ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಆಗಿರುವ ವಾಟ್ಸಾಪ್ ಇತ್ತೀಚೆಗಂತೂ ಹೊಸ ಫೀಚರ್ಸ್ಗಳನ್ನು ಪರಿಚಯಿಸುವ ಮೂಲಕ ಭಾರೀ ಮಾತುಕತೆಯಲ್ಲಿದೆ. ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಕಳೆದ ವರ್ಷ ಹಲವಾರು ಫೀಚರ್ಸ್ಗಳನ್ನು ಹೊರತಂದಿದೆ. ಅದೇ ರೀತಿಯಲ್ಲಿ 2023ರಲ್ಲಿ ಇನ್ನೂ ಹಲವಾರು ನವೀಕರಣಗಳು ಬರಲಿದೆ ಎಂಬ ಭರವಸೆಯನ್ನೂ ನೀಡಿತ್ತು. ಅದೇ ರೀತಿ ಈ ವರ್ಷದ ಆರಂಭದಿಂದಲೇ ವಾಟ್ಸಾಪ್ (WhatsApp) ತನ್ನಲ್ಲಿನ ಕಾರ್ಯವೈಖರಿಯಲ್ಲಿ ಬದಲಾವಣೆಯನ್ನು ತರುತ್ತಲೇ ಇದೆ. ಕೆಲದಿನಗಳ ಹಿಂದಷ್ಟೇ ವಾಟ್ಸಾಪ್ ಸ್ಟೇಟಸ್ನಲ್ಲಿ ವಾಯ್ಸ್ ಮೆಸೇಜ್ ಶೇರ್ ಮಾಡುವ ಫೀಚರ್ ಅನ್ನು ಬಿಡುಗಡೆ ಮಾಡಿತ್ತು. ತದನಂತರದಲ್ಲಿ ಬ್ಲಾಕ್ ಶಾರ್ಟ್ಕಟ್ (Block Shortcut) ಮಾಡುವ ಫೀಚರ್ ಅನ್ನು ಪರಿಚಯಿಸಿತ್ತು. ಇದೀಗ ಮತ್ತೆ ಹೊಸ ಅಪ್ಡೇಟ್ ಅನ್ನು ಬಿಡುಗಡೆ ಮಾಡಿದೆ.
ವಾಟ್ಸಾಪ್ ಸದ್ಯ ಪರಿಚಯಿಸುತ್ತಿರುವ ಈ ಫೀಚರ್ ಇದುವರೆಗೆ ಬೇರೆ ಯಾವುದೇ ಅಪ್ಲಿಕೇಶನ್ಗಳಲ್ಲೂ ಬಿಡುಗಡೆಯಾಗಿಲ್ಲ. ಇನ್ಮುಂದೆ ವಾಟ್ಸಾಪ್‌ನಲ್ಲಿ ಕಾಲ್ ಅನ್ನು ಶೆಡ್ಯೂಲ್ ಮಾಡಿಯೂ ಇಟ್ಟುಕೊಳ್ಳಬಹುದು.
ಕಾಲ್ ಶೆಡ್ಯೂಲ್ ಮಾಡಿಟ್ಟುಕೊಳ್ಳಬಹುದು
ವಾಟ್ಸಾಪ್‌ನಲ್ಲಿ ಈಗಾಗಲೇ ವಾಯ್ಸ್ ಹಾಗೂ ವಿಡಿಯೋ ಕರೆ ಮಾಡಲು ಅವಕಾಶ ನೀಡಲಾಗಿದೆ. ಅದಾಗ್ಯೂ ಈ ವಿಭಾಗದಲ್ಲಿ ಇನ್ನಷ್ಟು ಹೊಸ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿರುವ ವಾಟ್ಸಾಪ್ ಬಳಕೆದಾರರಿಗೆ ಮುಂಚಿತವಾಗಿಯೇ ಕರೆಯನ್ನು ನಿಗದಿಪಡಿಸುವ ಆಯ್ಕೆಯ ಫೀಚರ್ಸ್ ನೀಡುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಜಿಯೋನ ಈ ರೀಚಾರ್ಜ್ ಮಾಡಿದ್ರೆ 336 ದಿನ ಟೆನ್ಷನ್ ಇರುವುದಿಲ್ಲ! ಪ್ರಯೋಜನಗಳು ಏನೆಲ್ಲಾ ಇದೆ?
ಇನ್ನು ಈ ಶೆಡ್ಯೂಲ್ ಕರೆ ಸೌಲಭ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿರಲಿದ್ದು, ಈ ಮೂಲಕ ಬೇಕಾದವರ ಜೊತೆಗೆ ಸಮಯಕ್ಕಿಂತ ಮುಂಚಿತವಾಗಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕರೆಯನ್ನು ಯೋಜಿಸಬಹುದಾಗಿದೆ. ಈ ಮೂಲಕ ಇನ್ಮುಂದೆ ಬಳಕೆದಾರರು ಯಾವುದೇ ಕಾಲ್ಗಳನ್ನು ವಾಟ್ಸಾಪ್‌ನಲ್ಲಿ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ಕಂಪೆನಿ ಹೇಳಿದೆ. ಇನ್ನು ವಾಟ್ಸಾಪ್ ಪರಿಚಯಿಸಿರುವ ಈ ಹೊಸ ಫೀಚರ್ ಇನ್ನೇನು ಕೆಲವೇ ದಿನಗಳಲ್ಲಿ ಬಳಕೆದಾರರಿಗೆ ಲಭ್ಯವಾಗುತ್ತದೆ ಎಂದು ಹೇಳಲಾಗಿದೆ.
ಈ ಫೀಚರ್ನ ಪ್ರಯೋಜನ
ವಾಟ್ಸಾಪ್ ಪರಿಚಯಿಸಿರುವ ಈ ಫೀಚರ್ನಿಂದ ಬಳಕೆದಾರರಿಗೆ ಹಲವಾರು ರೀತಿಯಲ್ಲಿ ಸಹಕಾರಿಯಾಗುತ್ತದೆ. ಕಾರಣವೇನೆಂದರೆ ಕೆಲವರ್ಷಗಳ ಹಿಂದೆ ವಾಟ್ಸಾಪ್ ಅನ್ನು ಕೇವಲ ತಮ್ಮ ಸ್ನೇಹಿತರ ಜೊತೆ, ಕುಟುಂಬದವರ ಜೊತೆ ಚಾಟ್ ಮಾಡಲು ಮಾತ್ರ ಬಳಸುತ್ತಿದ್ದರು. ಆದರೆ ಈಗ ವಿಡಿಯೋ ಕಾಲ್ಗಳನ್ನು , ವಾಯ್ಸ್ ಕಾಲ್ಗಳನ್ನು ಸಹ ಮಾಡಬಹುದಾಗಿದೆ. ಇತ್ತೀಚೆಗಷ್ಟೇ ವಾಟ್ಸಾಪ್ ಕಾಲ್ ಮಾಡುವ ವಿಷಯದಲ್ಲಿ ಬಹಳಷ್ಟು ಫೀಚರ್ ಅನ್ನು ಬಿಡುಗಡೆ ಮಾಡಿದೆ. ಇದೀಗ ಮತ್ತೆ ವಾಟ್ಸಾಪ್‌ನಲ್ಲಿ ಕಾಲ್ ಶೆಡ್ಯೂಲ್ ಮಾಡುವಂತಹ ಫೀಚರ್ ಅನ್ನು ಬಿಡುಗಡೆ ಮಾಡಲು ರೆಡಿಯಾಗಿದೆ.
ಈ ಮೂಲಕ ಇನ್ಮುಂದೆ ಯಾರ ಜೊತೆಯೂ ಕಾಲ್ ಮಾಡ್ಬೇಕಾದ್ರೂ ಶೆಡ್ಯೂಲ್ ಮಾಡಿಕೊಂಡು ಕರೆಯಲ್ಲಿ ಮಾತನಾಡಬಹುದಾಗಿದೆ. ಇನ್ನೂ ಕೆಲವರು ಯಾವುದೇ ಕೆಲಸಕ್ಕೆ ಸಂದರ್ಶನ ಮಾಡಬೇಕಾದರು ವಾಟ್ಸಾಪ್ನಲ್ಲೇ ಮಾಡುತ್ತಾರೆ. ಈ ವೇಳೆ ಸಂದರ್ಶಕರು ಸಂದರ್ಶನಕ್ಕೆ ಹಾಜರಾಗುವ ವ್ಯಕ್ತಿ ಜೊತೆ ಯಾವ ಸಮಯದಲ್ಲಿ ಮಾತನಾಡಬೇಕು ಎಂಬುದನ್ನು ಶೆಡ್ಯೂಲ್ ಮಾಡಿಟ್ಟುಕೊಳ್ಳಬಹುದಾಗಿದೆ.
ಸಮಯ, ದಿನಾಂಕವನ್ನೂ ಆ್ಯಡ್ ಮಾಡ್ಬಹುದು
ಇನ್ನು ವಾಟ್ಸಾಪ್ ಬಳಕೆದಾರರು ತಮ್ಮ ಈ ವಿಶೇಷ ಕರೆಗಾಗಿ ಟೈಟಲ್, ದಿನಾಂಕ ಮತ್ತು ಸಮಯವನ್ನು ಸೆಲೆಕ್ಟ್ ಮಾಡಲು ಅನುಕೂಲ ಮಾಡಿಕೊಡಲಾಗುತ್ತಿದ್ದು, ಹಾಗೆಯೇ ಗ್ರೂಪ್ ಕರೆ ವಿಚಾರದಲ್ಲೂ ನಿಗದಿತ ಕರೆಯನ್ನು ಯಾವಾಗ ಮಾಡಲಾಗುತ್ತದೆ ಎಂಬುದರ ಕುರಿತು ಗುಂಪಿನಲ್ಲಿರುವ ಪ್ರತಿಯೊಬ್ಬರೂ ತಿಳಿದುಕೊಳ್ಳಬಹುದಾಗಿದೆ. ಈ ರೀತಿ ನಿಗದಿ ಮಾಡುವುದರಿಂದ ಕಾಲ್ನಲ್ಲಿ ಪಾಲ್ಗೊಳ್ಳುವವರು ಮೊದಲೇ ತಯಾರಿಯನ್ನು ಮಾಡಿಟ್ಟುಕೊಳ್ಳಬಹುದು.
ಇನ್ನು ಈ ಫೀಚರ್ ಕೆಲವೇ ದಿನಗಳಲ್ಲಿ ಇತ್ತೀಚಿನ ವರ್ಷನ್ ಹೊಂದಿರುವ ವಾಟ್ಸಾಪ್ ಬಳಕೆದಾರರಿಗೆ ಲಭ್ಯವಾಗುತ್ತದೆ. ಸದ್ಯ ವಾಟ್ಸಾಪ್ ಕಂಪೆನಿ ಇದರ ಪರೀಕ್ಷೆಯಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ