• Home
  • »
  • News
  • »
  • tech
  • »
  • Oneplus Smartwatch: ಜಸ್ಟ್‌ 5000 ರೂಪಾಯಿಗೆ ಸಿಗುತ್ತೆ ಒನ್‌ಪ್ಲಸ್‌ ಸ್ಮಾರ್ಟ್‌ವಾಚ್!

Oneplus Smartwatch: ಜಸ್ಟ್‌ 5000 ರೂಪಾಯಿಗೆ ಸಿಗುತ್ತೆ ಒನ್‌ಪ್ಲಸ್‌ ಸ್ಮಾರ್ಟ್‌ವಾಚ್!

ಒನ್‌ಪ್ಲಸ್‌ ಸ್ಮಾರ್ಟ್‌ವಾಚ್

ಒನ್‌ಪ್ಲಸ್‌ ಸ್ಮಾರ್ಟ್‌ವಾಚ್

ಒನ್‌ಪ್ಲಸ್‌ ಕಂಪನಿ ತನ್ನ ಉತ್ಪನ್ನದ ಮೂಲಕ ಬಹಳಷ್ಟು ಹೆಸರುವಾಸಿಯಾಗಿದೆ. ಇದುವರೆಗೆ ಒನ್‌ಪ್ಲಸ್‌ ಕೇವಲ ಸ್ಮಾರ್ಟ್‌ಫೋನ್‌ ಮೂಲಕ ಪ್ರಸಿದ್ಧಿಯಾಗಿತ್ತು ಈಗ ಮತ್ತೆ ಸ್ಮಾರ್ಟ್‌ವಾಚ್‌ ಮೂಲಕ ಪ್ರಸಿದ್ಧಿಯಾಗಲು ಸಿದ್ಧತೆಯನ್ನು ಮಾಡುತ್ತಿದೆ.

  • Share this:

    ಹೊಸ ಹೊಸ ತಂತ್ರಜ್ಞಾನಗಳ ಜೊತೆ ಇದೀಗ ಸ್ಮಾರ್ಟ್‌ವಾಚ್‌ ಕೂಡ ಸೇರಿಕೊಂಡಿದೆ. ಈ ಸ್ಮಾರ್ಟ್‌ವಾಚ್‌ಗಳು ಇತ್ತೀಚಿಗೆ ಸ್ಮಾರ್ಟ್‌ಫೋನ್‌ಗಳಂತೆಯೇ ಫೀಚರ್ಸ್‌ ಅನ್ನು ಹೊಂದಿದ್ದು ಇದೀಗ ಬಹಳಷ್ಟು ಬೇಡಿಕೆಯಲ್ಲಿವೆ. ಈ ಸ್ಮಾರ್ಟ್‌ವಾಚ್‌ ಕಂಪನಿಗಳಲ್ಲಿ ಹಲವಾರು ಉತ್ತಮ ಕಂಪನಿಗಳಿವೆ. ಅದ್ರಲ್ಲಿ ಒನ್‌ಪ್ಲಸ್‌ ನಾರ್ಡ್‌ ಸ್ಮಾರ್ಟ್‌ವಾಚ್‌ ಕೂಡ ಒಂದು. ಇದೀಗ ಈ ಕಂಪನಿ ಗ್ರಾಹಕರಿಗೆ ಊಹಿಸಲಾಗದ ಬೆಲೆಯಲ್ಲಿ ಸ್ಮಾರ್ಟ್‌ವಾಚ್‌ ಅನ್ನು ನೀಡುತ್ತಿದೆ. ಇದು ಉತ್ತಮ ಫೀಚರ್ಸ್‌ ಅನ್ನು ಹೊಂದಿದ್ದು ಗ್ರಾಹಕರನ್ನು ಬೇಗನೆ ಆಕರ್ಷಿಸುತ್ತದೆ. ಸ್ಮಾರ್ಟ್‌ವಾಚ್‌ ಕಂಪನಿಗಳು ದಿನದಿಂದ ದಿನಕ್ಕೆ ತಮ್ಮ ಉತ್ಪನ್ನಗಳಲ್ಲಿ ಅಪ್‌ಡೇಟ್‌ಗಳನ್ನು ಮಾಡುತ್ತಲೇ ಇರುತ್ತಾರೆ. ಇದು ಗ್ರಾಹಕರಿಗೆ ತಾವು ಬಳಸುವ ಸ್ಮಾರ್ಟ್‌ವಾಚ್‌ ಅನ್ನು ಸರಳವಾಗಿ ಉಪಯೋಗಿಸಬಹುದು.


    ಈ ಒನ್‌ಪ್ಲಸ್‌ ಕಂಪನಿ ತನ್ನ ಉತ್ಪನ್ನದ ಮೂಲಕ ಬಹಳಷ್ಟು ಹೆಸರುವಾಸಿಯಾಗಿದೆ. ಇದುವರೆಗೆ ಒನ್‌ಪ್ಲಸ್‌ ಕೇವಲ ಸ್ಮಾರ್ಟ್‌ಫೋನ್‌ ಮೂಲಕ ಪ್ರಸಿದ್ಧಿಯಾಗಿತ್ತು ಈಗ ಮತ್ತೆ ಸ್ಮಾರ್ಟ್‌ವಾಚ್‌ ಮೂಲಕ ಪ್ರಸಿದ್ಧಿಯಾಗಲು ಸಿದ್ಧತೆಯನ್ನು ಮಾಡುತ್ತಿದೆ.


    ಈ ಸ್ಮಾರ್ಟ್‌ವಾಚ್‌ನ ಫೀಚರ್ಸ್:‌


    • ನೂತನ ಒನ್‌ಪ್ಲಸ್‌ ನಾರ್ಡ್‌ ಸ್ಮಾರ್ಟ್‌ವಾಚ್‌ ಸಾಧನವು 1.78-ಇಂಚಿನ HD AMOLED ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ.

    • ಈ ಡಿಸ್‌ಪ್ಲೇಯು 60Hz ರಿಫ್ರೆಶ್ ರೇಟ್ ಮತ್ತು 500 nits ವರೆಗಿನ ಬ್ರೈಟ್‌ನೆಸ್ ಹೊಂದಿದೆ.


    ಇದನ್ನೂ ಓದಿ: ಈ ಫ್ಯಾನ್​ ನಿಮ್ಮ ಮನೆ ಮಕ್ಕಳ ಜೀವ ಉಳಿಸಬಹುದು!

    • ಅಡಿಯಲ್ಲಿ, SF32LB555V4O6 ಚಿಪ್‌ಸೆಟ್‌ನಿಂದ ಚಾಲಿತವಾಗಿರುವ ಈ ಸಾಧನವು ರಿಯಲ್‌ ಟೈಮ್‌ ಅಪರೇಟಿಂಗ್‌ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪೆನಿ ತಿಳಿಸಿದೆ.

    • ಇನ್ನು ಈ ಸ್ಮಾರ್ಟ್‌ವಾಚ್ 3-ಆಕ್ಸಿಸ್ ಅಕ್ಸೆಲೆರೊಮೀಟರ್, ಆಂತರಿಕ ಜಿಪಿಎಸ್ ಬೆಂಬಲ, ಹೃದಯ ಬಡಿತ ಮತ್ತು ಒತ್ತಡದ ಪರೀಕ್ಷೆ ಮತ್ತು ನಿದ್ರೆ ಟ್ರ್ಯಾಕಿಂಗ್ ಮಾಡುವಂತಹ ಫೀಚರ್ಸ್‌ಗಳಿವೆ.

    • ಈ ಸಾಧನವು ರನ್ನಿಂಗ್ ಮತ್ತು ವಾಕಿಂಗ್ ಸಮಯ ಮತ್ತು ಪರಿಣಾಮಗಳನ್ನು ಸ್ವಯಂಚಾಲಿತವಾಗಿ ಟ್ರ್ಯಾಕ್ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.

    • ಒನ್‌ಪ್ಲಸ್‌ ನಾರ್ಡ್‌ ಸ್ಮಾರ್ಟ್‌ವಾಚ್‌ ಸಾಧನದ ನೆಟ್‌ವರ್ಕ್ ಆಯ್ಕೆಯ ಬಗ್ಗೆ ಹೇಳುವುದಾದರೆ ಇದು ಬ್ಲೂಟೂತ್ 5.2 ಸಂಪರ್ಕವನ್ನು ಹೊಂದಿದೆ.

    • ಆಂಡ್ರಾಯ್ಡ್ 6 ಮತ್ತು iOS 11 ನಂತರದ ಸಾಧನಗಳಲ್ಲಿ ಕಾರ್ಯನಿರ್ವಹಿಸುತ್ತದೆ.

    • ಈ ಸಾಧನವು ಬ್ಲಡ್‌ ಆಕ್ಸಿಜನ್‌ನ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ.

    • ಇನ್ನು ಈ ಸ್ಮಾರ್ಟ್‌ವಾಚ್‌ನ ಬಲಭಾಗದಲ್ಲಿ ಪವರ್ ಬಟನ್ ನೀಡಿಲಾಗಿದೆ. ಇದು ಬಹಳ ಉತ್ತಮ ಲುಕ್‌ ಅನ್ನು ನೀಡುತ್ತದೆ.


    ಭಾರತದಲ್ಲಿ ಈ ಸ್ಮಾರ್ಟ್‌ವಾಚ್‌ನ ಬೆಲೆ ಹೇಗಿದೆ?


    ಇದೀಗ ಈ ಒನ್‌ಪ್ಲಸ್‌ ನಾರ್ಡ್‌ ಸ್ಮಾರ್ಟ್‌ವಾಚ್‌ ಬಿಡುಗಡೆಯಾಗಿ ಬಹಳಷ್ಟು ಸಂಚಲನವನ್ನು ಮೂಡಿಸಿದೆ. ಈ ಸ್ಮಾರ್ಟ್‌ವಾಚ್‌ನ ಬೆಲೆ ಈಗ 4.999 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಈ ಸಾಧನದ ಮೇಲೆ ICICI ಬ್ಯಾಂಕ್ ಕಾರ್ಡ್ ಹಾಗೂ ಆಕ್ಸಿಸ್ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು 500 ರೂಪಾಯಿ ರಿಯಾಯಿತಿ ಪಡೆಯಬಹುದು. ಹಾಗೂ ಈ ಸ್ಮಾರ್ಟ್‌ವಾಚನ್ನು ಡೀಪ್ ಬ್ಲೂ ಮತ್ತು ಮಿಡ್‌ನೈಟ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ.


    ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಟ್ಟ ನೋಕಿಯಾ 2780 ಫ್ಲಿಪ್ ಫೀಚರ್ ಫೋನ್: ಬೆಲೆ, ಫೀಚರ್ ಮಾಹಿತಿ ಇಲ್ಲಿದೆ


    ಇದು ಒನ್‌ಪ್ಲಸ್‌ ಬಿಡುಗಡೆ ಮಾಡಿರುವ ಹೊಸ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ವಾಚ್‌ ಆಗಿದೆ. ಆದ್ದರಿಂದ ಇದು ಗ್ರಾಹಕರನ್ನು ಬೇಗನೆ ಆಕರ್ಷಿಸಬಹುದು ಎಂದು ಹೇಳಬಹುದಾಗಿದೆ.

    Published by:Harshith AS
    First published: