HOME » NEWS » Tech » XIAOMI MI FAN FESTIVAL 2021 BUY XIAOMI PRODUCTS FOR RE 1 HG

Xiaomi Mi Fan Festival 2021: 1 ರೂ. ಗೆ ಶಿಯೋಮಿ ಪ್ರಾಡೆಕ್ಟ್​ ಖರೀದಿಸುವ ಅವಕಾಶ!

Xiaomi: ಶಿಯೋಮಿ ಹೊಸ ಆಫರ್​​ವೊಂದನ್ನು ತೆರೆದಿಟ್ಟಿದ್ದು, ಪ್ರತಿದಿನ 10 ಗಂಟೆಗೆ ಸರಿಯಾಗಿ 5 ದಿನಗಳ ಕಾಲ ವಿಶೇಷ ಸೇಲ್ ನಡೆಯಲಿದೆ.

news18-kannada
Updated:April 8, 2021, 10:10 AM IST
Xiaomi Mi Fan Festival 2021: 1 ರೂ. ಗೆ ಶಿಯೋಮಿ ಪ್ರಾಡೆಕ್ಟ್​ ಖರೀದಿಸುವ ಅವಕಾಶ!
Xiaomi Mi Fan Festival 2021
  • Share this:
ಚೀನಾ ಮೂಲದ ಶಿಯೋಮಿ ಮಿ ಫ್ಯಾನ್ ಫೆಸ್ಟಿವಲ್ ಸೇಲ್ ಆಯೋಜಿಸಿದೆ. ಅದರ ಮೂಲಕ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಸ್ಮಾರ್ಟ್ಫೋನ್, ಟಿವಿ, ಲ್ಯಾಪ್ಟಾಪ್, ಸ್ಮಾರ್ಟ್ ಹೋಮ್ ಪ್ರಾಡೆಕ್ಟ್ಗಳ ಮೇಲೆ ಆಕರ್ಷಕರ ರಿಯಾಯಿತಿ ನೀಡಿದೆ.

ಶಿಯೋಮಿ ಏಪ್ರಿಲ್ 8ರಿಂದ 13ರವರೆಗೆ ಮಿ ಫ್ಯಾನ್ ಫೆಸ್ಟಿವಲ್ ಸೇಲ್ ಹಮ್ಮಿಕೊಂಡಿದೆ.ಅದರ ಜೊತೆಗೆ 1 ರೂ ಫ್ಲಾಶ್ ಸೇಲ್ ನಡೆಸುತ್ತಿದೆ. ಶಿಯೋಮಿ ಪ್ರಾಡೆಕ್ಟ್ 1 ರೂ.ಗೆ ಖರೀದಿಸಬಹುಸಾಗಿದೆ. ಇದು ಪ್ರತಿದಿನ ಸಂಜೆ 4ಗಂಟೆಗೆ ಪ್ರಾರಂಭವಾಗುತ್ತದೆ. ಏಪ್ರಿಲ್ 13ರವರೆಗೆ ಗ್ರಾಹಕರು ಈ ಸೌಲಭ್ಯ ಪಡೆಯಬಹುದಾಗಿದೆ.

ಅಂತೆಯೇ ಪ್ರತಿದಿನ ‘ಪಿಕ್ ಆ್ಯಂಡ್ ಚೂಸ್’ ಅವಕಾಶವನ್ನು ನೀಡಿದೆ. ಪ್ರತಿದಿನ 8ರಿಂದ 12 ಗಂಟೆಯವರೆಗೆ ನಡೆಯಲಿದೆ. ಇದರ ಮೂಲಕ ಹಲವಾರು ವಸ್ತುಗಳನ್ನು ಖರೀದಿಸಬಹುದಾಗಿದೆ.

ಶಿಯೋಮಿ ಸ್ಮಾರ್ಟ್ ಬ್ಯಾಂಡ್ 4, ಮಿ ಟ್ರಿಮ್ಮರ್ 1ಸಿ, ರೆಡ್ಮಿ 20,000ಎಮ್ಎಹೆಚ್ ಪವರ್ ಬ್ಯಾಂಕ್ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಜೊತೆಗೆ ರೆಡ್ಮಿ ಇಯರ್ಬಡ್ಸ್ 2ಸಿ, ಮಿ ನೋಟ್ಬುಕ್ 14, ನೋಟ್ಬುಕ್ 14 ಹಾರಿಝನ್ ಪ್ರಾಡೆಕ್ಟ್​ಗಳನ್ನು 1 ಸಾವಿರಕ್ಕಿಂತ ಕಡಿಮೆ ದರದಲ್ಲಿ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ.

ಶಿಯೋಮಿ ಹೊಸ ಆಫರ್​​ವೊಂದನ್ನು ತೆರೆದಿಟ್ಟಿದ್ದು, ಪ್ರತಿದಿನ 10 ಗಂಟೆಗೆ ಸರಿಯಾಗಿ 5 ದಿನಗಳ ಕಾಲ ವಿಶೇಷ ಸೇಲ್ ನಡೆಯಲಿದೆ. ಹೆಚ್​ಡಿಎಫ್​ಸಿ ಬ್ಯಾಂಕ್ ಗ್ರಾಹಕರು ಶಿಯೋಮಿ ಮಿ 10ಐ ಮತ್ತು ಮಿ 10ಟಿ ಸಿರೀಸ್ ಮೇಲೆ ಡಿಸ್ಕೌಂಟ್ ನೀಡಿದೆ.

ಐಸಿಐಸಿಐ ಬ್ಯಾಂಕ್ ಗ್ರಾಹಕರು ರೆಡ್ಮಿ ನೋಟ್ 10 ಪ್ರೊ ಸಿರೀಸ್, ಆ್ಯಕ್ಸಿಸ್ ಬ್ಯಾಂಕ್ ಬಳಕೆದಾರರು ಟಿವಿ, ಲ್ಯಾಪ್ಟಾಪ್ ಮತ್ತು ಸ್ಮಾರ್ಟ್​ಹೋಮ್ ಪ್ರಾಡೆಕ್ಟ್​​ಗಳನ್ನು ಡಿಸ್ಕೌಂಟ್ ಬೆಲೆ ಖರೀದಿಸುವ ಅವಕಾಶ ನೀಡಿದೆ.
ಮಿ ಫ್ಯಾನ್ ಫೆಸ್ಟಿವಲ್​ನಲ್ಲಿ ಮಿ ನೋಟ್​​ಬುಕ್ ಹಾರಿಝನ್ 14 ಲ್ಯಾಪ್ಟಾಪ್ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದರೆ, ಮಿ 10ಟಿ ಪ್ರೊ ಸ್ಮಾರ್ಟ್​ಫೋನ್ ಅನ್ನು 13 ಸಾವಿರ ರೂ.ಗೆ ಸೇಲ್ ಮಾಡುತ್ತಿದೆ. ರೆಡ್ಮಿ ನೋಟ್ 9 8 ಸಾವಿರ ಡಿಸ್ಕೌಂಟ್ ಬೆಲೆಗೆ ಸಿಗುತ್ತಿದೆ. ಅಂತೆಯೇ ಶಿಯೋಮಿ ಮಿ ಟಿವಿ 4ಎ ಹಾರಿಝನ್ ಎಡಿಷನ್ 43 ಇಂಚಿನ ಟಿವಿ ಮೇಲೆ 4 ಸಾವಿರ ಕಡಿತ ಮಾಡಿದೆ.
Published by: Harshith AS
First published: April 8, 2021, 10:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories