news18-kannada Updated:December 22, 2020, 7:53 PM IST
ಹೋಂಡಾ ಹೈನೆಸ್ CB350
ಇದೇ ವರ್ಷ ಹೋಂಡಾ ಕಂಪನಿ ಹೈನೆಸ್ CB350 ಬೈಕನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಬೈಕ್ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಮತ್ತು ಮೆಟೋರ್ 350 ಬೈಕಿಗೆ ಪ್ರತಿಸ್ಪರ್ಧಿಯಾಗಿದ್ದು, ಭಾರತೀಯ ಗ್ರಾಹಕರಿಗೆ 1.85 ಲಕ್ಷ ರೂ.ಗೆ ಮಾರಾಟ ಮಾಡುತ್ತಿದೆ. ಅಂತೆಯೇ ಪ್ರಿಮಿಯಂ ಡಿಎಲ್ಎಕ್ಸ್ ಪ್ರೊ ಟ್ರಿಮ್ 1.90 ಲಕ್ಷ ರೂ.ಗೆ ಮಾರಾಟ ಮಾಡುತ್ತಿದೆ. ಆದರೆ ಇದೀಗ ಹೋಂಡಾ ಹೈನೆಸ್ ಬೈಕ್ CB350 ಮೇಲೆ ಇಯರ್ ಎಂಡ್ ಡಿಸ್ಕೌಂಟ್ ಹೊರಡಿಸಿದೆ. ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ.
ಹೊಸ ವರ್ಷಾರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಮತ್ತೊಂದೆಡೆ ಕೆಲವು ವಾಹನ ತಯಾರಿಕ ಕಂಪನಿಗಳು ವರ್ಷಾಂತ್ಯದ ಆಫರ್ ಹೊರಡಿಸಿದೆ. ಅದರಂತೆ ಹೋಂಡಾ ಹೈನೆಸ್ CB350 ಬೈಕಿನ ಮೇಲೆ ಆಫರ್ ನೀಡಿದೆ. ಆದರೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಟ್ ಇಎಮ್ಐ ಟ್ರಾನ್ಸಾಕ್ಷನ್ ಮಾಡಿದವರಿಗೆ ಮಾತ್ರ ಈ ಅಫರ್ ಸಿಗಲಿದೆ. ಡಿಸೆಂಬರ್ 31ರವರೆಗೆ ಡಿಸ್ಕೌಂಟ್ ಒದಗಿಸಿದ್ದು, ಯೆಸ್ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಫೆಡರಲ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಹೋಂಡಾ ಹೈನೆಸ್ CB350 ಬೈಕ್ 348ಸಿಸಿ ಹೊಂದಿದ್ದು, ಏರ್-ಕೂಲ್ಡ್ ಎಂಜಿನ್ ಹೊಂದಿದೆ. ಫೈವ್ ಸ್ಟೀಡ್ ಟ್ರಾನ್ಸ್ಮಿಷನ್ ಇದಾಗಿದ್ದು, 21 ಹೆಚ್ಪಿ ಪವರ್ ಜೊತೆಗೆ 30 ಎನ್ಎಮ್ ಟಾರ್ಕ್ ಉತ್ಪಾದಿಸುತ್ತದೆ.
ಈ ಬೈಕಿನಲ್ಲಿ ಎಲ್ಡಿ ಹೆಡ್ಲ್ಯಾಂಪ್ ಅಳವಡಿಸಲಾಗಿದೆ. ಎಲ್ಇಡಿ ಇಂಡಿಕೇಟರ್ ನೀಡಲಾಗಿದೆ. ಬ್ಲೂಟೂತ್ ಸ್ಮಾರ್ಟ್ಫೋನ್ ಕನೆಕ್ಟಿವಿಟಿ ಹೊಂದಿದೆ.
Published by:
Harshith AS
First published:
December 22, 2020, 7:52 PM IST