ಬಿಡುಗಡೆಗೆ ಹಿಂದಿನ ದಿನವೇ Xiaomi ಮಿ ಮ್ಯಾಕ್ಸ್​ 3 ಚಿತ್ರ ಲೀಕ್​!


Updated:July 18, 2018, 12:49 PM IST
ಬಿಡುಗಡೆಗೆ ಹಿಂದಿನ ದಿನವೇ Xiaomi ಮಿ ಮ್ಯಾಕ್ಸ್​ 3 ಚಿತ್ರ ಲೀಕ್​!

Updated: July 18, 2018, 12:49 PM IST
ಅತ್ಯಂತ ಕಡಿಮೆ ದರ್ಜೆಯ ಮೊಬೈಲ್​ಗಳನ್ನೇ ಮಾರುಕಟ್ಟೆಯಲ್ಲಿ ಚಾಲ್ತಿಗೆ ತಂದು ಫೇಮಸ್​ ಆಗಿದ್ದ ಶಿಯೋಮಿ ತನ್ನ ನೂಮತ ಮಿ ಮ್ಯಾಕ್ಸ್​ 3 ಬಿಡುಗಡೆಗೆ ಸಿದ್ಧತೆ ನಡೆಸಿಕೊಂಡಿದೆ.  ಮಾಹಿತಿಗಳ ಪ್ರಕಾರ ಸ್ಮಾರ್ಟ್​ಫೋನ್​ಗಳಲ್ಲಿಯೇ ಅತ್ಯಂತ ದೊಡ್ಡ ಸ್ಕ್ರೀನ್​ 6.9 ಇಂಚ್​ವುಳ್ಳ ಮೊಬೈಲ್​ ಇದಾಗಿದೆ.

ನಾಳೆ ಜುಲೈ19ರಂದು ಮಿ ಮ್ಯಾಕ್ಸ್​ 3ನ್ನು ಬಿಡುಗಡೆ ಮಾಡುವುದಾಗಿ ವಕ್ತಾರ ತಮ್ಮ ಟ್ವಿಟರ್​ನಲ್ಲಿ ಹೇಳಿಕೊಂಡ ಬೆನ್ನಲ್ಲೇ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗು ಶಿಯೋಮಿ ನಿರ್ಮಾತೃ ಲೀ ಜುನ್, ಮೊಬೈಲ್​ನ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಈ ವರೆಗಿನ ಎಲ್ಲಾ ಊಹಾಪೋಹಗಳಿಗೆ ತಿಲಾಂಜಲಿ ಹಾಕಿದ್ದಾರೆ.

ಲೀ,ಮಾರುಕಟ್ಟೆಗೆ ಪ್ರವೇಶಿಸಲಿರುವ ಮ್ಯಾಕ್ಸ್​ 3 ಮೊಬೈಲ್​ನ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಬಿಡುಗಡೆಗೂ ಮುನ್ನವೇ ತಮ್ಮ ನೂತನ ಮೊಬೈಲ್​ನ ವಿಶೇಷತೆಗಳನ್ನು ಗ್ರಾಹಕರೊಂದಿಗೆ ತಿಳಿಸಿಕೊಟ್ಟಿದ್ದಾರೆ.

ಲೀಕ್​ ಆಗಿರುವ ಮಾಹಿತಿಗಳ ಪ್ರಕಾರ 18:9 ಅನುಪಾತದ 6.9 ಇಂಚ್​ಗಳ ಡಿಸ್​ಪ್ಲೇ ಈ ಮೊಬೈಲ್​ ಹೊಂದಿದೆ. ಹಿಂಬಾಗದಲ್ಲಿ 12 ಮೆಗಾ ಪಿಕ್ಸೆಲ್​ ಹಾಗು 5 ಮೆಗಾಪಿಕ್ಸೆಲ್​ ಒಳಗೊಂಡ ಡ್ಯುಯಲ್​ ಕ್ಯಾಮೆರಾ ಹೊಂದಿದೆ. ಆಂತರಿಕ ಮೆಮೊರಿ 64 ಜಿಬಿ ಒಳಗೊಂಡಿರುವ ಮಿ ಮ್ಯಾಕ್ಸ್​ ಮೊಬೈಲ್​ಗೆ 4 ಜಿಬಿ RAM ಒಳಗೊಂಡಿದೆ, 5500 mAh ಬ್ಯಾಟರಿ ವ್ಯವಸ್ಥೆ ನೀಡಲಾಗಿದೆ.

ಇತರ ಮೂಲಗಳ ಮಾಹಿತಿಗಳ ಪ್ರಕಾರ ಈ ಮೊಬೈಲ್​ಗೆ ಸ್ನಾಪ್​ಡ್ರಾಗನ್​ 636 ಎಸ್​ಒಸಿ ಪ್ರೊಸೆಸರ್​ ಅಳವಡಿಸಲಾಗಿದೆ. M1804E4C ಆವೃತ್ತಿಯ ಮೊಬೈಲ್​ 64GB and 4GB RAM, M1804E4T ಮತ್ತು M1804E4A ಆವೃತ್ತಿಯ ಮೊಬೈಲ್​ನಲ್ಲಿ 3GB RAM, 32 GB ಮತ್ತು 4GB RAM 64GB ಹಾಗೂ 6GB RAM ನೊಂದಿಗೆ 128GB ಆಂತರಿಕ ಮೊಮೊರಿ ವ್ಯವಸ್ಥೆ ಇರುವುದಾಗಿ ಹೇಳಲಾಗಿದೆ.

ಅಂದಾಜು ಚೀನಾದ CNY 1699 (17,410 ರೂ.) ಬೆಲೆಯಲ್ಲಿ ಮಿ ಮ್ಯಾಕ್ಸ್​ 3 ಮೊಬೈಲ್​ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ.
First published:July 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...