ಭಾರತದಲ್ಲಿ ಇತ್ತೀಚೆಗೆ ಬಜೆಟ್ (Union Budget @023-24) ಮಂಡನೆಯದ್ದೇ ಸುದ್ದಿಯಾಗುತ್ತಿದೆ. ಅದೇ ರೀತಿ 2023-24 ರ ಬಜೆಟ್ ಮಂಡನೆಯ ಬಗ್ಗೆ ಹೆಚ್ಚಿನ ಜನರಿಗೆ ಕುತೂಹಲ ಇದ್ದೇ ಇರುತ್ತದೆ. ಇನ್ನು ಈ ಬಜೆಟ್ ಮಂಡನೆಯ ವಿಚಾರದಲ್ಲಿ ಹಲವಾರು ರೀತಿಯಲ್ಲಿ ಚರ್ಜೆಗಳು, ಮಾತುಕತೆಗಳು ಜನಸಾಮಾನ್ಯರ ನಡುವೆ ನಡೆಯುತ್ತಿರುತ್ತದೆ. ಆದರೆ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಯಾರಿಗೆ ಮತ್ತು ಯಾವ ವಿಭಾಗಕ್ಕೆ ಯಾವ ರೀತಿಯೆಲ್ಲಾ ಬಜೆಟ್ಗಳನ್ನು ಘೋಷಣೆ ಮಾಡಲಾಗುತ್ತದೆ ಎಂಬ ಕುತೂಹಲ ಮೂಡುತ್ತದೆ. ಆದರೆ ಇದಕ್ಕಾಗಿ ಸುಲಭ ವಿಧಾನವಿದೆ. ನಿಮ್ಮಲ್ಲಿರುವ ಮೊಬೈಲ್ (Mobile) ಮೂಲಕವೇ ಕೇಂದ್ರದ ಬಜೆಟ್ (Central Budget)ನಲ್ಲಿ ಮಾಡಿದಂತಹ ಘೋಷಣೆಯ ಬಗ್ಗೆ ಇಡೀ ವಿವರಗಳನ್ನು ನೋಡಬಹುದಾಗಿದೆ.
ದೇಶದ ಆರ್ಥಿಕತೆಯ ಬೆಳವಣಿಗೆಗೆ ಈ ಬಜೆಟ್ಗಳು ಭಾರೀ ಬೆಂಬಲವನ್ನು ನೀಡುತ್ತದೆ.ಇದಕ್ಕಾಗಿಯೇ ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತದಲ್ಲಿರುವ ಪ್ರದೇಶಗಳಿಗೆ ಬೇರೆ ಬೇರೆ ರೀತಿಯಲ್ಲಿ ಕೊಡುಗೆಗಳನ್ನು ಘೋಷಿಸುತ್ತವೆ. ಹಾಗಿದ್ರೆ ಇದರ ಬಗ್ಗೆ ಸುಲಭದಲ್ಲಿ ವಿವರಗಳನ್ನು ಈಗ ಮೊಬೈಲ್ನಲ್ಲಿಯೇ ನೋಡಬಹುದು. ಹೇಗೆ ಎಂಬುದನ್ನು ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ.
ಯಾವಾಗ ಬಜೆಟ್ ಮಂಡನೆ?
2023 ರ ಹಣಕಾಸು ವರ್ಷದ ಸಾಮಾನ್ಯ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2023 ರಂದು ಮಂಡನೆ ಮಾಡಲಿದ್ದಾರೆ ಇದು ನಿರ್ಮಲಾ ಸೀತಾರಾಮನ್ ಅವರಿಂದ ಮಂಡಿಸಲ್ಪಡುವ ಐದನೇ ಬಜೆಟ್ ಆಗಿರಲಿದೆ.
ಯೂನಿಯನ್ ಬಜೆಟ್ ಮೊಬೈಲ್ ಆ್ಯಪ್
ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ನಂತರ ಸಂಪೂರ್ಣ ಬಜೆಟ್ ವಿವರವನ್ನು ಸಾರ್ವಜನಿಕರಿಗೆ ಮೊಬೈಲ್ ಆ್ಯಪ್ ಮೂಲಕ ನೋಡಬಹುದಾಗಿದೆ. ಈ ಮಾಹಿತಿ 'ಯೂನಿಯನ್ ಬಜೆಟ್ ಮೊಬೈಲ್ ಆಪ್' ( Union Budget Mobile App) ನಲ್ಲಿ ಲಭ್ಯವಾಗಲಿದ್ದು, ಭಾರತದ ಪ್ರತಿಯೊಬ್ಬರು ಅತ್ಯಂತ ಸರಳವಾಗಿ ಬಜೆಟ್‌ನ ಸಂಪೂರ್ಣ ವಿವರಗಳನ್ನು ನೋಡಬಹುದಾಗಿದೆ. ಇನ್ನು ಈ ಬಜೆಟ್ಗೆ ಸಂಬಂಧಿಸಿದ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಓಎಸ್ ಸಾಧನಗಳೆರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ತಮಗೆ ಅನುಕೂಲವಾಗುವಂತಹ ಆ್ಯಪ್ ಸ್ಟೋರ್ಗಳಲ್ಲಿ ಡೌನ್ಲೋಡ್ ಮಾಡಿಟ್ಟುಕೊಳ್ಳಬಹುದು.
ಯೂನಿಯನ್ ಬಜೆಟ್ ಮೊಬೈಲ್ ಆ್ಯಪ್ ಇನ್ಸ್ಟಾಲ್ ಮಾಡುವುದು ಹೇಗೆ?
ಇನ್ನು ಈ ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್ ಅನ್ನು ನೀವು ಬೇರೆ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡುವಂತಹ ಆ್ಯಪ್ ಸ್ಟೋರ್ಗಳಲ್ಲಿ ಡೌನ್ಲೋಡ್ ಮಾಡಬಹುದು. ಇನ್ನು ಆಂಡ್ರಾಯ್ಡ್ ಮೊಬೈಲ್ ಬಳಕೆದಾರರಾದರೆ ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಐಫೋನ್ ಬಳಕೆದಾರರು ಆ್ಯಪಲ್ ಸ್ಟೊರ್ಗಳಲ್ಲಿ ಡೌನ್ಲೋಡ್ ಮಾಡಬಹುದು.
ವೆಬ್ಸೈಟ್ನಲ್ಲೂ ಡೌನ್ಲೋಡ್ ಮಾಡಬಹುದು
ಇನ್ನು ಈ ಆ್ಯಪ್ ಸ್ಟೋರ್ಗಳಲ್ಲಿ ಮಾತ್ರವಲ್ಲದೇ ಯೂನಿಯನ್ ಬಜೆಟ್ ಪೋರ್ಟಲ್ ಆಗಿರುವ www.Indiabudget.Gov.In ಗೆ ಭೇಟಿ ನೀಡಬಹುದಾಗಿದೆ. ಈ ಪೋರ್ಟಲ್ನಲ್ಲಿ 2021-22 ಮತ್ತು ಬಜೆಟ್ 2022-23 ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸಹ ನೋಡುವ ಅವಕಾಶವಿದೆ. ಇನ್ನು ಬಳಕೆದಾರರಿಗೆ ಇನ್ನಷ್ಟು ಸುಲಭವಾಗಿ ದೃಷ್ಟಿಯಿಂದ ಬೇರೆ ಬೇರೆ ವಿಭಾಗಗಳಾಗಿ ಬಜೆಟ್‌ನ ವಿವರಗಳನ್ನು ವಿವರಿಸಲಾಗಿದೆ.
ಬಜೆಟ್ ಡಾಕ್ಯುಮೆಂಟ್ ಅನ್ನು ಪೋರ್ಟಲ್ ಮೂಲಕವೂ ನೋಡ್ಬಹುದು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ