Redmi: ಜಾಗತಿಕವಾಗಿ ಬಿಡುಗಡೆಯಾದ ರೆಡ್‌ಮಿಯ 3 ಸ್ಮಾರ್ಟ್‌ಫೋನ್‌ಗಳು

Xiaomi: ಶಿಯೋಮಿ ಮಾರ್ಚ್‌ 29ರಂದು ನಡೆದ ಕಾರ್ಯಕ್ರಮದಲ್ಲಿ ರೆಡ್‌ಮಿ ನೋಟ್ 11ಎಸ್ (Redmi Note11s), ರೆಡ್‌ಮಿ ನೋಟ್ 11 ಪ್ರೋ ಪ್ಲಸ್ (Redmi NOte 11 Pro Plus) ಮತ್ತು ರೆಡ್‌ಮಿ 10 5ಜಿ (Redmi 10 5G) ಸೇರಿದಂತೆ ಮೂರು 5ಜಿ ರೆಡ್ಮಿ ಸ್ಮಾರ್ಟ್‌ಫೋನ್‌ಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಈ ಮಾರ್ಚ್ ತಿಂಗಳಂತೂ ಸ್ಮಾರ್ಟ್‌ಫೋನ್ (Smartphone) ಪ್ರಿಯರಿಗೆ ಒಂದು ಹಬ್ಬದ ರೀತಿಯಲ್ಲಿ ಬಂದಿದೆ ಎಂದು ಹೇಳಬಹುದು, ಏಕೆಂದರೆ ಸಾಲು ಸಾಲಾಗಿ ಮೊಬೈಲ್ (Mobile) ತಯಾರಕ ಕಂಪನಿಗಳು ತಮ್ಮ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ತನ್ನ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ. ಇದೇ ರೀತಿ, ಶಿಯೋಮಿ (Xiaomi) ಕಂಪನಿ ಜಾಗತಿಕವಾಗಿ ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ ಹೌದು.. ಶಿಯೋಮಿ ಮಾರ್ಚ್‌ 29ರಂದು ನಡೆದ ಕಾರ್ಯಕ್ರಮದಲ್ಲಿ ರೆಡ್‌ಮಿ ನೋಟ್ 11ಎಸ್ (Redmi Note11s), ರೆಡ್‌ಮಿ ನೋಟ್ 11 ಪ್ರೋ ಪ್ಲಸ್ (Redmi NOte 11 Pro Plus) ಮತ್ತು ರೆಡ್‌ಮಿ 10 5ಜಿ (Redmi 10 5G) ಸೇರಿದಂತೆ ಮೂರು 5ಜಿ ರೆಡ್ಮಿ ಸ್ಮಾರ್ಟ್‌ಫೋನ್‌ಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

  ಹೊಸದಾಗಿ ಬಿಡುಗಡೆಯಾದ ಎಲ್ಲಾ ಮೂರು ರೆಡ್‌ಮಿ ಫೋನ್‌ಗಳು ಮೀಡಿಯಾಟೆಕ್ 5ಜಿ ಪ್ರೊಸೆಸರ್‌ಗಳೊಂದಿಗೆ ಬರುತ್ತವೆ. ರೆಡ್‌ಮಿ ನೋಟ್ 11ಎಸ್ ಮತ್ತು ರೆಡ್‌ಮಿ 10 5ಜಿ 5000 ಎಂಎಎಚ್ ಬ್ಯಾಟರಿಯನ್ನು ಹೊಂದಿದ್ದು, ರೆಡ್‌ಮಿ ನೋಟ್ 11 ಪ್ರೋ ಪ್ಲಸ್ 4500 ಎಂಎಎಚ್ ಬ್ಯಾಟರಿಯಲ್ಲಿ ಸ್ವಲ್ಪ ಸಣ್ಣ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ ಮತ್ತು ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ.

  ಬೆಲೆಯ ವಿಷಯದಲ್ಲಿ, ರೆಡ್‌ಮಿ ನೋಟ್ 11 ಪ್ರೋ ಪ್ಲಸ್ ಅತ್ಯಂತ ದುಬಾರಿ ಮಾಡೆಲ್‌ ಆಗಿದ್ದರೆ, ರೆಡ್‌ಮಿ 10 5ಜಿ ಅತ್ಯಂತ ಕಡಿಮೆ ದುಬಾರಿಯಾಗಿದೆ. ರೆಡ್‌ಮಿ ನೋಟ್ 11 ಪ್ರೋ ಪ್ಲಸ್ ಮೂರು ರೂಪಾಂತರಗಳಲ್ಲಿ ದೊರೆಯುತ್ತದೆ. 6 ಜಿಬಿ ರ‍್ಯಾಮ್ ಮತ್ತು 128 ಜಿಬಿ ಸ್ಟೋರೇಜ್, 8 ಜಿಬಿ ರ‍್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಮತ್ತು 8 ಜಿಬಿ ರ‍್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಕ್ರಮವಾಗಿ 369, 399 ಮತ್ತು 499 ಡಾಲರ್‌ಗಳ ಬೆಲೆಯಲ್ಲಿ ಲಭ್ಯವಿವೆ ಎಂದು ಹೇಳಲಾಗುತ್ತಿದೆ. ಆರಂಭಿಕ ಖರೀದಿದಾರರು ಏಪ್ರಿಲ್ 6 ಮತ್ತು 8 ರ ನಡುವೆ ಅಲಿ ಎಕ್ಸ್‌ಪ್ರೆಸ್‌ನಲ್ಲಿ 40 ಡಾಲರ್‌ವರೆಗೆ ರಿಯಾಯಿತಿಯನ್ನು ಪಡೆಯಬಹುದು.

  ರೆಡ್‌ಮಿ ನೋಟ್ 11ಎಸ್ ಕೂಡ ಮೂರು ರೂಪಾಂತರಗಳಲ್ಲಿ ಲಭ್ಯವಿದ್ದು, ಬೇಸ್ ಮಾಡೆಲ್ 4 ಜಿಬಿ ರ‍್ಯಾಮ್ ಮತ್ತು 64 ಜಿಬಿ ಸ್ಟೋರೇಜ್‌ನೊಂದಿಗೆ 249 ಡಾಲರ್ ಬೆಲೆಗೆ ಪಡೆಯಬಹುದು. 4ಜಿಬಿ ರ‍್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಹಾಗೂ 6 ಜಿಬಿ ರ‍್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಹೊಂದಿರುವ ಇತರ ಎರಡು ರೂಪಾಂತರಗಳು ಕ್ರಮವಾಗಿ 279 ಮತ್ತು 299 ಡಾಲರ್ ಬೆಲೆಗೆ ಕೊಂಡುಕೊಳ್ಳಬಹುದು. ಕೊನೆಯದಾಗಿ, ಅಗ್ಗದ ಮಾಡೆಲ್ ಎಂದರೆ, ರೆಡ್‌ಮಿ 10 5ಜಿ ಎರಡು ರೂಪಾಂತರಗಳಲ್ಲಿ 4 ಜಿಬಿ ರ‍್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಹಾಗೂ 4 ಜಿಬಿ ರ‍್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಕ್ರಮವಾಗಿ 199 ಮತ್ತು 229 ಡಾಲರ್ ಬೆಲೆಗೆ ಕೊಂಡುಕೊಳ್ಳಬಹುದಾಗಿದೆ.

  ರೆಡ್‌ಮಿ ನೋಟ್ 11 ಪ್ರೋ ಪ್ಲಸ್ ವಿಶೇಷತೆಗಳು

  ರೆಡ್‌ಮಿ ನೋಟ್ 11 ಪ್ರೋ ಪ್ಲಸ್ ಅದೇ ಚೀನೀ ಮಾದರಿಯನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ಇದು 6.67 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದ್ದು, 120 ಹರ್ಟ್ಸ್ ಸ್ಕ್ರೀನ್ ರಿಫ್ರೆಶ್ ರೇಟ್ ಮತ್ತು ಎಫ್ಎಚ್‌ಡಿ ಪ್ಲಸ್ ರೆಸಲ್ಯೂಶನ್ ಹೊಂದಿದೆ. ಇದು ಮೀಡಿಯಾಟೆಕ್‌ನ ಡೈಮೆನ್ಸಿಟಿ 920 ಎಸ್ಒಸಿ 8 ಜಿಬಿ ರ‍್ಯಾಮ್‌ ಮತ್ತು 256 ಜಿಬಿ ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ.

  ಇದು 120 ವ್ಯಾಟ್ ಹೈಪರ್‌ಚಾರ್ಜ್ ಟೆಕ್ ಬೆಂಬಲದೊಂದಿಗೆ 4500 ಎಂಎಎಚ್ ಬ್ಯಾಟರಿಯನ್ನು ಹೊಂದಿದ್ದು, ಇದು ಕೇವಲ 15 ನಿಮಿಷಗಳಲ್ಲಿ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಫೋನ್ 108 ಮೆಗಾ ಪಿಕ್ಸೆಲ್ ಪ್ರೈಮರಿ ಸೆನ್ಸರ್ ಮತ್ತು 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸರ್ ಮತ್ತು 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ.

  ಇದನ್ನೂ ಓದಿ: ಕೇವಲ 3 ದಿನಗಳು ಬಾಕಿ! BSNLನ ಈ ಪ್ಲಾನ್ ಅಳವಡಿಸಿದರೆ 180GB ಡೇಟಾ ಉಚಿತ

  ರೆಡ್‌ಮಿ ನೋಟ್ 11ಎಸ್ ವಿಶೇಷತೆಗಳು

  ರೆಡ್‌ಮಿ ನೋಟ್ 11ಎಸ್ 5ಜಿ ಪ್ರಾಥಮಿಕವಾಗಿ ಪೋಕೋ ಎಂ4 ಪ್ರೋ 5ಜಿಯ ರೀಬ್ರ್ಯಾಂಡೆಡ್ ಆವೃತ್ತಿಯಾಗಿದೆ. ಇದು 90 ಹರ್ಟ್ಸ್ ರಿಫ್ರೆಶ್ ರೇಟ್‌ನೊಂದಿಗೆ 6.6 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಡೈಮೆನ್ಸಿಟಿ 810 ಎಸ್ಒಸಿ, 50 ಮೆಗಾ ಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸಿಸ್ಟಂ, 33 ವ್ಯಾಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000 ಎಂಎಎಚ್ ಬ್ಯಾಟರಿ ಮತ್ತು ಇನ್ನೂ ಹೆಚ್ಚಿನದು ಇದರೊಂದಿಗೆ ಬರುತ್ತದೆ. ಮಿಡ್‌ನೈಟ್ ಬ್ಲ್ಯಾಕ್, ಟ್ವಿಲೈಟ್ ಬ್ಲೂ ಮತ್ತು ಸ್ಟಾರ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ.

  ಇದನ್ನೂ ಓದಿ: Space Hotel: ಐದು ವರ್ಷದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಮೊದಲ ಬಾಹ್ಯಾಕಾಶ ಹೋಟೆಲ್!

  ರೆಡ್‌ಮಿ 10 5ಜಿ ವಿಶೇಷತೆಗಳು

  ರೆಡ್‌ಮಿ 10 5ಜಿ ಈ ತಿಂಗಳ ಆರಂಭದಲ್ಲಿ ಚೀನಾದಲ್ಲಿ ಬಿಡುಗಡೆಯಾದ ರೆಡ್‌ಮಿ ನೋಟ್ 11ಇ ಅನ್ನು ಹೋಲುತ್ತದೆ. ಮೀಡಿಯಾಟೆಕ್ ಡೈಮೆನ್ಸಿಟಿ 700 5ಜಿ ಎಸ್ಒಸಿ, 6.58 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್ಪ್ಲೇ, 90 ಹರ್ಟ್ಸ್ ರಿಫ್ರೆಶ್ ರೇಟ್ ಮತ್ತು ಎಫ್ಎಚ್‌ಡಿ ಪ್ಲಸ್ ರೆಸಲ್ಯೂಶನ್ ಹೊಂದಿದೆ. 50 ಮೆಗಾ ಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸಿಸ್ಟಂ, 5000 ಎಂಎಎಚ್ ಬ್ಯಾಟರಿಯನ್ನು ಹೊಂದಿದ್ದು, 18 ವ್ಯಾಟ್ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ.
  First published: