ಹೊಸ ವರ್ಷಾರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಮತ್ತೊಂದೆಡೆ 2020ರ ವರ್ಷಾಂತ್ಯದಲ್ಲಿದ್ದೇವೆ. ಈ ಸಮಯದಲ್ಲಿ ಹೋಂಡಾ ಕಾರು ಕಂಪನಿ ತನ್ನ ಕಾರುಗಳ ಮೇಲೆ ವರ್ಷಾಂತ್ಯದ ಡಿಸ್ಕೌಂಟ್ ಹೊರಡಿಸಿದೆ. ಕಡಿಮೆ ಬೆಲೆಗೆ ಕಾರುಗಳನ್ನು ಮಾರಾಟ ಮಾಡುತ್ತಿದೆ. ಸುಮಾರು 2.5 ಲಕ್ಷದವರೆಗೆ ಬೆನಿಫಿಟ್ ನೀಡುತ್ತಿದೆ.
ಹೊಂಡಾ ಅಮೇಜ್, ಜಾಜ್, ಡಬ್ಲ್ಯು-ವಿ, ಸಿವಿಕ್ ಕಾರುಗಳ ಮೇಲೆ ಡಿಸ್ಕೌಂಟ್ ನೀಡಿದೆ. ಡಿಸೆಂಬರ್ ತಿಂಗಳಾಂತ್ಯದವರೆಗೆ ಈ ಆಫರ್ ನೀಡುತ್ತಿದೆ. 15 ಸಾವಿರದಿಂದ ಪ್ರಾರಂಭವಾಗಿ 2.5ಲಕ್ಷದವರೆಗೆ ಬೆನಿಫಿಟ್ಸ್ ಒದಗಿಸುತ್ತಿದೆ.
ಹೋಂಡಾ ಅಮೇಜ್: ಅಮೇಜ್ ಕಾರಿನ ಮೇಲೆ 37 ಸಾವಿರದಷ್ಟು ಕ್ಯಾಶ್ ಬೆನಿಫಿಟ್ ಮತ್ತು ಡಿಸ್ಕೌಂಟ್ ಒದಗಿಸುತ್ತಿದೆ. ಪೆಟ್ರೋಲ್ ಮತ್ತು ಡಿಸೇಲ್ ಎರಡು ವೇರಿಯಂಟ್ನಲ್ಲಿ ಸಿಗುತ್ತಿದೆ. ಇನ್ನು 10 ಸಾವಿರದಷ್ಟು ಎಕ್ಸ್ಚೇಂಜ್ ಬೆನಿಫಿಟ್ ಒದಗಿಸುತ್ತಿದೆ.
ಹೋಂಡಾ ಅಮೇಜ್ ಸ್ಪೆಷಲ್ ಎಡಿಷನ್: ಈ ಕಾರಿನ ಮೇಲೆ 15 ಸಾವಿರ ಎಕ್ಸ್ಚೇಂಜ್ ಆಫರ್ ನೀಡುತ್ತಿದೆ. 7 ಸಾವಿರ ಕ್ಯಾಶ್ ಡಿಸ್ಕೌಂಟ್ ಜೊತೆಗೆ ಎಕ್ಸ್ಚೇಂಜ್ ಬೆನಿಫಿಟ್ ಒದಗಿಸುತ್ತಿದೆ. ಪೆಟ್ರೋಲ್ ಮತ್ತು ಡಿಸೇಲ್ ವೆರಿಯಂಟ್ನಲ್ಲಿ ಈ ಕಾರನ್ನು ಮಾರಾಟ ಮಾಡುತ್ತಿದೆ.
ಹೋಂಡಾ ಅಮೇಜ್ ಎಕ್ಸಿಕ್ಲೂಸಿವ್ ಎಡಿಷನ್: ಈ ಕಾರಿನ ಮೇಲೆ 27 ಸಾವಿರದಷ್ಟು ಉಳಿತಾಯ ಮಾಡುವ ಆಯ್ಕೆಯನ್ನು ನೀಡುತ್ತಿದೆ. ಪೆಟ್ರೋಲ್ ಮತ್ತು ಡಿಸೇಲ್ ಎರಡು ಆಯ್ಕೆಯಲ್ಲಿ ಈ ಕಾರನ್ನು ಮಾರಾಟ ಮಾಡುತ್ತಿದೆ. ಜೊತೆಗೆ 12 ಸಾವಿರದಷ್ಟು ಕ್ಯಾಶ್ ಡಿಸ್ಕೌಂಟ್ ನೀಡುತ್ತಿದೆ. 15 ಸಾವಿರ ಎಕ್ಸ್ಚೇಂಜ್ ಬೋನಸ್ ನೀಡುತ್ತಿದೆ.
ಹೋಂಡಾ ಸಿಟಿ 5th ಜನರೇಶನ್: ಈ ಕಾರಿನ ಮೇಲೆ 30 ಸಾವಿರ ಎಕ್ಸ್ಚೇಂಜ್ ಆಫರ್ ನೀಡುತ್ತಿದೆ. ಪೆಟ್ರೋಲ್ ಮತ್ತು ಡಿಸೇಲ್ ಎರಡು ವೇರಿಯಂಟ್ನಲ್ಲಿ ಸಿಗುತ್ತಿದೆ.
ಹೋಂಡಾ ಡಬ್ಲ್ಯುಆರ್-ವಿ: ಈ ಕಾರಿನ ಮೇಲೆ 40 ಸಾವಿರದ ಉಳಿತಾಯ ಮಾಡಬಹುದಾಗಿದೆ. ಪೆಟ್ರೋಲ್ ಮತ್ತು ಡಿಸೇಲ್ ಎರಡು ವೇರಿಯಂಟ್ನಲ್ಲಿ ಸಿಗುತ್ತಿದೆ. 25 ಸಾವಿರ ಕ್ಯಾಶ್ ಡಿಸ್ಕೌಂಟ್ಸಿಗಲಿದೆ. ಜೊತೆಗೆ 15 ಸಾವಿರ ಎಕ್ಸ್ಚೇಂಜ್ ಬೋನಸ್ ನೀಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ