ಈ ಕಾರು ಖರೀದಿಸಲು ಕೋಟ್ಯಾಧಿಪತಿಗಳಿಗೂ ಸಾಧ್ಯವಾಗುತ್ತಿಲ್ಲ! ಯಾಕೆ ಗೊತ್ತಾ?

ಫೆರಾರಿ ಕಂಪೆನಿಯು ಲಿಮಿಟೆಡ್​ ಎಡಿಷನ್​ ಕಾರುಗಳನ್ನು ನಿರ್ಮಿಸಿದೆ. ಈ ವಿಶೇಷ ಕಾರನ್ನು ಖರೀದಿಸಲು ಹೆಚ್ಚಿನ ಗ್ರಾಹಕರು ಒಲವು ತೋರುತ್ತಾರೆ. ಹೀಗಾಗಿ ನಾವು ಒಂದು ಬಾರಿಗೆ 200 ಗ್ರಾಹಕರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ.

zahir | news18
Updated:February 4, 2019, 2:45 PM IST
ಈ ಕಾರು ಖರೀದಿಸಲು ಕೋಟ್ಯಾಧಿಪತಿಗಳಿಗೂ ಸಾಧ್ಯವಾಗುತ್ತಿಲ್ಲ! ಯಾಕೆ ಗೊತ್ತಾ?
@ClassicCars.com ಸಾಂದರ್ಭಿಕ ಚಿತ್ರ
zahir | news18
Updated: February 4, 2019, 2:45 PM IST
ಹಣದಿಂದ ಎಲ್ಲವನ್ನೂ ಸಂಪಾದಿಸಬಹುದು. ಆದರೆ ಮನಃಶಾಂತಿ ಸ್ನೇಹ ಸಂಬಂಧಗಳನ್ನು ಕೊಳ್ಳಲು ಸಾಧ್ಯವಿಲ್ಲ ಎಂಬ ನಾಣ್ಣುಡಿಯೊಂದಿದೆ. ಆದರೆ ಹಣದಿಂದ ಎಲ್ಲವನ್ನೂ ಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ. ಏಕೆಂದರೆ ವಿಶ್ವದ ಕೋಟ್ಯಾಧಿಪತಿಗಳೇ ಒಂದು ಕಾರಿಗೆ ಕ್ಯೂ ನಿಂತಿದ್ದಾರೆ. ಹೌದು ವಿಶ್ವದ ಖ್ಯಾತ ಕಾರು ಕಂಪೆನಿ ಫೆರಾರಿಯ ಹೊಸ ಕಾರನ್ನು ಖರೀದಿಸಲು ಜಗತ್ತಿನ ಬಿಲಿಯನಾಧಿಪತಿಗಳಿಗೇ ಸಾಧ್ಯವಾಗುತ್ತಿಲ್ಲವಂತೆ.

ಇಟೆಲಿಯಲ್ಲಿ ಬಿಡುಗಡೆಯಾಗಿರುವ ಅತ್ಯಾಕರ್ಷಕ ಫೆರಾರಿ ಕಾರನ್ನು ಖರೀದಿಸಲು ಬಯಸಿದರೂ ಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಈಗ ಕೋಟ್ಯಾಧಿಪತಿಗಳದ್ದು. ಏಕೆಂದರೆ ತಮ್ಮ ಕಾರಿನ ಮಾಲೀಕರನ್ನು ಆಯ್ಕೆ ಮಾಡಿಕೊಳ್ಳುವುದು ಸ್ವಂತ ಕಂಪೆನಿ. ಫೆರಾರಿ ಹೊರ ತಂದಿರುವ ಹೊಸ ಕಾರು ಅದೃಷ್ಟವಿದ್ದವರಿಗೆ ಮಾತ್ರ ಸಿಗಲಿದೆ ಎಂದಿದ್ದಾರೆ ಫೆರಾರಿಯ ಮಾರ್ಕೆಂಟಿಂಗ್ ಅಧಿಕಾರಿ ಎನ್ರಿಕೊ ಗ್ಯಾಲಿಯೆರಾ ತಿಳಿಸಿದ್ದಾರೆ.

ಕಂಪೆನಿಯಿಂದಲೇ ಗ್ರಾಹಕರ ಆಯ್ಕೆ

ಫೆರಾರಿ ಕಂಪೆನಿಯು ಲಿಮಿಟೆಡ್​ ಎಡಿಷನ್​ ಕಾರುಗಳನ್ನು ನಿರ್ಮಿಸಿದೆ. ಈ ವಿಶೇಷ ಕಾರನ್ನು ಖರೀದಿಸಲು ಹೆಚ್ಚಿನ ಗ್ರಾಹಕರು ಒಲವು ತೋರುತ್ತಾರೆ. ಹೀಗಾಗಿ ನಾವು ಒಂದು ಬಾರಿಗೆ 200 ಗ್ರಾಹಕರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಇದರಿಂದ ಅದೃಷ್ಟ ಇದ್ದವರಿಗೆ ಮಾತ್ರ ಕಾರು ಕೊಂಡುಕೊಳ್ಳುವ ಭಾಗ್ಯ ಸಿಗುತ್ತದೆ. ಇಂತಹ ಸನ್ನಿವೇಶದಲ್ಲಿ ಹಲವು ದೊಡ್ಡ ದೊಡ್ಡ ಶ್ರೀಮಂತರು ಪಟ್ಟಿಯಲ್ಲಿರುವುದಿಲ್ಲ. ಅವರಿಗೆ ಕಾರು ಖರೀದಿಸಲು ಮನಸ್ಸಿದ್ದರೂ, ಅದರ ಅದೃಷ್ಟ ಒಲಿದಿರುವುದಿಲ್ಲ ಎಂದು ಫೆರಾರಿಯ ಮಾರ್ಕೆಟಿಂಗ್ ಮತ್ತು ಕಮರ್ಷಿಯಲ್ ಆಫಿಸರ್ ಎನ್ರಿಕೊ ಗ್ಯಾಲಿಯೆರಾ ತಿಳಿಸಿದ್ದಾರೆ.

ಇದನ್ನೂ ಓದಿ: ಸುಮಲತಾ ಅವರಿಗೆ ಟಿಕೆಟ್​ ನೀಡಿ, ಗೆಲ್ಲಿಸಿ ಕೊಡುವ ಭರವಸೆ ನನ್ನದು: ಮಾಜಿ ಸಿಎಂ ಸಿದ್ಧರಾಮಯ್ಯಗೆ ನಟ ದರ್ಶನ್ ಮನವಿ?

ನಾವು ಆಯ್ಕೆ ಮಾಡಿಕೊಂಡ ಗ್ರಾಹಕರಿಗೆ ಮೇಲ್​ ಮೂಲಕ ಕಾರಿನ ಕೀ ಅನ್ನು ಕಳುಹಿಸುತ್ತೇವೆ. ಹೀಗೆ ಅದೃಷ್ಟ ಪಡೆದ ಗ್ರಾಹಕರಲ್ಲಿ ಹೆಚ್ಚಿನವರು ಯಾವ ಕಾರೆಂದೂ ಕೂಡ ನೋಡಿರುವುದಿಲ್ಲ. ಆದರೂ ವಿಶೇಷ ಆವೃತ್ತಿಯ ಕಾರನ್ನು ಖರೀದಿಸಲು ಇಚ್ಛಿಸುತ್ತಾರೆ. ಹೀಗಾಗಿ ಕೋಟ್ಯಾಧಿಪತಿಗಳೇ ಫೆರಾರಿಯ ಲಿಮಿಟೆಡ್​ ಎಡಿಷನ್​ ಕಾರನ್ನು ಕೊಂಡುಕೊಳ್ಳಲಾಗದೇ ಪರದಾಡುವಂತಾಗಿದೆ ಎಂದು ಗ್ಯಾಲಿಯೆರಾ ತಿಳಿಸಿದ್ದಾರೆ.

ಇದನ್ನೂ ಓದಿ: ಹೆಚ್ಎಎಲ್ ನೇಮಕಾತಿ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
First published:February 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ