• Home
  • »
  • News
  • »
  • tech
  • »
  • Video Games: ಈ ವಿಡಿಯೋ ಗೇಮ್ಸ್​ ಆಡಿದ್ರೆ ಸುಲಭದಲ್ಲಿ ಹಣ ಗಳಿಸಬಹುದು! ಮಹಿಳೆಯರಿಗಾಗಿಯೇ ಬಂದಿದೆ ನೋಡಿ ಆಟ

Video Games: ಈ ವಿಡಿಯೋ ಗೇಮ್ಸ್​ ಆಡಿದ್ರೆ ಸುಲಭದಲ್ಲಿ ಹಣ ಗಳಿಸಬಹುದು! ಮಹಿಳೆಯರಿಗಾಗಿಯೇ ಬಂದಿದೆ ನೋಡಿ ಆಟ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಭಾರತದ ಮಹಿಳೆಯರು ಈ ವಿಡಿಯೋ ಗೇಮಿಂಗ್ ಅನ್ನು ಪೂರ್ಣ ಸಮಯದ ಉದ್ಯೋಗವನ್ನಾಗಿ ಮಾಡುವ ಮೂಲಕ ಹಣ ಸಂಪಾದಿಸುವ ಐಡಿಯಾವನ್ನು ವ್ಯಕ್ತ ಪಡಿಸಿದ್ದಾರೆ. ಈ ಮೂಲಕ ವಿಡಿಯೋ ಗೇಮಿಂಗ್​ನಲ್ಲೂ ಹಣ ಸಂಪಾದಿಸಬಹುದು ಎಂದು ತಿಳಿಸಿದ್ದಾರೆ.

  • Share this:

    ಕೊರೋನಾ ವೈರಸ್‌ನಿಂದಾಗಿ (Corona Viras) ಲಾಕ್‌ಡೌನ್ (Lockdown) ಸಮಯದಲ್ಲಿ ವಿವಿಧ ಸ್ವಉದ್ಯಮಗಳು, ಕಂಪನಿಗಳು ಮುಚ್ಚಲ್ಪಟ್ಟವು. ಆದರೆ ಕೆಲವರು ಹಣ ಸಂಪಾದಿಸಲು ಹೊಸ ಮಾರ್ಗಗಳನ್ನು ಕಂಡುಕೊಂಡು ತಮ್ಮನ್ನು ತಾನು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಲಾಕ್‌ಡೌನ್‌ನಿಂದ ಇ-ಸ್ಪೋರ್ಟ್ಸ್ ಎಂಬ ಆನ್‌ಲೈನ್ ವಿಡಿಯೊ ಗೇಮಿಂಗ್ (Video Gaming) ಮೂಲಕ ಹಣ ಗಳಿಸುವ ಅಪ್ಲಿಕೇಶನ್​ಗಳನ್ನು ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮುಖ್ಯವಾಗಿ ಪಬ್ಜಿ ಗೇಮಿಂಗ್​​ನಂತಹ (Pubg Gaming) ಆ್ಯಪ್​ಗಳು ದೊಡ್ಡ ಬಳಕೆದಾರರನ್ನು ಹೊಂದಿದೆ. ಅದೇ ರಿತಿ ಹಲವಾರು ಜನರು ಆನ್​ಲೈನ್​ ಗೇಮಿಂಗ್​ನಲ್ಲಿ ಹಣಗಳಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳುತ್ತಿದ್ದಾರೆ. ಈ ಆನ್​ಲೈನ್​ ಗೇಮಿಂಗ್ (Online Gaming) ವಲಯದಲ್ಲಿ ಇತ್ತೀಚೆಗೆ ಮಹಿಳೆಯರು ಕೂಡ ತೊಡಗಿಸಿಕೊಂಡಿದ್ದಾರೆ. 


    ಇತ್ತೀಚಿನ ದಿನಗಳಲ್ಲಿ ಭಾರತದ ಮಹಿಳೆಯರು ಈ ವೀಡಿಯೊ ಗೇಮಿಂಗ್ ಅನ್ನು ಪೂರ್ಣ ಸಮಯದ ಉದ್ಯೋಗವನ್ನಾಗಿ ಮಾಡುವ ಮೂಲಕ ಹಣ ಸಂಪಾದಿಸುವ ಐಡಿಯಾವನ್ನು ವ್ಯಕ್ತ ಪಡಿಸಿದ್ದಾರೆ. ಈ ಮೂಲಕ ವಿಡಿಯೋ ಗೇಮಿಂಗ್​ನಲ್ಲೂ ಹಣ ಸಂಪಾದಿಸಬಹುದು ಎಂದು ತಿಳಿಸಿದ್ದಾರೆ.


    ಹೆಚ್​​ಪಿ ಇಂಡಿಯಾದ ಸಮೀಕ್ಷೆಯ ವರದಿ:


    ಹೆಚ್​ಪಿ ಇಂಡಿಯಾ ಗೇಮಿಂಗ್ ಲ್ಯಾಂಡ್‌ಸ್ಕೇಪ್ ನಡೆಸಿದ ಸಮೀಕ್ಷೆಯು ಗೇಮಿಂಗ್ ಮಾತ್ರವಲ್ಲದೆ ಗೇಮಿಂಗ್ ಸಾಫ್ಟ್‌ವೇರ್ ಡೆವಲಪರ್ ಅನ್ನು ಕೂಡ ಮಾಡುತ್ತಿದೆ ಅಥವಾ ಗೇಮಿಂಗ್ ಸಂಬಂಧಿತ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಬಹಿರಂಗಪಡಿಸಿದೆ.


    ಇದನ್ನೂ ಓದಿ: ಗೂಗಲ್ ಪೇ, ಫೋನ್​ ಪೇ ಯಲ್ಲಿ ನಿಗದಿತ ಮೊತ್ತಕ್ಕಿಂತ ಜಾಸ್ತಿ ಕಳುಹಿಸಿದ್ರೆ ದಂಡ!


    ಗೇಮಿಂಗ್ ಕಂಪನಿಗಳ ವರದಿ:


    ಮನಸ್ಸನ್ನು ನಿರಾಳವಾಗಿಡಲು ಮತ್ತು ಮನರಂಜನೆಗಾಗಿ ಜನರು ಇದನ್ನು ಆಡುತ್ತಾರೆ ಎನ್ನುತ್ತಾರೆ. ಇದನ್ನು ಆಡುವುದರಿಂದ ಅವರ ಮನಸ್ಸು ಕ್ರಿಯಾಶೀಲವಾಗಿರುತ್ತದೆ ಮತ್ತು ಇತರರೊಂದಿಗೆ ಸುಲಭವಾಗಿ ಬೆರೆಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.


    ಸಾಂಕೇತಿಕ ಚಿತ್ರ


    ಅಲ್ಲದೆ ಗೇಮಿಂಗ್‌ಗೆ ಪರ್ಸನಲ್ ಕಂಪ್ಯೂಟರ್‌ಗಳು ಅತ್ಯಂತ ಅನುಕೂಲಕರ ಸಾಧನವಾಗಿದೆ ಎಂದು ಗೇಮರುಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವೈಯಕ್ತಿಕವಾಗಿ ಖರೀದಿಸುವ ಕಂಪ್ಯೂಟರ್ ವೇಗವಾದ, ಉತ್ತಮ ಗ್ರಾಫಿಕ್ಸ್ ಮತ್ತು ಉತ್ತಮ ಪ್ರದರ್ಶನಗಳನ್ನು ಹೊಂದಿರಬೇಕು. ಮತ್ತು ಇದನ್ನು ನಮ್ಮ ಇಚ್ಛೆಯಂತೆ ಅವುಗಳನ್ನು ವಿನ್ಯಾಸಗೊಳಿಸಬಹುದಾಗಿದೆ ಎಂದು ಹೇಳುತ್ತಾರೆ.


    ವಿಡಿಯೋ ಗೇಮಿಂಗ್ ಬಗ್ಗೆ ಹೆಚ್​ಪಿ ಇಂಡಿಯಾದ ನಿರ್ದೇಶಕರ ಪ್ರತಿಕ್ರಿಯೆ:


    ಈ ಕುರಿತು ಪ್ರತಿಕ್ರಿಯಿಸಿರುವ HP ಇಂಡಿಯಾದ ಮಾರ್ಕೆಟಿಂಗ್‌ನ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ, “ಭಾರತದಲ್ಲಿನ ಪಿಸಿ ಗೇಮಿಂಗ್ ಲ್ಯಾಂಡ್‌ಸ್ಕೇಪ್ ಯುವ ಪೀಳಿಗೆಗೆ ಅನೇಕ ಅವಕಾಶಗಳನ್ನು ನೀಡುತ್ತದೆ. ಒಮಾನ್ ಸಮುದಾಯದ ಮೂಲಕ ಆಟಗಾರರಿಗೆ ತಮ್ಮ ಜ್ಞಾನವನ್ನು ಹೆಚ್ಚಿಸಲು ಅಗತ್ಯವಾದ ಉಪಕರಣಗಳು, ಅವಕಾಶಗಳು ಮತ್ತು ಸ್ವಯಂ-ಸುಧಾರಣೆಯನ್ನು ಒದಗಿಸುವ ಯೋಜನೆಯಲ್ಲಿದ್ದಾರೆ ಎಂದು ಅವರು ಹೇಳಿದರು.


    ಸಾಂಕೇತಿಕ ಚಿತ್ರ


    39 ಪ್ರತಿಶತದಷ್ಟು ಮೊಬೈಲ್ ಗೇಮರ್‌ಗಳು ಪಿಸಿ ಯಲ್ಲಿ ಗೇಮಿಂಗ್ ಫೀಚರ್ಸ್​ ಹೆಚ್ಚಿರುವುದರಿಂದ ಕಾರಣದಿಂದ ಪಿಸಿ ಯನ್ನು ಹೆಚ್ಚು ಅನುಸರಿಸುತ್ತಾರೆ ಎಂದು ಹೇಳುತ್ತಾರೆ. ಇತ್ತೀಚಿನ ಅಧ್ಯಯನದ ಪ್ರಕಾರ, ಕೇವಲ ಎರಡು ಶೇಕಡಾ ಗೇಮರುಗಳು ಮಾತ್ರ ಗೇಮಿಂಗ್ ತರಬೇತಿಗಾಗಿ ಈ ಪಿಸಿಯನ್ನು ಬಳಸುತ್ತಾರೆ. ಉಳಿದವರು ತಮ್ಮ ಗೇಮಿಂಗ್ ಕಾರ್ಯಕ್ಷಮತೆ ಮತ್ತು ಗೇಮಿಂಗ್ ಕೌಶಲ್ಯಗಳನ್ನು ಸುಧಾರಿಸಲು ಗೇಮಿಂಗ್ ಸ್ಟಾರ್ ಎಂಬ ಅಪ್ಲಿಕೇಶನ್​ ಅನ್ನು ಅನುಸರಿಸುತ್ತಾರೆ ಎಂದು ವರದಿ ಮಾಡಿದ್ದಾರೆ.


    ಗೇಮಿಂಗ್​ ಸಾಫ್ಟ್​ವೇರ್​​ನಲ್ಲಿ ಅಪ್ಡೇಟ್ಸ್​:


    ಮುಂದಿನ ದಿನಗಳಲ್ಲಿ ಗೇಮಿಂಗ್ ಸಾಫ್ಟ್​ವೇರ್​ಗಳನ್ನು ಬಳಕೆದಾರರಿಗೆ ಅನುಕೂಲವಾಗುವಂತೆ ಬದಲಾವಣೆ ಮಾಡಲಿದ್ದೇವೆ. ಭವಿಷ್ಯದಲ್ಲಿ ತಂತ್ರಜ್ಞಾನ ಯುಗದಲ್ಲಿ ಹೊಸ ಗೇಮಿಂಗ್ ಅಪ್ಲಿಕೇಶನ್​ಗಳನ್ನು ತರುವಂತೆ ಯೋಜನೆಯಲ್ಲಿದ್ದೇವೆ ಎಂದು ವಿಕ್ರಮ್ ಬೇಡಿಯವರು ವರದಿಯಲ್ಲಿ ತಿಳಿಸಿದ್ದಾರೆ.​

    Published by:Prajwal B
    First published: