HOME » NEWS » Tech » YAMAHA UNVEILS SPECIAL FINANCIAL SCHEME FOR COVID 19 FRONTLINE WORKERS IN INDIA HG

ಕೊರೋನಾ ವಿರುದ್ಧ ಹಗಲಿರುಳು ದುಡಿಯುತ್ತಿರುವ ವಾರಿಯರ್ಸ್​ಗೆ ಯಮಹಾ ನೀಡಿದೆ ಭರ್ಜರಿ ಆಫರ್​!

Yamaha: ಕೊರೋನಾ ವಾರಿಯರರ್ಸ್​ಗಾಗಿ ಯಮಹಾ ಈ ಆಫರ್​ ಅನ್ನು ಜುಲೈ 31ರ ವರೆಗೆ ನೀಡುತ್ತಿದೆ. ಭಾರತದ ಎಲ್ಲಾ ಯಮಹಾ ಶೋರೂಂಗಳು ಈ ಆಫರ್​ ಅನ್ನು ನೀಡುತ್ತಿದೆ.

news18-kannada
Updated:July 7, 2020, 8:46 PM IST
ಕೊರೋನಾ ವಿರುದ್ಧ ಹಗಲಿರುಳು ದುಡಿಯುತ್ತಿರುವ ವಾರಿಯರ್ಸ್​ಗೆ ಯಮಹಾ ನೀಡಿದೆ ಭರ್ಜರಿ ಆಫರ್​!
ಯಮಹಾ
  • Share this:
ದೇಶದಲ್ಲಿ ಮಹಾಮಾರಿ ಕೊರೋನಾ ಅವಾಂತರ ದಿನೇ ದಿನೇ ಹೆಚ್ಚಾಗುತ್ತಿದೆ. ಅನೇಕರು ಸಾವನ್ಪಪ್ಪುತ್ತಿದ್ದಾರೆ. ಮತ್ತೊಂದೆಡೆ ಜನರನ್ನು ಜಾಗೃತಿಗೊಳಿಸುವಲ್ಲಿ ಕೊರೋನಾ ವಾರಿಯರ್ಸ್​ ಹರಸಾಹಸ ಪಡುತ್ತಿದ್ದಾರೆ. ಪೊಲೀಸರು, ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು ಕೊರೋನಾ ಬಗ್ಗೆ ಎಚ್ಚರಿಸುತ್ತಾ ಜನರನ್ನು ಸುರಕ್ಷಿತವಾಗಿರಿಸಲು ಹೋರಾಡುತ್ತಿದ್ದಾರೆ. ಇದೀಗ ಅವರಿಗಾಗಿ ಯಮಹಾ ಇಂಡಿಯಾ ವಿಶೇಷ ರಿಯಾಯಿತಿಯನ್ನು ಘೋಷಿಸಿದೆ.

ವಾಹನ ಉತ್ಪಾದಕ ಕಂಪೆನಿಯಾದ ಯಮಹಾ ಫ್ರಂಟ್​ಲೈನ್​​ ಕೊರೋನಾ ವಾರಿಯರ್ಸ್​ಗಾಗಿ ಇಂತಹದೊಂದು ಆಫರ್​ ಘೋಷಿಸಿದೆ. ಕೊರೋನಾ ವಾರಿಯರ್ಸ್​ ಯಾವುದೇ ವಾಹನ ಖರೀದಿಸಿದರೆ ಅವರ ಆರಂಭಿಕ ಇಎಂ​ಐನಲ್ಲಿ ಶೇಕಡಾ 50ರಷ್ಟು ಕಡಿತ ಮಾಡುತ್ತಿದೆ.

ಅಂದರೆ ಮೊದಲ 3 ತಿಂಗಳ ಇಎಂಐಯ ಅರ್ಧದಷ್ಟು ಬೆಲೆಯನ್ನು ಪಾವತಿ ಮಾಡಬೇಕು. ನಂತರ ಪೂರ್ಣ ಇಎಮ್​ಐಯನ್ನು ಪಾವತಿ ಮಾಡಬೇಕಿದೆ.

ಕೊರೋನಾ ವಾರಿಯರರ್ಸ್​ಗಾಗಿ ಯಮಹಾ ಈ ಆಫರ್​ ಅನ್ನು ಜುಲೈ 31ರ ವರೆಗೆ ನೀಡುತ್ತಿದೆ. ಭಾರತದ ಎಲ್ಲಾ ಯಮಹಾ ಶೋರೂಂಗಳು ಈ ಆಫರ್​ ಅನ್ನು ನೀಡುತ್ತಿದೆ.

Tiktok Ban: ಟಿಕ್​ಟಾಕ್ ರೀತಿಯಲ್ಲೇ ಫೀಚರ್ ನೀಡಲು ಮುಂದಾದ ಫೇಸ್​ಬುಕ್, ಇನ್​​ಸ್ಟಾಗ್ರಾಂ?

Renault Kwid RXL: ರೆನಾಲ್ಟ್​​ ಕ್ವಿಡ್ ನೂತನ ಕಾರು ಬಿಡುಗಡೆ; ಬೆಲೆ 4.16 ಲಕ್ಷ!

Law: ‘ಲಾ’ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ಪುನೀತ್ ರಾಜ್​​ಕುಮಾರ್!; ಏನದು?
Published by: Harshith AS
First published: July 7, 2020, 8:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories