News18 India World Cup 2019

48MP ಕ್ಯಾಮೆರಾ ​ಫೋನ್​ಗೆ ಕೇವಲ 10 ಸಾವಿರ ರೂ..!

ಶಿಯೋಮಿ ಕಂಪೆನಿ ರೆಡ್​ಮಿ ನೋಟ್​ 7 ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆ ಮಾಡಿದೆ. ಅತಿ ಕಡಿಮೆ ಬೆಲೆಗೆ 48 ಮೆಗಾ ಪಿಕ್ಸೆಲ್​ ಕ್ಯಾಮೆರಾ ಈ ಫೋನ್​ನಲ್ಲಿ ನೀಡಲಾಗಿರುವುದು ಪ್ರಮುಖ ವಿಶೇಷತೆ.

zahir | news18
Updated:January 10, 2019, 8:49 PM IST
48MP ಕ್ಯಾಮೆರಾ ​ಫೋನ್​ಗೆ ಕೇವಲ 10 ಸಾವಿರ ರೂ..!
ರೆಡ್​ಮಿ ನೋಟ್​ 7
zahir | news18
Updated: January 10, 2019, 8:49 PM IST
ಚೀನಾದ ಸ್ಮಾರ್ಟ್​ಫೋನ್​ ಕಂಪೆನಿ ಶಿಯೋಮಿ ನೂತನ ಮೊಬೈಲ್ ಬಿಡುಗಡೆ ಮಾಡಿದೆ. ರೆಡ್​ಮಿ ನೋಟ್​ 7 ಹೆಸರಿನ ಈ ಸ್ಮಾರ್ಟ್​ಫೋನ್​ನಲ್ಲಿ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದ್ದು, ಇದು ಮೊಬೈಲ್​​ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ. ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ಕ್ಯಾಮೆರಾ ಹೊಂದಿರುವ ಫೋನ್ ಎಂಬ ಖ್ಯಾತಿ ರೆಡ್​ಮಿ ನೋಟ್​ 7 ಪಾಲಾಗಿದೆ.​ ಇದರಿಂದ ಮುಂಬರುವ ದಿನಗಳಲ್ಲಿ ಇತರೆ ಕಂಪೆನಿಗಳ ಕ್ಯಾಮೆರಾ ಫೋನ್​ಗಳ ಮೇಲೆ ಭಾರೀ ಪ್ರಭಾವ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಶಿಯೋಮಿ ರೆಡ್​ಮಿ ನೋಟ್​ 7 ಬೆಲೆ:
ಚೀನಾ ಮಾರುಕಟ್ಟೆಯನ್ನು ಪ್ರವೇಶಿಸಿರುವ ರೆಡ್​ಮಿ ನೋಟ್​ 7 ಬೆಲೆ 999 ಚೀನಿ ಯುವಾನ್​. ಅಂದರೆ ಈ ಮೊಬೈಲ್​ ಭಾರತದಲ್ಲಿ 10300 ರೂ.ನಲ್ಲಿ ಸಿಗಲಿದೆ ಎನ್ನಲಾಗಿದೆ. ಬ್ಲಾಕ್​, ಗೋಲ್ಡ್​, ಮತ್ತು ನೀಲಿ ಬಣ್ಣಗಳಲ್ಲಿ ಈ ಮೊಬೈಲ್​ ಬಿಡುಗಡೆಯಾಗಿದ್ದು, ಆಯಾ ಮೊಬೈಲ್​ ಸಾಮರ್ಥ್ಯಕ್ಕನುಗುಣವಾಗಿ ಬೆಲೆಯಲ್ಲೂ ವ್ಯತ್ಯಾಸವಿದೆ. 4GB+32GB ಹಾಗೂ 6GB+64GB ಸ್ಟೋರೇಜ್​ಗಳಲ್ಲೂ ಈ ಫೋನ್​ಗಳು ಲಭ್ಯವಿದ್ದು ಇವುಗಳ ಬೆಲೆಯು ಭಾರತದಲ್ಲಿ 12 ರಿಂದ 15 ಸಾವಿರದೊಳಗೆ ಇರಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ನೇರ ನೇಮಕಾತಿ: ವಾರ್ಷಿಕ ವೇತನ 52 ಲಕ್ಷ ರೂ.

ಶಿಯೋಮಿ ರೆಡ್​ಮಿ ನೋಟ್ 7​ ಫೀಚರ್ಸ್​:
ಡಿಸ್​ಪ್ಲೇ: 6.3 ಇಂಚಿನ ಪೂರ್ಣ ಎಚ್​ಡಿ, 1080x2340 ಪಿಕ್ಸೆಲ್ ರೆಸಲ್ಯೂಷನ್
Loading...

ಪ್ರೊಸೆಸರ್: 2.2GHz ಸ್ನಾಪ್​ಡ್ರಾಗನ್ 660 ಆಕ್ಟಾ-ಕೋರ್
RAM: 3,4 ಮತ್ತು 6GB RAMಗಳಲ್ಲಿ ಲಭ್ಯವಿದೆ
ಸ್ಟೋರೇಜ್: 32GB ಮತ್ತು 64GB ಮಾಡೆಲ್​ಗಳಿದ್ದು, ಮೈಕ್ರೋ ಎಸ್​ಡಿ ಕಾರ್ಡ್​ ಬಳಸಿ 256GBವರೆಗೂ ವಿಸ್ತರಿಸಬಹುದು.
ಕ್ಯಾಮೆರಾ: ಹಿಂಭಾಗದಲ್ಲಿ 48MP + 5MP, ಮುಂಭಾಗದಲ್ಲಿ 13MP
ಬ್ಯಾಟರಿ: 4,000 mAh ಸಾಮರ್ಥ್ಯ
ಆಪರೇಟಿಂಗ್ ಸಿಸ್ಟಂ​: MIUI 9 ಆಧರಿಸಿ ಆಂಡ್ರಾಯ್ಡ್ ಒರಿಯೊ ಒಎಸ್​ನಲ್ಲಿ ಕಾರ್ಯಾಚರಿಸಲಿದೆ. ​ 4G VoLTE ನೆಟ್​ವರ್ಕ್​, ವೈಫೈ, ಆಡಿಯೋ ಜಾಕ್ ಸೇರಿದಂತೆ ಇನ್ನು ಹಲವು ಫೀಚರ್​ಗಳನ್ನು ರೆಡ್​ಮಿ ನೋಟ್​ 7ನಲ್ಲಿ ನೀಡಲಾಗಿದೆ.

ಇದನ್ನೂ ಓದಿ: ನಡುರಸ್ತೆಯಲ್ಲೇ ತೋರಿಸಿದರು ಪೋರ್ನ್​ ವೀಡಿಯೊ..!

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...