Mi With Diwali: ಆಕರ್ಷಕ ಆಫರ್ ಮಿಸ್​ ಮಾಡಿಕೊಂಡವರಿಗೆ ಇಂದು ಕೊನೆಯ ಅವಕಾಶ!

ಶಿಯೋಮಿ ಕೂಡ ‘Diwali With Mi’ ಮಾರಾಟ ನಡೆಸುತ್ತಾ ಬಂದಿದ್ದು, ಇಂದು​ ಕೊನೆಯ ದಿನವಾಗಿದೆ.  ಶಿಯೋಮಿ ಹಲವು ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಲ್ಲದೆ, ದಸರಾ ಹಬ್ಬದ ಪ್ರಯುಕ್ತ ಉಡುಗೊರೆಯನ್ನು ನೀಡುತ್ತಿದೆ.

Xiaomi Mi With Diwali Sale

Xiaomi Mi With Diwali Sale

 • Share this:
  Xiaomi Diwali With Mi  Sale Offer: ಹಬ್ಬದ ಸೀಸನ್​ನಲ್ಲಿರುವ ಗ್ರಾಹಕರಿಗಾಗಿ ಆನ್​ಲೈನ್​ ಮಾರಾಟ ಮಳಿಗೆಗಳಾದ ಅಮೆಜಾನ್, ಫ್ಲಿಪ್​ಕಾರ್ಟ್​ ಸ್ಮಾರ್ಟ್​ಫೋನ್​ ಸೇರಿದಂತೆ ಗ್ಯಾಜೆಟ್​ ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿ ನೀಡುತ್ತಿದೆ. ಅದರಂತೆ ಶಿಯೋಮಿ ಕೂಡ ‘Diwali With Mi’ ಮಾರಾಟ ನಡೆಸುತ್ತಾ ಬಂದಿದ್ದು, ಇಂದು​ ಕೊನೆಯ ದಿನವಾಗಿದೆ.  ಶಿಯೋಮಿ ಹಲವು ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಲ್ಲದೆ, ದಸರಾ ಹಬ್ಬದ ಪ್ರಯುಕ್ತ ಉಡುಗೊರೆಯನ್ನು ನೀಡುತ್ತಿದೆ.

  ಶಿಯೋಮಿ ಸ್ಮಾರ್ಟ್​ಫೋನ್​ಗಳ ಮೇಲಿನ ಬೆಲೆ ಕಡಿತಗೊಳಿಸಿ ಮಾರಾಟ ಮಾಡುತ್ತಿದೆ Redmi Note 10 Pro, Redmi Note 10 Pro Max, Redmi Note 10S, ಮತ್ತು Redmi 10 Prime ಗಳ ಮೇಲೆ 3,250 ರೂ ರಿಯಾಯಿತಿ ನೀಡುತ್ತಿದೆ.

  ಇನ್ನು ರೆಡ್ಮಿ ಫೋನ್‌ಗಳ ಜೊತೆಗೆ, Mi 11X, Mi 11X Pro, ಮತ್ತು ಹೊಸದಾಗಿ ಬಿಡುಗಡೆಗೊಂಡ Xiaomi 11 Lite NE 5G ಶಿಯೋಮಿಯ ಮುಂಬರುವ ಹಬ್ಬದ ಮಾರಾಟದ ಸಮಯದಲ್ಲಿ ರಿಯಾಯಿತಿ ದರದಲ್ಲಿ ಸಿಗಲಿದೆ. Mi ಮತ್ತು Redmi TV ಮಾದರಿಗಳು ಹಾಗೂ Mi Smart Band 5 ಮತ್ತು Mi Robot Vacuum Mop-P ನಂತಹ ಸಾಧನಗಳ ಮೇಲೆ ಆಕರ್ಷಕ ಡಿಸ್ಕೌಂಟ್​ ನೀಡಿದೆ.

  'Diwali With Mi' ಮಾರಾಟವು Mi.com ಮೂಲಕ ಮತ್ತು ಭಾರತದಲ್ಲಿ Xiaomi ನ ರಿಟೇಲ್ ಪಾಲುದಾರರಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಇ-ಮಳಿಗೆಯಲ್ಲಿ ಲೈವ್ ಆಗುತ್ತದೆ, ಇವೆರಡೂ ಒಂದೇ ಅವಧಿಯಲ್ಲಿ ಮಾರಾಟವನ್ನು ಹೊಂದಿವೆ. ಶಿಯೋಮಿ ಮಿ ವಿಐಪಿ ಕ್ಲಬ್ ಸದಸ್ಯರಿಗೆ ಆರಂಭಿಕ ಪ್ರವೇಶವನ್ನು ನೀಡುತ್ತಿದೆ, ಅದು ಅಕ್ಟೋಬರ್ 2 ರಂದು ಬೆಳಿಗ್ಗೆ 12 ರಿಂದ (ಮಧ್ಯರಾತ್ರಿ) ಲಭ್ಯವಿರುತ್ತದೆ ಮತ್ತು ನಿಷ್ಠಾವಂತ ಸದಸ್ಯರು ಅಕ್ಟೋಬರ್ 7 ರವರೆಗೆ ದೇಶಾದ್ಯಂತ ಉಚಿತ ಶಿಪ್ಪಿಂಗ್ ಪ್ರಯೋಜನವನ್ನು ಪಡೆಯಬಹುದಾಗಿದೆ.

  'Diwali With Mi' ಮಾರಾಟದ ಸಮಯದಲ್ಲಿ ರೆಡ್ಮಿ ಫೋನ್​ಗಳ ಮೇಲಿನ ರಿಯಾಯಿತಿ:

  'Diwali With Mi' ಮಾರಾಟದಲ್ಲಿ ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್​ಫೋನ್​ 1,500 ರೂ. ರಿಯಾಯಿತಿ ನೀಡುತ್ತಿದೆ. ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ ಮೇಲೆ 1 ಸಾವಿರದ ರೂ ರಿಯಾಯಿತಿ ನೀಡುತ್ತಿದೆ. ರೆಡ್ಮಿ 10 ಪ್ರೈಮ್ ಮೇಲೆ 500 ರೂ ಮತ್ತು ರೆಡ್ಮಿ ನೋಟ್ 10 ಎಸ್ ಮೇಲೆ 2,000 ರೂ ರಿಯಾಯಿತಿ ಒದಗಿಸುತ್ತಿದೆ. ಈ ಸ್ಮಾರ್ಟ್​ಫೋನ್​ಗಳನ್ನ SBI ಕ್ರೆಡಿಟ್ ಕಾರ್ಡ್ ಬಳಸಿ ಮತ್ತು EMI ವಹಿವಾಟುಗಳ ಮೂಲಕ ಖರೀದಿ ಮಾಡುವ ಗ್ರಾಹಕರಿಗೆ 1,250. ರೂ ರಿಯಾಯಿತಿ ನೀಡುತ್ತಿದೆ.

  'ದೀಪಾವಳಿ ವಿತ್ ಮಿ' ಮಾರಾಟದ ಸಮಯದಲ್ಲಿ ಶಿಯೋಮಿ ಫೋನ್​ಗಳ ಮೇಲಿನ ರಿಯಾಯಿತಿ:

  Xiaomi 11 Lite NE 5G ಮೇಲೆ 1500 ರೂ ಡಿಸ್ಕೌಂಟ್​ ನೀಡಿದೆ. Mi 11X ಮೇಲೆ 6 ಸಾವಿರ ರಿಯಾಯಿತಿಯಲ್ಲಿ ಲಭ್ಯವಿರುತ್ತದೆ. Mi 11X ಪ್ರೊ ಮಾರಾಟದ ವೇಲೆ 8,249 ರೂ ರಿಯಾಯಿತಿಗೆ ಸಿಗಲಿದೆ. ಅಂತೆಯೇ 21,999 ಬೆಲೆಯ Mi 10i  ಮತ್ತು Mi 11 Lite ಸಹ 1,250 ರೂ ಡಿಸ್ಕೌಂಟ್​ ಸಿಗಲಿದೆ. SBI ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ 3,500 ರೂ ಹೆಚ್ಚುವರಿ ವಿನಿಮಯ ರಿಯಾಯಿತಿ ನೀಡುತ್ತಿದೆ.

  Mi TV, Redmi TV, ಮತ್ತು ಇತರ ಸಾಧನಗಳು 'Mi ವಿತ್ ದೀಪಾವಳಿ' ಮಾರಾಟದ ಸಮಯದಲ್ಲಿ ರಿಯಾಯಿತಿ

  ಮಿ ಟಿವಿ 4 ಎ ಹಾರಿಜಾನ್ ಆವೃತ್ತಿ 32 ಇಂಚು, ಮಿ ಟಿವಿ 4 ಎ ಹಾರಿಜಾನ್ ಆವೃತ್ತಿ 40 ಇಂಚು, ಮತ್ತು ಮಿ ಟಿವಿ 4 ಎ ಹಾರಿಜಾನ್ ಆವೃತ್ತಿ 43 ಇಂಚಿನವರೆಗಿನ ಟಿವಿ ಮೇಲೆ 3 ಸಾವಿರ ರಿಯಾಯಿತಿ ನೀಡುತ್ತಿದೆ. Mi TV 4A 32-inch, Mi TV 4A 43-inch, Mi TV 4C 32-inch, Mi TV 4C 43-inch, Mi TV 4X 43-inch, Mi TV 4X 50-inch, ಮತ್ತು Mi TV 4X 55- ಇಂಚಿನ ಟಿವಿ ಮೇಲೆ 2 ಸಾವಿರ ರೂ ರಿಯಾಯಿತಿಯೊಂದಿಗೆ ಲಭ್ಯವಿದೆ. ಅದೇ ರೀತಿ, Mi TV 5X 50-inch ಮತ್ತು Mi TV 5X 55-inch ಮಾರಾಟದೊಂದಿಗೆ 2,000 ರೂ ರಿಯಾಯಿತಿ, ಮಿ ಟಿವಿ 5X 43 ಇಂಚಿನ ಟಿವಿ ಮೇಲೆ 1 ಸಾವಿರ ರೂ ರಿಯಾಯಿತಿ ನೀಡುತ್ತಿದೆ.

  Mi QLED TV 4K 55-inch ಮತ್ತು Mi QLED TV 4K 75-inch ಕೂಡ Xiaomi ಮಾರಾಟದಲ್ಲಿ 1 ಸಾವಿರ ಮತ್ತು 3 ಸಾವಿರದರೆಗಿನ ಡಿಸ್ಕೌಂಟ್​ ನೀಡುತ್ತಿದೆ. Redmi TV X ಮತ್ತು Redmi TV ಸರಣಿ ಟಿವಿಗಳ ಮೇಲೆ  6,000 ರಿಯಾಯಿತಿ ನೀಡುತ್ತಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ವಹಿವಾಟುಗಳ ಮೂಲಕ ಖರೀದಿಸುವ ಗ್ರಾಹಕರಿಗೆ 1,250 ರಿಯಾಯಿತಿ ಸಿಗಲಿದೆ.

  ಸ್ಮಾರ್ಟ್ ಟಿವಿಗಳ ಜೊತೆಯಲ್ಲಿ, 10000mAh Mi ಪವರ್ ಬ್ಯಾಂಕ್ 3i, Mi ಸ್ಮಾರ್ಟ್ ಬ್ಯಾಂಡ್ 5, Redmi SonicBass ವೈರ್‌ಲೆಸ್ ಇಯರ್‌ಫೋನ್‌ಗಳು, Redmi ಇಯರ್‌ಬಡ್ಸ್ 2C, Mi ಬಿಯರ್ಡ್ ಟ್ರಿಮ್ಮರ್ 1C, Mi ರೋಬೋಟ್ ವ್ಯಾಕ್ಯೂಮ್ ಮಾಪ್-P ಮತ್ತು Mi ಹೋಮ್ ಸೆಕ್ಯುರಿಟಿ ಕ್ಯಾಮರಾ 360- ರಿಯಾಯಿತಿ ದರದಲ್ಲಿ ಸಿಗಲಿದೆ.

  Read Also: Desten EV Battery Tech: ಟೆನ್ಷನ್ ಬೇಡ… 5 ನಿಮಿಷದೊಳಗೆ ಶೇ. 80ರಷ್ಟು ಚಾರ್ಜ್‌ ಆಗುತ್ತೆ ಎಲೆಕ್ಟ್ರಿಕ್‌ ವಾಹನಗಳು!

  ಶಿಯೋಮಿ ಹಬ್ಬದ ಮಾರಾಟದ ಸಮಯದಲ್ಲಿ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಜಾಕ್‌ಪಾಟ್ ಡೀಲ್‌ಗಳನ್ನು ಆಯೋಜಿಸುದಲ್ಲದೆ,  ಭಾರೀ ರಿಯಾಯಿತಿಗಳನ್ನು ನೀಡುತ್ತಾ ಬಂದಿದೆ .
  Published by:Harshith AS
  First published: