ಶಿಯೋಮಿ ಕಂಪೆನಿಯ ಹೊಸ 'ಮಿ ನೋಟ್​ಬುಕ್​ ಏರ್' ಬಿಡುಗಡೆ: ಏನಿದರ ವಿಶೇಷತೆ?

ಇಂಟೆಲ್​ ಕೋರ್​ ಐ5 ಮಾಡೆಲ್​ನ ಈ ಲ್ಯಾಪ್​ಟಾಪ್​ನ ಚೀನಾ ಮಾರುಕಟ್ಟೆ ಬೆಲೆ 3999 ಸಿಎನ್​ವೈ. ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 40,500 ಆಗಿರಲಿದೆ.

zahir | news18
Updated:December 28, 2018, 2:00 PM IST
ಶಿಯೋಮಿ ಕಂಪೆನಿಯ ಹೊಸ 'ಮಿ ನೋಟ್​ಬುಕ್​ ಏರ್' ಬಿಡುಗಡೆ: ಏನಿದರ ವಿಶೇಷತೆ?
ಮಿ ನೋಟ್​ಬುಕ್ ಏರ್
zahir | news18
Updated: December 28, 2018, 2:00 PM IST
ಚೀನಾದ ಪ್ರಸಿದ್ಧ ಮೊಬೈಲ್ ಕಂಪನಿ ಶಿಯೋಮಿ ನೂತನ ಲ್ಯಾಪ್​ಟಾಪ್​ ಮಿ ನೋಟ್​ಬುಕ್ ಏರ್​ ಅನ್ನು ಬಿಡುಗಡೆ ಮಾಡಿದೆ. ಆ್ಯಪಲ್​ ಕಂಪೆನಿಯ ಮ್ಯಾಕ್​ಬುಕ್ ಏರ್​ಗೆ ಪ್ರತಿಸ್ಫರ್ಧಿ ಎನ್ನಲಾಗಿರುವ ಈ ಹೊಸ ನೋಟ್​ಬುಕ್​ನಲ್ಲಿ ಇಂಟೆಲ್​ ಕೋರ್ ಐ5 ಪ್ರೊಸೆಸರ್​ ನೀಡಲಾಗಿದೆ.

12.5 ಇಂಚಿನ ಡಿಸ್​ಪ್ಲೇ ಇದರಲಿದ್ದು, ಈ ಹಿಂದಿನ ಮಿ ನೋಟ್​ಬುಕ್​ ಏರ್​ ಎಂ3 ಪ್ರೊಸೆಸರ್​ನ್ನು ಅಪ್​ಡೇಟ್ ವರ್ಷನ್ ಇದಾಗಿದೆ. ಈ​ ಹೊಸ ರೂಪಾಂತರದ ಮಿ ನೋಟ್​ಬುಕ್​ 4GB RAM​, 4G ಕನೆಕ್ಟಿವಿಟಿ ಹಾಗೂ 256GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಸದ್ಯ JD.com ಮತ್ತು ಶಿಯೋಮಿಯ ಅಧಿಕೃತ ಆನ್​ಲೈನ್​ ವೆಬ್​ಸೈಟ್​ನಲ್ಲಿ ಮಾತ್ರ ಮಿ ನೋಟ್​ಬುಕ್ ಖರೀದಿಗೆ ಲಭ್ಯವಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂದು ತಿಳಿಸಲಾಗಿದೆ.​

ಶಿಯೋಮಿ ಮಿ ನೋಟ್​ಬುಕ್ ಏರ್​ ಬೆಲೆ
ಇಂಟೆಲ್​ ಕೋರ್​ ಐ5 ಮಾಡೆಲ್​ನ ಈ ಲ್ಯಾಪ್​ಟಾಪ್​ನ ಚೀನಾ ಮಾರುಕಟ್ಟೆ ಬೆಲೆ 3999 ಸಿಎನ್​ವೈ. ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 40,500 ಆಗಿರಲಿದೆ. ಸಿಲ್ವರ್​ ಬಣ್ಣದಲ್ಲಿ ಲಭ್ಯವಿರುವ ಹೊಸ ನೋಟ್​ಬುಕ್​ ಏರ್​ನ್ನು ಗ್ರಾಹಕರು Mi.com ಮತ್ತು JD.comನಲ್ಲಿ ಖರೀದಿಸಬಹುದು. ಅಲ್ಲದೆ ಇಲ್ಲಿ ಅಡ್ವಾನ್ಸ್​ ಬುಕ್ಕಿಂಗ್​ಗೆ ಕೂಡ ಅವಕಾಶವಿದೆ.

ಶಿಯೋಮಿ ನೋಟ್​ಬುಕ್ ಏರ್​ ವಿಶೇಷತೆಗಳು
12.5-ಇಂಚಿನ ಮಿ ನೋಟ್​ಬುಕ್​ ಏರ್ ಫುಲ್​ ಹೆಚ್​ಡಿ ಡಿಸ್​ಪ್ಲೇ ಹೊಂದಿದ್ದು, ​1920x1080 ಪಿಕ್ಸೆಲ್​ ರೆಸೊಲ್ಯುಷನ್ ಹೊಂದಿದೆ. 170 ಡಿಗ್ರಿ ಆ್ಯಂಗಲ್​ನಲ್ಲಿ ಇದರ ಡಿಸ್​ಪ್ಲೇ ತಿರುಗಿಸಬಹುದಾಗಿದ್ದು, 600: 1 ಕಾಂಟ್ರಾಸ್ಟ್ ರೆಶಿಯೊ, ಮತ್ತು 16: 9 ವೈಡ್​ಸ್ಕ್ರೀನ್ ರೆಶಿಯೊ, 300nits ಬ್ರೈಟ್​ನೆಸ್​ನಲ್ಲಿ ಕಾರ್ಯ ನಿರ್ವಹಿಸುತ್ತದೆ. ವಿಂಡೋಸ್​ 10 ಆಪರೇಟಿಂಗ್ ಸಿಸ್ಟಂ ಈ ನೋಟ್ ಬುಕ್​ನಲ್ಲಿ​ ಕಾರ್ಯ ನಿರ್ವಹಿಸಲಿದ್ದು, 7​ ಜೆನ್ ಇಂಟೆಲ್ ಕೋರ್ ಐ 5-7Y54 ಪ್ರೊಸೆಸರ್​ನಲ್ಲಿ ಚಾಲಿತವಾಗುತ್ತದೆ. ಇಂಟೆಲ್ ಹೆಚ್​ಡಿ ಗ್ರಾಫಿಕ್ಸ್ ಇಂಟಿಗ್ರೇಟೆಡ್ ಗ್ರಾಫಿಕ್ಸ್ 615, 4 ಜಿಬಿ RAM, 256GB SSD ಇದರಲಿದ್ದು, ಹಾರ್ಡ್ ಡ್ರೈವ್ ಬಳಸಿ ಸ್ಟೋರೇಜ್​ ವಿಸ್ತರಿಸುವ ಅವಕಾಶವಿದೆ.

ಇದನ್ನೂ ಓದಿ: ಬಿಎಸ್​ವೈ- ರಮೇಶ್​ ಜಾರಕಿಹೊಳಿ ದೆಹಲಿಗೆ ದೌಡು: ಆಪರೇಷನ್ ಕಮಲಕ್ಕೆ‌ ಅಣಿಯಾಗುತ್ತಿದೆಯಾ ಬಿಜೆಪಿ?
Loading...

720p ವೀಡಿಯೊ ಕರೆಗಳಿಗೆ ಸಪೋರ್ಟ್​ ಮಾಡುವ 1-ಮೆಗಾಪಿಕ್ಸೆಲ್ ವೆಬ್ ಕ್ಯಾಮೆರಾವನ್ನು ಇದರಲ್ಲಿ ನೀಡಲಾಗಿದೆ. ಮಿ ನೋಟ್​ಬುಕ್ ಏರ್​ನಲ್ಲಿ 12.5-ಇಂಚಿನ 1C ಫಾಸ್ಟ್​ ಚಾರ್ಜ್ ಸೌಲಭ್ಯವಿದ್ದು, ಇದರಿಂದ ಚಾರ್ಜಿಂಗ್ ವೇಗದಿಂದ ಆಗಲಿದೆ. ಒಂದು ಬಾರಿ ಚಾರ್ಜ್​ ಮಾಡಿಕೊಂಡರೆ 8 ಗಂಟೆಗಳ ಆನ್ಲೈನ್ ​​ವೀಡಿಯೋ ಪ್ಲೇಬ್ಯಾಕ್ ಅಥವಾ 7.5 ಗಂಟೆಗಳ ಲೋಕಲ್ ವೀಡಿಯೋ ಪ್ಲೇಬ್ಯಾಕ್, ಇಲ್ಲ 7.5 ಗಂಟೆಗಳ ವೆಬ್ ಬ್ರೌಸಿಂಗ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಅನಂತು​ ಜತೆ ನುಸ್ರತ್: ಈ ವಾರ ಬಿಡುಗಡೆಯಾಗಿರುವ ಸಿನಿಮಾಗಳನ್ನು ಕೈ ಹಿಡಿಯುತ್ತಾನಾ ಪ್ರೇಕ್ಷಕ?

ಹೊಸ ಮಿ ನೋಟ್​ಬುಕ್ ಏರ್​ 1.07kg ತೂಕ ಹೊಂದಿದ್ದು, ಇದರೊಂದಿಗೆ ಬ್ಯಾಕ್ಲಿಟ್ ಕೀಬೋರ್ಡ್, ಪೋರ್ಟ್​ಗಳು, ಯುಎಸ್​ಬಿ ಟೈಪ್-ಸಿ ಪೋರ್ಟ್, ಯುಎಸ್​ಬಿ 3.0 ಪೋರ್ಟ್, HDMI, ಮತ್ತು 3.5mm ಇಯರ್​ಫೋನ್​ ಜಾಕ್ ಅನ್ನು ಒಳಗೊಂಡಿರುತ್ತದೆ. ಕನೆಕ್ಟಿವಿ ಆಯ್ಕೆಗಳಲ್ಲಿ ಬ್ಲೂಟೂತ್ 4.1, Wi-Fi 802.11ac, 4G ಗಳ ಸೌಲಭ್ಯವನ್ನು ಮಿ ನೋಟ್​ಬುಕ್​ನಲ್ಲಿ ನೀಡಲಾಗಿದೆ.

First published:December 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ