32MP ಸೂಪರ್ ಸೆಲ್ಫಿ ಕ್ಯಾಮೆರಾ: ಅಗ್ಗದ ದರದಲ್ಲಿ ಬರಲಿದೆ ಶಿಯೋಮಿಯ ನೂತನ ಸ್ಮಾರ್ಟ್​ಫೋನ್

ಈ ಮೊಬೈಲ್​ನಲ್ಲಿ 32 ಮೆಗಾ ಪಿಕ್ಸೆಲ್ ಹೊಂದಿರುವ ಸೂಪರ್ ಸೆಲ್ಫಿ ಕ್ಯಾಮೆರಾ ಇರಲಿದೆ ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಲಾಗಿದೆ.

zahir | news18
Updated:April 15, 2019, 4:05 PM IST
32MP ಸೂಪರ್ ಸೆಲ್ಫಿ ಕ್ಯಾಮೆರಾ: ಅಗ್ಗದ ದರದಲ್ಲಿ ಬರಲಿದೆ ಶಿಯೋಮಿಯ ನೂತನ ಸ್ಮಾರ್ಟ್​ಫೋನ್
ಶಿಯೋಮಿ
zahir | news18
Updated: April 15, 2019, 4:05 PM IST
ಜನಪ್ರಿಯ ಸ್ಮಾರ್ಟ್​ಫೋನ್ ಕಂಪೆನಿ ಶಿಯೋಮಿ ಮತ್ತೊಂದು ಅಗ್ಗದ ಫೋನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ. Y ಸಿರೀಸ್​ನಲ್ಲಿರುವ ಈ ಸ್ಮಾರ್ಟ್​ಫೋನ್​ ಅನ್ನು ಏಪ್ರಿಲ್ 24 ರಂದು ಪರಿಚಯಿಸುವುದಾಗಿ ಶಿಯೋಮಿ ಘೋಷಿಸಿದೆ. ಈಗಾಗಲೇ Redmi Y ಮತ್ತು Redmi Y2 ಮೊಬೈಲ್​ಗಳು ಮಾರುಕಟ್ಟೆಯಲ್ಲಿದ್ದು, ಹೀಗಾಗಿ ಮುಂಬರುವ ಮೊಬೈಲ್ Redmi Y3 ಆಗಿರಲಿದೆ ಎಂದು ಊಹಿಸಲಾಗುತ್ತಿದೆ.

ಬಿಡುಗಡೆಗೆ ಮುನ್ನವೇ ಶಿಯೋಮಿಯ ಈ ನೂತನ ಸ್ಮಾರ್ಟ್​ಫೋನ್ ಸದ್ದು ಮಾಡಲು ಮುಖ್ಯ ಕಾರಣ ಅದರಲ್ಲಿ ನೀಡಲಾಗುವ ವಿಶೇಷ ಸೆಲ್ಫಿ ಕ್ಯಾಮೆರಾ. ಈ ಮೊಬೈಲ್​ನಲ್ಲಿ 32 ಮೆಗಾ ಪಿಕ್ಸೆಲ್ ಹೊಂದಿರುವ ಸೂಪರ್ ಸೆಲ್ಫಿ ಕ್ಯಾಮೆರಾ ಇರಲಿದೆ ಎಂದು ಟ್ವೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಕಂಪೆನಿಯು ಹೊಸ ಸ್ಮಾರ್ಟ್​ಫೋನಿನ ಟೀಸರ್ ಬಿಡುಗಡೆ ಮಾಡಿದ್ದು, ಇದು ವಾಟರ್ ಡ್ರಾಪ್ ನಾಚ್ ಡಿಸ್​ಪ್ಲೇ ಹೊಂದಿರಲಿದೆ. ರೆಡ್​ಮಿ ನೋಟ್​ 7 ರೀತಿಯಲ್ಲೇ ಡ್ಯುಯೆಲ್ ಕ್ಯಾಮೆರಾ ಸೆಟಪ್​ ಅನ್ನು Y3 ನಲ್ಲೂ ನೀಡಲಾಗುವುದು ಎಂದು ತಿಳಿಸಿದ್ದು, ರಿಯರ್ ಕ್ಯಾಮೆರಾ 12+2 ಮೆಗಾಪಿಕ್ಸೆಲ್ ಹೊಂದಿರಲಿದೆ ಎನ್ನಲಾಗಿದೆ.

32MP ಸೂಪರ್ ಸೆಲ್ಫಿ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್​ಫೋನ್ ಬಿಡುಗಡೆ ದಿನಾಂಕವನ್ನು ಶಿಯೋಮಿ ಕಂಪೆನಿಯ ಉಪಾಧ್ಯಕ್ಷ ಮನು ಜೈನ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಆದರೆ ಹೊಸ ಮೊಬೈಲ್​ನ ಬಗೆಗಿನ   ಹೆಚ್ಚಿನ ಮಾಹಿತಿ ಕಂಪೆನಿ ಹಂಚಿಕೊಂಡಿಲ್ಲ.

Redmi Y2 ಪ್ರಸ್ತುತ ಬೆಲೆ 8,999 ರೂ. ಆಗಿದ್ದು, ಅದೇ ರೀತಿ ರೆಡ್​ ಮಿ ನೋಟ್ 7 ಪ್ರೋ 13999 ರೂ.ಗೆ ಲಭ್ಯವಿದೆ. Y3 ಈ ಎರಡು ಮಾಡೆಲ್​ಗಳ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್​ಫೋನ್​ ಆಗಿರುವುದರಿಂದ ಭಾರತದಲ್ಲಿ ಇದರ ಬೆಲೆ 11 ರಿಂದ 12 ಸಾವಿರದೊಳಗೆ ಇರಲಿದೆ ಎಂದು ಹೇಳಲಾಗುತ್ತಿದೆ.

Loading...

ಇದನ್ನೂ ಓದಿ: ಪಂದ್ಯ ಗೆಲ್ಲಿಸಿದ್ದು ಇಮ್ರಾನ್ ತಾಹಿರ್: ಶ್ರೇಯಸ್ಸು ನಾಯಕ ಧೋನಿಗೆ..!
First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626