ಫ್ಲಿಪ್ಕಾರ್ಟ್ (Flipkart) ತನ್ನ ಬಳಕೆದಾರರಿಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಅದರಂತೆ ಇಂದಿನಿಂದ ‘ರಿಯಲ್ಮಿ ಫೆಸ್ಟಿವಲ್ ಸೇಲ್’ (Realme Festival Sale) ಆಯೋಜಿಸಿದೆ. ಇದರಲ್ಲಿ ರಿಯಲ್ಮಿ ಸ್ಮಾರ್ಟ್ಫೋನ್ಗಳ (Smartphone) ಮೇಲೆ ಭರ್ಜರಿ ರಿಯಾಯಿತಿಯ ಜೊತೆಗೆ ಕೊಡುಗೆಯನ್ನು ನೀಡಿದೆ. ಅಂದಹಾಗೆಯೇ ರಿಯಲ್ ಮಿ ಕಂಪನಿಯ 30 ಸಾವಿರ ಬೆಲೆಯ ಸ್ಮಾರ್ಟ್ಫೋನ್ವೊಂದನ್ನು ಕೇವಲ 449 ರೂ ಖರೀದಿಸುವ ಅವಕಾಶವನ್ನು ನೀಡಿದೆ.
Realme X7 Max 5ಜಿ ಸ್ಮಾರ್ಟ್ಫೊನ್ ಮೂಲ ಬೆಲೆ 29,999 ರೂ ಆಗಿದ್ದು, ಫ್ಲಿಪ್ಕಾರ್ಟ್ ಮೂಲಕ ಶೇ 10 ರಷ್ಟು ರಿಯಾಯಿತಿ ನೀಡುತ್ತಿದೆ. ಹಾಗಾಗಿ ಗ್ರಾಹಕರಿಗೆ 26,999 ರೂ.ಗೆ ಮಾರಾಟ ಮಾಡುತ್ತಿದೆ. ಜೊತೆಗೆ ಯಾವುದೇ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ ಪ್ರಿಪೇಯ್ಡ್ ಆಫರ್ನಡಿಯಲ್ಲಿ 5 ಸಾವುರ ರೂ.ಗಳ ತ್ವರಿತ ರಿಯಾಯಿತಿ ಸಿಗಲಿದೆ. ಮಾತ್ರವಲ್ಲದೆ, ಫ್ಲಿಪ್ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವವರಿಗೆ 1,100 ರೂ.ವಿನ ಕ್ಯಾಶ್ಬ್ಯಾಕ್ ಸಿಗಲಿದೆ. ಒಟ್ಟಿನಲ್ಲಿ ಗ್ರಾಹಕರು 20,899 ರೂ ಫೋನ್ ಖರೀದಿಸಬಹುದಾಗಿದೆ.
Realme X7 Max ಸ್ಮಾರ್ಟ್ಫೋನಿನ ಮೇಲೆ ವಿನಿಯಮ ಆಫರ್ ಕೂಡ ನೀಡಿದೆ. ಹಳೆಯ ಫೋನನ್ನು ಹೊಸ ಫೋನ್ನೊಂದಿದೆ ಬದಲಾಯಿಸುವ ಮೂಲಕ 20,450 ರೂ ವನ್ನು ಉಳಿಸಬಹುದಾದ ಆಯ್ಕೆಯನ್ನು ನೀಡಿದೆ. ಈ ಎಕ್ಸ್ಚೇಂಜ್ ಆಫರ್ನ ಸಂಪೂರ್ಣ ಪ್ರಯೋಜನ ಪಡೆದರೆ ಕೇವಲ 449 ರೂ.ಗೆ Realme X7 Max ಸ್ಮಾರ್ಟ್ಫೋನ್ ಖರೀದಿಸಬಹುದಾಗಿದೆ.
ಇದನ್ನು ಓದಿ: 14GB ಡೇಟಾ 28 ದಿನಗಳ ವ್ಯಾಲಿಡಿಟಿ; Jio ಪರಿಚಯಿಸಿದೆ ಆಕರ್ಷಕ ಪ್ಲಾನ್!
Realme X7 Max 5ಜಿ ಸ್ಮಾರ್ಟ್ಫೋನ್ 8ಜಿಬಿ ರ್ಯಾಮ್ ಮತ್ತು 128ಜಿಬಿ ಆಂತರಿಕ ಸ್ಟೊರೇಜ್ ಸಂಗ್ರಹಣೆಯಲ್ಲಿ ಬರುತ್ತದೆ. ಮೀಡಿಯಾಟೆಕ್ ಡೈಮನ್ಶನ್ 1200 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್ಫೋನ್ 6.43 ಇಂಚಿನ ಫುಲ್ಹೆಚ್ಡಿ+ ಸೂಪರ್ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ.
ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆಟಪ್ ಸೇರಿದಂತೆ 64 ಮೆಗಾಫಿಕ್ಸೆಲ್ ಕ್ಯಾಮೆರಾ, 8 ಮೆಗಾಫಿಕ್ಸೆಲ್ ವೈಡ್ ಆ್ಯಂಗಲ್, 2 ಮೆಗಾಫಿಕ್ಸೆಲ್ ಮ್ಯಾಕ್ರೋ ಲೆನ್ಸ್ ನೀಡಲಾಗಿದೆ. ಸೆಲ್ಪಿ ಮತ್ತು ವಿಡಿಯೋ ಮಾಡಲು 16 ಮೆಗಾಫಿಕ್ಸೆಲ್ ಕ್ಯಾಮೆರಾವಿದೆ. ಈ ಫೋನ್ ಬ್ಯಾಟರಿ 4,500 ಸಾಮರ್ಥ್ಯವನ್ನು ಹೊಂದಿದೆ.
ಇದನ್ನು ಓದಿ: ಹುಡುಕಾಡ್ರೋ ಹುಡುಕಾಡ್ರಿ! ಈ ವರ್ಷ Googleನಲ್ಲಿ ಅತಿ ಹೆಚ್ಚು ಹುಡುಕಾಡಿದ ವಿಚಾರ ಯಾವುದು ಗೊತ್ತಾ?
ಫ್ಲಿಪ್ಕಾರ್ಟ್ ಗ್ರಾಹಕರಿಗಾಗಿ ಸದಾ ಏನಾದರೊಂದು ಆಫರ್ ನೀಡುತ್ತಿರುತ್ತದೆ. ಅದರಂತೆ ಇದೀಗ ರಿಯಲ್ ಸ್ಮಾರ್ಟ್ಫೊನ್ಗಳ ಮೇಲೂ ಆಫರ್ ತೆರೆದಿಟ್ಟಿದೆ. ಕೆಲವು ಸ್ಮಾರ್ಟ್ಫೋನ್ಗಳು ಕಡಿಮೆ ಬೆಲೆಗೆ ಕೊಂಡುಕೊಳ್ಳಲು ಬಯಸಿದವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಅದರಂತೆ Realme X7 Max ಸ್ಮಾರ್ಟ್ಫೋನ್ ಕೇವಲ 449 ರೂ.ಗೆ ಖರೀದಿಗೆ ಸಿಗಲಿದೆ. ಅಂದಹಾಗೆಯೇ ಈ ಮಾರಾಟವು ಡಿಸೆಂಬರ್ 13ರವರೆಗೆ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ