ಸ್ಮಾರ್ಟ್ಫೋನ್ ಬಳಕೆ ಹೆಚ್ಚಾದಂತೆ ಸೋಶಿಯಲ್ ಮೀಡಿಯಾಗಳ (Social Media) ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ಇ-ಕಾಮರ್ಸ್ ವೆಬ್ಸೈಟ್ಗಳು ಸಹ ಭಾರೀ ಜನಪ್ರಿಯತೆಯನ್ನು ಪಡೆಯುತ್ತಿದೆ. ಇದಕ್ಕೆ ಕಾರಣ ಈ ಕಂಪೆನಿಗಳು ನೀಡುತ್ತಿರುವ ಸೌಲಭ್ಯಗಳು ಅಂತಾನೇ ಹೇಳ್ಬಹುದು. ಇದಲ್ಲದೆ ರಿಟೇಲ್ ಪ್ಲಾಟ್ಫಾರ್ಮ್ಗಳು ಸಹ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಇದೀಗ ಮನೆಯಿಂದಲೇ ನಮಗೆ ಬೇಕಾದ ಉತ್ಪನ್ನಗಳನ್ನು ಅಮೆಜಾನ್ (Amazon), ಫ್ಲಿಪ್‌ಕಾರ್ಟ್, ಹೀಗೆ ಮೊದಲಾದ ಇ-ಕಾಮರ್ಸ್ ವೆಬ್ಸೈಟ್ಗಳಿಂದ (E-Commerse Website) ಖರೀದಿಸಬಹುದು. ಅಂತೆಯೇ ಆ ವಸ್ತು ಇಷ್ಟವಾಗಲಿಲ್ಲ ಎಂದಾದರೆ ಅದನ್ನು ಮರಳಿಸುವ ಸೌಲಭ್ಯ ಕೂಡ ವೆಬ್ಸೈಟ್ಗಳಲ್ಲಿರುತ್ತದೆ.
ತಾಣಕ್ಕೆ ಆಗಾಗ್ಗೆ ಮರಳಿರುವ ಐಟಂಗಳನ್ನು ಲೇಬಲ್ ಮಾಡಲಿರುವ ಅಮೆಜಾನ್
ಅಮೆಜಾನ್ನಲ್ಲಿ ಐಟಂ ಖರೀದಿಸಿದ ನಂತರ ಒಮ್ಮೊಮ್ಮೆ ಅದರ ಗುಣಮಟ್ಟ ಸರಿಯಾಗಿರುವುದಿಲ್ಲ ಅಂತೆಯೇ ಪ್ರೊಡಕ್ಟ್ ಏನಾದರೂ ದೋಷಗಳೊಂದಿಗೆ ಡೆಲಿವರಿಯಾಗಿರುತ್ತದೆ. ಈ ಸಮಯದಲ್ಲಿ ಗ್ರಾಹಕರು ಅದನ್ನು ಮರಳಿ ಅಮೆಜಾನ್‌ಗೆ ಕಳುಹಿಸುತ್ತಾರೆ. ಇಂತಹ ಅದೆಷ್ಟೋ ಪ್ರೊಡಕ್ಟ್ಗಳು ಪ್ಲಾಟ್ಫಾರ್ಮ್ಗೆ ಆಗಾಗ ಬರುತ್ತಿರುತ್ತದೆ.
ಇದಕ್ಕಾಗಿ ಅಮೆಜಾನ್ ಗ್ರಾಹಕರು ಮರಳಿಸಿರುವ ಐಟಮ್ ಅನ್ನು, ಲೇಬಲ್ ಮೂಲಕ ಮರಳಿ ಬಂದ ಪ್ರೊಡಕ್ಟ್ ಅನ್ನು ಗ್ರಾಹಕರಿಗೆ ಸೂಚಿಸಲಿದ್ದು ಇದರಿಂದ ಗ್ರಾಹಕರು ಅದನ್ನು ಚೆಕ್ ಮಾಡಿಕೊಂಡು ಖರೀದಿಸಬಹುದು ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಅತೀ ಕಡಿಮೆ ಬೆಲೆಗೆ ಬರಲಿದೆ IPhone, ಸಖತ್ತಾಗಿದೆ ಇದರ ಫೀಚರ್ಸ್!
ಪ್ರೊಡಕ್ಟ್ ಗುಣಮಟ್ಟವನ್ನು ಗ್ರಾಹಕರು ಪರಿಶೀಲಿಸಬಹುದು
ಇದರಿಂದ ಅಂತಹ ಉತ್ಪನ್ನಗಳನ್ನು ಖರೀದಿಸುವ ಮೊದಲು ಗ್ರಾಹಕರು ರಿವೀವ್ಗಳನ್ನು ಓದುತ್ತಾರೆ ಹಾಗೂ ಯಾವ ಕಾರಣಕ್ಕಾಗಿ ಆ ಪ್ರೊಡಕ್ಟ್ ಅನ್ನು ಮತ್ತೆ ಅಮೆಜಾನ್‌ಗೆ ಮರಳಿಸಲಾಗಿದೆ ಎಂಬ ಅಂಶವನ್ನು ತಿಳಿದುಕೊಳ್ಳುತ್ತಾರೆ ಎಂದು ಅಮೆಜಾನ್ ತಿಳಿಸಿದೆ. ಗ್ರಾಹಕರು ಸೈಟ್‌ಗೆ ಆಗಾಗ ಮರಳಿಸಿದ ಐಟಂಗಳನ್ನು ಲೇಬಲ್ ಮಾಡುವುದಲ್ಲದೆ, ಗ್ರಾಹಕರಿಗೆ ಆ ಉತ್ಪನ್ನದ ನಿಖರತೆ ಹಾಗೂ ಗುಣಮಟ್ಟದ ಬಗ್ಗೆ ತಿಳಿಸುತ್ತದೆ ಎಂದು ತಾಣ ಸುದ್ದಿಮಾಧ್ಯಮಕ್ಕೆ ತಿಳಿಸಿದೆ.
ತನ್ನ ತಾಣದಲ್ಲಿ ಅದೇ ಐಟಂಗಳನ್ನು ಖರೀದಿಸಿ ಅದನ್ನು ಗ್ರಾಹಕರು ಹಿಂತಿರುಗಿಸುತ್ತಿರುವುದರ ಬಗ್ಗೆ ತೀವ್ರ ಗಮನಹರಿಸಿದೆ ಅಂತೆಯೇ ಗ್ರಾಹಕರು ಯಾವುದೇ ಉತ್ಪನ್ನಗಳನ್ನು ಖರೀದಿಸುವ ಮುನ್ನ ಆ ಉತ್ಪನ್ನದ ಬಗ್ಗೆ ಕೂಲಂಕುಷವಾಗಿ ತಿಳಿದುಕೊಂಡು ನಂತರ ಖರೀದಿಸಲು ಪ್ರಾಡಕ್ಟ್ ಲೇಬಲಿಂಗ್ ಸಹಾಯ ಮಾಡುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಗ್ರಾಹಕರಿಗೆ ಅನುಕೂಲವಾಗಲು ಅಮೆಜಾನ್ನ ಹೊಸ ಪ್ಲ್ಯಾನ್
ಗ್ರಾಹಕರು ಯಾವುದೇ ಉತ್ಪನ್ನ ಖರೀದಿಸಿದ ನಂತರ ಅದನ್ನು ಹಿಂತಿರುಗಿಸಲು ಅಮೆಜಾನ್ 30 ದಿನಗಳ ಕಾಲಾವಕಾಶ ನೀಡಿದ್ದರೂ ಇದೊಂದು ರೀತಿಯ ಕಿರಿಕಿರಿ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದೆ.
ಗ್ರಾಹಕರ ದೂರುಗಳನ್ನು ಪರಿಹರಿಸುವುದು, ಅಂತೆಯೇ ಹಿಂತಿರುಗಿದ ಉತ್ಪನ್ನಗಳ ದೋಷ ಕಂಡುಹಿಡಿಯುವುದು ಅದನ್ನು ಪರಿಹರಿಸುವುದು ಒಂದು ರೀತಿ ಬೇಸರದ ಸಂಗತಿಯಾಗಿದೆ ಅಂತೆಯೇ ಇದಕ್ಕಾಗಿ ಸಾಕಷ್ಟು ಸಮಯ ವ್ಯಯವಾಗುತ್ತದೆ ಎಂದು ಅಮೆಜಾನ್ ತಿಳಿಸಿದೆ.
ಗ್ರಾಹಕರು ಉತ್ಪನ್ನವನ್ನು ಚೆಕ್ ಮಾಡಿಕೊಂಡು ಖರೀದಿಸಬಹುದು
ಉತ್ಪನ್ನದ ಕುರಿತು ಎಚ್ಚರಿಕೆಯನ್ನು ರವಾನಿಸುವುದು ಅಂತೆಯೇ ಆಗ್ಗಾಗ ಮರಳಿಸಲಾಗಿದೆ ಎಂಬುದಾಗಿ ಲೇಬಲ್ ಮಾಡುವುದು ಗ್ರಾಹಕರು ಆ ಉತ್ಪನ್ನವನ್ನು ಖರೀದಿಸುವ ಮುನ್ನ ಉತ್ಪನ್ನದ ನಿಜವಾದ ಅಂಶವನ್ನು ತಿಳಿಸುತ್ತದೆ. ಅಂತೆಯೇ ಗ್ರಾಹಕರು ಆ ವಸ್ತುವಿನ ಗುಣಮಟ್ಟ, ಬಾಳಿಕೆಯನ್ನು ಅರಿತುಕೊಂಡು ಖರೀದಿ ಮಾಡಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಈ ವೆಬ್ಸೈಟ್ನಲ್ಲಿ ಉತ್ಪನ್ನವನ್ನು ಖರೀದಿಸುವ ಮುನ್ನ ಗ್ರಾಹಕರು ಇಂತಹ ಲೇಬಲ್‌ಗಳನ್ನು ನೋಡುವುದರಿಂದ ಉತ್ಪನ್ನದ ದೋಷವನ್ನು ಅವರು ಮನದಟ್ಟು ಮಾಡಿಕೊಳ್ಳಬಹುದು, ಅಂತೆಯೇ ಖರೀದಿಸುವುದಿಲ್ಲ. ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನೊದಗಿಸಲು ಸದಾ ಉತ್ಸುಕರಾಗಿರುವ ಅಮೆಜಾನ್ ಸೇವೆಯಲ್ಲಿ ಅಭಿವೃದ್ಧಿ ಮಾಡಲು ಒಂದಲ್ಲೊಂದು ಕ್ರಮಗಳನ್ನು ಕೈಗೊಳ್ಳುತ್ತಲೇ ಇರುತ್ತದೆ.
ಪ್ರೊಡಕ್ಟ್ ಲೇಬಲಿಂಗ್ ವೆಬ್ಸೈಟ್ನಲ್ಲಿ ಈಗಾಗಲೇ ಅಳವಡಿಸಲಾಗಿದೆ
ಮಾಹಿತಿಯ ಪ್ರಕಾರ ಅಮೆಜಾನ್ ಪೂರೈಕೆ ಮಾಡಿರುವ ಕೆಲವೊಂದು ಪ್ರೊಡಕ್ಟ್ಗಳಲ್ಲಿ ಹಿಂತಿರುಗಿಸಿರುವ ಎಚ್ಚರಿಕೆ ಈಗಾಗಲೇ ಗೋಚರವಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಎಚ್ಚರಿಕೆಯನ್ನು ಗಮನಿಸಲು ಗ್ರಾಹಕರು ತಮ್ಮ ಅಮೆಜಾನ್ ಖಾತೆಗೆ ಲಾಗಿನ್ ಆಗಬೇಕು. ಗ್ರಾಹಕರು ಖರೀದಿಸಿದ ಉತ್ಪನ್ನ ಇಷ್ಟವಾಗದಿದ್ದರೆ ಅಥವಾ ಉತ್ಪನ್ನ ಏನಾದರೂ ಸಮಸ್ಯೆಗಳನ್ನೊಳಗೊಂಡಿದ್ದರೆ ಅದನ್ನು ಉಚಿತವಾಗಿ 30 ದಿನಗಳೊಳಗೆ ಮರಳಿಸುವ ವ್ಯವಸ್ಥೆ ಇದ್ದರೂ ಪ್ರೊಡಕ್ಟ್ ಹಿಂತಿರುಗಿಸುವ ಸಮಯದಲ್ಲಿ ಗ್ರಾಹಕರು ಕೆಟ್ಟ ಅನುಭವಗಳನ್ನು ಹೊಂದಿದ್ದಾರೆ ಎಂದು ಸೈಟ್ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ