ಚೀನಾ ಮೂಲದ ಶಿಯೋಮಿ (Xiaomi) ಕಂಪನಿ ಆಗಾಗ ಹೊಸ ಪ್ರಾಡೆಕ್ಟ್ಗಳನ್ನ (Product) ಗ್ರಾಹಕರಿಗೆ ಪರಿಚಯಿಸುತ್ತಿರುತ್ತದೆ. ಮಾತ್ರವಲ್ಲದೆ ಶಿಯೋಮಿ ಬಜೆಟ್ ಕಿಂಗ್ ಆಗಿದ್ದು, ಬ್ರ್ಯಾಂಡ್ ಟಿವಿಗಳು (Brand Tv), ಸ್ಮಾರ್ಟ್ಫೋನ್ಗಳು (Smartphone), ಲ್ಯಾಪ್ಟಾಪ್ಗಳು (Laptop) ಮತ್ತು ಸ್ಮಾರ್ಟ್ ವೇರಬಲ್ ವಿಭಾಗದಲ್ಲಿ ತನ್ನದೇ ಆದ ಮಾರುಕಟ್ಟೆಯನ್ನು (Market) ಮತ್ತು ಗ್ರಾಹಕರನ್ನು ಹೊಂದಿದೆ. ಅದರಂತೆಯೇ ಇದೀಗ ಕಂಪನಿ ಮುಂಬರುವ Mi ಬ್ಯಾಂಡ್ ಬಗ್ಗೆ ವಿವರಗಳನ್ನು ಹಂಚಿಕೊಂಡಿದೆ. ಹೊಸ Mi Band 7 ಕುರಿತಾದ ಕುತೂಹಲಕಾರಿ ಮಾಹಿತಿ ಹಂಚಿಕೊಂಡಿದೆ.
ಪ್ರಸ್ತುತ Mi ಬ್ಯಾಂಡ್ ಆವೃತ್ತಿಯು ದೊಡ್ಡ-ಸ್ಕ್ರೀನ್ ಫಾರ್ಮ್ ಫ್ಯಾಕ್ಟರ್ ಅನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. ಹಿಂದಿನದಕ್ಕಿಂತ ದೊಡ್ಡದಾದ ಪರದೆಯನ್ನು ಪಡೆಯುವ ಸಾಧ್ಯತೆಯಿದೆ.
ಮಿ ಬ್ಯಾಂಡ್ 7 ಗ್ರಾಹಕರ ಮನಗೆಲ್ಲವು ಕೆಲವು ಫೀಚರ್ಸ್ಗಳನ್ನು ಹಂಚಿಕೊಂಡಿದೆ. ನೂತನ ಬ್ಯಾಂಡ್ 1.56-ಇಂಚಿಗಿಂತಲೂ ದೊಡ್ಡದಾದ ಡಿಸ್ಪ್ಲೇಯನ್ನು ಪಡೆಯಬಹುದು ಮತ್ತು ಯಾವಾಗಲೂ-ಆನ್ ನಂತಹ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದು ಸಾಮಾನ್ಯವಾಗಿ ದುಬಾರಿ ಫಿಟ್ನೆಸ್ ಬ್ಯಾಂಡ್ಗಳಲ್ಲಿ ಕಂಡುಬರುತ್ತದೆ.
ಸೋರಿಕೆಯಾದ ಮಾಃಇತಿಯಂತೆ, ಶಿಯೋಮಿ ತನ್ನ ತಾಲೀಮು ಮೋಡ್ ಆಯ್ಕೆಗಳನ್ನು ವಿಸ್ತರಿಸಲಿದೆ ಎಂದು ಸೂಚಿಸುತ್ತದೆ. ಬಳಕೆದಾರರಿಗೆ ಮಿಶ್ರಣಕ್ಕೆ Aerobics ಮತ್ತು Zumba ನಂತಹವುಗಳನ್ನು ಸೇರಿಸಲಾಗಿದೆ. Mi ಬ್ಯಾಂಡ್ 7 ಸ್ಮಾರ್ಟ್ ಅಲಾರ್ಮ್ ಆಯ್ಕೆಯನ್ನು ಹೊಂದಿದ್ದು, ಅದು ನಿಮಗೆ ನಿಗದಿಪಡಿಸಿದ ಎಚ್ಚರಿಕೆಯ ಸಮಯದ ಮೊದಲು ನಿಧಾನವಾಗಿ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Smartphone: 2GB ಮೆಮೊರಿ ಕಾರ್ಡ್ ಅನ್ನು 128GB ತನಕ ವಿಸ್ತರಿಸಬಹುದು.. ಹೇಗೆ ಅಂತೀರಾ?
ಹೊಸ ಶಿಯೋಮಿ ಬ್ಯಾಂಡ್ನಲ್ಲಿ ಅಂತರ್ನಿರ್ಮಿತ ಜಿಪಿಎಸ್ ಬೆಂಬಲವನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತ ವಿವರಗಳು ಬಿಡುಗಡೆಯಾದ ನಂತರ ತಿಳದು ಬರಬೇಕಿದೆ. ಸ್ಮಾರ್ಟ್ಬ್ಯಾಂಡ್ನಲ್ಲಿ GPS ಅನ್ನು ಸೇರಿಸುವುದರಿಂದ ಉತ್ಪನ್ನದ ಬೆಲೆ ಹೆಚ್ಚಾಗುತ್ತದೆ ಮತ್ತು Mi ಬ್ಯಾಂಡ್ನ ಆಕರ್ಷಕ ಫೀಚರ್ಸ್ ಗ್ರಾಹಕರ ಮನಗೆಲ್ಲಲಿದೆ.
ಇದರಲ್ಲಿರುವ ಹೊಸ ವಿದ್ಯುತ್ ಉಳಿತಾಯ ಮೋಡ್ ಸಾಧನದ ಬ್ಯಾಟರಿ ಅವಧಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಅಂದರೆ Mi ಬ್ಯಾಂಡ್ಗೆ ಕಡಿಮೆ ಸಮಯದಲ್ಲಿ ಚಾರ್ಜ್ ಆಗುತ್ತದೆ ಜೊತೆಗೆ ಹೆಚ್ಚು ದಿನಗಳ ಕಾಲ ಬಳಸಬಹುದಾಗಿದೆ. ಮಾರ್ಚ್ ಅಂತ್ಯದ ವೇಳೆಗೆ Xiaomi ವಾಡಿಕೆಯಂತೆ ಹೊಸ Mi ಬ್ಯಾಂಡ್ಗಳೊಂದಿಗೆ ಹೊರಬರುಲಿದೆ ಎಂದು ಹೇಳಲಾಗುತ್ತಿದೆ. ಗ್ರಾಹಕರಂತೂ ನೂತನ ಬ್ಯಾಂಡ್ಗಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: Delete photos: ಅಳಿಸಿರುವ ಫೋಟೋಗಳು ಮತ್ತೆ ಸಿಕ್ತು! ಸ್ಮಾರ್ಟ್ಫೋನ್ ಮೂಲಕ ಖಾಸಗಿ ಮಾಹಿತಿ ಬಹಿರಂಗವಾಯ್ತು!
ಶಿಯೋಮಿ ಹಲವು ಮಿ ಬ್ಯಾಂಡ್ಗಳನ್ನು ಸರಣಿ ರೂಪಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯಕ್ಕಂತೂ ಮಿ ಬ್ಯಾಂಡ್ 6 ತನಕ ಮಾರುಕಟ್ಟೆಯಲ್ಲಿದೆ. ಇದರಲ್ಲಿ ಫಿಟ್ನೆಸ್, ನಿದ್ರೆ, ರಕ್ತದ ಚಲನೆ, ಈಜುವುದು ಎಲ್ಲಾ ಮಾಹಿತಿಗಳನ್ನು ಒದಗಿಸುತ್ತದೆ. ಜೊತೆಗೆ ದೈನಂದಿನಲ್ಲಿ ಎಷ್ಟು ಓಡಾಟ ಮಾಡದ್ದೀರಿ ಎಂಬ ಬಗ್ಗೆಯೂ ಮಾಹಿತಿ ನೀಡುತ್ತದೆ. ಮಾರುಕಟ್ಟೆಯಲ್ಲಿ ಮಿ ಬ್ಯಾಂಡ್ ತನ್ನದೇ ಆದ ಮಾರುಕಟ್ಟೆಯನ್ನು ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ