ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ರೆಡ್ಮಿ 6 ಪ್ರೊ ಮೊಬೈಲ್ ?


Updated:June 21, 2018, 2:51 PM IST
ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ರೆಡ್ಮಿ 6 ಪ್ರೊ ಮೊಬೈಲ್ ?

Updated: June 21, 2018, 2:51 PM IST
ನವದೆಹಲಿ: ಚೀನಾದ ಮೊಬೈಲ್​ ದೈತ್ಯ ಶಿಯೋಮಿ ತಮ್ಮ ರೆಡ್ಮಿ 6 ಪ್ರೊ ಮೊಬೈಲ್​ನ್ನು ಇದೇ ತಿಂಗಳ 25ರಂದು ಬಿಡುಗಡೆ ಮಾಡಲು ತೀರ್ಮಾನಿಸಿದೆ.

ಚೀನಾದಲ್ಲಿ ರೆಡ್​ಮಿ 6 ಮತ್ತು ರೆಡ್​ ಮಿ 6ಎ ಬಿಡುಡೆಯಾಗಿದ್ದು, ಆದರೆ ರೆಡ್​ಮಿ 6 ಪ್ರೊ ಕುರಿತಾದ ಮಾಹಿತಿ ಎಲ್ಲೂ ಅಧಿಕೃತವಾಗಿ ಲಭ್ಯವಾಗಿಲ್ಲ. ಆದರೆ ಈವರೆಗೆ ಬಿಡುಗಡೆಯಾಗಿರುವ ಮೊಬೈಲ್​ಗಳ ಪ್ರಕಾರ 5 ಪ್ರೊ ಹೆಚ್ಚು ಮಾರಾಟಗೊಂಡ ಮೊಬೈಲ್​ಗಳಲ್ಲಿ ಒಂದಾಗಿದೆ. ಲೀಕ್​ ಆಗಿರುವ ಮಾಹಿತಿಗಳಲ್ಲಿ 6 ಪ್ರೊ ಈವರೆಗಿನ ಎಲ್ಲಾ ದಾಖಲೆಗಳನ್ನು ಮುರಿಯಬಹುದು ಎಂದು ಊಹಿಸಲಾಗಿದೆ.

ಬಲ್ಲ ಮಾಹಿತಿಗಳ ಪ್ರಕಾರ, 6 ಪ್ರೊ ಮೊಬೈಲ್​ 19:9 ಅನುಪಾತದ ಡಿಸ್​ಪ್ಲೇ ಹೊಂದಿದ್ದು ಈವರೆಗೆ ಮಾರುಕಟ್ಟೆಯಲ್ಲಿರುವ ಎಲ್ಲಾ ಮೊಬೈಲ್​ಗಳ ಡಿಸ್​ಪ್ಲೇಗಿಂತಲೂ ದೊಡ್ಡ ಡಿಸ್​ಪ್ಲೇ ಈ ಮೊಬೈಲ್​ನಲ್ಲಿ ಕಾಣಬಹುದು. ಈ ಸ್ಮಾರ್ಟ್ ಫೋನಿನಲ್ಲಿ 5.84 ಇಂಚಿನ FHD+ ಡಿಸ್​ಪ್ಲೇಯನ್ನು ನಾವು ಕಾಣಬಹುದು.

ಕೃತಕ ಬುದ್ಧಿಮತ್ತೆಯೊಂದಿಗೆ ಆ್ಯಂಡ್ರಾಯ್ಡ್​ 8.1 ಆಪರೇಟಿಂಗ್​ ಸಿಸ್ಟಂ ಹೊಂದಿರುವ ಈ ಮೊಬೈಲ್​ಗೆ Qualcomm Snapdragon 625 ಒಕ್ಟಾಕೋರ್​ ಪ್ರೊಸೆಸರ್​ ಅಳವಡಿಸಲು ಕಂಪನಿ ನಿರ್ಧರಿಸಿದೆ.

ರೆಡ್ ಮಿ 6 ಪ್ರೋ ಸ್ಮಾರ್ಟ್ ಫೋನ್ ನಲ್ಲಿ ಡ್ಯುಯಲ್ ಕ್ಯಾಮೆರಾ ಅಳವಡಿಸಲಾಗಿದೆ. ಹಿಂಭಾಗದಲ್ಲಿ 12 MP ಕ್ಯಾಮೆರಾವನ್ನು ನೀಡಲು ನಿರ್ಧರಿಸಿದೆ. ಮುಂಭಾಗದಲ್ಲಿ ಸೆಲ್ಪಿಗಾಗಿ 8 MP ಕ್ಯಾಮೆರಾವನ್ನು ನೀಡಲಾಗಿದೆ.

ಇದರೊಂದಿಗೆ ಶಿಯೋಮಿಯವರ ಮಿ ಪ್ಯಾಡ್​ 4 ಟ್ಯಾಬ್ಲೆಟ್​ ಕೂಡಾ ಮಾರುಕಟ್ಟೆಗೆ ಬರಲು ಸಿದ್ಧವಾಗಿದ್ದು, 8 ಇಂಚ್​ಗಳ ಡಿಸ್​​ಪ್ಲೇಯೊಂದಿಗೆ 1.3GHz ನಾಲ್ಕು ಕೋರ್​ಗಳನ್ನೊಳಗೊಂಡ ಪ್ರೊಸೆಸರ್​ ಕೂಡಾ ಲಭ್ಯವಿದೆ. ಪ್ರೊಸೆಸರ್​ಗೆ ಸಪೋರ್ಟ್​ ನೀಡಲು 4GB RAM ಕೂಡಾ ಲಭ್ಯವಿದ್ದು, ನಗೌಟ್​ 7.0 ಆಪರೇಟಿಂಗ್​ ಸಿಸ್ಟಂ ಕೂಡಾ ಲಭ್ಯವಿರುತ್ತದೆ.

ಇನ್ನು ಈವರೆಗೆ ಬಿಡುಗಡೆಯಾಗಿರುವ ರೆಡ್​ಮಿ 6 ಶ್ರೇಣಿಗಳಲ್ಲೆವೂ ಬಜೆಟ್​ ರೇಂಜ್​ನಲ್ಲೇ ಲಭ್ಯವಾಗಬಹುದು ಎನ್ನಲಾಗಿದೆ. ಭಾರತದಲ್ಲಿ ರೆಡ್​ಮಿ 6 ಶ್ರೇಣಿಗಳು ಬಿಡುಗಡೆಯಾಗದಿದ್ದರೂ ಮಾಹಿತಿಗಳ ಪ್ರಕಾರ ಬಿಡುಗಡೆಯಾದ ಮೊಬೈಲ್​ಗಳೆಲ್ಲವೂ Rs 5,999ರಿಂದ ಆರಂಭವಾಗಲಿದೆ. ಇನ್ನು ಮಿ ಪ್ಯಾಡ್​ 4 ಮೊಬೈಲ್​ ಸುಮಾರು 10,000ರೂ.ನಲ್ಲಿ ಗ್ರಾಹಕರಿಗೆ ಸಿಗಬಹುದು ಎಂದು ಹೇಳಲಾಗುತ್ತಿದೆ.
First published:June 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ