• Home
  • »
  • News
  • »
  • tech
  • »
  • WhatsApp: ವಾಟ್ಸಾಪ್‌ನಲ್ಲಿ ಕಾಲ್‌ ಲಿಂಕ್‌ ಕ್ರಿಯೇಟ್‌ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

WhatsApp: ವಾಟ್ಸಾಪ್‌ನಲ್ಲಿ ಕಾಲ್‌ ಲಿಂಕ್‌ ಕ್ರಿಯೇಟ್‌ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮೆಟಾ ಒಡೆತನದ ವಾಟ್ಸಾಪ್‌ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಅಲ್ಲದೆ ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಅಪ್ಡೇಟ್‌ ಮಾಡುತ್ತಾ ಬಂದಿದೆ. ಅದರಲ್ಲಿ ವಾಟ್ಸಾಪ್‌ ಕಾಲ್‌ ಲಿಂಕ್‌ ಫೀಚರ್​ನ ಬಗ್ಗೆ ನಿಮಗೆ ತಿಳಿದಿದೆಯಾ?

  • Share this:

    ಮೆಟಾ (Meta) ಒಡೆತನದ ವಾಟ್ಸಾಪ್‌(WhatsApp) ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು (Feature) ಪರಿಚಯಿಸಿದೆ. ಅಲ್ಲದೆ ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಅಪ್ಡೇಟ್‌ (Update) ಮಾಡುತ್ತಾ ಬಂದಿದೆ. ಇದರಲ್ಲಿ ವಾಟ್ಸಾಪ್‌ ಕಾಲ್‌ ಲಿಂಕ್‌ (WhatsApp call link) ಫೀಚರ್ಸ್‌ ಕೂಡ ಒಂದಾಗಿದೆ. ವಾಟ್ಸಾಪ್‌ ಕಾಲ್‌ ಲಿಂಕ್‌ ಫೀಚರ್ಸ್‌ ಮೂಲಕ ನೀವು ಸಿಂಗಲ್‌ ಟ್ಯಾಪ್‌ನಲ್ಲಿ ವಾಟ್ಸಾಪ್‌ ಕಾಲ್‌ ಲಿಂಕ್ ಅನ್ನು ಶೇರ್‌ ಮಾಡಲು ಸಾದ್ಯವಾಗಲಿದೆ. ಸದ್ಯ ಈ ಫೀಚರ್ಸ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಅಪ್ಲಿಕೇಶನ್‌ಗಳಲ್ಲಿ (Application) ಲಭ್ಯವಾಗಲಿದೆ. ಇದೀಗ ನಾವು ನಮ್ಮ ಮೊಬೈಲ್​ನಲ್ಲಿ ಯಾವ ರೀತಿಯಲ್ಲಿ ಅದನ್ನು ಬಳಸುವುದು ಅನ್ನೋದನ್ನ ತಿಳಿಯೊಣ ಬನ್ನಿ.


    ಹೌದು, ವಾಟ್ಸಾಪ್‌ ಇತ್ತೀಚಿಗೆ ಪರಿಚಯಿಸಿರುವ ಜನಪ್ರಿಯ ಫೀಚರ್ಸ್‌ಗಳಲ್ಲಿ ವಾಟ್ಸಾಪ್‌ ಕಮ್ಯುನಿಟಿ ಮತ್ತು ವಾಟ್ಸಾಪ್ ಕಾಲ್‌ ಲಿಂಕ್‌ ಪ್ರಮುಖವಾಗಿದೆ. ವಾಟ್ಸಾಪ್‌ ಕಮ್ಯುನಿಟಿಯ ಬಗ್ಗೆ  ಹಿಂದಿನ ಲೇಖನದಲ್ಲಿ ತಿಳಿಸಿದ್ದೇವೆ. ಅದ್ರೆ ಇಂದು  ವಾಟ್ಸಾಪ್‌ ಕಾಲ್‌ನಲ್ಲಿ ನಿಮ್ಮ ಸ್ನೇಹಿತರನ್ನು  ಸೇರಿಸುವುದಕ್ಕೆ ಈ ಕಾಲ್‌ ಲಿಂಕ್‌ ಫೀಚರ್ಸ್‌ ಸಹಾಯ ಮಾಡುವುದರ ಬಗ್ಗೆ ತಿಳಿಯೋಣ. ಇದನ್ನು ಬಳಸಿಕೊಂಡು ನೀವು ವಾಟ್ಸಾಪ್‌ ವಾಯ್ಸ್‌ ಮತ್ತು ವಿಡಿಯೋ ಕಾಲ್‌ಗಳಿಗೆ ಲಿಂಕ್‌ ಅನ್ನು ಶೇರ್‌ ಮಾಡಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಕಾಲ್‌ ಲಿಂಕ್‌ ಕ್ರಿಯೇಟ್‌ ಮಾಡುವುದು ಹೇಗೆ ಅನ್ನೊದು ಇಲ್ಲಿದೆ ನೋಡಿ.


    ವಾಟ್ಸಾಪ್‌ ಕಾಲ್‌ ಲಿಂಕ್‌ ಫೀಚರ್​ನ ಹೀಗೆ ಬಳಸಿಕೊಳ್ಳಿ


    ವಾಟ್ಸಾಪ್‌ ಕಾಲ್‌ ಲಿಂಕ್‌ ಫೀಚರ್ಸ್‌ ವಾಟ್ಸಾಪ್‌ನಲ್ಲಿ ವಾಯ್ಸ್‌ ಮತ್ತು ವಿಡಿಯೋ ಕಾಲ್‌ಗೆ ಇನ್ವೈಟ್‌ ಮಾಡಲು ಲಿಂಕ್‌ ಕ್ರಿಯೇಟ್‌ ಮಾಡಬಹುದು. ಈ ಲಿಂಕ್‌ ಬಳಸಿಕೊಂಡು ವಾಟ್ಸಾಪ್‌  ಕಾಲ್‌ನಲ್ಲಿ ನಿಮ್ಮ ಸ್ನೇಹಿತರು ಸೇರುವುದಕ್ಕೆ ಸಾಧ್ಯವಾಗಲಿದೆ. ಒಂದು ಸಮಯಕ್ಕೆ ನಾವೆಲ್ಲರು ಸಿಗೋಣ ಎಂದು ಲಿಂಕ್ ಕ್ರಿಯೇಟ್ ಮಾಡಿಟ್ಟುಕೊಂಡು, ಆ ಸಮಯಕ್ಕೆ ಸರಿಯಾಗಿ ಲಿಂಕ್ ಬಳಸಿಕೊಂಡು ಮಾತನಾಡ ಬಹುದಾದ ಫೀಚರ್  ಇದಾಗಿದೆ.


    you Know how to create call link on Whats App
    ಸಾಂಕೇತಿಕ ಚಿತ್ರ


    ಇನ್ನು ವಾಟ್ಸಾಪ್‌ ಲಿಂಕ್‌ ಫೀಚರ್ಸ್‌ ಗೂಗಲ್‌ ಮೀಟ್‌, ಮೈಕ್ರೋಸಾಫ್ಟ್‌ ಟೀಂ, ಜೂಮ್‌ ವೀಡಿಯೋ ಕಾನ್ಫರೆನ್ಸಿಂಗ್‌ ಪ್ಲಾಟ್‌ಫಾರ್ಮ್‌ನಲ್ಲಿರುವ ಲಿಂಕ್‌ಗಳ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ವಾಟ್ಸಾಪ್‌ ಕಾಲ್‌ ಲಿಂಕ್‌ ಬಳಸಿ ಯಾವುದೇ ಸಮಯದಲ್ಲಿ ಕೂಡ ವಾಯ್ಸ್‌ ಅಥವಾ ವಿಡಿಯೋ ಕಾಲ್‌ಗೆ ಜಾಯಿನ್‌ ಆಗುವುದಕ್ಕೆ ಸಾಧ್ಯವಿದೆ.


    ಇದನ್ನೂ ಓದಿ: Gmail: ಜಿಮೇಲ್ ಸ್ಟೋರೆಜ್ ಫುಲ್‌ ಆಗಿದೆಯಾ! ಸುಲಭವಾಗಿ ಹೀಗೆ ಕ್ಲಿಯರ್ ಮಾಡಿ


    1 ಲಿಂಕ್​ಗೆ 90 ದಿನದ ಅವಧಿ ಇದೆ


    ಇನ್ನು ವಾಟ್ಸಾಪ್‌ ತನ್ನ ಕಾಲ್‌ ಲಿಂಕ್‌ ಫೀಚರ್ಸ್‌ ಬಗ್ಗೆ ವಾಟ್ಸಾಪ್‌ ವೆಬ್‌ಸೈಟ್‌ನಲ್ಲಿನ FAQ ವಿಭಾಗದಲ್ಲಿ ವಿವರ ನೀಡಿದೆ. ಅದರಂತೆ ಬಳಕೆದಾರರು ಕಾಲ್‌ ಲಿಂಕ್‌ ಫೀಚರ್ಸ್‌ ಅನ್ನು ವಾಟ್ಸಾಪ್‌ ನಲ್ಲಿ ವ್ಯಕ್ತಿ ಅಥವಾ ಗುಂಪಿಗೆ ಕಳುಹಿಸಬಹುದು ಎಂದು ಹೇಳಲಾಗಿದೆ.


    ಇದರಿಂದ ನೀವು ಯಾರನ್ನು ವಾಟ್ಸಾಪ್‌ ಕಾಲ್‌ಗೆ ಸೇರಲು ಬಯಸುತ್ತೀರೋ ಅವರನ್ನು ಸೇರಿಸಿಕೊಳ್ಳಲು ಸಾಧ್ಯವಾಗಲಿದೆ. ಇದಲ್ಲದೆ ಕಾಲ್‌ ಲಿಂಕ್‌ಗಳನ್ನು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಮಾಡಲಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.


    ಇದನ್ನೂ ಓದಿ:Whatsapp: ವಾಟ್ಸಪ್​ನಲ್ಲಿ ಬರೋ ಲಿಂಕ್ ​ಎಲ್ಲ ಓಪನ್ ಮಾಡ್ತೀರಾ? ಇಲ್ನೋಡಿ ಈ ಶಿಕ್ಷಕಿ ಹೀಗೆ 21 ಲಕ್ಷ ಕಳೆದುಕೊಂಡಿದ್ದಾರೆ!


    ಇದರೊಂದಿಗೆ ವಾಟ್ಸಾಪ್‌ ಕಾಲ್‌ ಲಿಂಕ್‌ಗಳನ್ನು ಪದೇ ಪದೇ ಬಳಸಬಹುದಾದರೂ, 90 ದಿನಗಳವರೆಗೆ ಬಳಸದೇ ಇದ್ದರೆ ಅವುಗಳ ಅವಧಿ ಮುಗಿಯುತ್ತದೆ ಎಂದು ಸ್ಪಷ್ಟಪಡಿಸಿದೆ.


    ಈ ರೀತಿಯಲ್ಲಿ ಲಿಂಕ್‌ ಕ್ರಿಯೇಟ್‌ ಮಾಡಬೇಕು


    • ಹಂತ: 1 ಮೊದಲಿಗೆ ನಿಮ್ಮ ಆಂಡ್ರಾಯ್ಡ್‌ ಅಥವಾ ಐಫೋನ್‌ನಲ್ಲಿ ವಾಟ್ಸಾಪ್‌ ತೆರೆಯಿರಿ.

    • ಹಂತ: 2 ಇದರಲ್ಲಿ ಕಾಲ್‌ ಟ್ಯಾಬ್ ಅನ್ನು ಟ್ಯಾಪ್ ಮಾಡಿ.

    • ಹಂತ: 3 ಇದೀಗ ಮೇಲ್ಭಾಗದಲ್ಲಿ ಕಾಲ್‌ ಲಿಂಕ್ ಕ್ರಿಯೆಟ್‌ ಬಟನ್ ಅನ್ನು ಟ್ಯಾಪ್ ಮಾಡಿ.

    • ಹಂತ: 4 ಇದರಲ್ಲಿ ವಾಟ್ಸಾಪ್‌ ಅಥವಾ ವೀಡಿಯೋ ಕಾಲ್‌ ಯಾವುದು ಎಂದು ಆಯ್ಕೆ ಮಾಡಿ.

    • ಹಂತ: 5 ಇದೀಗ ಶೇರ್‌ ಲಿಂಕ್ ಅನ್ನು ಟ್ಯಾಪ್ ಮಾಡಿ

    • ಹಂತ: 6 ನಂತರ ವಾಟ್ಸಾಪ್‌ ಮೂಲಕ ಕಾಲ್‌ ಲಿಂಕ್‌ ಶೇರ್‌ ಮಾಡಿ.

    Published by:Harshith AS
    First published: