MI Band: ಬಿಡುಗಡೆಗೆ ಸಿದ್ಧವಾದ ಶಿಯೋಮಿ ಹೊಸ ಸ್ಮಾರ್ಟ್​ವಾಚ್​; ಹೇಗಿದೆ ಗೊತ್ತಾ?

MI Band: ಮಾಹಿತಿಯ ಪ್ರಕಾರ ಶಿಯೋಮಿ ಕಂಪೆನಿಯ ಅಕಾ ಮಿ ಸ್ಮಾರ್ಟ್​ವಾಚ್​ ನವೆಂಬರ್​ 5 ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ನೂತನ ಸ್ಮಾರ್ಟ್​ವಾಚ್​ ಅಗಲವಾದ ಡಿಸ್​ಪ್ಲೇಯನ್ನು ಹೊಂದಿದ್ದು, ಹೊಸ ಫೀಚರ್​ ಅನ್ನು ಅಳವಡಿಸಿಕೊಂಡಿದೆ.

news18-kannada
Updated:November 1, 2019, 7:07 PM IST
MI Band: ಬಿಡುಗಡೆಗೆ ಸಿದ್ಧವಾದ ಶಿಯೋಮಿ ಹೊಸ ಸ್ಮಾರ್ಟ್​ವಾಚ್​; ಹೇಗಿದೆ ಗೊತ್ತಾ?
ಶಿಯೋಮಿ ಅಕಾ ಮಿ ಸ್ಮಾರ್ಟ್​ವಾಚ್
  • Share this:
ಶಿಯೋಮಿ ಕಂಪೆನಿ ಹೊಸ ಸ್ಮಾರ್ಟ್​ವಾಚ್​ ಅನ್ನು ತಯಾರಿಸಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈಗಾಗಲೇ ಕಂಪೆನಿ ಮಿ ಬ್ಯಾಂಡ್​ ಸರಣಿ ಸ್ಮಾರ್ಟ್​ಬ್ಯಾಂಡ್​​​ಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಇದೀಗ ಅಕಾ ಮಿ ಹೆಸರಿನ ಹೊಸ ಸ್ಮಾರ್ಟ್​ವಾಚ್​ ಅನ್ನು ಬಿಡುಗಡೆಗೊಳಿಸಲಿದೆ.

ಮಾಹಿತಿಯ ಪ್ರಕಾರ ಶಿಯೋಮಿ ಕಂಪೆನಿಯ ಅಕಾ ಮಿ ಸ್ಮಾರ್ಟ್​ವಾಚ್​ ನವೆಂಬರ್​ 5 ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ನೂತನ ಸ್ಮಾರ್ಟ್​ವಾಚ್​ ಅಗಲವಾದ ಡಿಸ್​ಪ್ಲೇಯನ್ನು ಹೊಂದಿದ್ದು, ಹೊಸ ಫೀಚರ್​ ಅನ್ನು ಅಳವಡಿಸಿಕೊಂಡಿದೆ.

ಶಿಯೋಮಿ ಅಕಾ ಮಿ ಸ್ಮಾರ್ಟ್​ವಾಚ್​ ಕ್ವಾಲ್​​ಕ್ಯಾಂ ಸ್ನಾಪ್​ಡ್ರ್ಯಾಗನ್​ 3100 ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸಲಿದೆ. ವೈ-ಫೈ, ಬ್ಲೂಟೂತ್​, ಜಿಪಿಎಸ್​ ಫೀಚರ್ ಇರಲಿದೆ. ಇದರ ಜೊತೆಗೆ ಮ್ಯೂಸಿಕ್​ ಆಯ್ಕೆ ಫೀಚರ್​ ಅನ್ನು ಅಳವಡಿಸಿದೆ. ಗ್ರಾಹಕರಿಗಾಗಿ ಈ ಸ್ಮಾರ್ಟ್​ವಾಚ್​ ಕಪ್ಪು, ಕಂದು, ನೀಲಿ, ಬಿಳಿ ಬಣ್ಣದಲ್ಲಿ ಸಿಗಲಿದೆ.ಈ ಹಿಂದೆ ಶಿಯೋಮಿ ಕಂಪೆನಿ ಮಿ ಬ್ಯಾಂಡ್​ 1, ಮಿ ಬ್ಯಾಂಡ್​ 2, ಮಿ ಬ್ಯಾಂಡ್​ 3 ಹೆಸರಿನಲ್ಲಿ ಬಿಡುಗಡೆ ಮಾಡಿತ್ತು. ಕಳೆದ ವರ್ಷ ಮಿ ಬ್ಯಾಂಡ್​ 4 ಹೆಸರಿನ ಸ್ಮಾರ್ಟ್​ವಾಚ್​ ಅನ್ನು ಗ್ರಾಹಕರಿಗೆ ಪರಿಚಯಿಸಿತ್ತು. ಭಾರತದಲ್ಲಿ ಮಿ ಬ್ಯಾಂಡ್​ 4 ಗೆ ಬಾರಿ ಬೇಡಿಕೆಯು ಸೃಷ್ಠಿಯಾಗಿತ್ತು. ಇದೀಗ ಸಂಸ್ಥೆ ಅಕಾ ಮಿ ಸ್ಮಾರ್ಟ್​ವಾಚ್​ ಅನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದೆ.
First published:November 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading