Yahoo: ಇಂದಿನಿಂದ ಚೀನಾದಲ್ಲಿ ಯಾಹೂ ಮೇಲ್ ಅಧಿಕೃತವಾಗಿ ಸ್ಥಗಿತ..!

Yahoo mail ಅಧಿಕೃತವಾಗಿ ಇಂದಿನಿಂದ ಚೀನಾ ಮುಖ್ಯಭೂಮಿಯಲ್ಲಿ ಸ್ಥಗಿತಗೊಳ್ಳಲಿದೆ. ನಾಳೆಯಿಂದ ಮೇಲ್ (Mail) ಸ್ವೀಕರಿಸುವುದಾಗಲಿ, ಪಡೆದುಕೊಳ್ಳುವುದಕ್ಕಾಗಲಿ ಯಾವುದೇ ರೀತಿಯ ಅವಕಾಶ ಇರುವುದಿಲ್ಲ ಎಂದು ಕಂಪನಿ ಸುತ್ತೋಲೆ ಒಂದನ್ನು ಹೊರಡಿಸಿದೆ.

ಯಾಹೂ / Yahoo

ಯಾಹೂ / Yahoo

  • Share this:
    ಇಂದಿನಿಂದ ಚೀನಾದಲ್ಲಿ (China) ಯಾಹೂ (Yahoo) ಮೇಲ್ ಅಧಿಕೃತವಾಗಿ ಸ್ಥಗಿತಗೊಳ್ಳಲಿದೆ. ನಾಳೆಯಿಂದ ಯಾಹೂ ಮೇಲ್ ಯಾವ ರೀತಿಯಲ್ಲೂ ಕಾರ್ಯನಿರ್ವಹಿಸುವುದಿಲ್ಲ ಎಂದು ಯಾಹೂ ಕಂಪನಿ (Yahoo Company) ಘೋಷಿಸಿದೆ. ಈಗಾಗಲೇ ದೇಶದಲ್ಲಿ ಕಂಪನಿಯು ತನ್ನ ಎಲ್ಲಾ ಇತರ ಕಾರ್ಯಾಚರಣೆಗಳನ್ನು ಮುಕ್ತಾಯಗೊಳಿಸಿ ಆದೇಶ ಹೊರಡಿಸಿದೆ. ಯಾಹೂ ಮೇಲ್ ಅಧಿಕೃತವಾಗಿ ಇಂದಿನಿಂದ ಚೀನಾ ಮುಖ್ಯಭೂಮಿಯಲ್ಲಿ ಸ್ಥಗಿತಗೊಳ್ಳಲಿದೆ. ನಾಳೆಯಿಂದ ಮೇಲ್ (Mail) ಸ್ವೀಕರಿಸುವುದಾಗಲಿ, ಪಡೆದುಕೊಳ್ಳುವುದಕ್ಕಾಗಲಿ ಯಾವುದೇ ರೀತಿಯ ಅವಕಾಶ ಇರುವುದಿಲ್ಲ ಎಂದು ಕಂಪನಿ ಸುತ್ತೋಲೆ ಒಂದನ್ನು ಹೊರಡಿಸಿದೆ.

    ಯಾಹೂ ಮೇಲ್‌ಗೆ ಸಂಬಂಧಿಸಿದಂತೆ ಇಂದಿನಿಂದ ಇಮೇಲ್ ಅಕೌಂಟ್, ಇಮೇಲ್, ಫೋಟೋ, ಇನ್ ಬಾಕ್ಸ್‌ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಆದರೂ ನೀವು ಇಮೇಲ್ ಅನ್ನು 28ರವರೆಗೆ ಡೌನ್ ಮಾಡಿಕೊಳ್ಳಲು ಕೆಲವು ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿಕೊಂಡಿದೆ. ಯುಆರ್‌ಎಲ್‌ ಲಿಂಕ್ ನೀಡಿದ್ದು ಅದರ ಮೂಲಕ ನಿಮಗೆ ಬೇಕಾದ ಮೇಲ್ ಅನ್ನು ಡೌನ್‌ಲೋಡ್ ಮಾಡಬಹುದು ಎಂದು ತಿಳಿಸಿದೆ. ಅಲ್ಲದೇ ಇಷ್ಟು ವರ್ಷ ನಮ್ಮ ಸುದೀರ್ಘ ಪ್ರಯಾಣದಲ್ಲಿ ಸಹಕರಿಸಿದ ನಿಮಗೆಲ್ಲಾ ಧನ್ಯವಾದಗಳು ಎಂದು ಸಹ ಯಾಹೂ ಕಂಪನಿ ತಿಳಿಸಿದೆ.

    ನವೆಂಬರ್ 1, 2021ರಿಂದ, ಚೀನಾ ಯಾಹೂ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸಲು ಬಳಕೆದಾರರಿಗೆ ಸಾಧ್ಯವಾಗುವುದಿಲ್ಲ ಎಂದು ಘೋಷಿಸಿತ್ತು. ಆದರೂ, ಕಂಪನಿಯು ಮೇಲ್‌ಬಾಕ್ಸ್‌ಗಳಂತಹ ಸಣ್ಣ ಸಂಖ್ಯೆಯ ಸೇವೆಗಳನ್ನು ಇನ್ನೂ ಉಳಿಸಿಕೊಂಡಿತ್ತು. ಆದರೆ ಇದೀಗ Yahoo ಮೇಲ್ ಇಂದಿನಿಂದ ಚೀನಾದಲ್ಲಿ ಸ್ಥಗಿತಗೊಳ್ಳಲಿದೆ ಎಂದು ಘೋಷಿಸಿದೆ. ಫೆಬ್ರವರಿ 28ರ ನಂತರ, ಚೀನಾದ ಮುಖ್ಯ ಭೂಭಾಗದಲ್ಲಿರುವ ಜನರು ಇನ್ನು ಮುಂದೆ Yahoo ಮೇಲ್ ಬಳಸಿ ಇಮೇಲ್‌ಗಳನ್ನು ಸ್ವೀಕರಿಸಲು ಅಥವಾ ಕಳುಹಿಸಲು ಸಾಧ್ಯವಾಗುವುದಿಲ್ಲ.

    ಮೈಕ್ರೋಸಾಫ್ಟ್ ಮತ್ತು ಗೂಗಲ್‌ನಂತಹ ಇತರ ಪ್ರಮುಖ ಟೆಕ್ ಕಂಪನಿಗಳ ನಡೆಯನ್ನು ಅನುಸರಿಸಿ, ಈ ಕಂಪನಿಗಳು ಎಷ್ಟು ಡೇಟಾವನ್ನು ಸಂಗ್ರಹಿಸಬಹುದು ಎಂಬುದರ ಕುರಿತು ಕಮ್ಯುನಿಸ್ಟ್ ಸರ್ಕಾರದ ಹೆಚ್ಚುತ್ತಿರುವ ಪರಿಶೀಲನೆಯಿಂದಾಗಿ ಯಾಹೂ ನವೆಂಬರ್‌ನಲ್ಲಿ ಚೀನಾದಿಂದ ನಿರ್ಗಮಿಸುವುದಾಗಿ ಘೋಷಿಸಿತು.

    ಇದನ್ನೂ ಓದಿ: Mosquito Killer Light Lamps: ಕೇವಲ 200 ರೂ.ಗೆ ಖರೀದಿಸಿ, ಮನೆಯಲ್ಲಿ ಅಡಗಿರುವ ಸೊಳ್ಳೆಗಳನ್ನ ಹೊಡೆದೋಡಿಸಿ

    ಈ ಹಿಂದೆ ಯಾಹೂ ಸಂಸ್ಥೆಯು ಭಾರತದಲ್ಲಿ ಪ್ರಕಟವಾಗುತ್ತಿದ್ದ ತನ್ನ ಸುದ್ದಿ ಜಾಲತಾಣ ಸ್ಥಗಿತಗೊಳಿಸಿತ್ತು. ವಿದೇಶಿ ನೇರ ಬಂಡವಾಳ ಹೂಡಿಕೆಯ(ಎಫ್‌ಡಿಐ) ಹೊಸ ನಿಯಮಗಳ ಪ್ರಕಾರ ಭಾರತದಲ್ಲಿ ಡಿಜಿಟಲ್ ಮಾಹಿತಿ ಪ್ರಕಟಿಸುವ ಮತ್ತು ನಿರ್ವಹಿಸುವ ಮಾಧ್ಯಮ ಸಂಸ್ಥೆಗಳಲ್ಲಿ ವಿದೇಶಿ ಮಾಲಿಕತ್ವವನ್ನು ಮಿತಗೊಳಿಸಿರುವುದರಿಂದ ಯಾಹೂ ಈ ಕ್ರಮ ತೆಗೆದುಕೊಂಡಿದೆ. ಯಾಹೂ ಸಂಸ್ಥೆಯ ಯಾಹೂ ನ್ಯೂಸ್, ಯಾಹೂ ಕ್ರಿಕೆಟ್, ಹಣಕಾಸು, ಮನರಂಜನೆ ಮತ್ತು ಮೇಕರ್ಸ್ ಇಂಡಿಯಾ ಸೇರಿದಂತೆ ಹಲವು ಜಾಲತಾಣಗಳು ಸ್ಥಗಿತಗೊಂಡಿವೆ. ಆದರೆ ಯಾಹೂ ಈ ಮೇಲ್ ಮತ್ತು ಸರ್ಚ್ ಎಂಜಿನ್ ಬಳಕೆದಾರರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಕಂಪೆನಿ ಹೇಳಿತ್ತು.

    ಪ್ರಸ್ತುತ, Yahoo ನ ಹಲವು ಉತ್ಪನ್ನಗಳು ಮತ್ತು ಸೇವೆಗಳನ್ನು ಚೀನಾ ಇನ್ನು ಮುಂದೆ ಪಡೆಯಲಾಗುವುದಿಲ್ಲ. Yahoo ಒಮ್ಮೆ ವಿಶ್ವದ ಮೊದಲ ಪೋರ್ಟಲ್ ಸರ್ಚ್ ವೆಬ್‌ಸೈಟ್ ಆಗಿದ್ದು, 24 ದೇಶ ಮತ್ತು ಪ್ರದೇಶಗಳಲ್ಲಿ ಕಾರ್ಯಾಚರಣೆಯನ್ನು ಹೊಂದಿತ್ತು. ಆದರೂ, 1990ರ ದಶಕದ ಉತ್ತರಾರ್ಧದಲ್ಲಿ ಯಾಹೂ ಅನ್ನು ಗೂಗಲ್ ತ್ವರಿತವಾಗಿ ಮೀರಿಸಿ ಯಶಸ್ಸು ಪಡೆಯಿತು.

    ಇದನ್ನೂ ಓದಿ: WhatsApp: ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ.. ವಾಟ್ಸ್​ಆ್ಯಪ್ ಖಾತೆ ಬ್ಯಾನ್​ ಆಗಬಹುದು

    ಸೆಪ್ಟೆಂಬರ್ 1999 ರಲ್ಲಿ, ಚೀನಾ ಯಾಹೂ ವೆಬ್‌ಸೈಟ್ ಅನ್ನು ಪ್ರಾರಂಭಿಸಿತು ಮತ್ತು ಅದನ್ನು ಸಂಪೂರ್ಣವಾಗಿ ಅಲಿಬಾಬಾ ಗುಂಪು ಆಗಸ್ಟ್ 2005 ರಿಂದ ಸ್ವಾಧೀನಪಡಿಸಿಕೊಂಡಿತು. ಈ ಭಾರಿ ಅಧಿಕೃತವಾಗಿ ಘೋಷಿಸಿರುವ ಯಾಹೂ ಇಂದಿನಿಂದ ಸ್ಥಗಿತಗೊಳ್ಳಲಿದ್ದು, Yahooನ ವೆಬ್‌ಸೈಟ್‌ ತೆರೆದರೆ ಚೀನೀ ಸಂದರ್ಶಕರು ಈಗ ಅವರ ವಿಷಯ ಲಭ್ಯವಿಲ್ಲ ಎಂದು ತಿಳಿಸುವ ಸಂದೇಶದೊಂದಿಗೆ ಸ್ವಾಗತಿಸಲಾಗುತ್ತಿದೆ.
    Published by:Harshith AS
    First published: