ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ ರೆಡ್​ ಮಿ ಎಸ್​ 2


Updated:April 28, 2018, 5:46 PM IST
ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ ರೆಡ್​ ಮಿ ಎಸ್​ 2
Representative Image

Updated: April 28, 2018, 5:46 PM IST
ನವದೆಹಲಿ: ಶಿಯೋಮಿ ಮೊಬೈಲ್​ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಲೇ ಇದೆ, ಆದರೆ ಈ ಮಧ್ಯೆ ಮಾರುಕಟ್ಟೆಗೆ ಬರಲು ಸಿದ್ಧಗೊಂಡಿರುವ ಎಸ್​2 ಮೊಬೈಲ್​ನ ಚಿತ್ರಗಳು ಈಗಾಗಲೇ ಇಂಟರ್​ನೆಟ್​ನಲ್ಲಿ ಹರಿದಾಡಿದೆ.

ಟೆನಾದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಎಸ್​2 ಮೊಬೈಲ್​ ಇದೀಗ ಚೀನಾದ ಮೊಬೈಲ್​ ಪ್ರಮಾಣೀಕರಣ ಸಂಸ್ಥೆಯ ವೆಬ್​ಸೈಟ್​ನಲ್ಲೂ ಕೂಡಾ ಈ ಮೊಬೈಲ್​ ಮಾಹಿತಿ ದಾಖಲಿಸಲಾಗಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಈ ಮೊಬೈಲ್​ ಮಾರುಕಟ್ಟೆಯಲ್ಲಿ ಮಾರಟಕ್ಕೆ ಬರಬಹುದು ಎಂದು ಹೇಳಲಾಗಿದೆ. ಎಸ್​ 2 ಮೊಬೈಲ್​ನೊಂದಿಗೆ ಮಿ ಪ್ಯಾಡ್​ 4 ಮಾಹಿತಿ ಕೂಡಾ ಲೀಕ್​ ಆಗಿದೆ.

ಟೆನಾ ಮಾಹಿತಿಗಳ ಪ್ರಕಾರ ರೆಡ್​ ಮಿ ಎಸ್​2ವಿನಲ್ಲಿ 5.99 ಹೆಚ್​ಡಿ ಪ್ಲಸ್​ 1440*720 ಪಿಕ್ಸೆಲ್​ ಡಿಸ್​ಪ್ಲೆಯಿದ್ದು, ಸ್ನಾಪ್​ಡ್ರಾಗನ್​ನ 625 ಒಕ್ಟಾಕೋರ್​ ಪ್ರೊಸೆಸರ್​ ಅಳವಡಿಸಲಾಗಿದೆ. ಈ ಮೊಬೈಲ್​ ಮೂರು ಶ್ರೇಣಿಯ RAM ಮೆಮೊರಿ ವ್ಯವಸ್ಥೆ ಹೊಂದಿದ್ದು, ತಲಾ 16ಜಿಬಿ, 32 ಜಿಬಿ ಮತ್ತು 64 ಜಿಬಿ ಮೆಮೊರಿ ವ್ಯವಸ್ಥೆ ಅಳಡಲಾಗಿದೆ.

ಎಸ್​2ನಲ್ಲಿ ಸ್ಪೋರ್ಟ್​ ಡ್ಯುವಲ್​ ಕ್ಯಾಮೆರಾವನ್ನು ಬಳಸಲಾಗಿದೆ, ಮಾಹಿತಿಗಳ ಪ್ರಕಾರ ಸೊನಿಯ 12 ಮೆಗಾಪಿಕ್ಸಲ್​ ಹಾಗೂ ಸ್ಯಾಮ್ಸಂಗ್​ನ 5 ಮೆಗಾಪಿಕ್ಸಲ್​ ಕ್ಯಾಮೆರಾ ಬಳಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಸೆಲ್ಫಿಗಾಗಿ 16 ಮೆಗಾಪಿಕ್ಸಲ್​ ಕ್ಯಾಮೆರಾ ನೀಡಬಹುದು ಎಂದು ಹೇಳಲಾಗಿದೆ.
First published:April 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ