ಮಾರುಕಟ್ಟೆ ಪ್ರವೇಶಿಸಲಿರುವ ರೆಡ್​ಮಿ Y2, ಇಲ್ಲಿದೆ ಬೆಲೆ, ವೈಶಿಷ್ಟ್ಯಗಳ ಮಾಹಿತಿ


Updated:June 7, 2018, 4:11 PM IST
ಮಾರುಕಟ್ಟೆ ಪ್ರವೇಶಿಸಲಿರುವ ರೆಡ್​ಮಿ  Y2, ಇಲ್ಲಿದೆ ಬೆಲೆ, ವೈಶಿಷ್ಟ್ಯಗಳ ಮಾಹಿತಿ

Updated: June 7, 2018, 4:11 PM IST
ನವದೆಹಲಿ: ಚೀನಾದ ಮೊಬೈಲ್​ ದೈತ್ಯ ಶಿಯೋಮಿ ಮತ್ತೊಮ್ಮೆ ಸದ್ದು ಮಾಡಲು ಬರುತ್ತಿದ್ದು, ಈಗಾಗಲೇ ಚೀನಾದಲ್ಲಿ ರೆಡ್​ಮಿ S2 ಮೊಬೈಲ್​ನ್ನು ಬಿಡುಗಡೆ ಗೊಳಿಸಿರುವ ಶಿಯೋಮಿ ಭಾರತದಲ್ಲಿ ರೆಡ್​ಮಿ Y2 ಮೊಬೈಲ್​ನ್ನು ಇಂದು (ಜೂ.7) ಬಿಡುಗಡೆ ಮಾಡಲು ತೀರ್ಮಾನಿಸಿದೆ.

ಶಿಯೋಮಿಯ Y2 ಶ್ರೇಣಿಯ ಎಲ್ಲಾ ಮೊಬೈಲ್​ಗಳು ಭಾರತದಲ್ಲಿ ಕ್ಲಿಕ್​ ಆಗಿದ್ದು, Y2 ಮೊಬೈಲ್​ನಲ್ಲಿ ಕ್ಯಾಮೆರಾಗೆ ಹೆಚ್ಚು ಮಹತ್ವ ನೀಡಲಾಗಿದೆ ಎಂದು ತಜ್ಞರು ಮಾತನಾಡಿಕೊಳ್ಳುತ್ತಿದ್ದು, ಬಜೆಟ್​ ಕ್ಯಾಮೆರಾಗಳ ಪಟ್ಟಿಯಲ್ಲಿ ಮೊಬೈಲ್​ ಲಭ್ಯವಿರಲಿದೆ ಎನ್ನಲಾಗಿದೆ.

ಮಾಹಿತಿಗಳ ಪ್ರಕಾರ ರೆಡ್ ಮಿ Y2 ಎರಡು ವಿಧಗಳಲ್ಲಿ ಲಭ್ಯವಿರಲಿದ್ದು, 3GB RAM + 32GB ಮತ್ತು 4GB RAM + 64GB ಮೆಮೊರಿ ಆಯ್ಕೆಗಳಲ್ಲಿ ಸಿಗಲಿದೆ. ಇನ್ನು ಬೆಲೆಗಳ ಕುರಿತು ದೊರಕಿರುವ ಮಾಹಿತಿಗಳ ಪ್ರಕಾರ Y2, 9,999 ರೂ.ಗಳಿಂದ 11,999 ರೂ.ವರೆಗಿನ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.

ಹೆಚ್ಚಿನ ವರದಿಗಳ ಪ್ರಕಾರ 5.99 ಫುಲ್​ಹೆಚ್​ಡಿ ಪ್ಲಸ್​ ಡಿಸ್​ಪ್ಲೇ ಯೊಂದಿಗೆ ಸ್ನಾಪ್​ಡ್ರಾಗನ್​ 625 ಎಸ್​ಒಸಿ ಪ್ರೊಸೆಸರ್​ ಹಾಗೂ ಹಿಂಬದಿಯಲ್ಲಿ 12MP + 5MP ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ, 16MP ಫ್ರಂಟ್ ಕ್ಯಾಮೆರಾ, AI ಪೋರ್ಟರೆಟ್ ಮೊಡ್​ನೊಂದಿಗೆ ಈ ಮೊಬೈಲ್​ ಮಾರುಕಟ್ಟೆಗೆ ಪ್ರವೇಶಿಸಬಹುದು ಎನ್ನಲಾಗಿದೆ.

 
First published:June 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...