ಹೊಸ ವರ್ಷದ (New Year) ಆಗಮನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಮತ್ತೊಂದೆಡೆ ಹೊಸ ವರ್ಷವನ್ನು ಜನರು ಬರಮಾಡಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಹೀಗಿರುವಾಗ ಕೊರೋನಾ (Covid), ಓಮಿಕ್ರಾನ್ (omicron) ಎಂಬ ಭಯವೂ ಜನರನ್ನು ಆವರಿಸಿದೆ. ಮುಂದಿನ ವರ್ಷ ಸ್ಥಿತಿಗಳು ಸುಖಕರವಾಗಿರಲಿದೆ ಜನರು ಎಂದು ಬಯಸುತ್ತಿದ್ದಾರೆ. ಮತ್ತೊಂದೆಡೆ ಕೊರೋನಾ ಕುರಿತಾಗಿ, ಲಸಿಕೆ (Vaccine) ಕುರಿತಾಗಿ ಮಾಧ್ಯಮಗಳು ಮಾಹಿತಿ ಬಿತ್ತರ ಮಾಡುತ್ತಿದೆ. ಸರ್ಕಾರ ಕೂಡ ಹೆಚ್ಚಿನ ನಿಗಾ ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಕೊರೋನಾವನ್ನು ದೇಶದಿಂದ ಓಡಿಸುವ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಿದ್ದರು, ಕೊರೋನಾ ಲಸಿಕೆ ಇನ್ನಿತರ ವಿಚಾರಗಳ ಕುರಿತು ಕೆಲವು ವೇದಿಕೆಗಳಲ್ಲಿ ತಪ್ಪಾದ ಮಾಹಿತಿ ಹರಡಿಸಿ ಜನರನ್ನು ಮತ್ತಷ್ಟು ಭಯದ ವಾತವರಕ್ಕೆ ತಳ್ಳುವ ಮತ್ತು ದಿಕ್ಕು ತಪ್ಪಿಸುವ ಕೆಲಸವು ನಡೆಯುತ್ತಿದೆ. ಅದರಂತೆ ಈ ವರ್ಷ ಅತಿ ಹೆಚ್ಚು ಸರ್ಚ್ ಆಗಿರುವ ಸುಳ್ಳು ಸುದ್ದಿಗಳ (Fake News) ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಹಾಗಿದ್ದರೆ, ಯಾವೆಲ್ಲಾ ಸುಳ್ಳು ಸುದ್ದಿಗಳ ಬಗ್ಗೆ ಜನರು ಗೊಂದಲಕ್ಕೀಡಾಗಿ ಸರ್ಚ್ ಮಾಡಿದ್ದರು ಗೊತ್ತಾ?
ಕೊರೋನಾ ಲಸಿಕೆ
ಪ್ರತಿಯೊಬ್ಬರು ಕೊರೋನಾ ಲಸಿಕೆ ಪಡೆಯುವ ಮೂಲಕ ದೇಶವನ್ನು ಕೊರೋನಾ ಮುಕ್ತವನ್ನಾಗಿ ಮಾಡಲು ಸರ್ಕಾರ ಕಾರ್ಯಕೈಗೊಂಡಿರುವಾಗ, ಲಸಿಕೆ ಕುರಿತಂತೆ ಸಾಕಷ್ಟು ಸುದ್ದಿಗಳು ಕೆಲವು ವೇದಿಕೆಯಲ್ಲಿ ಪ್ರಸಾರವಾಗಿತ್ತು. ಅದರಲ್ಲೂ ಪ್ರಮುಖವಾಗಿ ಕೊರೋನಾ ಲಸಿಕೆಯಿಂದಾಗುವ ಅಡ್ಡಪರಿಣಾಮಗಳು, ವಾಕ್ಸಿನ್ ಪಡೆದರೆ ಸಾವನ್ನಪ್ಪುತ್ತಾರೆಯೇ? ಇಂತಹ ಹಲವಾರು ಪ್ರಶ್ನೆಗಳು ಜನರ ತಲೆ ಹೊಕ್ಕಿತ್ತು. ಹಾಗಾಗಿ ಈ ವಿಚಾರಗಳನ್ನು ಇಂಟರ್ನೆಟ್ನಲ್ಲಿ ಸರ್ಚ್ ಮಾಡಿದ್ದಾರೆ. Yahoo (ಸರ್ಚ್ ಎಂಜಿನ್) ಈ ವರ್ಷ ಇಂಟರ್ನೆಟ್ನಲ್ಲಿ ಸರ್ಚ್ ಮಾಡಲಾದ ಪ್ರಮುಖ ಸಂಗತಿಗಳನ್ನು ತೆರೆದಿಟ್ಟಿದ್ದು, ಅದರಲ್ಲಿ ಅತಿ ಹೆಚ್ಚು ಹುಡುಕಾಡಿದ ಫೇಕ್ ಸುದ್ದಿಗಳಲ್ಲಿ ಕೊರೋನಾ ವಾಕ್ಸಿನ್ ಕುರಿತಾದ ಅಡ್ಡಪರಿಣಾಮಗಳ ಬಗ್ಗೆ ಹುಡುಕಾಡಿದ್ದಾರೆ ಎಂದಿದೆ.
ಪೂನಂ ಪಾಂಡೆ
ಬಾಲಿವುಡ್ ನಟಿ ಪೂನಂ ಪಾಂಡೆ ಕುರಿತಾಗಿ ಆಗಾಗ ಸುದ್ದಿಗಳು ಹರಿದಾಡುತ್ತಿರುತ್ತದೆ. ಅದರಲ್ಲೂ ಮೈ ಮಾಟ ಪ್ರದರ್ಶಿಸುತ್ತಾ ಇಂಟರ್ನೆಟ್ನಲ್ಲಿ ಆಗಾಗ ಫೋಟೋ ಹಂಚಿಕೊಳ್ಳುವ ಈ ನಟಿ ಕೆಲವೊಮ್ಮೆ ವಿವಾದಗಳನ್ನು ಎಳೆದುಕೊಳ್ಳುತ್ತಿರುತ್ತಾಳೆ. ಪೂನಂ ಪಾಂಡೆ ಅವರು ಸ್ಯಾಮ್ ಬಾಂಬೆಯನ್ನು ವಿವಾಹವಾದ ಬಳಿಕ ಆಕೆಯ ಬಗ್ಗೆ ಹಲವಾರು ಸುದ್ದಿಗಳು ವೈರಲ್ ಆಗಿತ್ತು. ಅದರಲ್ಲೂ ಸ್ಯಾಮ್ ಬಾಂಬೆ ಆಕೆಗೆ ಹೊಡೆದು ಆಸ್ಪತ್ರೆಗೆ ಸೇರಿದ್ದಾಳೆ ಎಂಬ ಸುಳ್ಳು ಮಾಹಿತಿ ವೈರಲ್ ಆಗಿತ್ತು. ಹಾಗಾಗಿ Yahoo ಪೂನಂ ಕುರಿತಾಗಿ ಜನರು ಸರ್ಚ್ ಮಾಡಿದ ಸುಳ್ಳು ಸುದ್ದಿಗಳಲ್ಲಿ ಇದು ಕೂಡ ಒಂದು ಎಂದಿದೆ.
ಇದನ್ನು ಓದಿ: Indians searched for in 2021: ಭಾರತೀಯರು ಈ ವರ್ಷ ಸುಮ್ನೆ ಕೂತಿಲ್ಲ! ಇಂಟರ್ನೆಟ್ನಲ್ಲಿ ಏನೆಲ್ಲಾ ಹುಡುಕಾಡಿದ್ದಾರೆ ಗೊತ್ತಾ?
ಇದನ್ನು ಓದಿ: ಒಂದು ಬಾರಿ ಚಾರ್ಜ್ ಮಾಡಿದರೆ 7 ದಿನಗಳ ಕಾಲ ಬಳಸಬಹುದು; Realme ಪರಿಚಯಿಸಿದೆ ಹೊಸ ಸ್ಮಾರ್ಟ್ವಾಚ್
ಕೊರೊನಿಲ್
ಪ್ರಾರಂಭದಲ್ಲಿ ಕೊರೊನಿಲ್ ಅನ್ನು ಕೊರೋನಾ ವೈರಸ್ ಚಿಕಿತ್ಸೆಗೆ ಯೋಗ್ಯವಾಗದ ಔಷಧ ಎಂದು ಪ್ರಚಾರ ಮಾಡಲಾಯಿತು. ನಂತರ ಅದರ ಕುರಿತಾಗಿ ಪ್ರಯೋಗ ನಡೆದ ಮೇಲೆ ಇದೊಂದು ಇಮ್ಯುನಿಟಿ ಬೂಸ್ಟರ್ ಎಂದು ಪರವಾನಗಿ ಪಡೆಯಿತು. ಸಂಶೋಧಕರ ತಂಡವು ಮಾತ್ರೆಗಳನ್ನು ತಯಾರಿಸಲು ಬಳಸುವ ಗಿಡಮೂಲಿಕೆಗಳ ರಾಸಾಯನಿಕ ವಿಶ್ಲೇಷಣೆ ನಡೆಸಿತು. ಕೊರೊನಿಲ್ನಲ್ಲಿ ಬಳಸಲಾದ 52 ಫೈಟೊಕಾನ್ಸ್ಟಿಟ್ಯೂಯೆಂಟ್ಗಳನ್ನು (ಸಸ್ಯಗಳಿಂದ ಪಡೆದ ರಾಸಾಯನಿಕಗಳು) ಗುರುತಿಸಿದ್ದಾರೆ. ಆದರೆ ಕೊರೊನಿಲ್ ಕುರಿತಾಗಿಯೂ ಜನರು ಹೆಚ್ಚು ಹುಡುಕಾಡಿದ್ದಾರೆ. ಕೊರೊನಿಲ್ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದಿದೆ ಎಂಬ ಸುಳ್ಳು ಮಾಹಿತಿಯ ಕುರಿತಾಗಿಯೂ ಹುಡುಕಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ