ಸ್ಮಾರ್ಟ್ಫೋನ್ಗಳು (Smartphones) ಇತ್ತೀಚೆಗೆ ಟೆಕ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿದೆ. ಇದೇ ಬೆಳವಣಿಗೆಯನ್ನು ಕಂಡಂತಹ ಸ್ಮಾರ್ಟ್ಫೋನ್ ಕಂಪೆನಿಗಳು ಸಹ ಹೊಸ ಹೊಸ ಮೊಬೈಲ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇದೆ. ಒಂದು ರೀತಿಯಲ್ಲಿ ಲೆಕ್ಕ ಹಾಕುವುದಾದರೆ ತಿಂಗಳಿಗೆ 4 ರಿಂದ 5 ರಂತೆ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿ ಲಾಂಚ್ ಆಗುತ್ತಿದೆ. ಈ ಹೊಸ ಸ್ಮಾರ್ಟ್ಫೋನ್ಗಳನ್ನು ಕಂಡಾಗ ಕೆಲವರಿಗೆ ಹಳೆಯ ಸ್ಮಾರ್ಟ್ಫೋನ್ಗಳನ್ನು ಕೊಟ್ಟು ಹೊಸ ಸ್ಮಾರ್ಟ್ಫೋನ್ ಅನ್ನು ಖರೀದಿ ಮಾಡುವ ಎಂದು ಪ್ಲ್ಯಾನ್ ಮಾಡ್ತಾರೆ. ಆದರೆ ಹಳೆಯ ಫೋನ್ (Second Hand Smartphone) ಅನ್ನು ಯಾವುದೇ ರೀಟೇಲ್ ಸ್ಟೋರ್ಗೆ ಕೊಟ್ಟು ಹೊಸ ಫೋನ್ ಅನ್ನು ಖರೀದಿಸ್ತಾರೆ. ಆದರೆ ಇನ್ಮುಂದೆ ಈ ಕೆಲಸವನ್ನು ಫ್ಲಿಪ್ಕಾರ್ಟ್ನಲ್ಲೇ (Flipkart) ಮಾಡ್ಬಹುದು.
ಇದುವರೆಗೆ ಹಳೆಯ ಸ್ಮಾರ್ಟ್ಫೋನ್ಗಳನ್ನು ಹತ್ತಿರದ ರೀಟೇಲ್ ಸ್ಟೋರ್ಗಳಿಗೆ ಕೊಟ್ಟು ಹೊಸ ಸ್ಮಾರ್ಟ್ಫೋನ್ ಅನ್ನು ಖರೀದಿಸಬಹುದಿತ್ತು. ಆದರೆ ಇನ್ಮುಂದೆ ಮನೆಯಲ್ಲಿಯೇ ಇದ್ದು ಫ್ಲಿಪ್ಕಾರ್ಟ್ನಲ್ಲಿ (Flipkart Sell-Back) ನಿಮ್ಮ ಹಳೇ ಸ್ಮಾರ್ಟ್ಫೋನ್ ಅನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದಾಗಿದೆ. ಅದಕ್ಕಾಗಿ ಕೆಲವೊಂದು ಮಾರ್ಗಗಳಿವೆ. ಇದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.
ಸೆಲ್ ಬ್ಯಾಕ್ ಆಯ್ಕೆ
ಫ್ಲಿಪ್ಕಾರ್ಟ್ ತನ್ನ ಬಳಕೆದಾರರಿಗಾಗಿ ಸೆಲ್ ಬ್ಯಾಕ್ ಎಂಬ ವಿಶೇಷ ಆಯ್ಕೆಯನ್ನು ನೀಡಿದೆ. ಈ ಮೂಲಕ ಬಳಕೆದಾರರು ತಮ್ಮ ಹಳೆಯ ಸ್ಮಾರ್ಟ್ಫೋನ್ ಅನ್ನು ಈ ಆಯ್ಕೆಯಲ್ಲಿ ಸೇಲ್ ಮಾಡಬಹುದಾಗಿದೆ. ಇದರಿಂದ ನಿಮಗೆ ಯಾವುದೇ ಭಯವಿಲ್ಲದೆ ಸೇಫ್ ಆಗಿ ಮತ್ತು ಸುಲಭದಲ್ಲಿ ಸೆಕೆಂಡ್ ಹ್ಯಾಂಡ್ ಫೋನ್ ಅನ್ನು ಮಾರಾಟ ಮಾಡಬಹುದು. ಇನ್ನು ಈ ಫೋನ್ ಮೇಲೆ ಭರ್ಜರಿ ಬೆಲೆಯನ್ನು ಸಹ ಫ್ಲಿಪ್ಕಾರ್ಟ್ ನಿರ್ಧರಿಸುತ್ತದೆ.
ಫ್ಲಿಪ್ಕಾರ್ಟ್ನಲ್ಲಿ ಸೆಕೆಂಡ್ ಹ್ಯಾಂಡ್ ಫೋನ್ ಅನ್ನು ಸೇಲ್ ಮಾಡುವುದು ಹೇಗೆ?
ಯಾವುದೇ ಸ್ಮಾರ್ಟ್ಫೋನ್ ಸೇಲ್ ಮಾಡುವ ಮುನ್ನ ಗಮನಿಸಬೇಕಾದ ಅಂಶಗಳು:
ಯಾವುದೇ ಸ್ಮಾರ್ಟ್ಫೋನ್ ಇನ್ನೊಬ್ಬರಿಗೆ ಅಥವಾ ಆನ್ಲೈನ್ ಮೂಲಕ ಸೇಲ್ ಮಾಡುವ ಮುನ್ನ ಅದರಲ್ಲಿರುವಂತಹ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡಬೇಕು. ನಂತರ ನಿಮ್ಮ ಮೊಬೈಲ್ನಲ್ಲಿದ್ದಂತಹ ಆ್ಯಪ್ಗಳನ್ನು ಡಿಲೀಟ್ ಮಾಡಿದ್ದೀರಾ ಎಂದು ಖಚಿತ ಪಡಿಸಿಕೊಳ್ಳಿ ಜೊತೆಗೆ ಯಾವುದೇ ಅಗತ್ಯ ಡೇಟಾ, ಡಾಕ್ಯುಮೆಂಟ್ಗಳನ್ನು ಸ್ಮಾರ್ಟ್ಫೋನ್ನಲ್ಲಿ ಇಡಬೇಡಿ. ಬಳಿಕ ಸೇಲ್ ಮಾಡಲು ಮುಂದಾಗಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ