Xiaomi Redmi Go: ಶಿಯೋಮಿ16 GB ಆವೃತ್ತಿ ಬಿಡುಗಡೆ: ಇದರ ಬೆಲೆಯೆಷ್ಟು ಗೊತ್ತಾ?

Xiaomi Redmi Go: ಸ್ಮಾರ್ಟ್​ಫೋನಿನ ಬೆಲೆಗೆ ಅನುಗುಣವಾಗಿ ಕ್ಯಾಮೆರಾವನ್ನು ನೀಡಲಾಗಿದೆ. ಹಿಂಭಾಗದಲ್ಲಿ 8 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿದ್ದರೆ​​​, ಸೆಲ್ಫಿಗಾಗಿ 5 ಮೆಗಾಫಿಕ್ಸೆಲ್​​ ಕ್ಯಾಮೆರಾವನ್ನು ನೀಡಲಾಗಿದೆ.

news18
Updated:May 28, 2019, 2:31 PM IST
Xiaomi Redmi Go: ಶಿಯೋಮಿ16 GB ಆವೃತ್ತಿ ಬಿಡುಗಡೆ: ಇದರ ಬೆಲೆಯೆಷ್ಟು ಗೊತ್ತಾ?
ರೆಡ್​ಮಿ ಗೊ
  • News18
  • Last Updated: May 28, 2019, 2:31 PM IST
  • Share this:
ಚೀನಾದ ಶಿಯೋಮಿ ಸ್ಮಾರ್ಟ್​ಪೋನ್​ ಸಂಸ್ಥೆ ರೆಡ್​ಮಿ ಗೊ 16 GB ಮಾದರಿಯ ಸ್ಮಾರ್ಟ್​ಫೋನ್​ವೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಮೊದಲು ರೆಡ್​ಮಿ ಗೊ 1 GB ಮತ್ತು 8 GB ಮಾದರಿಯ ಸ್ಮಾರ್ಟ್​ಫೋನ್​ ಮಾತ್ರ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. 4,499 ರೂ ಬೆಲೆ ಹೊಂದಿತ್ತು. ಇದೀಗ 16 GB ಆವೃತ್ತಿಯನ್ನು  ಬಿಡುಗಡೆ ಮಾಡಿದೆ. ಈ ಸ್ಮಾರ್ಟ್​ಫೋನ್​ ಬೆಲೆ 4,799 ರೂ. ಎಂದು ನಿಗದಿಪಡಿಸಿದ್ದಾರೆ.

ಸ್ನಾಪ್​​ಡ್ರಾಗನ್​ 425​ ಪ್ರೊಸೆಸರ್​ನಿಂದ ಕಾರ್ಯ ನಿರ್ವಹಿಸುವ ರೆಡ್​ಮಿ ಗೋ ಸ್ಮಾರ್ಟ್​ಫೋನ್​ 1 GB RAM​ ಇದರಲ್ಲಿ. ​5.0 ಇಂಚಿನ ಡಿಸ್​ಪ್ಲೇ ಹೊಂದಿದೆ. ಬಳಕೆಗೆ ಯೋಗ್ಯವಾದ 3000 mAh​ ಬ್ಯಾಟರಿ ಅಳವಡಿಸಲಾಗಿದೆ.

ಸ್ಮಾರ್ಟ್​ಫೋನಿನ  ಬೆಲೆಗೆ ಅನುಗುಣವಾಗಿ ಕ್ಯಾಮೆರಾವನ್ನು ನೀಡಲಾಗಿದೆ. ಹಿಂಭಾಗದಲ್ಲಿ 8 ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿದ್ದರೆ​​​, ಸೆಲ್ಫಿಗಾಗಿ 5 ಮೆಗಾಫಿಕ್ಸೆಲ್​​ ಕ್ಯಾಮೆರಾವನ್ನು ನೀಡಲಾಗಿದೆ.

ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ದೊರಕುವ ಶಿಯೋಮಿ ಸ್ಮಾರ್ಟ್​ಪೋನ್​ 16GB ಆವೃತ್ತಿ MI ಸ್ಟೋರ್​ನಲ್ಲೂ  ಲಭ್ಯವಿದೆ.

ಇದನ್ನೂ ಓದಿ: ಪರಿಣಾಮಕಾರಿಯಾಗಿ ಮತ್ತು ಸುಲಭವಾಗಿ ಮನೆಯಲ್ಲೇ ತಯಾರಿಸಿದ ಪ್ರಾಕೃತಿಕ ಸ್ವಚ್ಛಕಾರಕಗಳು

ರೆಡ್​ಮಿ ಗೊ ವೈಶಿಷ್ಟ್ಯ:ಡಿಸ್​ಪ್ಲೇ: 5.0 ಇಂಚಿನ ಡಿಸ್​ಪ್ಲೇ

ಪ್ರೊಸೆಸರ್​: ಸ್ನಾಪ್​​ಡ್ರಾಗನ್​ 425

ಕ್ಯಾಮೆರಾ:  8 ಮೆಗಾಫಿಕ್ಸೆಲ್

ಸೆಲ್ಫಿ ಕ್ಯಾಮೆರಾ: 5 ಮೆಗಾಫಿಕ್ಸೆಲ್

ಬ್ಯಾಟರಿ: 3000 mAh​

ಬೆಲೆ: 4,799 ರೂ

ನಿಮ್ಮ ನ್ಯೂಸ್ 18 ಕನ್ನಡವನ್ನು ಇನ್​​​ಸ್ಟಾಗ್ರಾಂನಲ್ಲೂ ಹಿಂಬಾಲಿಸಿ

First published:May 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading