಸಾಮಾಜಿಕ ಜಾಲತಾಣದಲ್ಲಿ ಮಿಂಚಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಇನ್ನೂ ಕೆಲವರು ಪ್ರೊಪೈಲ್​ ಫೋಟೋಗೆ ಹೆಚ್ಚು ಲೈಕ್ಸ್​, ಕಮೆಂಟ್​  ಗಿಟ್ಟಿಸಿಕೊಳ್ಳಲು ತಡಕಾಡುತ್ತಿರುತ್ತಾರೆ. ಅದಕ್ಕಾಗಿ ಪ್ಲೇ ಸ್ಲೋರ್​ನಲ್ಲಿರುವ ಆ್ಯಪ್​ ಬಳಸಿಕೊಂಡು ಫೋಟೋ ಎಡಿಟಿಂಗ್​ ಮಾಡಿ ಲೈಕ್ಸ್​ ಗಿಟ್ಟಿಸಿಕೊಳ್ಳುತ್ತಾರೆ.

ಇದಕ್ಕಿಂತಲೂ ಸುಲಭವಾದ ಮಾರ್ಗ ಇಲ್ಲಿದೆ. ನೀವು ಇನ್​​ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡರೆ ಅದಕ್ಕೆ ಹೆಚ್ಚು ಹೆಚ್ಚು ಲೈಕ್ಸ್​ ಗಿಟ್ಟಿಸಿಕೊಳ್ಳಲು ಇಲ್ಲಿದೆ ಸುಲಭ ಮಾರ್ಗ.

Xiaomi Mi 10: 108 ಮೆಗಾಫಿಕ್ಸೆಲ್ ಕ್ಯಾಮೆರಾವಿರುವ 5G ಸ್ಮಾರ್ಟ್​ಫೋನ್​; ಮಾರ್ಚ್ 31ಕ್ಕೆ ಮಾರುಕಟ್ಟೆಗೆ

ಬಳಕೆದಾರರು ತಮ್ಮ ಫೋಟೋಗಳನ್ನು ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಅಪ್​ಲೋಡ್​ ಮಾಡಲು ಬೆಳಗ್ಗೆ ಸರಿಯಾದ ಸಮಯವಾಗಿದೆ. ಸಾಕಷ್ಟು ಜನರು ಆಫೀಸಿಗೆ ಹೊರಡುವ ಸಮಯದಲ್ಲಿ ಸಾಮಾಜಿಕ ಜಾಲತಾಣವನ್ನು ಪರಿಶೀಲಿಸುತ್ತಾರೆ. ಹಾಗಾಗಿ ಬಳಕೆದಾರಿಗೆ ಲೈಕ್ಸ್​ ಗಿಟ್ಟಿಸಿಕೊಳ್ಳಲು ಬೆಳಗ್ಗೆ ಉತ್ತಮ ಸಮಯವಾಗಿದೆ.

ಇನ್ನೂ ಈ ಬಗ್ಗೆ ಸಂಶೋಧನೆ ಕೂಡ ನಡೆದಿದ್ದು, ಅದರ ಪ್ರಕಾರ ಇನ್​​​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಲು 5:00am ರಿಂದ 6:00am  ಸರಿಯಾದ ಸಮಯವೆಂದು ತಿಳಿದುಬಂದಿದೆ.

1 ಲಕ್ಷ 25 ಸಾವಿರ ರೂ. ಬೆಲೆಯ ಫೋನಿನಲ್ಲಿ ಜಿಯೋ ಇ-ಸಿಮ್ ಸೇವೆ

ಬಳಕೆದಾರರು ಪೇಜ್​ನಲ್ಲಿ ಫೋಟೋ ಅಪ್​ಲೋಡ್​ ಮಾಡುವ ಮುನ್ನ ಸರಿಯಾದ ಹ್ಯಾಶ್​ ಟ್ಯಾಗ್​ಗಳನ್ನು ತುಂಬಬೇಕು. ನಿಮ್ಮ ಫೋಟೋ ಕುರಿತಾಗಿ ಗೂಗಲ್​​ ಟ್ರೆಂಡಿಂಗ್​​ನಲ್ಲಿರುವ ಹ್ಯಾಶ್​ ಟ್ಯಾಗ್​ಗಳನ್ನು ನಮೂದಿಸಿದರೆ ಅದು ಹೆಚ್ಚು ರೀಚ್ ಆಗುತ್ತದೆ.ಅಂತೆಯೇ, ಹೆಚ್ಚು ಫಾಲೊವರ್ಸ್​ ಹೊಂದಿರುವ ಪೇಜ್​ಗಳನ್ನು ಗಮನಿಸಿ ಅದರಲ್ಲಿ ಬಳಸಿರುವ ಹ್ಯಾಶ್​ ಟ್ಯಾಗ್​ಗಳನ್ನು ಬಳಸಿದರೆ ನಿಮ್ಮ ಫೋಟೋಗೆ ಹೆಚ್ಚು ಲೈಕ್​​ ಪಡೆಯಬಹುದಾಗಿದೆ.
First published:March 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading