• Home
 • »
 • News
 • »
 • tech
 • »
 • Smart TV: ಪವರ್ ಇಲ್ಲದಿದ್ದರೂ ನೀವು ಟಿವಿ ನೋಡಬಹುದು! ಶೀಘ್ರವೇ ಬರಲಿದೆ ಬ್ಯಾಟರಿ ಚಾಲಿತ ಸ್ಮಾರ್ಟ್ ಟಿವಿ!

Smart TV: ಪವರ್ ಇಲ್ಲದಿದ್ದರೂ ನೀವು ಟಿವಿ ನೋಡಬಹುದು! ಶೀಘ್ರವೇ ಬರಲಿದೆ ಬ್ಯಾಟರಿ ಚಾಲಿತ ಸ್ಮಾರ್ಟ್ ಟಿವಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ವರ್ಷದ ಜನವರಿ 5 ರಂದು ಪ್ರಾರಂಭವಾದ 2023 ಸಿಇಎಸ್​ ಶೋನಲ್ಲಿ ಹೊಸ ಸ್ಮಾರ್ಟ್​ಟಿವಿಯನ್ನು ಪರಿಚಯಿಸಲಾಗಿದ್ದು, ಈ ಸ್ಮಾರ್ಟ್​​ಟಿವಿಗೆ ವಿದ್ಯುತ್​ನ ಅವಶ್ಯಕತೆಯೇ ಇಲ್ಲವೆಂದು ತಂತ್ರಜ್ಞರು ತಿಳಿಸಿದ್ದಾರೆ. ಕೇವಲ ಬ್ಯಾಟರಿ ಮೂಲಕ ಈ ಸ್ಮಾರ್ಟ್​​ಟಿವಿಯನ್ನು ವೀಕ್ಷಣೆ ಮಾಡುಬಹುದಾಗಿದೆ. ಇದರ ಬೆಲೆ ಎಷ್ಟು, ಇನ್ನಿತರ ಫೀಚರ್ಸ್​ಗಳ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.

ಮುಂದೆ ಓದಿ ...
 • Share this:

  ಇತ್ತೀಚಿನ ಟೆಕ್ನಾಲಜಿ (Technology) ಎಷ್ಟು ಮುಂದುವರೆಯುತ್ತಿದೆ ಎಂದರೆ ಇದೀಗ ಮಾರುಕಟ್ಟೆಗೆ ಬ್ಯಾಟರಿ ಚಾಲಿತ ಸ್ಮಾರ್ಟ್​​ಟಿವಿ ಬಿಡುಗಡೆ ಯಾಗಲು ಸಜ್ಜಾಗಿದೆ. ಹೌದು ಪ್ರತೀವರ್ಷದಂತೆ ಈ ವರ್ಷವೂ ಲಾಸ್​​ವೇಗಸ್​ನಲ್ಲಿ 2023ರ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್​ ಶೋ (CES) ನಡೆದಿತ್ತು. ಈ ಎಲೆಕ್ಟ್ರಾನಿಕ್ಸ್​ ಶೋ ಎಂದರೆ ಹೊಸ ಟೆಕ್​ ಡಿವೈಸ್​ಗಳನ್ನು ಪರಿಚಯಿಸುವ ವೇದಿಕೆ. ಇಲ್ಲಿ ದೊಡ್ಡ ದೊಡ್ಡ ಟೆಕ್ನಾಲಜಿ ಕಂಪೆನಿಗಳು ತಾವು ಬಿಡುಗಡೆಗೊಳಿಸಲಿರುವ ವಿಶೇಷ ಮಾದರಿಯ ಟೆಕ್ ಡಿವೈಸ್​ಗಳನ್ನು ಲಾಂಚ್ ಮಾಡುತ್ತದೆ. ಅದೇ ರೀತಿ 2023ರ ಈ ಟೆಕ್​ ಶೋನಲ್ಲಿ ಬಹಳಷ್ಟು ವಿಶೇಷ ರೀತಿಯ ಡಿವೈಸ್​ಗಳನ್ನು (Tech Device) ಕಂಪೆನಿಗಳು ಪರಿಚಯಿಸಿವೆ. ಅದರಲ್ಲಿ ಸ್ಮಾರ್ಟ್​​ಟಿವಿ ಕೂಡಾ ಒಂದು. ಇದುವರೆಗೆ ಯಾವುದೇ ಟೆಲಿವಿಷನ್​ (Television) ಸಾಧನಗಳನ್ನು ಆನ್​ ಮಾಡಬೇಕಾದ್ರೆ ವಿದ್ಯುತ್​ನ ಅವಶ್ಯಕತೆ ಇತ್ತು. ಆದರೆ ಇನ್ಮುಂದೆ ಪವರ್ ಇಲ್ಲದೆಯೇ ಟಿವಿ ನೋಡಬಹುದು.


  ಈ ವರ್ಷದ ಜನವರಿ 5 ರಂದು ಪ್ರಾರಂಭವಾದ 2023 ಸಿಇಎಸ್​ ಶೋನಲ್ಲಿ ಹೊಸ ಸ್ಮಾರ್ಟ್​ಟಿವಿಯನ್ನು ಪರಿಚಯಿಸಲಾಗಿದ್ದು, ಈ ಸ್ಮಾರ್ಟ್​​ಟಿವಿಗೆ ವಿದ್ಯುತ್​ನ ಅವಶ್ಯಕತೆಯೇ ಇಲ್ಲವೆಂದು ತಂತ್ರಜ್ಞರು ತಿಳಿಸಿದ್ದಾರೆ. ಕೇವಲ ಬ್ಯಾಟರಿ ಮೂಲಕ ಟಿವಿ ನೋಡಬಹುದು.  ಇದರ ಬೆಲೆ ಎಷ್ಟು, ಇನ್ನಿತರ ಫೀಚರ್ಸ್​ಗಳ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.


  30 ಬ್ಯಾಟರಿ ಬಾಳಿಕೆ


  ಇದೀಗ ಟೆಕ್​ ಕಂಪನಿಯೊಂದು ಪರಿಚಯಿಸಿರುವ ಸ್ಮಾರ್ಟ್​​ಟಿವಿ ವೈರ್​ಲೆಸ್​ ಆಗಿದ್ದು, ಇದನ್ನು ಆನ್​ ಮಾಡಲು ಯಾವುದೇ ವಿದ್ಯುತ್​ನ ಅವಶ್ಕತೆ ಇಲ್ಲ. ಇನ್ನು ಈ ಸ್ಮಾರ್ಟ್​​ಟಿವಿಗೆ ಬ್ಯಾಟರಿಯನ್ನು ಅಳವಡಿಸಲಾಗಿದೆ. ಜೊತೆಗೆ ಚಾರ್ಜ್​ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಆದ್ದರಿಂದ ಈ ಸ್ಮಾರ್ಟ್​​​ಟಿವಿಯ ಚಾರ್ಜರ್ ಅನ್ನು ಒಮ್ಮೆ ಚಾರ್ಜ್ ಮಾಡಿದ್ರೆ 30 ದಿನಗಳವರೆಗೆ ನಿರಂತರವಾಗಿ ವೀಕ್ಷಿಸಬಹುದಾಗಿದೆ. ಜೊತೆಗೆ ಈ ಟಿವಿ 55 ಇಂಚಿನ ಡಿಸ್​ಪ್ಲೇಯನ್ನು ಸಹ ಹೊಂದಿದೆ.


  ಇದನ್ನೂ ಓದಿ: 2023ರಲ್ಲಿ ಪ್ರಾರಂಭವಾದ ನಿರೀಕ್ಷೆಯೂ ಮಾಡಿರದ ಟೆಕ್​ ಡಿವೈಸ್​ಗಳಿವು!


  ವಿದ್ಯುತ್​ನ ಅವಶ್ಯಕತೆ ಇಲ್ಲ


  ಇನ್ನು ಈ ಸ್ಮಾರ್ಟ್​ಟಿವಿಗೆ ವಿದ್ಯುತ್​ನ ಅವಶ್ಯಕತೆಯೇ ಇಲ್ಲ. ಇದು ವೈರ್​ಲೆಸ್​ ಸ್ಮಾರ್ಟ್​​ಟಿವಿ ಆಗಿದೆ. ಇನ್ನು ಕೆಲವೊಂದು ನಗರಗಳಲ್ಲಿ ವಿದ್ಯುತ್​ನ ಸೌಲಭ್ಯವೇ ಇರುವುದಿಲ್ಲ. ಹಾಗೇ ಇನ್ನೂ ಕೆಲವು ಪ್ರದೇಶಗಳಲ್ಲಿ ಆಗಾಗ ಪವರ್​ ಕಟ್​ ಆಗುತ್ತಾ ಇರುತ್ತದೆ. ಅಂತಹ ನಗರಗಳಲ್ಲಿ ಈ ಸ್ಮಾರ್ಟ್​​ಟಿವಿ ತುಂಬಾನೇ ಸಹಕಾರಿ ಯಾಗಲಿದೆ. ಇನ್ನು ಈ ಸ್ಮಾರ್ಟ್​​ಟಿವಿಯನ್ನು ಒಮ್ಮೆ ಫುಲ್​ ಚಾರ್ಜ್​ ಮಾಡಿದ್ರೆ ನಂತರ 30 ದಿನಗಳವರೆಗೆ ಚಾರ್ಜ್ ಮಾಡುವ ಅವಶ್ಯಕತೆ ಇರುವುದಿಲ್ಲ. ಆದ್ದರಿಂದ ಈ ಸ್ಮಾರ್ಟ್​ಟಿವಿಗೆ ಹೆಚ್ಚಿನ ಮಟ್ಟದ ವಿದ್ಯುತ್​ ಅವಶ್ಯಕತೆ ಎಂದುಬೀಳುವುದಿಲ್ಲ.


  ಸಾಂಕೇತಿಕ ಚಿತ್ರ


  ಬ್ಯಾಟರಿಯನ್ನು ಚೇಂಜ್ ಸಹ ಮಾಡಬಹುದು


  ಈ ಸ್ಮಾರ್ಟ್​ಟಿವಿಯಲ್ಲಿ ಹಾಟ್​ ಸ್ವಾಪೇಬಲ್​ ಬ್ಯಾಟರಿಯನ್ನು ಅಳವಡಿಸಲಾಗಿದೆ. ಆದ್ದರಿಂದ ಇದನ್ನು ನಿಮಗೆ ಬೇಕಾದ ಸಂದರ್ಭದಲ್ಲಿ ಚೇಂಜ್ ಕೂಡ ಮಾಡಬಹುದು. ಇನ್ನು ಈ ಸ್ಮಾರ್ಟ್​​ಟಿವಿಯಲ್ಲಿ ಬ್ಯಾಟರಿಯನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ. ವಿಶೇಷವಾಗಿ ಈ ಬ್ಯಾಟರಿಯ ಚಾರ್ಜ್​ ಕಡಿಮೆಯಾಗುತ್ತಿದ್ದಂತೆ ತೆಗೆದು ರೀಚಾರ್ಜ್​ ಕೂಡ ಮಾಡಬಹುದು ಅಥವಾ ತೆಗೆದು ಹಾಕುವ ಅವಕಾಶ ಕೂಡ ಇದೆ. ಇನ್ನು ಈ ಸ್ಮಾರ್ಟ್​ಟಿವಿಯ ಬ್ಯಾಟರಿಯ ವಿಷಯದಲ್ಲಿ ಲೂಪ್​ ವ್ಯಾಕ್ಯೂಮ್​ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಇದರಿಂದ ಸ್ಮಾರ್ಟ್​​ಟಿವಿ ಇನ್ನೂ ತೆಳುವಾದ ವಿನ್ಯಾಸವನ್ನು ಹೊಂದಿರುತ್ತದೆ.


  ಇತರೆ ಫೀಚರ್ಸ್​


  ವಿಶೇಷವಾಗಿ ಈ ಸ್ಮಾರ್ಟ್​​ಟಿವಿ ರಿಮೋಟ್​ನ ಅವಶ್ಯಕತೆಯೇ ಇಲ್ಲ ಏಕೆಂದರೆ ಇದರಲ್ಲಿ ಕ್ಯಾಮೆರಾ ಸೆನ್ಸಾರ್ ಅನ್ನು ಅಳವಡಿಸಲಾಗಿದೆ. ಆದ್ದರಿಂದ ಇದರಲ್ಲಿ ಕೆಲವು ಸನ್ನೆ ಮಾಡುವ ಮೂಲಕ ಈ ಸ್ಮಾರ್ಟ್​ಟಿವಿಯನ್ನು ಕಂಟ್ರೋಲ್ ಮಾಡಬಹುದಾಗಿದೆ. ಜೊತೆಗೆ ಈ ಸ್ಮಾರ್ಟ್​​ಟಿವಿ ಟಚ್​ ಕಂಟ್ರೋಲ್​ ಫೀಚರ್​​ ಅನ್ನು ಸಹ ಒಳಗೊಂಡಿದೆ. ಇದಲ್ಲದೆ ವಾಯ್ಸ್​​ ಕಮಾಂಡ್​ ಮೂಲಕವೂ ಟಿವಿಯನ್ನು ಕಂಟ್ರೋಲ್ ಮಾಡಬಹುದು. ಆದರೆ ಇದಕ್ಕೆಲ್ಲಾ ಅದರದೇ ಆದ ಕೆಲವೊಂದು ಸೆಟ್ಟಿಂಗ್​ಗಳಿವೆ.


  ಸಾಂಕೇತಿಕ ಚಿತ್ರ


  ಬೆಲೆ ಮತ್ತು ಲಭ್ಯತೆ


  ಇನ್ನು ಮಾರುಕಟ್ಟೆಗೆ ಕಾಲಿಡಲಿರುವ ಈ ವಿಶೇಷ ಸ್ಮಾರ್ಟ್​​ಟಿವಿ 2023ರ ಡಿಸೆಂಬರ್​ ಖರೀದಿಗೆ ಲಭ್ಯವಾಗುತ್ತದೆ ಎನ್ನಲಾಗಿದೆ. ಹಾಗೇ ಇದರ ಬೆಲೆ 2,48,319 ರೂಪಾಯಿಗಳಿರಬಹುದು ಎಂದಿದ್ದಾರೆ.

  Published by:Prajwal B
  First published: