108 ಮೆಗಾಫಿಕ್ಸೆಲ್​ ಕ್ಯಾಮೆರಾವಿರುವ ಶಿಯೋಮಿ ಅದ್ಭುತ ಸ್ಮಾರ್ಟ್​ಫೋನ್​..! ಸದ್ಯದಲ್ಲೇ ಮಾರುಕಟ್ಟೆಗೆ

ಶಿಯೋಮಿ ತಯಾರಿಸುತ್ತಿರುವ ನೂತನ ಸ್ಮಾರ್ಟ್​ಫೋನ್​ಗೆ ಸ್ಯಾಮ್​ಸಂಗ್ ​​ 108 ಮೆಗಾಫಿಕ್ಸೆಲ್​​ ISOCELL ಸೆನ್ಸಾರ್ ಅಳವಡಿಲಾಗಿದ್ದು, ಈ ಕ್ಯಾಮೆರಾದದಿಂದ ಕ್ಲಿಕ್ಕಿಸಿದ ಫೋಟೋ 12,032x9,024 ಫಿಕ್ಸೆಲ್​ ರೆಸಲ್ಯೂಶನ್​ ಇರಲಿದೆ.

news18-kannada
Updated:September 5, 2019, 10:51 AM IST
108 ಮೆಗಾಫಿಕ್ಸೆಲ್​ ಕ್ಯಾಮೆರಾವಿರುವ ಶಿಯೋಮಿ ಅದ್ಭುತ ಸ್ಮಾರ್ಟ್​ಫೋನ್​..! ಸದ್ಯದಲ್ಲೇ ಮಾರುಕಟ್ಟೆಗೆ
ಶಿಯೋಮಿ ಅಲ್ಟ್ರಾ ಕ್ಲೀಯರ್​ ಕ್ಯಾಮೆರಾ
  • Share this:
ಇತ್ತೀಚೆಗೆ 64 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಪರಿಚಯಿಸಿದ ಶಿಯೋಮಿ ರೆಡ್​ಮಿ ನೋಟ್​ 8 ಪ್ರೊ ಸ್ಮಾರ್ಟ್​ಫೋನ್​, ಇದೀಗ 108 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಹೊಂದಿರುವ ಸ್ಮಾರ್ಟ್​ಫೋನ್​​ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಶಿಯೋಮಿ ತಯಾರಿಸುತ್ತಿರುವ ನೂತನ ಸ್ಮಾರ್ಟ್​ಫೋನ್​ಗೆ ಸ್ಯಾಮ್​ಸಂಗ್ ​​ 108 ಮೆಗಾಫಿಕ್ಸೆಲ್​​ ISOCELL ಸೆನ್ಸಾರ್ ಅಳವಡಿಲಾಗಿದ್ದು, ಈ ಕ್ಯಾಮೆರಾದದಿಂದ ಕ್ಲಿಕ್ಕಿಸಿದ ಫೋಟೋ 12,032x9,024 ಫಿಕ್ಸೆಲ್​ ರೆಸಲ್ಯೂಶನ್​ ಇರಲಿದೆ.

ಶಿಯೋಮಿ ಈ ಬಾರಿ ಒಟ್ಟು ನಾಲ್ಕು ನೂತನ ಸ್ಮಾರ್ಟ್​ಫೋನ್​ಗಳನ್ನು ತಯಾರಿಸಲು ಮುಂದಾಗಿದೆ. ಅದರಲ್ಲಿ ಸ್ಯಾಮಸಂಗ್​ ಐಸೋಸೆಲ್​ ಬ್ರೈಟ್​ ಎಚ್​ಎಂಎಕ್ಸ್​ ಹೊಂದಿರುವ ‘ಟುಕಾನಾ‘, ‘ಡ್ರಾಕೊ‘, ‘ಉಮಿ‘, ‘ಸೆಮಿ‘ ಹೆಸರಿನಲ್ಲಿರದೆ ಎಂದು ತಿಳಿಸಿದೆ.

 ಇದನ್ನೂ ಓದಿ: ಭಾರತದಲ್ಲಿ ಪ್ರತಿ ನಿಮಿಷಕ್ಕೆ ಎರಡು ಸಾವಿರ ಸೈಬರ್​ ದಾಳಿ; ಟಾಪ್​ 5ನಲ್ಲಿ ಬೆಂಗಳೂರಿಗೆಷ್ಟನೇ ಸ್ಥಾನ?

ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಹಾಗೂ ಮಾರುಕಟ್ಟೆಯನ್ನು ಹೆಚ್ಚಿಸುವ ಸಲುವಾಗಿ ಶಿಯೋಮಿ ತನ್ನ ಸ್ಮಾರ್ಟ್​ಫೋನ್​ನಲ್ಲಿ ಹೊಸ ಫೀಚರ್​ಗಳನ್ನು ಅಳವಡಿಸುತ್ತಿದೆ. ಹೀಗಾಗಿ ಅಧಿಕ ಮೆಗಾಫಿಕ್ಸೆಲ್​ ಕ್ಯಾಮೆರಾ, ಪೂರಕವಾದ ಹಾರ್ಡ್​ವೇರ್​​ ಮತ್ತು ಒಎಸ್​ ಸಾರ್ಫ್​ವೇರ್​ ಅಭಿವೃದ್ಧಿ ಪಡಿಸುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ 48 ಮೆಗಾಫಿಕ್ಸೆಲ್​​ ಕ್ಯಾಮೆರಾಗಳಿರುವ ಸ್ಮಾರ್ಟ್​ಫೋನ್​ ಕಾಲಿರಿಸುತ್ತಿರುವುದು ಶಿಯೋಮಿಯ ಈ ಹೊಸ ಯೋಜನೆಗೆ ಕಾರಣ ಎಂದು ಹೇಳಲಾಗಿದೆ.

First published:September 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ