HOME » NEWS » Tech » YEAR END DISCOUNTS 2020 SAVE UPTO RS 2 5 LAKH ON A HONDA CIVIC CITY JAZZ AND MORE HG

Year-end discounts 2020: ಹೋಂಡಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್​!

ಹೊಂಡಾ ಅಮೇಜ್​, ಜಾಜ್​, ಡಬ್ಲ್ಯು-ವಿ, ಸಿವಿಕ್​ ಕಾರುಗಳ ಮೇಲೆ ಡಿಸ್ಕೌಂಟ್​ ನೀಡಿದೆ. ಡಿಸೆಂಬರ್​​ ತಿಂಗಳಾಂತ್ಯದವರೆಗೆ ಈ ಆಫರ್​ ನೀಡುತ್ತಿದೆ. 15 ಸಾವಿರದಿಂದ ಪ್ರಾರಂಭವಾಗಿ 2.5ಲಕ್ಷದವರೆಗೆ ಬೆನಿಫಿಟ್ಸ್​​ ಒದಗಿಸುತ್ತಿದೆ.

news18-kannada
Updated:December 5, 2020, 8:54 PM IST
Year-end discounts 2020: ಹೋಂಡಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್​!
Honda Car
  • Share this:
ಹೊಸ ವರ್ಷಾರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಮತ್ತೊಂದೆಡೆ 2020ರ ವರ್ಷಾಂತ್ಯದಲ್ಲಿದ್ದೇವೆ. ಈ ಸಮಯದಲ್ಲಿ ಹೋಂಡಾ ಕಾರು ಕಂಪನಿ ತನ್ನ ಕಾರುಗಳ ಮೇಲೆ ವರ್ಷಾಂತ್ಯದ ಡಿಸ್ಕೌಂಟ್​ ಹೊರಡಿಸಿದೆ. ಕಡಿಮೆ ಬೆಲೆಗೆ ಕಾರುಗಳನ್ನು ಮಾರಾಟ ಮಾಡುತ್ತಿದೆ. ಸುಮಾರು 2.5 ಲಕ್ಷದವರೆಗೆ ಬೆನಿಫಿಟ್​ ನೀಡುತ್ತಿದೆ.

ಹೊಂಡಾ ಅಮೇಜ್​, ಜಾಜ್​, ಡಬ್ಲ್ಯು-ವಿ, ಸಿವಿಕ್​ ಕಾರುಗಳ ಮೇಲೆ ಡಿಸ್ಕೌಂಟ್​ ನೀಡಿದೆ. ಡಿಸೆಂಬರ್​​ ತಿಂಗಳಾಂತ್ಯದವರೆಗೆ ಈ ಆಫರ್​ ನೀಡುತ್ತಿದೆ. 15 ಸಾವಿರದಿಂದ ಪ್ರಾರಂಭವಾಗಿ 2.5ಲಕ್ಷದವರೆಗೆ ಬೆನಿಫಿಟ್ಸ್​​ ಒದಗಿಸುತ್ತಿದೆ.

ಹೋಂಡಾ ಅಮೇಜ್​: ಅಮೇಜ್​ ಕಾರಿನ ಮೇಲೆ 37 ಸಾವಿರದಷ್ಟು ಕ್ಯಾಶ್​​ ಬೆನಿಫಿಟ್​  ಮತ್ತು ಡಿಸ್ಕೌಂಟ್​ ಒದಗಿಸುತ್ತಿದೆ. ಪೆಟ್ರೋಲ್​ ಮತ್ತು ಡಿಸೇಲ್​ ಎರಡು ವೇರಿಯಂಟ್​ನಲ್ಲಿ ಸಿಗುತ್ತಿದೆ. ಇನ್ನು 10 ಸಾವಿರದಷ್ಟು ಎಕ್ಸ್​ಚೇಂಜ್​ ಬೆನಿಫಿಟ್​ ಒದಗಿಸುತ್ತಿದೆ.

ಹೋಂಡಾ ಅಮೇಜ್​ ಸ್ಪೆಷಲ್​ ಎಡಿಷನ್​: ಈ ಕಾರಿನ ಮೇಲೆ 15 ಸಾವಿರ ಎಕ್ಸ್​ಚೇಂಜ್ ಆಫರ್​ ನೀಡುತ್ತಿದೆ. 7 ಸಾವಿರ ಕ್ಯಾಶ್​ ಡಿಸ್ಕೌಂಟ್​​ ಜೊತೆಗೆ ಎಕ್ಸ್​ಚೇಂಜ್ ಬೆನಿಫಿಟ್​ ಒದಗಿಸುತ್ತಿದೆ. ಪೆಟ್ರೋಲ್​​ ಮತ್ತು ಡಿಸೇಲ್​ ವೆರಿಯಂಟ್​ನಲ್ಲಿ ಈ ಕಾರನ್ನು ಮಾರಾಟ ಮಾಡುತ್ತಿದೆ.

ಹೋಂಡಾ ಅಮೇಜ್​ ಎಕ್ಸಿಕ್ಲೂಸಿವ್​ ಎಡಿಷನ್​: ಈ ಕಾರಿನ ಮೇಲೆ 27 ಸಾವಿರದಷ್ಟು ಉಳಿತಾಯ ಮಾಡುವ ಆಯ್ಕೆಯನ್ನು ನೀಡುತ್ತಿದೆ. ಪೆಟ್ರೋಲ್ ಮತ್ತು ಡಿಸೇಲ್​ ಎರಡು ಆಯ್ಕೆಯಲ್ಲಿ ಈ ಕಾರನ್ನು ಮಾರಾಟ ಮಾಡುತ್ತಿದೆ. ಜೊತೆಗೆ 12 ಸಾವಿರದಷ್ಟು ಕ್ಯಾಶ್​ ಡಿಸ್ಕೌಂಟ್​ ನೀಡುತ್ತಿದೆ. 15 ಸಾವಿರ ಎಕ್ಸ್​ಚೇಂಜ್​ ಬೋನಸ್​ ನೀಡುತ್ತಿದೆ.

ಹೋಂಡಾ ಸಿಟಿ 5th ಜನರೇಶನ್​: ಈ ಕಾರಿನ ಮೇಲೆ 30 ಸಾವಿರ ಎಕ್ಸ್​ಚೇಂಜ್​ ಆಫರ್​ ನೀಡುತ್ತಿದೆ. ಪೆಟ್ರೋಲ್​ ಮತ್ತು ಡಿಸೇಲ್​ ಎರಡು ವೇರಿಯಂಟ್​ನಲ್ಲಿ ಸಿಗುತ್ತಿದೆ.

ಹೋಂಡಾ ಡಬ್ಲ್ಯುಆರ್-ವಿ​​:​ ಈ ಕಾರಿನ ಮೇಲೆ 40 ಸಾವಿರದ ಉಳಿತಾಯ ಮಾಡಬಹುದಾಗಿದೆ. ಪೆಟ್ರೋಲ್​ ಮತ್ತು ಡಿಸೇಲ್​ ಎರಡು ವೇರಿಯಂಟ್​ನಲ್ಲಿ ಸಿಗುತ್ತಿದೆ.  25 ಸಾವಿರ ಕ್ಯಾಶ್​ ಡಿಸ್ಕೌಂಟ್​ಸಿಗಲಿದೆ. ಜೊತೆಗೆ 15 ಸಾವಿರ ಎಕ್ಸ್​ಚೇಂಜ್​ ಬೋನಸ್​ ನೀಡುತ್ತಿದೆ.

ಹೋಂಡಾ ಸಿವಿಕ್​: ಈ ಕಾರಿನ ಮೇಲೆ 1 ಲಕ್ಷದವರೆಗೆ ಉಳಿತಾದ ಮಾಡಬಹುದಾಗಿದೆ.
Published by: Harshith AS
First published: December 5, 2020, 8:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories