ಶೀಘ್ರದಲ್ಲೇ ರೆಡ್​ಮಿ ಎಸ್​2 ಮಾರುಕಟ್ಟೆಗೆ, ಇಲ್ಲದೇ ಮೊಬೈಲ್​ ಮಾಹಿತಿ


Updated:April 18, 2018, 6:00 PM IST
ಶೀಘ್ರದಲ್ಲೇ ರೆಡ್​ಮಿ ಎಸ್​2 ಮಾರುಕಟ್ಟೆಗೆ, ಇಲ್ಲದೇ ಮೊಬೈಲ್​ ಮಾಹಿತಿ

Updated: April 18, 2018, 6:00 PM IST
ಹೊಸದಿಲ್ಲಿ: ಭಾರತದ ಟೆಕ್​ ಮಾರುಕಟ್ಟೆಯಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿರುವ ಶಿಯೋಮಿ ಕಂಪನಿ ಇದೀಗ ಮತ್ತೊಂದು ಮೊಬೈಲ್​ ಹೊರ ತರಲು ತೀರ್ಮಾನಿಸಿದೆ.

ಈಗಾಗಲೇ ರೆಡ್​ ಮಿ 5 ಮೊಬೈಲ್​ ಮಾರುಕಟ್ಟೆಗೆ ತಂದು ಹೊಸ ಸಂಚಲನ ರೂಪಿಸಿದ್ದ ರೆಡ್​ ಮಿ ಸಂಸ್ಥೆ ಇದೀಗ ಇದಕ್ಕಿಂತ ಉತ್ತಮ ಸೌಲಭ್ಯಗಳೊಂದಿಗೆ ರೆಡ್​ಮಿ ಎಸ್​2 ಎಂಬ ಹೆಸರಿನ ನೂತನ ಮೊಬೈಲ್​ ಮಾರುಕಟ್ಟೆಗೆ ಬಿಡಲು ತೀರ್ಮಾನಿಸಿದೆ. ಅಲ್ಲದೇ ಈ ಮೊಬೈಲ್​ನಲ್ಲಿ ಫೇಸ್​ ಅನ್​ಲಾಕ್​ ಸೌಲಭ್ಯ ಕೂಡಾ ಒದಗಿಸಲಾಗಿದೆ.

ಈಗಿರುವ ಮಾಹಿತಿಗಳ ಪ್ರಕಾರ, ರೆಡ್​ಮಿ ನೋಟ್​​ 5 ಹಾಗೂ ನೋಟ್​ 5 ಪ್ರೋನಲ್ಲಿ ಬಳಸಿರುವ ಸ್ನ್ಯಾಪ್​ ಡ್ರ್ಯಾಗನ್ 625 ಚಿಪ್​ಸೆಟ್​ನ ಪ್ರೊಸೆಸರ್​ನ್ನೇ ಎಸ್​2 ಮೊಬೈಲ್​ಗೆ ಅಳವಡಿಸಲಾಗಿದೆ. 2ಜಿಬಿ ಹಾಗೂ 3ಜಿಬಿ ಸಾಮರ್ಥ್ಯದ ರ‍್ಯಾಮ್​ ಸೌಲಭ್ಯ ನೀಡಲಾಗಿದೆ ಆದರೆ ಇದರಲ್ಲಿ 16 ಜಿಬಿ ಸ್ಟೋರೇಜ್​ ಮಾತ್ರಾ ನೀಡಲಾಗುತ್ತದೆ ಎನ್ನಲಾಗಿದೆ.

ಶಿಯೋಮಿ ರೆಡ್‌ ಮಿ ಎಸ್‌2 ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ತರಲಾಗುತ್ತಿದೆ, 12 ಮೆಗಾಪಿಕ್ಸೆಲ್ ಸೋನಿ IMX486 ಸೆನ್ಸಾರ್ ಅಥವಾ 12 ಮೆಗಾಪಿಕ್ಸೆಲ್ ಓಮ್ನಿ ವಿಷನ್ ಒವಿ 12ಎ 10 ಸೆನ್ಸಾರ್‌ಗಳುಳ್ಳ ಎರಡು ಕ್ಯಾಮೆರಾಗಳನ್ನು ಸ್ಮಾರ್ಟ್‌ಪೋನ್ ಹೊಂದಿರಲಿದೆ. ಇನ್ನು 5-ಮೆಗಾಪಿಕ್ಸೆಲ್ ಸ್ಯಾಮ್ಸಂಗ್ S5K5E8 ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಸ್ಮಾರ್ಟ್‌ಪೋನಿನಲ್ಲಿ ಆಳವಡಿಸಲಾಗಿದೆ.
First published:April 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...